ಈ ಮೂರು ಯೂಟ್ಯೂಬ್‌ ಚಾನಲ್‌ಗಳು ಮಾಡಿದ ಸುದ್ದಿ ಆದ್ರೂ ಯಾವುದು?; ಕ್ರಮಕ್ಕೆ ಮುಂದಾದ ಸರ್ಕಾರ

|

ಯೂಟ್ಯೂಬ್‌ ಮೂಲಕ ಜನರಿಗೆ ಸುಲಭವಾಗಿ ಮಾಹಿತಿ ರವಾನೆ ಮಾಡಬಹುದಾಗಿದೆ. ಇದನ್ನೇ ಬಂಡವಾಳವಾಗಿಸಿಕೊಳ್ಳುವ ಅದೆಷ್ಟೋ ಮಂದಿ ಯೂಟ್ಯೂಬ್‌ ನಿಯಮಕ್ಕೆ ವಿರುದ್ಧವಾಗಿ ಹಾಗೂ ಆಯಾ ದೇಶ ಹಾಗೂ ರಾಜ್ಯದ ಜನರಿಗೆ ಕೆಟ್ಟ ಸಂದೇಶ ಇರುವ ಮಾಹಿತಿ ಪ್ರಸಾರ ಮಾಡುವ ಮೂಲಕ ಹಣ ಸಂಪಾದನೆಯ ದಾರಿ ಕಂಡುಕೊಂಡಿದ್ದಾರೆ. ಅದರಲ್ಲೂ ಇಲಿ ಹೋಯಿತು ಎಂದರೆ ಹುಲಿ ಹೋಯಿತು ಎನ್ನುವ ಅದೆಷ್ಟೋ ಯೂಟ್ಯೂಬ್‌ ಚಾನಲ್‌ಗಳ ವಿರುದ್ಧ ಸರ್ಕಾರ ಹಾಗೂ ಯೂಟ್ಯೂಬ್‌ ಸಂಸ್ಥೆ ಕ್ರಮ ಜರುಗಿಸಿರುವುದನ್ನು ನೆನಪಿಸಿಕೊಳ್ಳಬಹುದು. ಇದರ ನಡುವೆ ಮತ್ತೆ ಕೆಲವು ಯೂಟ್ಯೂಬ್‌ ಚಾನಲ್‌ಗಳಿಗೆ ಬಿಸಿ ಮುಟ್ಟಿಸಲು ಮುಂದಾಗಿದೆ.

ಸುದ್ದಿ

ಹೌದು, ನಕಲಿ ಸುದ್ದಿ ಪ್ರಸಾರ ಮಾಡುವ ಮೂರು ಯೂಟ್ಯೂಬ್‌ ಚಾನಲ್‌ ವಿರುದ್ಧ ಕ್ರಮ ಜರುಗಿಸುವಂತೆ ಯೂಟ್ಯೂಬ್‌ ಅನ್ನು ಸರ್ಕಾರ ಕೇಳಿಕೊಂಡಿದೆ. ಅಂತೆಯೇ ಈ ಹಿಂದೆ ಸರ್ಕಾರ ಹಲವಾರು ಯೂಟ್ಯೂಬ್‌ಗಳು ಹಾಗೂ ಯೂಟ್ಯೂಬ್‌ನ ವಿಡಿಯೋಗಳನ್ನು ಪ್ಲಾಟ್‌ಫಾರ್ಮ್‌ನಿಂದ ತೆಗೆದುಹಾಕಲಾಗಿದೆ. ಅದಾಗ್ಯೂ ಎಚ್ಚೆತ್ತುಕೊಳ್ಳದ ಈ ಮೂರು ಯೂಟ್ಯೂಬ್‌ಗಳು ಅದೇ ವರಸೆಯನ್ನು ಮುಂದುವರೆಸಿದ ಪರಿಣಾಮ ಇವುಗಳ ವಿರುದ್ಧ ಕ್ರಮಕ್ಕೆ ಮುಂದಾಗಿದೆ. ಹಾಗಿದ್ರೆ ಯಾವುವು ಆ ಮೂರು ಯೂಟ್ಯೂಬ್ ಚಾನಲ್‌?, ಅವು ಮಾಡಿದ ಕೆಲಸ ಏನು? ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಿದ್ದೇವೆ ಓದಿರಿ.

