ನಕಲಿ ಕರೆಗಳ ಹಾವಳಿಗೆ ಇನ್ಮುಂದೆ ಕಡಿವಾಣ; ಗೂಗಲ್‌ ವಾಯ್ಸ್‌ನಲ್ಲಿ ಆಕರ್ಷಕ ಫೀಚರ್ಸ್‌

|

ಇತ್ತೀಚೆಗೆ ತಂತ್ರಜ್ಞಾನ ಮೇಲುಗೈ ಸಾಧಿಸುತ್ತಿದ್ದಂತೆ ಇದನ್ನೇ ಬಂಡವಾಳ ಮಾಡಿಕೊಂಡಿರುವ ಅದೆಷ್ಟೋ ಸೈಬರ್‌ ಅಪರಾಧಿಗಳು ನಿಮ್ಮ ಡೇಟಾ ಕದಿಯುವ ಹಾಗೂ ನಿಮ್ಮಿಂದ ಹಣ ಪೀಕುವ ಕೆಲಸಕ್ಕೆ ಮುಂದಾಗುತ್ತಿದ್ದಾರೆ. ಇದನ್ನು ನಿಯಂತ್ರಣಕ್ಕೆ ತರಲು ಭಾರತ ಸರ್ಕಾರ ಸಹ ಮುಂದಾಗಿದೆ. ಹಾಗೆಯೆ ಟ್ರೂ ಕಾಲರ್‌ ಆಪ್‌ ಮೂಲಕವೂ ಸಾಮಾನ್ಯ ಬಳಕೆದಾರರು ಅನಾಮಿಕ ಕರೆಗಳ ಮಾಹಿತಿಯನ್ನು ಪಡೆದುಕೊಳ್ಳಬಹುದು. ಇದೇ ಫೀಚರ್ಚ್‌ ಗೂಗಲ್‌ ವಾಯ್ಸ್‌ನಲ್ಲಿ ಲಭ್ಯವಾಗಲಿದೆ.

ಗೂಗಲ್‌

ಹೌದು, ಗೂಗಲ್‌ ವಾಯ್ಸ್‌ ನಿಮಗೆ ಕರೆ, ಟೆಕ್ಸ್ಟ್‌ ಮತ್ತು ವಾಯ್ಸ್‌ ಮೇಲ್‌ ಸೇವೆ ನೀಡಲಿದ್ದು, ವೆಬ್‌ ಮೂಲಕ ದೇಶೀಯ ಮತ್ತು ಅಂತರಾಷ್ಟ್ರೀಯ ಕರೆಗಳನ್ನು ಮಾಡಬಹುದಾಗಿದೆ. ಹಾಗೆಯೇ ಗೂಗಲ್‌ ತನ್ನ ಇತರೆ ಸೇವೆಗಳಿಗೆ ನೀಡಲಾಗುತ್ತಿರುವ ಫೀಚರ್ಸ್‌ ಮಾದರಿಯಲ್ಲಿಯೇ ಗೂಗಲ್‌ ವಾಯ್ಸ್‌ ಸೇವೆಗೂ ಹೆಚ್ಚಿನ ಭದ್ರತಾ ಫೀಚರ್ಸ್‌ ಅನ್ನು ಸೇರಿಸುತ್ತಿದ್ದು, ಈ ಮೂಲಕ ಸುಲಭವಾಗಿ ನಕಲಿ ಕರೆಗಳನ್ನು ಪತ್ತೆ ಮಾಡಬಹುದಾಗಿದೆ. ಹಾಗಿದ್ರೆ ಇದು ಹೇಗೆಲ್ಲಾ ಕೆಲಸ ಮಾಡಲಿದೆ ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ ಓದಿರಿ.

ಸ್ಪ್ಯಾಮ್​ ಎಚ್ಚರಿಕೆ

ಸ್ಪ್ಯಾಮ್​ ಎಚ್ಚರಿಕೆ

ನಿಮ್ಮ ಮೊಬೈಲ್​ಗೆ ಬರುವ ಸ್ಪ್ಯಾಮ್​ ಕರೆಗಳ ಬಗ್ಗೆ ಗೂಗಲ್​ ವಾಯ್ಸ್​​ ಎಚ್ಚರಿಸಲಿದೆ. ಇತ್ತೀಚಿಗೆ ತುಂಬಾ ಜನ ಸ್ಪ್ಯಾಮ್​ ಕರೆಗಳಿಂದ ತೊಂದರೆ ಅನುಭವಿಸುತ್ತಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿರುವ ಗೂಗಲ್‌ ಈ ಹೊಸ ಸೌಕರ್ಯವನ್ನು ಬಳಕೆದಾರರಿಗೆ ನೀಡುತ್ತಿದೆ. ಈ ಮೂಲಕ ಸಂಶಯಾಸ್ಪದ ಸ್ಪ್ಯಾಮ್​ ಕರೆ​ ಅಥವಾ ಅನಾಮಿಕ ಕರೆ ಬಂದಾಗ ಮಾಹಿತಿ ಸುಲಭವಾಗಿ ತಿಳಿಯುತ್ತದೆ.

