ಆನ್‌ಲೈನ್ ಮೀಟಿಂಗ್ ಇನ್ಮುಂದೆ ಸುಲಭ; ಮಲ್ಟಿ ಪ್ಲಾಟ್‌ಫಾರ್ಮ್‌ಗಳಲ್ಲೂ ರನ್‌ ಆಗಲಿದೆ ಗೂಗಲ್‌ ಮೀಟ್!

|

ಟೆಕ್‌ ದೈತ್ಯ ಗೂಗಲ್‌ ಹಲವಾರು ರೀತಿಯಲ್ಲಿ ಸೇವೆ ನೀಡುತ್ತಿದ್ದು, ಅದರಲ್ಲಿ ಗ್ಯಾಜೆಟ್‌ ಹಾಗೂ ಸರ್ಚ್‌ ಇಂಜಿನ್‌ ಸೇವೆ ಪ್ರಮುಖವಾಗಿದೆ. ಇದರ ನಡುವೆ ಗೂಗಲ್‌ ಮೀಟ್‌ ಸಹ ಬಹಳ ಪ್ರಾಮುಖ್ಯತೆ ಪಡೆದುಕೊಂಡಿದೆ. ಗೂಗಲ್‌ ಮೀಟ್‌ನಲ್ಲಿ ಅದರಲ್ಲೂ ನೂರಾರು ಜನರು ಇರುವ ಗ್ರೂಫ್‌ನಲ್ಲಿ ಉತ್ತಮ ಗುಣಮಟ್ಟದ ವಿಡಿಯೋ ಸಭೆಗಳನ್ನು ಸುರಕ್ಷಿತವಾಗಿ ನಡೆಸಬಹುದಾಗಿದೆ. ಇದರ ಜೊತೆಗೆ ಡಾಕ್ಯುಮೆಂಟ್ಸ್‌, ಸ್ಲೈಡ್ಸ್‌ ಹಾಗೂ ಇನ್ನಿತರೆ ಆಯ್ಕೆಗಳನ್ನು ಎಲ್ಲರಿಗೂ ಸಭೆ ನಡೆಸುವಾಗಲೇ ಡಿಸ್‌ಪ್ಲೇ ನಲ್ಲಿ ಹಂಚಿಕೊಳ್ಳಬಹುದಾಗಿದೆ. ಇದರ ಜೊತೆ ಆಹ್ವಾನದ ಲಿಂಕ್‌ ಬಳಕೆ ಮಾಡಿಕೊಂಡು ಯಾರಾದರೂ ಸಹ ಸಭೆಗೆ ಹಾಜರಾಗಬಹುದಾಗಿದೆ. ಇದೀಗ ಈ ಮೀಟ್‌ಗೆ ಮತ್ತಷ್ಟು ಯಶಸ್ಸು ತಂದುಕೊಡಲು ಗೂಗಲ್‌ ಮುಂದಾಗಿದೆ.

ಗೂಗಲ್‌

ಹೌದು, ಈ ಹಿಂದೆ ಗೂಗಲ್‌ ಮೀಟ್‌ ಆಪ್‌ ಮೂಲಕ ಕುಟುಂಬ ಮತ್ತು ಸ್ನೇಹಿತರಿಗೆ, ವಿದ್ಯಾರ್ಥಿಗಳಿಗೆ, ವೃತ್ತಿಪರರಿಗೆ ಸುಲಭವಾಗಿ ಹಾಗೂ ತ್ವರಿತವಾಗಿ ವಿಡಿಯೋ ಕರೆ ಮಾಡಬಹುದಾಗಿತ್ತು. ಅದಕ್ಕೂ ಮಿಗಿಲಾಗಿ ಮೀಟ್‌ ಬಳಕೆಯನ್ನು ಸುಲಭಗೊಳಿಸಲು ಗೂಗಲ್‌, ಜೂಮ್ ಸೇರಿದಂತೆ ಹಲವು ಪ್ಲಾಟ್‌ಫಾರ್ಮ್‌ಗಳಲ್ಲಿ ಮೀಟ್‌ ಅನ್ನು ರನ್ ಮಾಡಲು ಮುಂದಾಗಿದೆ. ಈ ಆಪ್‌ ಐಓಎಸ್‌ ಹಾಗೂ ಆಂಡ್ರಾಯ್ಡ್‌ ಮೂಲಕ ಯಾವುದೇ ಸಾಧನಕ್ಕೂ ಬೆಂಬಲ ನೀಡಲಿದ್ದು, ಇನ್ಮುಂದೆ ಸೆಶನ್‌ಗಳು ಇನ್ನಷ್ಟ ಸುಲಭವಾಗಲಿವೆ.

