ವಿಮಾನ ಮತ್ತು ಹಡಗಿನಲ್ಲಿನ್ನು ಇಂಟರ್‌ನೆಟ್ ಸೌಲಭ್ಯ!..ಆದರೆ ಬೆಲೆ ಕೇಳಿ ಬೆಚ್ಚಿಬೀಳಬೇಡಿ!

|

ಬದಲಾವಣೆಗೆ ಒಗ್ಗಿಕೊಳ್ಳುತ್ತಿರುವ ಭಾರತದಲ್ಲಿನ್ನು ವಿಮಾನ ಅಥವಾ ಹಡಗಿನಲ್ಲಿ ಸಂಚರಿಸುವಾಗ ಮೊಬೈಲ್‌ ಕರೆ ಮಾಡಲು ಅಥವಾ ಇಂಟರ್ನೆಟ್ ಸೇವೆ ಬಳಸಲು ಆಗುವುದಿಲ್ಲ ಎಂಬ ಪ್ರಯಾಣಿಕರ ಕೊರಗು ಸದ್ಯದಲ್ಲೇ ನೀಗಲಿದೆ. ಭಾರತೀಯ ಸೀಮಾರೇಖೆಯೊಳಗೆ ವಿಮಾನ ಹಾಗೂ ಹಡಗು ಸಂಚರಿಸುವಾಗ ಅದರಲ್ಲಿರುವ ಪ್ರಯಾಣಿಕರಿಗೆ ಕರೆ ಹಾಗೂ ಇಂಟರ್‌ನೆಟ್ ಸೌಲಭ್ಯ ಒದಗಿಸುವ ಕುರಿತು ಕೇಂದ್ರ ಸರ್ಕಾರ ನಿಯಮಗಳನ್ನು ಪ್ರಕಟಣೆ ಮಾಡಿದೆ.

ಹೌದು, ಭಾರತೀಯ ಭೂಭಾಗದಲ್ಲಿರುವ ದೂರಸಂಪರ್ಕ ಜಾಲ ಅಥವಾ ಉಪಗ್ರಹಗಳನ್ನು ಬಳಸಿ ಕರೆ, ಇಂಟರ್ನೆಟ್‌ ಸೌಲಭ್ಯ ಕಲ್ಪಿಸಲು 'ವಿಮಾನ ಹಾಗೂ ನೌಕಾಯಾನ ಸಂಪರ್ಕ ನಿಯಮ 2018' ಅನುವು ಮಾಡಿಕೊಡುತ್ತದೆ. ದೇಶೀಯ ಹಾಗೂ ಅಂತಾರಾಷ್ಟ್ರೀಯ ವಿಮಾನ ಹಾಗೂ ನೌಕಾಯಾನ ಕಂಪನಿಗಳು ಲೈಸೆನ್ಸ್‌ ಹೊಂದಿರುವ ಭಾರತೀಯ ದೂರಸಂಪರ್ಕ ಕಂಪನಿಗಳ ಜತೆ ಪಾಲುದಾರಿಕೆ ಮಾಡಿಕೊಂಡು ಈ ಸೌಕರ್ಯಗಳನ್ನು ಕಲ್ಪಿಸಲಾಗುತ್ತಿದೆ.

ವಿಮಾನದಲ್ಲಿನ್ನು ಇಂಟರ್‌ನೆಟ್ ಸೌಲಭ್ಯ!..ಆದರೆ ಬೆಲೆ ಕೇಳಿ ಬೆಚ್ಚಿಬೀಳಬೇಡಿ!

ಡಿ.14ರಂದು ಈ ಕುರಿತಂತೆ ನಿಯಮಗಳನ್ನು ಪ್ರಕಟಿಸಲಾಗಿದ್ದು, ಗೆಜೆಟ್ ಅಧಿಸೂಚನೆ ಹೊರಡಿಸಿದ ಬಳಿಕ ಜಾರಿಗೆ ಬರಲಿವೆ.ಭಾರತೀಯ ದೂರಸಂಪರ್ಕ ಕಂಪನಿಗಳು ಬಾಹ್ಯಾಕಾಶ ಇಲಾಖೆಯಿಂದ ಪೂರ್ವಾನುಮತಿ ಪಡೆದುಕೊಂಡು, ದೇಶಿ ಅಥವಾ ವಿದೇಶಿ ಉಪಗ್ರಹಗಳ ಮೂಲಕ ಈ ಸೌಲಭ್ಯ ಒದಗಿಸಬಹುದಾಗಿದೆ. ವಿಮಾನ ಭಾರತೀಯ ವಾಯುಸೀಮೆಯಲ್ಲಿ ಕನಿಷ್ಠ 3000 ಮೀಟರ್‌ ಎತ್ತರಕ್ಕೆ ಹೋದ ಬಳಿಕ ಈ ಸೇವೆಗಳನ್ನು ನೀಡಬಹುದು ಎಂದು ಸ್ಪಷ್ಟಪಡಿಸಲಾಗಿದೆ.

