ಇನ್ಮುಂದೆ ಫೇಸ್‌ಬುಕ್, ಟ್ವಿಟ್ಟರ್‌ ಬಳಸುವ ಮುನ್ನ ಹುಷಾರ್!..ಹೀಗೆ ಮಾಡುದ್ರೆ ನೇರ ಜೈಲು!!

|

ಫೇಸ್‌ಬುಕ್, ಟ್ವಿಟ್ಟರ್ ಸೇರಿದಂತೆ ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ತಪ್ಪು ಮಾಡುವ ಮುನ್ನ ಹುಷಾರ್. ಏಕೆಂದರೆ, ಕಂಪ್ಯೂಟರ್ ಬಳಸಿ ಮಾಡುವ ಎಲ್ಲ ದೌರ್ಜನ್ಯಗಳು ಸೇರಿದಂತೆ ಜಾಲತಾಣಗಳಲ್ಲಿ ಮಹಿಳೆಯರು ಮತ್ತು ಮಕ್ಕಳಿಗೆ ಕಿರುಕುಳ ಕಿಡಿಗೇಡಿಗಳ ಮೇಲೆ ನಿಗಾ ಇಡುವುದಕ್ಕಾಗಿಯೇ, ಬೆಂಗಳೂರಿನ ಸಿಐಡಿ ಕಚೇರಿಯಲ್ಲಿ ಹೊಸದೊಂದು ಸೈಬರ್ ಲ್ಯಾಬ್ ಅನ್ನು ತೆರೆಯಲಾಗಿದೆ.

ಇತ್ತೀಚಿಗೆ ಸಾಮಾಜಿಕ ಜಾಲತಾಣಗಳಲ್ಲಿ ಹಲವು ದೌರ್ಜನ್ಯಗಳು ಸೇರಿದಂತೆ ಮಹಿಳೆಯರು ಮತ್ತು ಮಕ್ಕಳಿಗೆ ಕಿರುಕುಳ ನೀಡುವ ಹಲವು ಪ್ರಕರಣಗಳು ದಾಖಲಾದ ನಂತರ ಇಂತಹದೊಂದು ಸೈಬರ್ ಲ್ಯಾಬ್ ಸ್ಥಾಪನೆಯಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಕಿರುಕುಳ ನೀಡಿದ ಕಿರಾತಕರನ್ನು ಬೆಂಡೆತ್ತಲು ತಂಡವೊಂದು ಸಿದ್ದವಾಗಿದ್ದು, ಇನ್ಮುಂದೆ ಕಿರಾತಕರು ಯಾವ ಮೂಲೆಯಲ್ಲಿ ಅಡಗಿದ್ದರೂ ಅವರಿಗೆ ಪೊಲೀಸರು ರುಚಿ ತೋರಿಸಲಿದ್ದಾರೆ.

ಫೇಸ್‌ಬುಕ್, ಟ್ವಿಟ್ಟರ್‌ ಬಳಸುವ ಮುನ್ನ ಹುಷಾರ್!..ಹೀಗೆ ಮಾಡುದ್ರೆ ನೇರ ಜೈಲು!!

ಕಿಡಿಗೇಡಿಗಳ ಆನ್‌ಲೈನ್‌ ಚಟುವಟಿಕೆಗಳ ಮೇಲೆ ಸಿಬ್ಬಂದಿ ಲ್ಯಾಬ್‌ನಲ್ಲೇ ಕುಳಿತು ನಿರಂತರ ನಿಗಾ ವಹಿಸಲಿದ್ದಾರೆ. ಅಂತಹ ಕೃತ್ಯ ನಡೆದರೆ, ತಕ್ಷಣವೇ ಕ್ರಮ ಜರುಗಿಸಲಿದ್ದಾರೆ ಎಂದು ಹಿರಿಯ ಸಿಐಡಿ ಅಧಿಕಾರಿಗಳು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಹಾಗಾದರೆ, ಕಿರಾತಕರ ಮೇಲೆ ಹೊಸ ಸೈಬರ್ ಲ್ಯಾಬ್ ಹೇಗೆ ಕಣ್ಣಿಡಲಿದೆ?, ಸಾಮಾಜಿಕ ಜಾಲತಾಣಗಳು ಈಗ ಎಷ್ಟು ಸೇಫ್ ಆಗಲಿವೆ? ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಸೈಬರ್ ಲ್ಯಾಬ್ ಸ್ಥಾಪನೆ

