15GB ಯಿಂದ 1TB ಗೆ ಅಪ್‌ಗ್ರೇಡ್‌ ಆಗಲಿದೆ ಗೂಗಲ್‌ ವರ್ಕ್‌ಸ್ಪೇಸ್‌ !

|

ಗೂಗಲ್‌ ಎಲ್ಲಾ ರೀತಿಯಲ್ಲೂ ತನ್ನ ಸೇವೆಗಳ ಮೂಲಕ ಗ್ರಾಹಕರಿಗೆ ಸೌಕರ್ಯ ನೀಡುತ್ತಾ ಬರುತ್ತಿದೆ. ಆಕರ್ಷಕ ಸ್ಮಾರ್ಟ್‌ಫೋನ್‌, ಸ್ಮಾರ್ಟ್‌ವಾಚ್‌ ಹಾಗೂ ಇನ್ನಿತರೆ ಗ್ಯಾಜೆಟ್‌ಗಳ ಮೂಲಕ ಜನಪ್ರಿಯತೆ ಗಳಿಸಿಕೊಂಡಿದ್ದು, ಈಗ ಕ್ಲೌಡ್ ಕಂಪ್ಯೂಟಿಂಗ್ ಗೂಗಲ್‌ ವರ್ಕ್‌ಸ್ಪೇಸ್‌ನಲ್ಲಿ ಅತ್ಯಾಕರ್ಷಕ ಫೀಚರ್ಸ್‌ ನೀಡಲು ಮುಂದಾಗಿದೆ. ಈ ಮೂಲಕ ಬಳಕೆದಾರರಿಗೆ ಹೆಚ್ಚಿನ ಅನುಕೂಲ ಆಗಲಿದೆ.

ಗೂಗಲ್‌

ಹೌದು, ಈ ಗೂಗಲ್‌ ವರ್ಕ್‌ಸ್ಪೇಸ್ ಅಪ್‌ಗ್ರೇಡ್‌ನೊಂದಿಗೆ ಬಳಕೆದಾರರು ಇನ್ನು ಮುಂದೆ ಜಿ-ಮೇಲ್ ಹಾಗೂ ಡ್ರೈವ್‌ನಲ್ಲಿ ಹೆಚ್ಚಿನ ಸ್ಟೋರೇಜ್‌ ಸಾಮರ್ಥ್ಯವನ್ನು ಪಡೆಯಬಹುದಾಗಿದೆ. ಈ ಸೌಲಭ್ಯವನ್ನು ಬಳಕೆದಾರರಿಗಾಗಿ ಶೀಘ್ರದಲ್ಲೇ ಹೆಚ್ಚಿನ ವೈಶಿಷ್ಟ್ಯಗಳ ಜೊತೆ ಪರಿಚಯಿಸುವುದಾಗಿ ಗೂಗಲ್ ಘೋಷಣೆ ಮಾಡಿದ್ದು, ಈ ಫೀಚರ್ಸ್‌ ಪಡೆದ ನಂತರ ವೈಯಕ್ತಿಕ ಗೂಗಲ್ ಅಕೌಂಟ್‌ನಲ್ಲಿ 15 GB ಬದಲಿಗೆ 1 TB ಸುರಕ್ಷಿತ ಕ್ಲೌಡ್ ಸ್ಟೋರೇಜ್‌ ಇರಲಿದೆ.

1 TB

ಈ ಬಗ್ಗೆ ಗೂಗಲ್‌ ಮಾಹಿತಿ ನೀಡಿದ್ದು, ಶೀಘ್ರದಲ್ಲೇ ಎಲ್ಲಾ ಗೂಗಲ್‌ ಖಾತೆಗಳು 1 TB ಸುರಕ್ಷಿತ ಕ್ಲೌಡ್ ಸ್ಟೋರೇಜ್ ಆಯ್ಕೆಯನ್ನು ಪಡೆಯುತ್ತವೆ. ಇದನ್ನು ಪಡೆದುಕೊಳ್ಳಲು ಯಾವುದೇ ಕೆಲಸ ಮಾಡಬೇಕಿಲ್ಲ, ಬದಲಾಗಿ ಅಸ್ತಿತ್ವದಲ್ಲಿರುವ 15 GB ಸ್ಟೋರೇಜ್‌ ಸಾಮರ್ಥ್ಯ 1 TB ಗೆ ಆಟೋಮ್ಯಾಟಿಕ್‌ ಆಗಿ ಅಪ್‌ಗ್ರೇಡ್ ಆಗುತ್ತದೆ ಎಂದು ತಿಳಿಸಿದೆ. ಈ ಮೂಲಕ ಬಳಕೆದಾರರು ಸ್ಟೋರೇಜ್‌ ಸಮಸ್ಯೆ ಬಗ್ಗೆ ಚಿಂತಿಸದೆ ಬೇಕಾದಷ್ಟು ಫೈಲ್ ಹಾಗೂ ವಿಡಿಯೋ, ಫೋಟೋಗಳನ್ನು ಸಂಗ್ರಹ ಮಾಡಿಕೊಳ್ಳಬಹುದಾಗಿದೆ.