ಲೇಬಲ್‌ ರಚನೆ

ಲೇಬಲ್‌ ರಚನೆ

ಅನಾಮಿಕ ಅಥವಾ ಸ್ಪ್ಯಾಮ್​ ಕರೆ ನಿಮ್ಮ ಸ್ಮಾರ್ಟ್‌ಫೋನ್‌ಗೆ ಬಂದಾಗ ಆ ಬಗ್ಗೆ ತಕ್ಷಣವೇ ಎಚ್ಚರಿಸುವ ಗೂಗಲ್‌ ವಾಯ್ಸ್‌ ಲೇಬಲ್‌ ಮೂಲಕ ಮಾಹಿತಿ ನೀಡಲಿದೆ. ಈ ಬಗ್ಗೆ ಸರ್ಚ್​ ಎಂಜಿನ್​ ದೈತ್ಯ ಗೂಗಲ್​ ತನ್ನ ಬ್ಲಾಗ್​ ಪೋಸ್ಟ್​ನಲ್ಲಿ ಮಾಹಿತಿ ನೀಡಿದೆ.

ಬ್ಲಾಕ್‌ ಲಿಸ್ಟ್‌ ಆಯ್ಕೆ

ಬ್ಲಾಕ್‌ ಲಿಸ್ಟ್‌ ಆಯ್ಕೆ

ಇನ್ನು ಈ ಹೊಸ ಫೀಚರ್ಸ್‌ ಮೂಲಕ ಬಳಕೆದಾರರು ಅನಾಮಿಕ ಅಥವಾ ತೊಂದರೆ ನೀಡುವ ಕರೆಯನ್ನು ಬ್ಲಾಕ್​ ಲಿಸ್ಟ್ ಸೇರಿಸಬಹುದಾದ ಆಯ್ಕೆ ಸಹ ನೀಡಲಾಗಿದೆ. ಇದರಿಂದ ಮುಂದೆ ಆಗುವ ಅನಾಹುತದಿಂದ ಪೂರ್ವದಲ್ಲಿಯೇ ಎಚ್ಚೆತ್ತುಕೊಳ್ಳಬಹುದಾಗಿದೆ.

ಕರೆ ಇತಿಹಾಸದಲ್ಲೂ ಮಾಹಿತಿ ಪ್ರದರ್ಶನ

ಕರೆ ಇತಿಹಾಸದಲ್ಲೂ ಮಾಹಿತಿ ಪ್ರದರ್ಶನ

ಇನ್ನು ಕರೆ ಬಂದಾಗ ಅಷ್ಟೇ ಅಲ್ಲದೆ ಕರೆ ಇತಿಹಾಸ ವಿಭಾಗದಲ್ಲೂ ಈ ಬಗ್ಗೆ ಮಾಹಿತಿ ತಿಳಿದುಬರಲಿದೆ. ಇದರಿಂದ ಸುಲಭವಾಗಿ ನೀವು ಆ ನಂಬರ್‌ ಅನ್ನು ಬ್ಲಾಕ್‌ ಲಿಸ್ಟ್‌ಗೆ ಹಾಕಬಹುದು. ಅಕಸ್ಮಾತ್‌ ಗೂಗಲ್‌ ತಪ್ಪಾಗಿ ಆ ಕರೆಯನ್ನು ಸ್ಪ್ಯಾಮ್​ ಕರೆ ಎಂದು ಗುರುತಿಸಿದ್ದರೆ ಅದು ಸ್ಪ್ಯಾಮ್​ ಕರೆಯಲ್ಲ ಎಂದು ನೀವು ಆಪ್‌ ಗೆ ತಿಳಿಸುವ ಮೂಲಕ ಸಾಮಾನ್ಯ ಕರೆ ಲಿಸ್ಟ್‌ಗೆ ಆ ನಂಬರ್‌ ಸೇರಿಸಬಹುದು.