ಸೈಬರ್ ಲ್ಯಾಬ್ ಸ್ಥಾಪನೆ

ಕೇಂದ್ರ ಸರ್ಕಾರ ಲೈಂಗಿಕ ದೌರ್ಜನ್ಯ ಪ್ರಕರಣಗಳ ತನಿಖೆಗಾಗಿಯೇ ಪ್ರತ್ಯೇಕ ಲ್ಯಾಬ್ ಹಾಗೂ ಆನ್‌ಲೈನ್ ದೂರು ಸ್ವೀಕಾರ ಪೋರ್ಟಲ್ ರಚಿಸಲು ಸೂಚಿಸಿತ್ತು. ಅದಕ್ಕಾಗಿ ಮಹಿಳೆ ಮತ್ತು ಮಕ್ಕಳ ಮೇಲಿನ ಸೈಬರ್ ಅಪರಾಧ ನಿಯಂತ್ರಣ ಯೋಜನೆಯಡಿ ಎಲ್ಲ ರಾಜ್ಯಗಳಿಗೂ ತಲಾ 4 ಕೋಟಿ ಅನುದಾನವನ್ನೂ ಮಂಜೂರು ಮಾಡಿದ್ದು, ಈ ಸೈಬರ್ ಲ್ಯಾಬ್ ಈಗ ಸಿದ್ದವಾಗಿದೆ. ಈ ಲ್ಯಾಬ್‌ನಲ್ಲಿ ಕಂಪ್ಯೂಟರ್ ಬಳಸಿ ಮಾಡುವ ಎಲ್ಲ ದೌರ್ಜನ್ಯಗಳ ಮೇಲೆ ನಿಗಾ ವಹಿಸಲಾಗುತ್ತದೆ.

ಮೊದಲೇ ನಿಗಾ ಇಡಲಿದೆ ಲ್ಯಾಬ್!

ಮೊದಲೇ ನಿಗಾ ಇಡಲಿದೆ ಲ್ಯಾಬ್!

ಮೊದಲು ಯಾವುದಾದರೂ ‌ಸೈಬರ್ ಅಪರಾಧ ನಡೆದ ನಂತರ ಐ.ಪಿ ವಿಳಾಸ ಹುಡುಕಿ ಆರೋಪಿಗಳನ್ನು ಪತ್ತೆ ಹಚ್ಚುವ ಕೆಲಸ ಮಾಡಲಾಗುತ್ತಿತ್ತು. ಆದರೆ, ಕಿಡಿಗೇಡಿಗಳ ಮೇಲೆ ಮೊದಲೇ ನಿಗಾ ಇಡುವ ಉದ್ದೇಶ ಇರುವುದರಿಂದ ಹೊಸ ಸೈಬರ್ ಲ್ಯಾಬ್ ತುಂಬ ಪರಿಣಾಮಕಾರಿಯಾಗಿ ಕೆಲಸ ಮಾಡಲಿದೆ. ಸೈಬರ್ ಲ್ಯಾಬ್‌ನಲ್ಲಿ ಕೆಲಸ ಮಾಡುವ ಸಿಬ್ಬಂದಿಗಳು ಕೂಡ ತಂತ್ರಜ್ಞಾನದಲ್ಲಿ ಬಹಳ ಅಪ್‌ಡೇಟ್ ಆಗಿದ್ದಾರೆ. ಇದಕ್ಕಾಗಿ 25 ಲಕ್ಷ ವೆಚ್ಚದಲ್ಲಿ ತರಬೇತಿ ಸಹ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹೊಸ ಲ್ಯಾಬ್ ವ್ಯಾಪ್ತಿಗೆ ಇವೆಲ್ಲ ಸೇರಲಿದೆ!

ಹೊಸ ಲ್ಯಾಬ್ ವ್ಯಾಪ್ತಿಗೆ ಇವೆಲ್ಲ ಸೇರಲಿದೆ!

