ಗೂಗಲ್ ನಲ್ಲಿ ನಿಮ್ಮ ಮಾಹಿತಿಗಳು ಸೋರಿಕೆಯಾಗುವುದಿಲ್ಲ ಎಂಬ ಭರವಸೆ

By Gizbot Bureau
|

ಗೂಗಲ್ ಯಾವತ್ತೂ ಕೂಡ ನಿಮ್ಮ ವಯಕ್ತಿಕ ಮಾಹಿತಿಗಳನ್ನು ಮೂರನೇ ವ್ಯಕ್ತಿಗಳಿಗೆ ಮಾರುವುದಿಲ್ಲ ಎಂದು ಗೂಗಲ್ ನ ಸಿಇಓ ಸುಂದರ್ ಪಿಚೈ ತಿಳಿಸಿದ್ದಾರೆ. ಕೆಲವು ಸಾಮಾಜಿಕ ಜಾಲತಾಣಗಳು ಈ ರೀತಿ ಮಾಡುತ್ತವೆ ಎಂಬ ದೂರಿನ ಬಗ್ಗೆ ಇರುವ ಕಾಳಜಿಯ ವಿಚಾರವಾಗಿ ಅವರು ಇದನ್ನು ಪ್ರಸ್ತಾಪಿಸಿದ್ದಾರೆ. ವಯಕ್ತಿಕ ವಿಚಾರ ಅನ್ನುವುದು ಆಡಂಭರದ ವಸ್ತುವಲ್ಲ ಬದಲಾಗಿ ಅದು ವ್ಯಕ್ತಿಯ ಜೀವನಶೈಲಿ ಎಂದು ಅವರು ಹೇಳಿದ್ದಾರೆ

46 ವರ್ಷದ ಭಾರತೀಯ ಮೂಲದ ಗೂಗಲ್ ಸಿಇಓ ಪ್ರೈವೆಸಿ ಅನ್ನುವುದು ನಮ್ಮ ಜೀವನದ ಬಹುಮುಖ್ಯ ವಿಚಾರವಾಗಿದೆ ಎಂದು ಅವರು ಹೇಳಿದ್ದಾರೆ. ಇಂದಿನ ಜಮಾನದಲ್ಲಿ ಹಲವರು ತಮ್ಮ ಮಾಹಿತಿಗಳನ್ನು ಹೇಗೆ ಬಳಸಲಾಗಿದೆ ಮತ್ತು ಹೇಗೆ ಹಂಚಿಕೆಯಾಗುತ್ತಿದೆ ಎಂಬ ಬಗ್ಗೆ ಚಿಂತಿತರಾಗುತಾರೆ. ಪ್ರತಿಯೊಬ್ಬರೂ ಕೂಡ ವಯಕ್ತಿಕ ವಿಚಾರವನ್ನು ತಮ್ಮದೇ ವಿಧಾನದಲ್ಲಿ ವಿವರಿಸುತ್ತಾರೆ.

ನಿಮ್ಮ ಮಾಹಿತಿ ಹಂಚಿಕೆ ನಿರ್ಧಾರ ನಿಮ್ಮದೇ:

ನಿಮ್ಮ ಮಾಹಿತಿ ಹಂಚಿಕೆ ನಿರ್ಧಾರ ನಿಮ್ಮದೇ:

ಪ್ರೈವೆಸಿಗೆ ಗೂಗಲ್ ನಲ್ಲಿ ಬಹಳ ಮಹತ್ವದ ಸ್ಥಾನವಿದೆ. ನಿಮ್ಮ ಪ್ರೈವೆಸಿಯನ್ನು ನಾವು ಗೌರವಿಸುತ್ತೇವೆ. ನಿಮ್ಮ ಡಾಟಾದ ಬಗ್ಗೆ ನಮಗೆ ಯಾವಾಗಲೂ ಒಂದು ಕಣ್ಣಿರುತ್ತದೆ. ಗೂಗಲ್ ನಲ್ಲಿ ಯಾವತ್ತೂ ಕೂಡ ನಿಮ್ಮ ಡಾಟಾವನ್ನು ಮೂರನೇಯವರಿಗೆ ಹಂಚುವುದಿಲ್ಲ. ನಿಮ್ಮ ಮಾಹಿತಿಯನ್ನು ಹೇಗೆ ಬಳಸಬೇಕು ಎಂಬುದನ್ನು ನಿರ್ಧರಿಸುವ ಅವಕಾಶ ನಿಮಗೇ ಇರುತ್ತದೆ ಎಂದು ಪಿಚೈ ಅವರು ತಿಳಿಸಿದ್ದಾರೆ.

ಪ್ರೈವೆಸಿ ಅಂದರೆ ಏನು?

ಪ್ರೈವೆಸಿ ಅಂದರೆ ಏನು?