ಜೂಮ್

ಈ ವರ್ಷದ ಕೊನೆಯಲ್ಲಿ ಜೂಮ್ ಸೇರಿದಂತೆ ಇತರೆ ತನ್ನದೇ ಅನೇಕ ಪ್ಲಾಟ್‌ಫಾರ್ಮ್‌ಗಳಲ್ಲಿ ಮೀಟ್ ಅನ್ನು ರನ್ ಮಾಡಲು ಗೂಗಲ್ ಘೋಷಣೆ ಮಾಡಿತ್ತು. ಅದರಂತೆ ಜೂಮ್ ರೂಮ್ ಅಥವಾ ಗೂಗಲ್ ಮೀಟ್ ಡಿವೈಸ್‌ ಕ್ಯಾಲೆಂಡರ್‌ನಿಂದ ನೇರವಾಗಿ ಅಥವಾ ಮೀಟಿಂಗ್ ಕೋಡ್ ಅನ್ನು ನಮೂದಿಸುವ ಮೂಲಕ ಒಟ್ಟಾಗಿ 'ಗೂಗಲ್‌ಮೀಟ್‌ ಮೀಟಿಂಗ್‌'ಗೆ ಸೇರಬಹುದು ಎಂದು ಗೂಗಲ್‌ ತಿಳಿಸಿದೆ.

 ಪ್ಲಾಟ್‌ಫಾರ್ಮ್‌

ಇನ್ಮುಂದೆ ಪ್ಲಾಟ್‌ಫಾರ್ಮ್‌ಗಳಲ್ಲಿ ಹಾಗೂ ಜೂಮ್ ರೂಮ್‌ಗಳಲ್ಲಿ 'ಗೂಗಲ್‌ ಮೀಟ್‌' ಮಧ್ಯಪ್ರವೇಶ ಮಾಡಲಿದೆ. ನೋಂದಾಯಿತ ಡಿವೈಸ್‌ಗಳಿಗೆ ಇದನ್ನು ವಿರ್ವಾಹಕರು ಸಕ್ರಿಯಗೊಳಿಸುವ ಅಧಿಕಾರ ಹೊಂದಿರಲಿದ್ದಾರೆ. ಜೊತೆಗೆ ವಿಶ್ವಾಸಾರ್ಹ ಡಿವೈಸ್‌ಗಳಿಗೆ ಮಾಹಿತಿ ನೀಡದೆಯೇ ಕರೆಗಳಿಗೆ ಸೇರಲು ಅನುವು ಮಾಡಿಕೊಡುತ್ತದೆ. ಹಾಗೆಯೇ ಹೈಬ್ರಿಡ್ ಕೆಲಸದ ಸ್ಥಳದಲ್ಲಿ, ಸಂಸ್ಥೆಗಳು ಕಾನ್ಫರೆನ್ಸ್ ಮೂಲಕ ವಿವಿಧ ಸಂಸ್ಥೆಗಳಲ್ಲಿನ ಸಹೋದ್ಯೋಗಿಗಳ ಜೊತೆ ಸಂಪರ್ಕ ಪಡೆಯಲು ಹೆಣಗಾಡುತ್ತಿದ್ದನ್ನು ಇದು ತಪ್ಪಿಸಲಿದೆ ಎಂದು ಕಂಪನಿ ಹೇಳಿದೆ.

ನೆಟ್‌ವರ್ಕ್‌

ಈ ಸಮಸ್ಯೆಯನ್ನು ನಿವಾರಿಸುವುದರ ಜೊತೆಗೆ ಗ್ರಾಹಕರಿಗೆ ಅವರ ನೆಟ್‌ವರ್ಕ್‌ಗಳ ಒಳಗೆ ಮತ್ತು ಹೊರಗಿನ ಜನರೊಂದಿಗೆ ಸಂಪರ್ಕ ಸಾಧಿಸಲು ಸಾಧ್ಯವಾದಷ್ಟು ಫ್ಲೆಕ್ಸಿಬಿಲಿಟಿ ನೀಡಲು ನಾವು ಕೆಲಸ ಮಾಡುತ್ತಿದ್ದೇವೆ ಎಂದು ಗೂಗಲ್‌ ತನ್ನ ಹೇಳಿಕೆಯಲ್ಲಿ ಉಲ್ಲೇಖಿಸಿದೆ. ಅದರಂತೆ ವಿಡಿಯೋ ಕಾನ್ಫರೆನ್ಶಿಂಗ್‌ ಪಾಲುದಾರರಾದ ಆಂಡ್ರಾಯ್ಡ್‌ ಆಧಾರಿತ ಪಾಲಿ ಮತ್ತು ಲಾಜಿಟೆಕ್ ಈ ಸೇವೆ ಪಡೆಯುವ ಮೊದಲಿಗರು ಎಂದು ಹೇಳಿದೆ.