ಕಂಪ್ಯೂಟರ್ ಬಳಸಿ ಮಾಡುವ ಎಲ್ಲ ದೌರ್ಜನ್ಯಗಳು ಈ ಲ್ಯಾಬ್‌ನ ತನಿಖೆ ವ್ಯಾಪ್ತಿಗೆ ಬರುತ್ತವೆ. ಅದರಲ್ಲಿಯೂ, ಮಹಿಳೆ ಗೌರವಕ್ಕೆ ಧಕ್ಕೆ ತರುವ ರೀತಿಯ ಬರಹಗಳನ್ನು ಪ್ರಕಟಿಸುವುದು, ಫೋಟೊ ಅಥವಾ ವಿಡಿಯೊ ಇಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡುವುದು. ಅಶ್ಲೀಲ ಫೋಟೊಗೆ ಮಹಿಳೆಯ ಮುಖ ಹೊಂದಿಸಿ ಪ್ರಕಟಿಸುವ ಕಿರಾತಕರಿಗೆ ಈ ಸೈಬರ್‌ಲ್ಯಾಬ್ ದುಸ್ವಪ್ನವಾಗಲಿದೆ. ಮಹಿಳೆ ಮತ್ತು ಮಕ್ಕಳ ಅಶ್ಲೀಲ ಚಿತ್ರಗಳನ್ನು ಹಾಕುವವರನ್ನು ನೇರ ಜೈಲಿಗೆ ಕಳುಹಿಸುವಂತಹ ಸಾಕ್ಷಿ ಇನ್ನು ಸಂಗ್ರಹವಾಗಲಿದೆ.

ಆನ್‌ಲೈನಿನಲ್ಲೇ ದೂರು ನೀಡುವ ಆಯ್ಕೆ!

ಆನ್‌ಲೈನಿನಲ್ಲೇ ದೂರು ನೀಡುವ ಆಯ್ಕೆ!

ಕಾರ್ಯ ಆರಂಭಿಸಿರುವ ಹೊಸ ಸೈಬರ್ ಲ್ಯಾಬ್ ತುಂಬ ಪರಿಣಾಮಕಾರಿಯಾಗಿ ಕೆಲಸ ಮಾಡಲಿದೆ ಎನ್ನುವುದಕ್ಕೆ ಆನ್‌ಲೈನಿನಲ್ಲೇ ದೂರು ದಾಖಲಿಸಲು ಅವಕಾಶ ಮಾಡಿಕೊಡಲಾಗಿದೆ. ಸಂತ್ರಸ್ತರ ಹೆಸರು ಮತ್ತು ವಿವರಗಳನ್ನು ಗೋಪ್ಯವಾಗಿಟ್ಟು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಳ್ಳುವ ಆ ಠಾಣೆಯ ಪೊಲೀಸರು, ಲ್ಯಾಬ್ ಸಿಬ್ಬಂದಿ ಕೊಡುವ ಮಾಹಿತಿ ಮೇರೆಗೆ ಆರೋಪಿಗಳನ್ನು ಸೆರೆ ಹಿಡಿಯಲಿದ್ದಾರೆ. ಇದರಿಂದ ಪೊಲೀಸ್ ಠಾಣೆಗೆ ತೆರಳಬೇಕಾದ ಅನಿವಾರ್ಯತೆ ಇನ್ನು ತಪ್ಪಲಿದೆ.

ದೂರು ನೀಡುವುದು ಹೇಗೆ?

ದೂರು ನೀಡುವುದು ಹೇಗೆ?

ಯಾವುದೇ ರೀತಿಯಲ್ಲಿ ದೌರ್ಜನ್ಯಕ್ಕೆ ಒಳಗಾದವರು ‘cybercrime.gov.in' ವೆಬ್‌ಸೈಟ್‌ನಲ್ಲಿ ದೂರು ದಾಖಲಿಸಬಹುದಾಗಿದೆ. ಸೈಬರ್ ಲ್ಯಾಬ್ ಅಧಿಕಾರಿಗಳು ಆ ದೂರನ್ನು ಪರಿಶೀಲಿಸಿ ಮುಂದಿನ ಕ್ರಮಕ್ಕೆ ಸಂಬಂಧಪಟ್ಟ ಠಾಣೆಗೆ ವರ್ಗಾಯಿಸುತ್ತಾರೆ. ನಂತರ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಳ್ಳುವ ಆ ಠಾಣೆಯ ಪೊಲೀಸರು, ಲ್ಯಾಬ್ ಸಿಬ್ಬಂದಿ ಕೊಡುವ ಮಾಹಿತಿ ಮೇರೆಗೆ ಆರೋಪಿಗಳನ್ನು ಸೆರೆ ಹಿಡಿಯಲಿದ್ದಾರೆ. ಇದರಿಂದ ಜಾಲತಾಣಗಳಲ್ಲಿನ ಕಿಡಿಗೇಡಿಗಳ ಕಿರುಕುಳಕ್ಕೆ ಬ್ರೇಕ್ ಬೀಳಲಿದೆ.

Best Mobiles in India

English summary
Governament to setup separate laboratories to tackle online harassment to protect women and children. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X