ಚೀಪ್‌ ಚೈನೀಸ್ ಟೆಂಪರ್ಡ್ ಗ್ಲಾಸ್‌ಗೆ ಬ್ರೇಕ್‌!; ಇದರಿಂದ ಭಾರತಕ್ಕೆ ಆಗುವ ಲಾಭ ಎಷ್ಟು?

|

ರಸ್ತೆ ಬದಿ ಟೇಬಲ್‌ ಮೇಲೆ ಒಂದು ಚಿಕ್ಕ ಅಂಗಡಿ ಇರಿಸಿಕೊಂಡು 'ನಮ್ಮಲ್ಲಿ ಟೆಂಪರ್ಡ್ ಗ್ಲಾಸ್ ಕೇವಲ 99ರೂ. ಅಥವಾ 55ರೂ.' ಎಂದು ಬ್ಯಾನರ್‌ ಹಾಕಿಕೊಂಡು ವ್ಯಾಪಾರ ಮಾಡುತ್ತಿರುವುದನ್ನು ಸಾಮಾನ್ಯವಾಗಿ ಬಹುಪಾಲು ಜನ ನೋಡಿರುತ್ತಾರೆ. ಆದರೆ, ಈ ವ್ಯವಸ್ಥೆಯಿಂದ ಭಾರತದ ಆದಾಯಕ್ಕೆ ಎಷ್ಟು ನಷ್ಟ ಉಂಟಾಗುತ್ತಿದೆ ಎಂಬ ಬಗ್ಗೆ ನಿಮಗೆ ತಿಳಿದರೆ ಖಂಡಿತಾ ಅಚ್ಚರಿಗೆ ಒಳಗಾಗುತ್ತೀರ.

ತಂತ್ರಜ್ಞಾನ

ಹೌದು, ತಂತ್ರಜ್ಞಾನ ವಿಭಾಗದಲ್ಲಿ ಹಲವಾರು ಗ್ಯಾಜೆಟ್‌ಗಳು ಲಭ್ಯ ಇದ್ದು, ಅದರಲ್ಲೂ ಸ್ಮಾರ್ಟ್‌ಫೋನ್‌ ಅನ್ನು ಎಲ್ಲರೂ ಬಳಕೆ ಮಾಡುತ್ತಿದ್ದಾರೆ. ಸ್ಮಾರ್ಟ್‌ಫೋನ್ ಇದ್ದ ಮೇಲೆ ಸ್ಮಾರ್ಟ್‌ಫೋನ್‌ ರಕ್ಷಣೆಗೆ ಟೆಂಪರ್ಡ್ ಗ್ಲಾಸ್ ಹಾಕಿಸುವುದು ಸಾಮಾನ್ಯ. ಈ ಕಾರಣಕ್ಕೆ ಭಾರತ ಸರ್ಕಾರ ಈ ಟೆಂಪರ್ಡ್ ಗ್ಲಾಸ್ ವಿಷಯದಲ್ಲಿ ಪ್ರಮುಖವಾದ ನಿರ್ಧಾರ ತೆಗೆದುಕೊಳ್ಳಲು ಮುಂದಾಗಿದೆ. ಅಸಂಘಟಿತ ವಲಯದ ಭಾಗವಾಗಿರುವ ಟೆಂಪರ್ಡ್ ಗ್ಲಾಸ್, ಸ್ಕ್ರೀನ್ ಪ್ರೊಟೆಕ್ಟರ್‌ಗಳ (ಟಿಜಿ-ಎಸ್‌ಪಿ) ಆಮದುಗಳ ಮೇಲೆ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (ಬಿಐಎಸ್) ಕಡ್ಡಾಯ ನೋಂದಣಿಯನ್ನು ಜಾರಿ ಮಾಡಲು ಮುಂದಾಗಿದೆ.

ಸರ್ಕಾರಕ್ಕೆ ಭಾರೀ ನಷ್ಟ

ಸರ್ಕಾರಕ್ಕೆ ಭಾರೀ ನಷ್ಟ

ಈವರೆಗೂ ಭಾರತದಲ್ಲಿ ಚೀನಾದಿಂದ ಅಸಂಘಟಿತ ವಲಯದಿಂದ ಸ್ಕ್ರೀನ್‌ ಗಾರ್ಡ್‌ಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಪರಿಣಾಮ ಸರ್ಕಾರ ಪ್ರತಿ ವರ್ಷ ಸಾವಿರಾರು ಕೋಟಿ ರೂಪಾಯಿಗಳ ನಷ್ಟ ಅನುಭವಿಸುತ್ತಿದೆ ಎಂದು ತಿಳಿದುಬಂದಿದೆ. ಈ ಬಗ್ಗೆ ಎಚ್ಚೆತ್ತುಕೊಂಡಿರುವ ಸರ್ಕಾರ ಈಗ ಸ್ಕ್ರೀನ್‌ ಗಾರ್ಡ್‌ ವಿಷಯಕ್ಕೆ ಸಂಬಂಧಿಸಿದಂತೆ ಹೊಸ ಪ್ಲ್ಯಾನ್ ರಚಿಸಲು ಮುಂದಾಗಿದೆ.

