104 ಯೂಟ್ಯೂಬ್‌ ಚಾನೆಲ್‌ಗಳನ್ನು ಬ್ಯಾನ್‌ ಮಾಡಿದ ಕೇಂದ್ರ ಸರ್ಕಾರ! ಕಾರಣ ಕೇಳಿದ್ರೆ ಸುಸ್ತಾಗ್ತೀರಾ!

|

ರಾಷ್ಟ್ರೀಯ ಭದ್ರತೆಗೆ ದಕ್ಕೆ ತರುವ ಕೆಲಸ ಮಾಡ್ತಿದ್ದ 104 ಯೂಟ್ಯೂಬ್‌ ಚಾನೆಲ್‌ಗಳ ವಿರುದ್ದ ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ. ಅಲ್ಲದೆ ಸುಳ್ಳುಸುದ್ದಿಗಳನ್ನು ಹರಡುತ್ತಿದ್ದ 45 ವೀಡಿಯೊಗಳು, ನಾಲ್ಕು ಫೇಸ್‌ಬುಕ್ ಖಾತೆಗಳು, ಮೂರು ಇನ್‌ಸ್ಟಾಗ್ರಾಮ್ ಖಾತೆಗಳು, ಐದು ಟ್ವಿಟರ್ ಹ್ಯಾಂಡಲ್‌ಗಳು ಮತ್ತು ಆರು ವೆಬ್‌ಸೈಟ್‌ಗಳನ್ನು ಬ್ಯಾನ್‌ ಮಾಡಲು ಕೇಂದ್ರ ಸರ್ಕಾರ ಆದೇಶಿಸಿದೆ. ಈ ಮೂಲಕ ದೇಶದ ಭದ್ರತೆಗೆ ದಕ್ಕೆ ತರುವ ಯಾವುದೇ ಕೆಲಸವನ್ನು ಸಹಿಸುವುದಿಲ್ಲ ಎಂಬ ಖಡಕ್‌ ಸಂದೇಶವನ್ನು ಕೇಂದ್ರ ಸರ್ಕಾರ ರವಾನಿಸಿದೆ.

ಸರ್ಕಾರ

ಹೌದು, ಕೇಂದ್ರ ಸರ್ಕಾರ ಮತ್ತೊಮ್ಮೆ ದೇಶದಲ್ಲಿ ನೂರಕ್ಕೂ ಹೆಚ್ಚು ಯೂಟ್ಯೂಬ್‌ ಚಾನಲ್‌ಗಳನ್ನು ಬ್ಯಾನ್‌ ಮಾಡಿದೆ. ಅಲ್ಲದೆ ಸೊಶೀಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ಹಲವು ಅಕೌಂಟ್‌ಗಳನ್ನು ಬ್ಯಾನ್‌ ಮಾಡುವಂತೆ ಸರ್ಕಾರ ಆದೇಶಿಸಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ತಿಳಿಸಿದ್ದಾರೆ. ಹಾಗಾದ್ರೆ ಭಾರತದಲ್ಲಿ 104 ಯೂಟ್ಯೂಬ್‌ ಚಾನೆಲ್‌ಗಳನ್ನು ಬ್ಯಾನ್‌ ಮಾಡುವುದಕ್ಕೆ ಕಾರಣ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಬ್ಯಾನ್‌

ಭಾರತ ದೇಶದ ಭದ್ರತೆ ಮತ್ತು ದೇಶದಲ್ಲಿ ಅಶಾಂತಿ ಸೃಷ್ಟಿಗೆ ಯತ್ನಿಸಿದ್ದ ಹಲವು ಯೂಟ್ಯೂಬ್‌ ಚಾನೆಲ್‌ಗಳನ್ನು ಕೇಂದ್ರ ಸರ್ಕಾರ ಈಗಾಗಲೇ ಬ್ಯಾನ್‌ ಮಾಡುತ್ತಾ ಬಂದಿದೆ. ಇದೀಗ ಮತ್ತೊಮ್ಮೆ ರಾಷ್ಟ್ರದ ಭದ್ರತೆಗೆ ದಕ್ಕೆ ತರುವ ಪ್ರಯತ್ನ ನಡೆಸಿದ್ದ 104 ಯೂಟ್ಯೂಬ್‌ ಚಾನಲ್‌ಗಳನ್ನು 'ಮಾಹಿತಿ ತಂತ್ರಜ್ಞಾನ ಕಾಯಿದೆಯ ಸೆಕ್ಷನ್ 69A ಅಡಿಯಲ್ಲಿ ಬ್ಯಾನ್‌ ಮಾಡಿದೆ. ಇದರಲ್ಲಿ ಸೊಶೀಯಲ್‌ ಮೀಡಿಯಾದ ಹಲವು ಅಕೌಂಟ್‌ಗಳು ಕೂಡ ಸೇರಿವೆ ಎಂದು ಹೇಳಲಾಗಿದೆ. ದೇಶದ ಸಾರ್ವಭೌಮತೆ ಮತ್ತು ಸಮಗ್ರತೆಯ ಹಿತಾಸಕ್ತಿಯಲ್ಲಿ ಹಸ್ತಕ್ಷೇಪ ಮಾಡುವ ಚಾನೆಲ್‌ಗಳನ್ನು ಬ್ಯಾನ್‌ ಮಾಡಿರುವ ಬಗ್ಗೆ ಕೇಂದ್ರ ಸಚಿವರು ರಾಜ್ಯಸಭೆಯಲ್ಲಿ ಉತ್ತರವನ್ನು ನೀಡಿದ್ದಾರೆ.

