ಗೂಗಲ್‌ ಮ್ಯಾಪ್‌ನಲ್ಲಿ ಹೊಸ ಫೀಚರ್ಸ್‌; 'ನೀವು ಸಂಚರಿಸುವ ರಸ್ತೆ ಅಪಾಯಕಾರಿ'!

|

ಗೂಗಲ್‌ ಕಂಪೆನಿಯ ಗೂಗಲ್‌ ಮ್ಯಾಪ್‌ ಸೇವೆ ಇಂದು ಬಹುಪಾಲು ಎಲ್ಲರಿಗೂ ಅಗತ್ಯವಾಗಿದೆ, ಮಹಾನಗರಗಳಿರಬಹುದು ಅಥವಾ ಯಾವುದೇ ಮೂಲೆಯಲ್ಲಿರುವ ಹಳ್ಳಿ ಇರಬಹುದು. ಸುಲಭವಾಗಿ ಯಾರ ಸಹಾಯವೂ ಇಲ್ಲದೆ ಈ ಗೂಗಲ್‌ ಮ್ಯಾಪ್‌ನಿಂದ ತಲುಪಬಹುದಾಗಿದೆ. ಆದರೂ ಗೂಗಲ್‌ ಮ್ಯಾಪ್‌ ನೋಡಿಕೊಂಡು ಹೋಗಿ ಅದೆಷ್ಟೋ ಜನ ತೊಂದರೆಗೂ ಸಿಲುಕಿರುವುದುಂಟು. ಆದರೆ, ಇನ್ಮುಂದೆ ಬಳಕೆದಾರರು ಎಚ್ಚರಿಕೆಯಿಂದ ಸಂಚಾರ ಮಾಡುವ ಫೀಚರ್ಸ್‌ ನೀಡಲಾಗಿದೆ.

ಗೂಗಲ್‌

ಹೌದು, ಗೂಗಲ್‌ ಮ್ಯಾಪ್‌ ನೋಡಿಕೊಂಡು ಬೇಕಾದ ಸ್ಥಳವನ್ನು ಬೇಕಾದ ಸಮಯಕ್ಕೆ ತಲುಪಬಹುದು. ಈ ಹಿಂದೆ ಯಾವ ಮಾರ್ಗದ ಮೂಲಕ ಯಾವ ವಾಹನದಲ್ಲಿ ಸಂಚರಿಸಿದರೆ ಎಷ್ಟು ಸಮಯವಾಗುತ್ತದೆ ಎಂದು ತಿಳಿಸುತ್ತಿತ್ತು. ಇನ್ಮುಂದೆ ಯಾವ ರಸ್ತೆ ಒಳ್ಳೆಯದು? ಯಾವ ರಸ್ತೆ ಕೆಟ್ಟದ್ದು? ಎಂಬ ಬಗ್ಗೆಯೂ ಮಾಹಿತಿ ಲಭ್ಯವಾಗಲಿದೆ. ಅಂದರೆ ನೀವು ಸಂಚರಿಸುವ ರಸ್ತೆ ಅಪಾಯಕಾರಿಯಾಗಿದ್ದರೆ ಅದರ ಬಗ್ಗೆ ನೀವು ಪೂರ್ವದಲ್ಲಿಯೇ ತಿಳಿದುಕೊಳ್ಳುವ ಮೂಲಕ ಎಚ್ಚರಿಕೆ ವಹಿಸಿಕೊಳ್ಳಬಹುದು. ಹಾಗಿದ್ರೆ, ಇದು ಹೇಗೆ ಕೆಲಸ ಮಾಡುತ್ತದೆ?, ಬಳಕೆದಾರರಿಗೆ ಆಗುವ ಅನುಕೂಲ ಏನು ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ ಓದಿರಿ.

ಗೂಗಲ್‌

ಗೂಗಲ್‌ ಒಡೆತನದ ಗೂಗಲ್‌ ಆಪ್‌ ಹೊಸ ಫೀಚರ್ಸ್‌ ಪಡೆಯಲಿದ್ದು, ಇದು ಟ್ರಾಫಿಕ್ ಡೇಟಾದ ಆಧಾರದ ಮೇಲೆ ಅಪಾಯಕಾರಿ ರಸ್ತೆಗಳ ಬಗ್ಗೆ ಬಳಕೆದಾರರಿಗೆ ಮಾಹಿತಿ ನೀಡುತ್ತದೆ. ಈ ಮೂಲಕ ಬಳಕೆದಾರರು ಮ್ಯಾಪ್‌ನಲ್ಲಿ ಕೆಂಪು ಬಣ್ಣದಲ್ಲಿ ಅಪಾಯದ ರಸ್ತೆಗಳನ್ನು ವೀಕ್ಷಣೆ ಮಾಡಬಹುದಾಗಿದೆ. ಆದಾಗ್ಯೂ ಬಳಕೆದಾರರು ನಿಗದಿತ ರಸ್ತೆಯಲ್ಲಿ ಸಂಚರಿಸುವಾಗ ಟ್ರಾಫಿಕ್ ಡೇಟಾದ ಮಾಹಿತಿ ಆಧಾರದ ವಿಭಿನ್ನ ಮಾಹಿತಿಯನ್ನೂ ಸಹ ಪಡೆದುಕೊಳ್ಳಬಹುದಾಗಿದೆ.