ವೈರಸ್‌ ವಿರುದ್ಧ ಹೋರಾಟ

ವೈರಸ್‌ ವಿರುದ್ಧ ಹೋರಾಟ

ಕೇವಲ ಸ್ಟೋರೇಜ್‌ ಹೆಚ್ಚಿಗೆ ಮಾಡುವುದಷ್ಟೇ ಅಲ್ಲದೆ, ಗೂಗಲ್‌ ಡ್ರೈವ್ ಮಾಲ್‌ವೇರ್, ಸ್ಪ್ಯಾಮ್ ಮತ್ತು ರನ್‌ಸಂವೇರ್ (ransomware) ವಿರುದ್ಧ ಹೋರಾಡಲು ಇನ್‌ಬಿಲ್ಟ್‌ ರಕ್ಷಣೆಯನ್ನು ನೀಡಲಾಗಿದೆ. ಪರಿಣಾಮ ಬಳಕೆದಾರರು ಯಾವುದೇ ಡಾಕ್ಯೂಮೆಂಟ್ ಓಪನ್‌ ಮಾಡುವಾಗ ಮಾಲ್‌ವೇರ್‌ಗೆ ತುತ್ತಾಗುವುದು ತಪ್ಪುತ್ತದೆ. ಈ ಮೂಲಕ ಡಿವೈಸ್‌ ಅನ್ನು ಸೆಕ್ಯೂರ್‌ ಮಾಡಿಕೊಳ್ಳಬಹುದು.

ಮಲ್ಟಿ-ಸೆಂಡ್ ಮೋಡ್

ಮಲ್ಟಿ-ಸೆಂಡ್ ಮೋಡ್

ಈಗಾಗಲೇ ಮಲ್ಟಿ ಸೆಂಡ್ ಮೋಡ್ ಮರ್ಜ್‌ ಫೀಚರ್ಸ್‌ ಅನ್ನು ಗೂಗಲ್‌ ಪರಿಚಯಿಸಿದೆ. ಇದರಲ್ಲಿ ಬಳಕೆದಾರರು @firstname ನಂತಹ ಮೇಲ್ ಮರ್ಜ್‌ ಟ್ಯಾಗ್‌ಗಳನ್ನು ಬಳಕೆ ಮಾಡಿಕೊಂಡು ಮೇಲ್‌ ಕಳುಹಿಸಬಹುದು. ಸ್ವೀಕಾರ ಮಾಡುವವರು ಪ್ರತ್ಯೇಕವಾಗಿ ರಚಿಸಲಾದ ಯೂನಿಕ್‌ ಇಮೇಲ್ ಪಡೆಯಬಹುದಾಗಿದೆ. ಇದರ ಜೊತೆಗೆ ಇಮೇಲ್‌ಗಳು ಅನ್‌ಸಬ್‌ಸ್ಕ್ರೈಬ್ ಲಿಂಕ್ ಅನ್ನು ಹೊಂದಿದ್ದು, ಮೇಲ್‌ ಸ್ವೀಕರಿಸುವವರು ಭವಿಷ್ಯದಲ್ಲಿ ಇದರಿಂದ ಹೊರಗುಳಿಯಬಹುದಾದ ಆಯ್ಕೆಯನ್ನೂ ನೀಡಲಾಗಿದೆ.