ಮಾಹಿತಿ

ಮಾಹಿತಿ

ಈ ಬಗ್ಗೆ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದು, ತೆರಿಗೆಯಲ್ಲಿ ಸರ್ಕಾರಕ್ಕೆ ಸಾವಿರಾರು ಕೋಟಿ ನಷ್ಟವಾಗಿದೆ. ಅಲ್ಲದೆ, ಗ್ರಾಹಕರು ಕಡಿಮೆ ಗುಣಮಟ್ಟದ ಪ್ಲಾಸ್ಟಿಕ್ ಉತ್ಪನ್ನಗಳನ್ನು ಸ್ಕ್ರೀನ್ ಪ್ರೊಟೆಕ್ಟರ್‌ಗಳ ಹೆಸರಿನಲ್ಲಿ ಪಡೆಯುತ್ತಿದ್ದಾರೆ. ಆದರೆ, ಈ ವಲಯವು ಸಂಘಟಿತವಾದರೆ ಸಾಕಷ್ಟು ಉದ್ಯೋಗಾವಕಾಶಕ್ಕೆ ಕಾರಣವಾಗಿತ್ತದೆ. ಹಾಗೆಯೇ 40,000-50,000 ಜನರಿಗೆ ಇದರಿಂದ ಉದ್ಯೋಗ ಲಭಿಸಬಹುದು ಎಂದು ಹೇಳಿದ್ದಾರೆ.

ಸ್ಕ್ರೀನ್ ಪ್ರೊಟೆಕ್ಟರ್ ತಯಾರಿಸುವ ಭಾರತದ ಕಂಪೆನಿಗಳಿವು

ಸ್ಕ್ರೀನ್ ಪ್ರೊಟೆಕ್ಟರ್ ತಯಾರಿಸುವ ಭಾರತದ ಕಂಪೆನಿಗಳಿವು

ಚೀನಾ ಹೊರತು ಪಡಿಸಿ ಭಾರತದಲ್ಲಿ ಕೆಲವೇ ಕೆಲವು ಕಂಪೆನಿಗಳು ಮಾತ್ರ ಈ ಸ್ಕ್ರೀನ್ ಪ್ರೊಟೆಕ್ಟರ್ ಗ್ಲಾಸ್‌ ಗಳ ನಿರ್ಮಾಣದಲ್ಲಿ ತೊಡಗಿವೆ. ಆದರೆ ಭಾರತದ ಎಲ್ಲಾ ಸ್ಮಾರ್ಟ್‌ಫೋನ್‌ಗಳಿಗೂ ಈ ಕೆಲವೇ ಕಂಪೆನಿಗಳು ಸಾಕಷ್ಟು ಉತ್ಪನ್ನವನ್ನು ಪೂರೈಸಲು ಸಾಧ್ಯವಾಗದ ಕಾರಣ ಚೀನಾದಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಇನ್ನು ಭಾರತದಲ್ಲಿ ಆಪ್ಟಿಮಸ್ ಇನ್ಫ್ರಾಕಾಮ್ ಹಾಗೂ ಕಾರ್ನಿಂಗ್ ಇಂಡಿಯಾ ಸೇರಿದಂತೆ ಕೆಲವು ಕಂಪೆನಿಗಳು ಇವುಗಳನ್ನು ತಯಾರು ಮಾಡುತ್ತಿವೆ.

ಇದರ ವ್ಯವಹಾರ ಎಷ್ಟಿದೆ ಗೊತ್ತಾ?

ಇದರ ವ್ಯವಹಾರ ಎಷ್ಟಿದೆ ಗೊತ್ತಾ?

ಟೆಂಪರ್ಡ್ ಗ್ಲಾಸ್ ಸ್ಕ್ರೀನ್ ಪ್ರೊಟೆಕ್ಟರ್‌ಗಳ ದೇಶೀಯ ಮಾರುಕಟ್ಟೆಯು 2025 ರ ವೇಳೆಗೆ ಸುಮಾರು 25,000 ಕೋಟಿ ತಲುಪುತ್ತದೆ ಎಂದು ಅಂದಾಜಿಸಲಾಗಿದ್ದು, ಗ್ರಾಹಕ ಬೆಲೆಯಲ್ಲಿ ಈಗ ಸುಮಾರು 18,000 ಕೋಟಿ ಇದೆ. ಹಾಗೆಯೇ ಮುಂದಿನ ಐದು ವರ್ಷಗಳಲ್ಲಿ ಸಂಚಿತ ಮಾರುಕಟ್ಟೆಯು ಸುಮಾರು 1,02,700 ಕೋಟಿ ದಾಟುವ ನಿರೀಕ್ಷೆ ಇದೆ ಎಂದು ವರದಿಗಳಿಂದ ತಿಳಿದುಬಂದಿದೆ.