ಸುದ್ದಿ

ಈ ನಕಲಿ ಸುದ್ದಿಯನ್ನು ಪ್ರಸಾರ ಮಾಡುವ ಮೂರು ಚಾನಲ್‌ಗಳು ಒಟ್ಟಾಗಿ 33 ಲಕ್ಷ ಚಂದಾದಾರರನ್ನು ಪಡೆದುಕೊಂಡಿವೆ. ಅದರಂತೆ ಪಿಐಬಿ ಸತ್ಯಾಸತ್ಯತೆ ತಪಾಸಣಾ ಘಟಕವು ಈ ಮೂರು ಚಾನಲ್‌ ಸುಳ್ಳು ಸುದ್ದಿಗಳನ್ನು ಹರಡುತ್ತಿವೆ ಎಂದು ಮಂಗಳವಾರ ಘೋಷಣೆ ಮಾಡಿತ್ತು. ಹಾಗೆಯೇ ಸುಳ್ಳು ಮತ್ತು ಸಂವೇದನಾಶೀಲ ಸುದ್ದಿಗಳ ಮೂಲಕ ಜನರನ್ನು ದಾರಿ ತಪ್ಪಿಸುತ್ತಿವೆ ಎಂದು ಉಲ್ಲೇಖಿಸಲಾಗಿತ್ತು.

ಈ ಚಾನಲ್‌ಗಳು ಮಾಡುವ ಕೆಲಸವೇನು?

ಈ ಚಾನಲ್‌ಗಳು ಮಾಡುವ ಕೆಲಸವೇನು?

ಈ ಮೂರು ಚಾನಲ್‌ಗಳು ನಿಜವಾದ ಸುದ್ದಿ ಚಾನಲ್‌ಗಳ ಆಂಕರ್‌ ಹಾಗೂ ಅದರಲ್ಲಿ ಪ್ರಸಾರವಾಗುವ ಮಾಹಿತಿಯನ್ನು ಥಂಬ್‌ನೇಲ್‌ಗಳನ್ನಾಗಿ ಬಳಕೆ ಮಾಡಿಕೊಂಡು ಬೇಡದ ವಿಷಯವನ್ನು ಪ್ರಸಾರ ಮಾಡುತ್ತಿದ್ದವು. ಇದರ ಬಗ್ಗೆ ಅರಿವಿರದ ಅದೆಷ್ಟೋ ವೀಕ್ಷಕರು ಇವು ನಿಜವಾದ ಸುದ್ದಿಗಳು ಎಂದು ತಿಳಿದುಕೊಂಡಿದ್ದರು.

ಯಾವುವು ಆ ಮೂರು ಚಾನಲ್‌?

ಯಾವುವು ಆ ಮೂರು ಚಾನಲ್‌?

ಮಾಹಿತಿ ಮತ್ತು ಪ್ರಸಾರ ಸಚಿವಾಲಯ ನೀಡಿದ ಮಾಹಿತಿ ಅನ್ವಯ ಆಜ್‌ತಕ್‌ ಲೈವ್‌, ನ್ಯೂಸ್‌ ಹೆಡ್‌ಲೈನ್‌ ಹಾಗೂ ಸರ್ಕಾರಿ ಅಪ್‌ಡೇಟ್‌ ಚಾನಲ್‌ಗಳು ಈ ಕೃತ್ಯ ಎಸಗುತ್ತಲೇ ಬರುತ್ತಿದ್ದು, ಈ ಸಂಬಂಧ ಸರ್ಕಾರ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಹಾಗೆಯೇ ಈ ಆಜ್‌ ತಕ್‌ ಲೈವ್‌ ಚಾನೆಲ್‌ ಇಂಡಿಯಾ ಟು ಡೇ ಗ್ರೂಪ್‌ಗೆ ಸಂಬಂಧಿಸಿದ್ದಲ್ಲ, ನಕಲಿ ಎಂದು ತಿಳಿಸಲಾಗಿದೆ.

ಚಾನಲ್‌ ಮೂಲಕ ಭಾರೀ ಲಾಭ

ಚಾನಲ್‌ ಮೂಲಕ ಭಾರೀ ಲಾಭ

ಈ ಮೂರು ಚಾನಲ್‌ಗಳು ತೋರಿಸುವ ಸುಳ್ಳು ಸುದ್ದಿಯನ್ನು ನೋಡುವ ವೀಕ್ಷಕರ ಸಂಖ್ಯೆ ಹೆಚ್ಚಾಗಿದ್ದು, ಈ ಮೂಲಕ ಇವು ಯೂಟ್ಯೂಬ್‌ನಿಂದ ಹೆಚ್ಚಿನ ಹಣ ಸಂಪಾದನೆ ಮಾಡುತ್ತಿವೆ. ಹಾಗೆಯೇ ವಿಡಿಯೋದಲ್ಲಿ ಜಾಹೀರಾತುಗಳು ಸಹ ಕಂಡು ಬರುತ್ತಿದ್ದು, ಹೆಚ್ಚಿನ ಆರ್ಥಿಕ ಲಾಭವನ್ನು ಇವು ಗಳಿಸುತ್ತಿವೆ ಎಂದು ಸರ್ಕಾರವು ಯೂಟ್ಯೂಬ್‌ ಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದೆ.