ಪಾಲಿ ಅಥವಾ ಲಾಜಿಟೆಕ್

ಆಂಡ್ರಾಯ್ಡ್‌ ಆಧಾರಿತ ಪಾಲಿ ಅಥವಾ ಲಾಜಿಟೆಕ್ ಡಿವೈಸ್‌ಗಳನ್ನು ಹೊಂದಿರುವ ಗ್ರಾಹಕರು ಈ ಡಿವೈಸ್‌ಗಳಿಗೆ ಮೀಟ್‌ ಪರವಾನಗಿಯನ್ನು ಖರೀದಿಸುವ ಮೂಲಕ ಈ ಫೀಚರ್ಸ್‌ ಬಳಸಲು ಸಾಧ್ಯವಾಗುತ್ತದೆ ಎಂದು ಗೂಗಲ್‌ ಹೇಳಿದೆ. ಇನ್ನು ಗೂಗಲ್ ಮೀಟ್ ಮತ್ತು ಜೂಮ್‌ನಲ್ಲಿ ಪರ್ಯಾಯ ಆನ್‌ಲೈನ್ ಮೀಟಿಂಗ್‌ಗಳಿಗೆ ಹೊಂದಿಕೊಳ್ಳಲಾಗದ ವೃತ್ತಿಪರರು, ವಿದ್ಯಾರ್ಥಿಗಳು ಈಗ ನೆಮ್ಮದಿಯ ನಿಟ್ಟುಸಿರು ಬಿಡಬಹುದು. ಆನ್‌ಲೈನ್‌ನಲ್ಲಿ ಮೀಟಿಂಗ್‌ಗಳಿಗೆ ಹಾಜರಾಗಲು ಈ ಪ್ಲಾಟ್‌ಫಾರ್ಮ್‌ಗಳನ್ನು ವ್ಯಾಪಕವಾಗಿ ಬಳಸುವವರು ಇನ್ನು ಮುಂದೆ ಪ್ರತ್ಯೇಕ ಅಪ್ಲಿಕೇಶನ್‌ಗಳನ್ನು ಬಳಕೆ ಮಾಡುವ ಬದಲು ಈಗಾಗಲೇ ಬಳಕೆ ಮಾಡುತ್ತಿರುವ ಆಪ್‌ನಲ್ಲೇ ಮೀಟಿಂಗ್‌ಗಳಿಗೆ ಸೇರಿಕೊಳ್ಳಬಹುದಾಗಿದೆ.

ಚಾಟ್

ಗೂಗಲ್ ಹಲವು ರೀತಿಯ ಚಾಟ್ ಸೇವೆಗಳನ್ನು ನೀಡಿ ಹೆಸರುವಾಸಿಯಾಗಿದೆ. ಈ ಹಿಂದೆ ಒಂದೇ ರೀತಿಯ ಸೇವೆ ನೀಡುತ್ತಿದ್ದ ಹಲವು ಆಪ್‌ಗಳನ್ನು ಒಂದು ಮಾಡುವ ಕೆಲಸ ಮಾಡಿಕೊಂಡು ಬಂದಿರುವ ಗೂಗಲ್‌, ಗೂಗಲ್‌ ಹ್ಯಾಂಗೌಟ್‌ ಅನ್ನು ವಿಭಜಿಸಿ ಹ್ಯಾಂಗೌಟ್‌ ಮೀಟ್‌ ಹಾಗೂ ಹ್ಯಾಂಗೌಟ್‌ ಚಾಟ್ ಎಂದು ಮಾಡಿತ್ತು. ಇದೀಗ ಗೂಗಲ್‌ ಮೀಟ್‌ ನಲ್ಲಿ ಹಲವು ಫೀಚರ್ಸ್‌ ತಂದಿದ್ದು, ಎಲ್ಲಾ ರೀತಿಯ ಪ್ಲಾಟ್‌ಫಾರ್ಮ್‌ಗಳಲ್ಲಿ ಸಿಂಕ್‌ ಮಾಡಲು ಮುಂದಾಗಿದೆ.

Best Mobiles in India

English summary
Google provides services in several ways, among which gadget and search engine services are important. Now Google is ready to run 'Meet' on multiple platforms.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X