ಈ ಆಪ್‌ಗಳನ್ನು ನೀವು ಬಳಕೆ ಮಾಡುತ್ತಿದ್ರೆ ಇಂದೇ ಫೋನ್‌ನಿಂದ ರಿಮೂವ್‌ ಮಾಡಿ; ಕಾರಣ ಇಲ್ಲಿದೆ!

|

ಸ್ಮಾರ್ಟ್‌ಫೋನ್‌ ಅಥವಾ ಸ್ಮಾರ್ಟ್‌ ಡಿವೈಸ್‌ಗಳಲ್ಲಿ ಆಪ್‌ಗಳ ಬಳಕೆ ಅತ್ಯಾವಶ್ಯಕ. ಅದರಲ್ಲೂ ಗೂಗಲ್‌ ಪ್ಲೇ ಸ್ಟೋರ್‌ ಹಾಗೂ ಆಪಲ್‌ ಆಪ್ ಸ್ಟೋರ್‌ ಮೂಲಕ ಬಳಕೆದಾರರು ತಮಗೆ ಬೇಕಾದ ಹಾಗೂ ಅಗತ್ಯ ಆಪ್‌ಗಳನ್ನು ಇನ್‌ಸ್ಟಾಲ್‌ ಮಾಡಿಕೊಳ್ಳುವುದು ಎಲ್ಲರಿಗೂ ತಿಳಿದ ಸಂಗತಿ. ಇದರೊಂದಿಗೆ ಬಳಕೆದಾರರಿಗೆ ಹೆಚ್ಚಿನ ಭದ್ರತೆ ನೀಡುವ ಹಿನ್ನೆಲೆ ಗೂಗಲ್ ಸಹ ಈ ಆಪ್‌ಗಳ ಮೇಲೆ ತೀವ್ರ ನಿಗಾ ಇರಿಸುತ್ತಲೇ ಬಂದಿದೆ. ಅದಾಗ್ಯೂ ಕುತಂತ್ರ ಬುದ್ದಿ ತೋರಿದ ಹಲವು ಆಪ್‌ಗಳನ್ನುಇದೀಗ ಗೂಗಲ್‌ ತನ್ನ ಆಪ್‌ ಸ್ಟೋರ್‌ನಿಂದ ತೆಗೆದುಹಾಕಿದೆ.

ಈ ಆಪ್‌ಗಳನ್ನು ನೀವು ಬಳಕೆ ಮಾಡುತ್ತಿದ್ರೆ ಇಂದೇ ಫೋನ್‌ನಿಂದ ರಿಮೂವ್‌ ಮಾಡಿ; ಕಾರಣ?

ಹೌದು, ನೀವೇನಾದರೂ ಫಿಟ್‌ನೆಸ್‌ ಹಾಗೂ ಗೇಮಿಂಗ್‌ ವಿಭಾಗದಲ್ಲಿ ಈ ಆಪ್‌ಗಳನ್ನು ಇನ್‌ಸ್ಟಾಲ್‌ ಮಾಡಿಕೊಂಡಿದ್ದೀರಾ ಎಂದಾದರೆ ಮೊದಲು ನಿಮ್ಮ ಸ್ಮಾರ್ಟ್‌ಫೋನ್‌ನಿಂದ ಹೊರಹಾಕಿ. ಇಲ್ಲವಾದರೆ ಖಂಡಿತಾ ನೀವು ನಿಮ್ಮ ಖಾಸಗಿ ದಾಖಲೆ ಹಾಗೂ ಇನ್ನಿತರೆ ಮಾಹಿತಿಯನ್ನು ಬೇರೆಯವರಿಗೆ ನೀಡಿದಂತೆ ಆಗುತ್ತದೆ. ಇನ್ನು ಗೂಗಲ್‌ ಈಗಾಗಲೇ ತನ್ನ ಆಪ್‌ ಸ್ಟೋರ್‌ನಿಂದ ಈ ಎಲ್ಲಾ ಆಪ್‌ಗಳನ್ನು ರಿಮೂವ್‌ ಮಾಡಿದ್ದು, ಯಾವೆಲ್ಲಾ ಆಪ್‌ಗಳು ದೋಷ ಪೂರಿತವಾಗಿದ್ದವು? ಈ ಆಪ್‌ಗಳು ಎಷ್ಟೆಲ್ಲಾ ಇನ್‌ಸ್ಟಾಲ್‌ ಆಗಿವೆ, ಗೂಗಲ್‌ ಎಚ್ಚರಿಕೆ ಏನು ಎಂಬಿತ್ಯಾದಿ ಮಾಹಿತಿ ಇಲ್ಲಿದೆ ನೋಡಿ.