ಪಾಪ್-ಅಪ್ ನೋಟಿಫಿಕೇಶನ್‌

ಪಾಪ್-ಅಪ್ ನೋಟಿಫಿಕೇಶನ್‌

ಈ ಹೊಸ ಫೀಚರ್ಸ್‌ ಮೂಲಕ ಬಳಕೆದಾರರನ್ನು ಬೇಗನೇ ಎಚ್ಚರಿಸಲು ಪಾಪ್‌ ಅಪ್‌ ನೋಟಿಫಿಕೇಶನ್‌ ಆಯ್ಕೆ ನೀಡಲಾಗಿದೆ. ಈ ಮೂಲಕ ತಕ್ಷಣವೇ ಎಚ್ಚೆತ್ತುಕೊಂಡು ಪ್ರಯಾಣಿಕರು ಬೇರೆ ಮಾರ್ಗದಲ್ಲಿ ಸಂಚಾರ ಮಾಡಬಹುದಾಗಿದೆ. ಹಾಗೆಯೇ ನಿಮ್ಮ ಮಾರ್ಗದ ವರದಿಗಳನ್ನು ಬಳಸಿಕೊಂಡು, ಕೆಲವು ರಸ್ತೆಗಳಲ್ಲಿ ಕ್ರ್ಯಾಶ್‌ಗಳ ಇತಿಹಾಸದ ಎಚ್ಚರಿಕೆಗಳನ್ನು ನೀವು ನೋಡಬಹುದು ಎಂದು ಗೂಗಲ್‌ ತಿಳಿಸಿದೆ.

ಈ ಸೌಲಭ್ಯ ಯಾರ್ಯಾರಿಗೆ ಲಭ್ಯ?

ಈ ಸೌಲಭ್ಯ ಯಾರ್ಯಾರಿಗೆ ಲಭ್ಯ?

ಸದ್ಯಕ್ಕೆ ವೇಜ್‌ ಆಪ್‌ನ ಬೀಟಾ ಆವೃತ್ತಿಗೆ ಪ್ರವೇಶವನ್ನು ಹೊಂದಿರುವ ದೇಶಗಳ ಬಳಕೆದಾರರಿಗೆ ಮಾತ್ರ ಈ ಫೀಚರ್ಸ್‌ ಲಭ್ಯವಾಗುತ್ತಿದ್ದು, ಕಾಲಾನಂತರದಲ್ಲಿ ಜಾಗತಿಕವಾಗಿ ಎಲ್ಲರಿಗೂ ಲಭ್ಯವಾಗಲಿದೆ ಎಂದು ತಿಳಿದುಬಂದಿದೆ. ಅದರಲ್ಲೂ ಬೆಂಗಳೂರಿನಂತಹ ಮಹಾನಗರಗಳಿಗೆ ಈ ರೀತಿಯ ಫೀಚರ್ಸ್‌ ಅತ್ಯಗತ್ಯ ಎಂದೇ ಹೇಳಬಹುದು.