ಯಾವೆಲ್ಲಾ ಪ್ರಮುಖ ಸುಳ್ಳು ಸುದ್ದಿ ಪ್ರಕಟಿಸಿವೆ

ಯಾವೆಲ್ಲಾ ಪ್ರಮುಖ ಸುಳ್ಳು ಸುದ್ದಿ ಪ್ರಕಟಿಸಿವೆ

ಯುಟ್ಯೂಬ್‌ನಲ್ಲಿ ಈ ಮೂರು ಚಾನಲ್‌ಗಳು ಭಾರತದ ಸುಪ್ರೀಂ ಕೋರ್ಟ್, ಭಾರತದ ಮುಖ್ಯ ನ್ಯಾಯಮೂರ್ತಿಗಳು, ಸರ್ಕಾರದ ಯೋಜನೆಗಳು, ಎಲೆಕ್ಟ್ರಾನಿಕ್ ಮತಯಂತ್ರ ಮತ್ತು ಕೃಷಿ ಸಾಲ ಮನ್ನಾ ಇತ್ಯಾದಿಗಳ ಬಗ್ಗೆ ಸುಳ್ಳು ಹಾಗೂ ಸಂವೇದನಾಶೀಲ ಸುದ್ದಿಗಳನ್ನು ಪ್ರಸಾರ ಮಾಡಲಾಗಿದೆಯಂತೆ. ಈ ಬಗ್ಗೆ ಸತ್ಯ ಪರಿಶೀಲನಾ ಘಟಕ ಮಾಹಿತಿ ನೀಡಿದೆ. ಅದರಲ್ಲೂ ಬ್ಯಾಂಕ್ ಖಾತೆ ತೆರೆದವರಿಗೆ, ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಮಾಡಿಸಿಕೊಂಡವರಿಗೆ ಸರ್ಕಾರ ಹಣ ನೀಡುತ್ತಿದೆ ಎಂದೂ ಸಹ ಸುದ್ದಿ ಪ್ರಸಾರ ಮಾಡಿರುವುದು ಸರ್ಕಾರದ ಹಾಗೂ ಯೂಟ್ಯೂಬ್‌ ನೀತಿಗೆ ವಿರುದ್ಧವಾಗಿದೆ.

ಚಾನಲ್‌

ಇದರ ನಡುವೆ ಈ ಮೂರು ಚಾನಲ್‌ನ ಒಟ್ಟು ಚಂದಾದಾರರು 33 ಲಕ್ಷ ಇದ್ದು, ಈ ಚಾನಲ್‌ನಲ್ಲಿ 300 ಮಿಲಿಯನ್‌ಗಿಂತಲೂ ಹೆಚ್ಚು ಬಾರಿ ವಿಡಿಯೋ ವೀಕ್ಷಣೆ ಮಾಡಲಾಗಿದೆ. ಅಂದರೆ ಹಲವಾರು ಭಾರತೀಯರನ್ನು ಈ ಸುಳ್ಳು ಸುದ್ದಿಗಳಿಂದ ದಾರಿ ತಪ್ಪಿಸಲಾಗಿದೆ.

ಮಿಲಿಯನ್

ಇದರ ನಡುವೆ ಜುಲೈ ಮತ್ತು ಸೆಪ್ಟೆಂಬರ್ ತಿಂಗಳ ನಡುವೆ 5.6 ಮಿಲಿಯನ್ (56 ಲಕ್ಷ) ವಿಡಿಯೋಗಳನ್ನು ಯೂಟ್ಯೂಬ್‌ ತನ್ನ ಪ್ಲಾಟ್‌ಫಾರ್ಮ್‌ನಿಂದ ಹೊರದಬ್ಬಿದೆ. ಇದಕ್ಕೆ ಪ್ರಮುಖ ಕಾರಣ ಯೂಟ್ಯೂಬ್‌ನ ನೀತಿ ನಿಯಮಗಳಿಗೆ ವಿರುದ್ಧವಾಗಿ ನಡೆದುಕೊಂಡಿದ್ದು, ಹಾಗೂ ಸುಳ್ಳು ಹಾಗೂ ನಕಲಿ ಮಾಹಿತಿಯನ್ನು ಪ್ರಸಾರ ಮಾಡಿರುವುದು.

Best Mobiles in India

English summary
Government Asks YouTube to Take Down 3 Channels Spreading Fake News.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X