ಗೂಗಲ್ ತನ್ನ ಪ್ಲೇ ಸ್ಟೋರ್‌ನಿಂದ 12 ಜನಪ್ರಿಯ ಆಪ್‌ಗಳನ್ನು ತೆಗೆದುಹಾಕಿದ್ದು, ಈ ಅಪ್ಲಿಕೇಶನ್‌ಗಳು ಅಪಾಯಕಾರಿ ಎಂದು ಸಾಬೀತಾಗಿರುವ ಕಾರಣ ಅವುಗಳನ್ನು ತಕ್ಷಣವೇ ತೆಗೆದುಹಾಕುವಂತೆ ಆಂಡ್ರಾಯ್ಡ್ ಬಳಕೆದಾರರಿಗೆ ಗೂಗಲ್‌ ಎಚ್ಚರಿಸಿದೆ. ಪ್ರಮುಖ ವಿಷಯ ಎಂದರೆ ಈ ಎಲ್ಲಾ ಆಪ್‌ಗಳನ್ನು ಲಕ್ಷಾಂತರ ಬಳಕೆದಾರರು ಇನ್‌ಸ್ಟಾಲ್‌ ಮಾಡಿಕೊಂಡಿದ್ದಾರೆ.

ಈ ಆಪ್‌ಗಳನ್ನು ನೀವು ಬಳಕೆ ಮಾಡುತ್ತಿದ್ರೆ ಇಂದೇ ಫೋನ್‌ನಿಂದ ರಿಮೂವ್‌ ಮಾಡಿ; ಕಾರಣ?

ಈ ಆಪ್‌ಗಳಿಂದ ತೊಂದರೆ ಏನು?

ಲಕ್ಷಾಂತರ ಬಳಕೆದಾರರು ಇನ್‌ಸ್ಟಾಲ್‌ ಮಾಡಿಕೊಂಡಿರುವ ಈ ಆಪ್‌ಗಳು ಫಿಟ್‌ನೆಸ್ ಮತ್ತು ಗೇಮಿಂಗ್ ವಿಭಾಗಕ್ಕೆ ಸಂಬಂಧಿಸಿದ್ದವಾಗಿದ್ದು, ಇವು ಅಪಾಯಕಾರಿ ವೆಬ್‌ಸೈಟ್‌ಗಳ ಲಿಂಕ್‌ಗಳನ್ನು ಕ್ಲಿಕ್ ಮಾಡಿಸಲು ಪ್ರೇರೇಪಿಸಿವೆ. ಈ ವಿಭಾಗದಲ್ಲಿ ಹಲವಾರು ಜನರು ಪ್ರಶ್ನಾವಳಿ ಸಂಬಂಧಿತ ವಿಷಯಗಳನ್ನು ಭರ್ತಿ ಮಾಡಿ ನಂತರ ಯಾವುದೋ ಮೋಸದ ಸೈಟ್‌ ಲಿಂಕ್‌ ಗಳನ್ನು ಕ್ಲಿಕ್ ಮಾಡಿದ್ದಾರೆ.