PTI

PTI ವರದಿ ಮಾಡಿದಂತೆ, IT ಯ ಭಾಗ-II ನ ನಿಬಂಧನೆಗಳ ಅಡಿಯಲ್ಲಿ 2021 ರಿಂದ ಅಕ್ಟೋಬರ್ 2022 ರವರೆಗೆ ಸೊಶೀಐಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ಅನೇಕ ಅಕೌಂಟ್‌ಗಳನ್ನು ಬ್ಯಾನ್‌ ಮಾಡಲಾಗಿದೆ. ಇದರಲ್ಲಿ ಸೊಶೀಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ವೆಬ್‌ಪೇಜ್‌ಗಳು, ವೆಬ್‌ಸೈಟ್‌ಗಳು, ಪೋಸ್ಟ್‌ಗಳು ಮತ್ತು ಖಾತೆಗಳು ಸೇರಿದಂತೆ 1,643 ಯೂಸರ್‌-ಕ್ರಿಯೆಟ್‌ URL ಗಳನ್ನು ಬ್ಯಾನ್‌ ಮಾಡಲು ಕೇಂದ್ರ ಮಾಹಿತಿ ಮತ್ತು ಪ್ರಸಾರ ಇಲಾಖೆ ಸಾಮಾಜಿಕ ಮಾಧ್ಯಮ ಕಂಪನಿಗಳಿಗೆ ನಿರ್ದೇಶಿಸಿದೆ.

ಯೂಟ್ಯೂಬ್

ಬ್ಯಾನ್‌ ಆಗಿರುವ ಯೂಟ್ಯೂಬ್ ಚಾನೆಲ್‌ಗಳಲ್ಲಿ, ಆಜ್ ತಕ್ ಲೈವ್, ನ್ಯೂಸ್ ಹೆಡ್‌ಲೈನ್ಸ್ ಮತ್ತು ಸರ್ಕಾರಿ ಅಪ್‌ಡೇಟ್‌ಗಳು ಎಂಬ ಮೂರು ಫೇಕ್‌ ನ್ಯೂಸ್‌ ಅಕೌಂಟ್‌ಗಳು ಕೂಡ ಸೇರಿವೆ. ಈ ಪೇಜ್‌ಗಳಿಗೂ ಆಜ್ ತಕ್ ಲೈವ್ ಯೂಟ್ಯೂಬ್ ಪೇಜ್ ಇಂಡಿಯಾ ಟುಡೇ ಗ್ರೂಪ್‌ಗೂ ಯಾವುದೇ ಸಂಬಂಧವಿಲ್ಲ ಅನ್ನೊದನ್ನ ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಆದರೆ ಯೂಟ್ಯೂಬ್‌ ಚಾನೆಲ್‌ಗಳು ಪ್ರಖ್ಯಾತ ಸುದ್ದಿ ಮಾಧ್ಯಮದಲ್ಲಿರುವ ಟಿವಿ ಆ್ಯಂಕರ್‌ಗಳ ಥಂಬ್‌ನೆಲ್‌ಗಳನ್ನು ಬಳಸಿಕೊಂಡು ದಾರಿತಪ್ಪಿಸುವ ಕೆಲಸ ಕೂಡ ನಡೆದಿದೆ ಅನ್ನೊದನ್ನ ಸರ್ಕಾರ ಒಪ್ಪಿಕೊಂಡಿದೆ.

ಕೇಂದ್ರ

ಕೇಂದ್ರ ಸರ್ಕಾರ ದೇಶದ ಭದ್ರತೆಗೆ ದಕ್ಕೆ ಹೆಸರಿನಲ್ಲಿ ಸೊಶೀಯಲ್‌ ಮೀಡಿಯಾ ಅಕೌಂಟ್‌ಗಳನ್ನು ಬ್ಯಾನ್‌ ಮಾಡಿರೋದು ಇದೇ ಮೊದಲೇನಲ್ಲ. ಪಾಕಿಸ್ತಾನ ಮೂಲದ ಹಲವು ಯೂಟ್ಯೂಬ್‌ ಚಾನೆಲ್‌ಗಳು ಈಗಾಗಲೇ ದೇಶದಲ್ಲಿ ಬ್ಯಾನ್‌ ಮಾಡಲಾಗಿದೆ. ಅಲ್ಲದೆ ಚೀನಾ ಮೂಲದ ಅನೇಕ ಆ್ಯಪ್‌ಗಳು ಹಾಗೂ ವೆಬ್‌ಸೈಟ್‌ಗಳನ್ನು ಬ್ಯಾನ್‌ ಕೂಡ ಮಾಡಲಾಗಿದೆ. ಇದೆಲ್ಲವನ್ನು ಬ್ಯಾನ್‌ ಮಾಡುವಾಗ ಕೇಂದ್ರ ಸರ್ಕಾರ ಐಟಿ ಕಾಯ್ದೆಯ ನಿಬಂಧನೆಯನ್ನು ಬಳಸಿದೆ ಎಂದು ಹೇಳಿಕೊಂಡಿದೆ. ಅಲ್ಲದೆ ದೇಶದ ಭದ್ರತೆಗೆ ದಕ್ಕೆ ತರುವ ಮುಂದುವರೆಸುವ ಚಾನೆಲ್‌ಗಳ ವಿರುದ್ದ ಇನ್ನಷ್ಟು ಕಠಿಣ ಕ್ರಮಕೈಗೊಳ್ಳುವ ಬಗ್ಗೆ ಕೂಡ ಮಾಹಿತಿಯನ್ನು ನೀಡಿದೆ.

Best Mobiles in India

English summary
Government blocks 104 YouTube channels for threatening national security

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X