ಕರೆ

ಒಂದು ವೇಳೆ ನಿಮಗೆ ಬಂದಿರುವ ಕರೆ ಏನಾದ್ರೂ ಸ್ಪ್ಯಾಮ್​ ಎಂದು ಒಮ್ಮೆ ಗುರುತಿಸಿದರೆ ಆ ನಂಬರ್​ನಿಂದ ಮುಂದೆ ಬರುವ ಕರೆಗಳು ನೇರವಾಗಿ ವಾಯ್ಸ್​ಮೇಲ್​ಗೆ ಹೋಗುತ್ತವೆ. ಅಕಸ್ಮಾತ್‌ ನೀವು ಆ ನಂಬರ್​ನನ್ನು ಸ್ಪ್ಯಾಮ್​ ಲಿಸ್ಟ್​ನಿಂದ ತೆಗೆದು ಹಾಕಿದ್ರೆ ಮುಂದೆ ಅದೇ ನಂಬರ್‌ನಿಂದ ಕರೆ ಬಂದಾಗ ಗೂಗಲ್ ವಾಯ್ಸ್‌ ನಿಮ್ಮನ್ನು ಎಚ್ಚರಿಸುವುದಿಲ್ಲ.

ಗೂಗಲ್‌ ಹೇಳಿದ್ದೇನು?

ಗೂಗಲ್‌ ಹೇಳಿದ್ದೇನು?

ಇತ್ತೀಚೆಗೆ ವೈ-ಫೈ ಮತ್ತು ನೆಟ್‌ವರ್ಕ್ ಸೆಲ್ಯುಲಾರ್ ಸ್ವಿಚಿಂಗ್‌ಗೆ ಈ ಹೊಸ ಫೀಚರ್ಸ್‌ ಸೇರಿಸಲಾಗುತ್ತಿದ್ದು, ಇನ್ಮುಂದೆ ಅನುಮಾನಾಸ್ಪದವಾಗಿ ಕಂಡುಬರುವ ಎಲ್ಲಾ ಕರೆಗಳ ಬಗ್ಗೆ ಎಚ್ಚರಿಕೆ ನೀಡುವ ಮೂಲಕ ಬಳಕೆದಾರರನ್ನು ರಕ್ಷಣೆ ಮಾಡಲಾಗುತ್ತದೆ. ಇದು ತುಂಬಾ ಜಾಗರೂಕತೆ ಮತ್ತು ಬುದ್ಧಿಮತ್ತೆಯಿಂದ ಈ ಸ್ಪ್ಯಾಮ್​ ಕರೆಗಳನ್ನು ಗುರುತಿಸುತ್ತದೆ. ಹಾಗಾಗಿ ಗೂಗಲ್​ನ ಬಳಕೆದಾರರು ಇದು ನಿಜವಾದ ಕರೆಯೋ ಅಥವಾ ಸ್ಪ್ಯಾಮ್​ ಕರೆಯೋ ಎಂದು ಕಂಡು ಹಿಡಿಯಲು ಸುಲಭವಾಗುತ್ತದೆ ಎಂದಿದೆ. ಅದರಲ್ಲೂ ಆಪ್‌ನಲ್ಲಿ ವಾಯ್ಸ್‌ಸ್ಪ್ಯಾಮ್ ಫಿಲ್ಟರ್ ಏನಾದ್ರೂ ಆಫ್ ಆಗಿದ್ದರೆ, ಶಂಕಿತ ಸ್ಪ್ಯಾಮ್ ಲೇಬಲ್ ಆಟೋಮ್ಯಾಟಿಕ್ ಆಗಿ ಆಕ್ಟಿವ್‌ ಆಗುತ್ತದೆ ಎಂಬುದೂ ಸಹ ನಿಮ್ಮ ಗಮನಕ್ಕಿರಲಿ.

ಎಂದಿನಿಂದ ಲಭ್ಯ?

ಎಂದಿನಿಂದ ಲಭ್ಯ?

ಈ ಹೊಸ ಫಿಚರ್ಸ್‌ ಡಿಸೆಂಬರ್ 29 ರಲ್ಲಿಯೇ ಬಳಕೆದಾರರಿಗೆ ಲಭ್ಯವಾಗಿದ್ದು, 15 ದಿನಗಳ ನಂತರ ಗೂಗಲ್​ ವಾಯ್ಸ್​ನಲ್ಲಿ ಕಾರ್ಯ ನಿರ್ವಹಿಸಲಿದೆ. ಹಾಗೆಯೇ ಎಲ್ಲಾ ಗೂಗಲ್‌ ವಾಯ್ಸ್‌ ಬಳಕೆಗಾರರಿಗೂ ಈ ಸೇವೆ ಲಭ್ಯ ಎಂದು ಗೂಗಲ್‌ ಮಾಹಿತಿ ನೀಡಿದೆ.

Best Mobiles in India

English summary
Google Voice to Alert Users With Suspected Spam Caller Warning for Suspicious Calls.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X