ಈ ನಿಷೇಧಿತ ಅಪ್ಲಿಕೇಶನ್‌ಗಳು ಬಳಕೆದಾರರಿಗೆ ವಾಕಿಂಗ್ ಮತ್ತು ವ್ಯಾಯಾಮದ ವಿಷಯದಲ್ಲಿ ಅಂಕಗಳನ್ನು ಗಳಿಸಬಹುದಾದ ಆಯ್ಕೆಗಳನ್ನು ನೀಡಿ ನಂತರ ಬಹುಮಾನದ ಭರವಸೆ ನೀಡಿವೆ. ಇದನ್ನು ನಂಬಿದ ಬಳಕೆದಾರರು ಹಣವನ್ನು ಪಡೆಯಲು ನೀಡಲಾದ ಸೈಟ್‌ ಗೆ ಪ್ರವೇಶ ಪಡೆದಾಗ ಯಾವುದೇ ಬಹುಮಾನವನ್ನು ಕ್ಲೈಮ್ ಮಾಡಲು ಸಾಧ್ಯವಾಗಿಲ್ಲ. ಇದಿಷ್ಟೇ ಅಲ್ಲದೆ ಕೇವಲ ಅಂತ್ಯವಿಲ್ಲದ ಜಾಹೀರಾತುಗಳನ್ನು ವೀಕ್ಷಣೆ ಮಾಡುವಂತೆ ಬಳಕೆದಾರರನ್ನು ಕೇಳಲಾಗಿದೆ.

ಯಾವೆಲ್ಲಾ ಆಪ್‌ಗಳಿಗೆ ಗೇಟ್‌ಪಾಸ್‌ ನೀಡಿದೆ ಗೂಗಲ್?

ಫಿಟ್‌ನೆಸ್‌ ಆಪ್‌ಗಳಾದ ಲಕ್ಕಿ ಸ್ಟೆಪ್ ಈವರೆಗೆ 10 ಮಿಲಿಯನ್‌ ಇನ್‌ಸ್ಟಾಲ್‌ ಆಗಿದೆ, ವಾಕಿಂಗ್‌ ಜಾಯ್‌ ಆಪ್‌ 5 ಮಿಲಿಯಲ್‌ ಇನ್‌ಸ್ಟಾಲ್‌ ಆಗಿದ್ದರೆ, ಲಕ್ಕಿ ಹ್ಯಾಬಿಟ್‌ 5 ಮಿಲಿಯನ್‌ ಇನ್‌ಸ್ಟಾಲ್‌ ಆಗಿದೆ. ಇನ್ನುಳಿದಂತೆ ಗೇಮಿಂಗ್‌ ವಿಭಾಗದಲ್ಲಿ ಗೋಲ್ಡನ್‌ ಹಂಟ್ ಆಪ್‌ 100K ಇನ್‌ಸ್ಟಾಲ್‌ ಆಗಿದ್ದರೆ, ರಿಫ್ಲೆಕ್ಟರ್ ಸಹ 100K ಇನ್‌ಸ್ಟಾಲ್‌ ಹೊಂದಿದೆ. ಇನ್ನು ಸೆವೆನ್ ಗೋಲ್ಡನ್ ವೂಲ್ಫ್ ಬ್ಲ್ಯಾಕ್‌ಜಾಕ್ ಆಪ್‌ ಕೂಡ 100K ಇನ್‌ಸ್ಟಾಲ್‌ ಪಡೆದುಕೊಂಡಿದೆ.

ಈ ಆಪ್‌ಗಳನ್ನು ನೀವು ಬಳಕೆ ಮಾಡುತ್ತಿದ್ರೆ ಇಂದೇ ಫೋನ್‌ನಿಂದ ರಿಮೂವ್‌ ಮಾಡಿ; ಕಾರಣ?