ಹೊಸ ದೇಶಗಳಿಗೆ ವಿಸ್ತರಣೆ

ಹೊಸ ದೇಶಗಳಿಗೆ ವಿಸ್ತರಣೆ

ಗೂಗಲ್‌ ಈ ಫೀಚರ್ಸ್ ಅನ್ನು ಹೊಸದಾಗಿ ಫಿಲಿಪೈನ್ಸ್, ವಿಯೆಟ್ನಾಂ, ಇಂಡೋನೇಷಿಯಾ, ಮಲೇಷ್ಯಾ, ತೈವಾನ್, ಥೈಲ್ಯಾಂಡ್, ನೆದರ್ಲ್ಯಾಂಡ್ಸ್, ಪೋರ್ಚುಗಲ್, ಬೆಲ್ಜಿಯಂ, ಫಿನ್‌ಲ್ಯಾಂಡ್, ಗ್ರೀಸ್ ಮತ್ತು ಅರ್ಜೆಂಟೀನಾ ದೇಶಗಳಿಗೂ ವಿಸ್ತರಣೆ ಮಾಡುತ್ತಿದೆ. ಈ ದೇಶಗಳು ಯುಎಸ್, ಕೆನಡಾ, ಮೆಕ್ಸಿಕೋ, ಬ್ರೆಜಿಲ್, ಜಪಾನ್, ಆಸ್ಟ್ರೇಲಿಯಾ ಮತ್ತು ಯುರೋಪ್‌ನಾದ್ಯಂತ ಆರು ದೇಶಗಳ ಜೊತೆ ಸೇರಿಕೊಳ್ಳಲಿವೆ.

ಇತರೆ ಫೀಚರ್ಸ್‌ ಸೇರ್ಪಡೆ?

ಇತರೆ ಫೀಚರ್ಸ್‌ ಸೇರ್ಪಡೆ?

ವರ್ಕ್‌ಸ್ಪೇಸ್ ಇಂಡಿವಿಜುವಲ್‌ನ ವಿಸ್ತರಣೆಯ ಜೊತೆಗೆ ಗೂಗಲ್‌ ಪ್ರೀಮಿಯಂ ಮೀಟ್, ಗೂಗಲ್ ಡಾಕ್ಸ್‌ನಲ್ಲಿ ಇ ಸಿಗ್ನೇಚರ್ಸ್‌, ಅಪಾಯಿಂಟ್‌ಮೆಂಟ್ ಶೆಡ್ಯೂಲಿಂಗ್ ಮತ್ತು ಜಿ-ಮೇಲ್‌ನಲ್ಲಿ ಫ್ಲೆಕ್ಸಿಬಲ್ ಲೇಔಟ್‌ಗಳು ಸೇರಿದಂತೆ ಇನ್ನಿತರ ಫೀಚರ್ಸ್‌ ಅನ್ನು ಸೇರಿಸುತ್ತದೆ ಎಂದು ತಿಳಿದುಬಂದಿದೆ.

ಗೂಗಲ್ ವರ್ಕ್ ಸ್ಪೇಸ್

ಗೂಗಲ್ ವರ್ಕ್ ಸ್ಪೇಸ್ (Google Work space )ಅನ್ನು ಈ ಹಿಂದೆ ಜಿ ಸ್ಯೂಟ್‌(GSuite) ಎಂದು ಕರೆಯಲಾಗುತ್ತಿತ್ತು. ಕ್ಲೌಡ್-ಆಧಾರಿತ ಪ್ರೊಡಕ್ಟಿವಿಟಿ ಸೂಟ್ ಆಗಿದ್ದು, ವೈಯಕ್ತಿಕ ಬಳಕೆದಾರರು ಮತ್ತು ಆಫೀಸ್‌ ಟೀಮ್‌ ಅನ್ನು ಸಂಪರ್ಕಿಸಲು ಹಾಗೂ ಯಾವುದೇ ಸಾಧನದಲ್ಲಿ ಎಲ್ಲಿಂದಲಾದರೂ ಕೆಲಸ ಮಾಡಲು ಅನುವು ಮಾಡಿಕೊಡುತ್ತದೆ. ಪ್ರಸ್ತುತ ಜಾಗತಿಕವಾಗಿ 8 ಮಿಲಿಯನ್‌ಗಿಂತಲೂ ಹೆಚ್ಚು ಪಾವತಿಸುವ ಗೂಗಲ್‌ ವರ್ಕ್ ಸ್ಪೇಸ್ ಗ್ರಾಹಕರನ್ನು ಗೂಗಲ್‌ ಪಡೆದುಕೊಂಡಿದೆ. ಹಾಗೆಯೇ ಕೊರೊನಾ ಸಮಯದಲ್ಲಿ ಮನೆಯಿಂದಲೇ ಕೆಲಸ ಮಾಡುವ ಸೌಲಭ್ಯ ಇದ್ದುದರಿಂದ ಕಳೆದ ಎರಡು ವರ್ಷದಲ್ಲಿ ಬರೋಬ್ಬರಿ 2 ಮಿಲಿಯನ್ ಗ್ರಾಹಕರನ್ನು ಗೂಗಲ್‌ ಗಳಿಸಿಕೊಂಡಿದೆ.

Best Mobiles in India

Read more about:
English summary
Google is providing facility to the customers through its services in all ways. Now Google has introduced new features in google Workspace.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X