ಟೆಂಪರ್ಡ್ ಗ್ಲಾಸ್‌

ಟೆಂಪರ್ಡ್ ಗ್ಲಾಸ್‌ನ ಒಟ್ಟಾರೆ ಮಾರುಕಟ್ಟೆ ವಿಭಾಗದಲ್ಲಿ 2021 ರಲ್ಲಿ ಭಾರತದಲ್ಲಿ 373 ಮಿಲಿಯನ್ ಯುನಿಟ್‌ಗಳನ್ನು ತಲುಪಲಾಗಿದ್ದು, ದುರಂತ ಅಂದರೆ ಇದರಲ್ಲಿ ಕೇವಲ 10 ಪ್ರತಿಶತದಷ್ಟು ಮಾರುಕಟ್ಟೆ ಅಧಿಕೃತವಾಗಿದ್ದರೆ ಇನ್ನು 90 ರಷ್ಟು ವ್ಯವಹಾರವನ್ನು ಅನಧಿಕೃತವಾಗಿ ನಡೆಸಲಾಗಿದೆ. ಅದನ್ನು ಮಾರುಕಟ್ಟೆ ಭಾಷೆಯಲ್ಲಿ ಗ್ರೇ ಮಾರ್ಕೆಂಟ್ ಎಂದು ಕರೆಯಲಾಗುತ್ತದೆ.

ಉದ್ಯೋಗ ನಷ್ಟ

ಉದ್ಯೋಗ ನಷ್ಟ

ಇಂಡಿಯಾ ಸೆಲ್ಯುಲರ್ ಮತ್ತು ಎಲೆಕ್ಟ್ರಾನಿಕ್ಸ್ ಅಸೋಸಿಯೇಷನ್ ​​(ICEA) ಪ್ರಕಾರ, ಟೆಂಪರ್ಡ್ ಗ್ಲಾಸ್‌ ಆಮದುಗಳಿಗೆ ನಿರ್ದಿಷ್ಟ ಹೆಚ್‌ ಎಸ್‌ ಕೋಡ್ ಅನ್ನು ಶಿಫಾರಸು ಮಾಡಬೇಕು ಹಾಗೂ ಈ ಕೋಡ್‌ ಅನ್ನು ಆಮದುಗಳಿಗೆ ಕಡ್ಡಾಯವಾಗಿ ಬಳಸಬೇಕು ಎಂದು ತಿಳಿಸಲಾಗಿದೆ. ಇನ್ನು ಜಿಎಸ್‌ಟಿಯ ಹೊರತಾಗಿ ಹಲವಾರು ರೀತಿಯಲ್ಲಿ ಈ ವ್ಯವಸ್ಥೆಯಿಂದ ಭಾರತಕ್ಕೆ ನಷ್ಟ ಆಗುತ್ತಿದೆ ಎಂದು ತಿಳಿದಬಂದಿದ್ದು, ಆದಾಯ ತೆರಿಗೆ, ಕಸ್ಟಮ್ಸ್ ಸುಂಕ ಸಂಗ್ರಹಗಳಲ್ಲಿನ ಕೊರತೆ, ಉದ್ಯೋಗದ ಕೊರತೆ ಎದುರಾಗುತ್ತಿದೆ. ಹಾಗೆಯೇ ಭಾರತದಲ್ಲಿನ ಮೊಬೈಲ್ ಗ್ರಾಹಕರಿಗೆ ನಕಲಿ ಹಾಗೂ ಕಡಿಮೆ ಗುಣಮಟ್ಟದ ಉತ್ಪನ್ನಗಳನ್ನು ಈ ಮೂಲಕ ಒದಗಿಸಲಾಗುತ್ತಿದೆ ಎಂದು ಹೇಳಲಾಗಿದೆ.

ಸರ್ಕಾರದ ಯೋಜನೆ

ಸರ್ಕಾರದ ಈ ಯೋಜನೆ ಜಾರಿಯಾಗಿ ಒಮ್ಮೆ ಪ್ರಮಾಣೀಕರಣವನ್ನು ನಡೆಸಿದ ನಂತರ, ಕಾನೂನು ಮತ್ತು ಗುಣಮಟ್ಟ ಆಧಾರಿತ ಮಾರುಕಟ್ಟೆಯನ್ನು ನಿರ್ಮಾಣ ಮಾಡಿಕೊಡಲಾಗುವುದು. ಅದರಲ್ಲಿ ಸ್ಥಳೀಯ ಪೂರೈಕೆದಾರರು ಸರಿಯಾದ ಮಾರ್ಗಗಳ ಮೂಲಕ ಮಾರಾಟ ಮಾಡಲು ಸಹಾಯಕವಾಗಲಿದೆ ಎಂದು ಐಸಿಇಎ ಅಧ್ಯಕ್ಷ ಪಂಕಜ್ ಮೊಹಿಂದ್ರೂ ಹೇಳಿದ್ದಾರೆ.

Best Mobiles in India

English summary
Government may standardize mobile screen guards soon to protect domestic manufacturing

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X