ಆನ್‌ಲೈನಿನಲ್ಲಿ ಏನೇ ಖರೀದಿಸಿದ್ದರೂ ಗೂಗಲ್‌ಗೆ ತಿಳಿಯುವುದು ಹೇಗೆ?

|

ಗೂಗಲ್ ನಿಮ್ಮನ್ನು ಹೇಗೆಲ್ಲಾ ಟ್ರ್ಯಾಕ್ ಮಾಡುತ್ತದೆ ಎಂಬುದು ನಿಮ್ಮ ಕಲ್ಪನೆಗೂ ಮೀರಿರಬಹುದು. ಏಕೆಂದರೆ, ನೀವು ಆನ್‌ಲೈನಿನಲ್ಲಿ ಖರೀದಿಸಿದ ಯಾವುದೇ ಒಂದು ವಸ್ತುವಿನ ಬಗ್ಗೆ ಗೂಗಲ್‌ಗೆ ಮಾಹಿತಿ ಸಿಕ್ಕಿರುತ್ತದೆ. ಅಂದರೆ, ನೀವು ಅಮೆಜಾನ್ ಅಥವಾ ಫ್ಲಿಪ್‌ಕಾರ್ಟ್ ಸೇರಿದಂತೆ ಆನ್‌ಲೈನಿನಲ್ಲಿ ಎಲ್ಲೇ ವಸ್ತುಗಳನ್ನು ಖರೀದಿಸಿದ್ದರೂ ಅದು ಗೂಗಲ್‌ಗೆ ತಿಳಿದಿರುತ್ತದೆ.

ನೀವು ಗೂಗಲ್ ಖಾತೆಗೆ ಸೈನ್ ಇನ್ ಆಗಿ https://myaccount.google.com/purchases ಲಿಂಕ್ ಕ್ಲಿಕ್ ಮಾಡಿ. ಇಲ್ಲಿ ನೀವು ಈವರೆಗೆ ಗೂಗಲ್ ಖಾತೆ ಬಳಸಿ ಆನ್‌ಲೈನ್‌ನಲ್ಲಿ ಖರೀದಿಸಿದ ಪಟ್ಟಿ ನೋಡಬಹುದು. ಪಟ್ಟಿಯಲ್ಲಿ ನೀವು ಯಾವ ತಿಂಗಳು ಏನೆಲ್ಲಾ ಖರೀದಿಸಿದಿರಿ ಎಂಬ ಪಟ್ಟಿ ಇದ್ದು, ಅದರಲ್ಲಿ ನಿರ್ದಿಷ್ಟ ವಸ್ತುವಿನ ಹೆಸರು ಕ್ಲಿಕ್ ಮಾಡಿದ ಕೂಡಲೇ ಮಾಹಿತಿಗಳು ಸಿಗುತ್ತವೆ.

ಆನ್‌ಲೈನಿನಲ್ಲಿ ಏನೇ ಖರೀದಿಸಿದ್ದರೂ ಗೂಗಲ್‌ಗೆ ತಿಳಿಯುವುದು ಹೇಗೆ?

ನೀವು ಆನ್‌ಲೈನ್ ಮೂಲಕ ಖರೀದಿಸಿದ ವಸ್ತುಗಳು ಯಾವುದು? ಯಾವಾಗ ಖರೀದಿಸಿದಿರಿ? ಈ ಎಲ್ಲ ಮಾಹಿತಿಗಳನ್ನು ಗೂಗಲ್ ಸೇವ್ ಮಾಡಿಡುತ್ತಿದೆ. ನೀವು ಖರೀದಿಸಿದ ವಸ್ತುಗಳು ಎಲ್ಲಿಂದ ಖರೀದಿಸಿದ್ದು? ಅದರ ಬೆಲೆ ಎಷ್ಟು? ಡೆಲಿವರಿ ಅಡ್ರೆಸ್ ಯಾವುದು? ಈ ಎಲ್ಲ ಮಾಹಿತಿಗಳೂ ಇಲ್ಲಿವೆ. ಅಂದರೆ ನಿಮ್ಮ ಆನ್‌ಲೈನ್ ಖರೀದಿಯ ಮೇಲೆ ಗೂಗಲ್ ಸದಾ ಕಣ್ಣಿಟ್ಟಿರುತ್ತದೆ.

ಇದು ನಿಮಗೆ ಆಶ್ಚರ್ಯವಾಗಬಹುದು. ಆದರೆ, ಗೂಗಲ್ ಪ್ಲೇ ಸ್ಟೋರ್, ಗೂಗಲ್ ಎಕ್ಸ್‌ಪ್ರೆಸ್ ಸೇರಿದಂತೆ ಹೀಗೆ ಗೂಗಲ್ ಸೇವೆಗಳನ್ನು ಬಳಸಿ ಖರೀದಿಸಿದ ವಸ್ತುಗಳು ಮತ್ತು ಆನ್‌ಲೈನ್ ಖರೀದಿಗಾಗಿ ಗೂಗಲ್ ಮೇಲ್ ಬಳಸಿದ್ದರೆ ಆ ವಸ್ತುಗಳ ಮಾಹಿತಿಗಳೆಲ್ಲವೂ ಗೂಗಲ್ ಬಳಿ ಸೇರಿಕೊಂಡಿರುತ್ತದೆ. ಹಾಗಾಗಿ, ನಿಮ್ಮ ಎಲ್ಲಾ ಮಾಹಿತಿಗಳು ಅದಕ್ಕೆ ಸುಲಭವಾಗಿ ಸಿಕ್ಕಿರುತ್ತದೆ.

ಆನ್‌ಲೈನಿನಲ್ಲಿ ಏನೇ ಖರೀದಿಸಿದ್ದರೂ ಗೂಗಲ್‌ಗೆ ತಿಳಿಯುವುದು ಹೇಗೆ?

ಗೂಗಲ್‌ನಲ್ಲಿ ಸೇರಿರುವ ಈ ಮಾಹಿತಿಯನ್ನು ನೀವು ಡಿಲೀಟ್ ಕೂಡ ಮಾಡಬಹುದಾಗಿದೆ. ಆದರೆ, ಖರೀದಿ ಮಾಡಿದ ವಸ್ತುಗಳ ಪಟ್ಟಿಯನ್ನು ಒಟ್ಟಿಗೆ ಡಿಲೀಟ್ ಮಾಡಲು ಸಾಧ್ಯವಿಲ್ಲ. ಇದರ ಬದಲು ಆ ಪಟ್ಟಿಯನ್ನು ತೆರೆದು ಒಂದೊಂದೇ ವಸ್ತುವನ್ನು ಕ್ಲಿಕ್ ಮಾಡಿ Remove purchase ಕ್ಲಿಕ್ ಮಾಡಿ. ಅದಕ್ಕೆ ಸಂಬಂಧಿಸಿದ ಇಮೇಲ್‌ಗಳನ್ನು ಸಹ ನೀವು ಡಿಲೀಟ್ ಮಾಡಬಹುದು.

ಓದಿರಿ: 'ವಾಟ್ಸ್ಆಪ್' ಎಷ್ಟು ಸೇಫ್?..ಆತಂಕಕಾರಿ ಸುದ್ದಿ ನೀಡಿದ ಟೆಕ್ ತಜ್ಞರು!!

Best Mobiles in India

English summary
Google is quietly keeping track of every single purchase you have made in years, thanks to purchase receipts sent to your. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X