ಇದರೊಂದಿಗೆ ಅನ್‌ಲಿಮಿಟೆಡ್ ಸ್ಕೋರ್ 50K ಇನ್‌ಸ್ಟಾಲ್ ಆಗಿದ್ದರೆ, ಬಿಗ್‌ ಡಿಸಿಶನ್ 50K ಇನ್‌ಸ್ಟಾಲ್‌ ಹೊಂದಿದೆ ಹಾಗೂ ಜುವೆಲ್ ಸೀ ಲಕ್ಸ್ ಪ್ರೂಟ್ಸ್‌ ಗೇಮ್, ಲಕ್ಕಿ ಕ್ಲೋವರ್ ಆಪ್‌ , ಕಿಂಗ್ ಬ್ಲಿಟ್ಜ್ ಮತ್ತು ಲಕ್ಕಿ ಹಮ್ಮರ್ ಆಪ್‌ಗಳನ್ನು ಗೂಗಲ್‌ ತನ್ನ ಪ್ಲೇ ಸ್ಟೋರ್‌ನಿಂದ ಹೊರದಬ್ಬಿದೆ.

ಆಂಡ್ರಾಯ್ಡ್‌ಗಾಗಿ ಡಾ.ವೆಬ್‌ ಸಂಗ್ರಹಿಸಿದ ಅಂಕಿ ಅಂಶಗಳ ಪ್ರಕಾರ, ಆಯ್ಡ್‌ವೇರ್ ಟ್ರೋಜನ್‌ಗಳು ಮತ್ತು ಸ್ಪೈವೇರ್‌ಗಳ ಚಟುವಟಿಕೆಯು ಡಿಸೆಂಬರ್ 2022 ರಲ್ಲಿ ಹೆಚ್ಚಾಗಿದೆ ಎಂದು ಕಂಡುಬಂದಿದೆ. ಅದರಂತೆ ಡಾ. ವೆಬ್‌ ಗೂಗಲ್‌‌ ಪ್ಲೇ ಸ್ಟೋರ್‌ನಲ್ಲಿ ಈ ರೀತಿಯ ಬೆದರಿಕೆ ನೀಡುವ ಆಪ್‌ಗಳನ್ನು ಪತ್ತೆ ಮಾಡಿದೆ. ಈ ಮೂಲಕ ಬಳಕೆದಾರರ ಬ್ಯಾಂಕಿಂಗ್‌ ವ್ಯವಹಾರ ಹಾಗೂ ಅವರ ಖಾಸಗಿ ಭದ್ರತೆಗೆ ಸಹಕಾರಿಯಾಗಿದೆ.

ಕೆಲವು ತಿಂಗಳ ಹಿಂದಷ್ಟೇ ಹಲವು ಆಪ್‌ಗಳನ್ನು ಗೂಗಲ್ ಪ್ಲೇ ಸ್ಟೋರ್‌ನಿಂದ ತೆಗೆದುಹಾಕಲಾಗಿತ್ತು. ಈ ಆಪ್‌ಗಳು ಸಹ ಬಳಕೆದಾರರ ಡೇಟಾವನ್ನು ಕದಿಯುವ ಜೊತೆಗೆ ಕೆಲವು ಮಾಲ್‌ವೇರ್‌ಗಳನ್ನು ಆಪ್‌ ಮೂಲಕ ರವಾನಿಸಲಾಗುತ್ತಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಆಪ್‌ ಸ್ಟೋರ್‌ ತನ್ನ ಲಿಸ್ಟ್‌ ನಿಂದ ತೆಗೆದುಹಾಕುವುದಲ್ಲದೆ, ಬಳಕೆದಾರರಿಗೂ ಅವುಗಳನ್ನು ಅನ್‌ಇನ್‌ಸ್ಟಾಲ್‌ ಮಾಡುವಂತೆ ಸೂಚಿಸಿತ್ತು.

Best Mobiles in India

English summary
Google has warned Android smartphone users to uninstall 12 apps immediately. It was revealed that these apps were cheating the users

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X