ಸ್ಟ್ರೀಟ್‌ ವ್ಯೂನಲ್ಲಿ  ಮನೆ ಬ್ಲರ್‌ ಮಾಡುವ ಆಯ್ಕೆ

ಸ್ಟ್ರೀಟ್‌ ವ್ಯೂನಲ್ಲಿ ಮನೆ ಬ್ಲರ್‌ ಮಾಡುವ ಆಯ್ಕೆ

ಇತ್ತೀಚಿಗೆ ಗೂಗಲ್‌ ಮ್ಯಾಪ್‌ ಸ್ಟ್ರೀಟ್‌ ವ್ಯೂನಲ್ಲಿ ನಿಮ್ಮ ಮನೆಯನ್ನು ಬ್ಲರ್‌ ಮಾಡುವ ಸೌಲಭ್ಯವನ್ನೂ ಕಲ್ಪಿಸಿದೆ. ಈ ಫೀಚರ್ಸ್‌ ಬೆಂಗಳೂರು, ಚೆನ್ನೈ, ದೆಹಲಿ, ಮುಂಬೈ, ಹೈದರಾಬಾದ್, ಪುಣೆ, ನಾಸಿಕ್, ವಡೋದರಾ, ಅಹ್ಮದ್‌ನಗರ ಮತ್ತು ಅಮೃತಸರ ಸೇರಿದಂತೆ ಭಾರತದ ಪ್ರಮುಖ 10 ನಗರಗಳಲ್ಲಿ ಲಭ್ಯವಿದೆ. ಹಾಗೆಯೇ ಗೂಗಲ್‌ ಸ್ಟ್ರೀಟ್‌ ವ್ಯೂ ಫೀಚರ್ಸ್‌ ಜೊತೆಗೆ ಮತ್ತೊಂದು ಆಯ್ಕೆಯನ್ನು ಸಹ ನೀಡಲಾಗಿದ್ದು, ನಿಮ್ಮ ಭದ್ರತೆಗೆ ಯಾವುದೇ ಧಕ್ಕೆ ಭಾರದಂತೆ ಎಚ್ಚರಿಕೆ ವಹಿಸಬಹುದಾಗಿದೆ.

ಸ್ಟ್ರೀಟ್‌ ವ್ಯೂ

ಸ್ಟ್ರೀಟ್‌ ವ್ಯೂ ನಲ್ಲಿ ನಿಮ್ಮ ಮನೆಯನ್ನು ಬ್ಲರ್‌ ಮಾಡುವುದಕ್ಕೆ ಅವಕಾಶವಿದೆಯಾದರೂ ಸುಖಾಸುಮ್ಮನೇ ನಿಮ್ಮ ಮನೆಯ ವಿವರವನ್ನು ಬ್ಲರ್‌ ಮಾಡಲು ಸಾಧ್ಯವಿಲ್ಲ. ಬದಲಿಗೆ ನೀವು ಗೂಗಲ್‌ಗೆ ರಿಕ್ವೆಸ್ಟ್‌ ಕಳುಹಿಸಬೇಕಾಗುತ್ತದೆ. ನಿಮ್ಮ ಮನೆಯ ವಿವರವನ್ನು ಯಾಕೆ ಬ್ಲರ್‌ ಮಾಡಬೇಕು ಅನ್ನುವ ವಿವರನ್ನೂ ಸಹ ಅವರಿಗೆ ನೀಡಬೇಕಾಗುತ್ತದೆ. ಈ ಮೂಲಕ ನೀವು ನೀಡಿದ ಕಾರಣಗಳು ಗೂಗಲ್‌ಗೆ ಸರಿ ಎನಿಸಿದರೆ ಸ್ಟ್ರೀಟ್‌ ವ್ಯೂನಲ್ಲಿ ನೀವು ಹೈಲೈಟ್‌ ಮಾಡಿರುವ ಪ್ರದೇಶವನ್ನು ಬ್ಲರ್‌ ಮಾಡುತ್ತದೆ.

ಇದರಿಂದ ಅನುಕೂಲ ಏನು?

ಇದರಿಂದ ಅನುಕೂಲ ಏನು?

ಈ ಫೀಚರ್ಸ್‌ ಮೂಲಕ ನಿಮಗೆ ಮುಂದೆ ಆಗುವ ಅನಾನುಕೂಲತೆಯನ್ನು ಪೂರ್ವದಲ್ಲಿಯೇ ಸರಿಪಡಿಸಿಕೊಳ್ಳಬಹುದು. ನಿಮ್ಮ ಮನೆಯ ವಿವರವನ್ನು ಸ್ಟ್ರೀಟ್‌ ವ್ಯೂ ನಲ್ಲಿ ಕಳ್ಳಕಾಕರು ಕಂಡುಕೊಂಡು ಅವರು ನಿಮ್ಮ ಮನೆಗೆ ದಾಳಿ ಇಡುವುದನ್ನು ತಪ್ಪಿಸಬಹುದು. ಅಥವಾ ನಿಮ್ಮನ್ನು ಟಾರ್ಗೆಟ್‌ ಮಾಡಿ ನಿಮಗೆ ಏನಾದರೂ ತೊಂದರೆ ಕೊಡಬೇಕು ಎಂದುಕೊಂಡಿರುವವರಿಂದ ದೂರ ಇರಬಹುದಾಗಿದೆ.

Best Mobiles in India

English summary
Google will now warn you about dangerous roads.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X