ಪ್ರೈವೆಸಿಯನ್ನು ಪಿಚೈ ವಿಭಿನ್ನವಾಗಿ ವಿವರಿಸುತ್ತಾರೆ. ಒಂದು ಕುಟುಂಬದಲ್ಲಿ ಶೇರ್ ಆಗಿರುವ ಅಂತರ್ಜಾಲ ಬಳಕೆ ಮಾಡುತ್ತಿದ್ದರೆ ಅಲ್ಲಿ ಪ್ರೈವೆಸಿ ಅಂದರೆ ಒಬ್ಬರೊಬ್ಬರ ಡಾಟಾ ಹಂಚಿಕೆಯಾಗಬಾರದು ಎಂಬುದಾಗಿರಬಹುದು. ಸಣ್ಣ ಬ್ಯುಸಿನೆಸ್ ಮಾಲೀಕರಿಗೆ ತಮ್ಮ ಗ್ರಾಹಕರ ಕ್ರೆಡಿಟ್ ಕಾರ್ಡ್ ಪಾವತಿ ಮತ್ತು ಡಾಟಾ ಸೆಕ್ಯುರಿಟಿಯೇ ಪ್ರಮುಖ ಪ್ರೈವೆಸಿ ಅಂಶವಾಗಿರುತ್ತದೆ. ಅದೇ ಟೀನೇಜರ್ಸ್ ಗೆ ತಾವು ಹಂಚಿದ ಸೆಲ್ಫೀಯನ್ನು ಮುಂಬರುವ ದಿನಗಳಲ್ಲಿ ಡಿಲೀಟ್ ಮಾಡುವುದಕ್ಕೆ ಅವಕಾಶವಿರಬೇಕು ಎಂಬುದೇ ಪ್ರೈವೆಸಿಯ ಅಂಶವಾಗಿರಬಹುದು ಎಂದು ಅವರು ಅಭಿಪ್ರಾಯ ಪಡುತ್ತಾರೆ.

ವಯಕ್ತಿಕ ಭದ್ರತೆ:

ವಯಕ್ತಿಕ ಭದ್ರತೆ:

ಪ್ರೈವೆಸಿ ಅನ್ನುವುದು ವಯಕ್ತಿಕ, ಅದರಲ್ಲೂ ಕಂಪೆನಿಗಳು ಬಳಕೆದಾರರಿಗೆ ಅವರ ಡಾಟಾ ಹೇಗೆ ಬಳಕೆಯಾಗುತ್ತದೆ ಎಂಬ ಮಾಹಿತಿ ನೀಡಿದರೆ ಆಗ ಅಧಿಕ ಭರವಸೆ ಮೂಡುತ್ತದೆ. ವಿಶ್ವದ ಎಲ್ಲಾ ಮೂಲೆಯಲ್ಲೂ ಕೂಡ ಗೂಗಲ್ ಪ್ರೈವೆಸಿ ಪ್ರೊಟೆಕ್ಷನ್ ಗೆ ಅವಕಾಶ ನೀಡಿದೆ.

ಸವಾಲುಗಳು:

ಸವಾಲುಗಳು:

ಜನರ ನಂಬಿಕೆಯನ್ನು ಗಳಿಸುವುದಕ್ಕಾಗಿ ಗೂಗಲ್ ಸಂಸ್ಥೆ ಸತತ ಪ್ರಯತ್ನ ನಡೆಸಿದೆ ಮತ್ತು ಅವರ ಪ್ರಶ್ನೆಗಳನ್ನು ಗುಪ್ತವಾಗಿರಿಸಿದೆ ಜೊತೆಗೆ ಅವರು ಕೇಳಿದ ಪ್ರಶ್ನೆಗಳಿಗೆ ಆದಷ್ಟು ನಿಖರ ಉತ್ತರ ನೀಡುವುದಕ್ಕೆ ಪ್ರಯತ್ನ ನಡೆಸಿದೆ. ಆದರೂ ಕೂಡ ಸಾಕಷ್ಟು ಬಾರೀ ಡಾಟಾ ಬ್ರೀಚ್ ಮತ್ತು ಮಾಹಿತಿ ಸೋರಿಕೆಯ ವಿವಾದವನ್ನು ಗೂಗಲ್ ಎದುರಿಸಿದೆ. ಕೆಲವು ಸೆಕ್ಯುರಿಟಿ ಸಮಸ್ಯೆಗಳ ಕುರಿತಾದ ವಿಚಾರದಲ್ಲೂ ಕೂಡ ಗೂಗಲ್ ಸಮಸ್ಯೆಯಾಗಿದ್ದು ಇದೆ.

ಭರವಸೆ:

ಭರವಸೆ:

ಮುಂದಿನ ದಿನಗಳಲ್ಲಿ ಕೃತಕ ಬುದ್ಧಿಮತ್ತೆಯು ಗೂಗಲ್ ಗೆ ಇನ್ನಷ್ಟು ಬಲ ನೀಡಲಿದೆ ಎಂದು ಪಿಚೈ ಹೇಳಿದ್ದಾರೆ. ಡಿಜಿಟಲ್ ಫ್ಲ್ಯಾಟ್ ಫಾರ್ಮ್ ನಲ್ಲಿ ಅಭಿವೃದ್ಧಿ ಸಾಧಿಸುವ ನಿಟ್ಟಿನಲ್ಲಿ ಗೂಗಲ್ ಸಂಸ್ಥೆ ಯಾವಾಗಲೂ ಕೂಡ ಕಾರ್ಯನಿರತವಾಗಿದ್ದು ಗ್ರಾಹಕರ ಬೇಡಿಕೆ ಮತ್ತು ಅದರ ಪೂರೈಕೆಗೆ ಶ್ರಮಿಸಲಿದೆ ಎಂದು ಸಂಸ್ಥೆ ಭರವಸೆ ನೀಡುತ್ತದೆ.

Best Mobiles in India

Read more about:
English summary
Google will never sell any personal information to 3rd parties

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X