ಆದರೆ ಈ ವ್ಯವಸ್ಥೆಯು ಪ್ರಯಾಣಿಕರಿಗೆ ಭಾರೀ ದುಬಾರಿಯಾಗಿ ಪರಿಣಮಿಸಲಿದೆ ಎನ್ನಲಾಗಿದೆ.ವಿಮಾನ ಪ್ರಯಾಣಿಕರನ್ನು ಬೆಸ್ತುಬೀಳುವಂತೆ ಮಾಡಿದ್ದು, ವಿಮಾನ ಪ್ರಯಾಣದ ವೇಳೆ ವೈಫೈ ಸೌಲಭ್ಯ ಸಿಗುವುದಕ್ಕಿಂತಲೂ ಹೆಚ್ಚಾಗಿ ಅಲ್ಲಿ ನೀಡುವ ಇಂಟರ್‌ನೆಟ್ ಬೆಲೆ ಹೆಚ್ಚಾಗಿರುತ್ತದೆ ಎಂದು ಹೇಳಲಾಗಿದೆ. ಹಾಗಾದರೆ, ವಿಮಾನ ಪ್ರಯಾಣದ ವೇಳೆ ಇಂಟರ್‌ನೆಟ್ ಬಳಸಲು ಎಷ್ಟು ಹಣ ಪಾವತಿಸಬೇಕು ಎಂಬುದನ್ನು ಮುಂದೆ ಓದಿ ತಿಳಿಯಿರಿ.!

ವಿಮಾನದಲ್ಲಿ ಇಂಟರ್‌ನೆಟ್‌ ಸೌಲಭ್ಯ

ವಿಮಾನದಲ್ಲಿ ಇಂಟರ್‌ನೆಟ್‌ ಸೌಲಭ್ಯ

ವಿಮಾನದಲ್ಲಿ ಇಂಟರ್‌ನೆಟ್‌ ಸೌಲಭ್ಯ ನೀಡುವ ತಂತ್ರಜ್ಞಾನ ಈಗ ಲಭ್ಯವಿದ್ದು, 3000 ಮೀಟರ್‌ಗಿಂತ ಮೇಲೆ ಹಾರಲು ಆರಂಭಿಸಿದ ಬಳಿಕ ಇಂಟರ್‌ನೆಟ್‌ ಸಂಪರ್ಕ ನೀಡಬಹುದು ಎನ್ನುವುದು ಟ್ರಾಯ್‌ ಹೇಳಿದ ನಂತರ ವಿಮಾನದಲ್ಲಿ ಇಂಟರ್‌ನೆಟ್‌ ಸೌಲಭ್ಯ ನೀಡಲು ಸಂವಹನ ಇಲಾಖೆ ಮುಂದಾಗಿದೆ.

ಅಂತಾರಾಷ್ಟ್ರೀಯ ದರ್ಜೆ ಸೌಲಭ್ಯ

ಅಂತಾರಾಷ್ಟ್ರೀಯ ದರ್ಜೆ ಸೌಲಭ್ಯ

ವಿಮಾನ ಪ್ರಯಾಣದ ವೇಳೆ ದೇಶಿಯ ಹಾಗೂ ಅಂತಾರಾಷ್ಟ್ರೀಯ ವಿಮಾನಯಾನದ ವೇಳೆ ವೈಫೈ ಸೌಲಭ್ಯ ಒದಗಿಸುವುದರಿಂದ ಅಂತಾರಾಷ್ಟ್ರೀಯ ದರ್ಜೆಯ ಸೌಲಭ್ಯ ನೀಡಿದಂತಾಗುತ್ತದೆ. ಹಾಗಾಗಿ, ಇನ್-ಫ್ಲೈಟ್ ವೈಫೈ ಸೌಲಭ್ಯಕ್ಕೆ ಪ್ರಯಾಣದ ದರದ ಶೇ.30ಕ್ಕಿಂತ ಹೆಚ್ಚು ಶುಲ್ಕ ವಿಧಿಸುವ ಸಾಧ್ಯತೆ ಇದೆ ಈಗ ನಿಜವಾಗುವ ಲಕ್ಷಣಗಳು ಇವೆ.

ಗಂಟೆಗೆ 1,000 ರೂ.ಶುಲ್ಕ

ಗಂಟೆಗೆ 1,000 ರೂ.ಶುಲ್ಕ

ವಿಮಾನ ಪ್ರಯಾಣದ ವೇಳೆ ಮೊಬೈಲ್ ಮತ್ತು ವೈಫೈ ಸೌಲಭ್ಯ ಸಿಗುವುದಕ್ಕಿಂತಲೂ ಹೆಚ್ಚಾಗಿ ಅಲ್ಲಿ ನೀಡುವ ಇಂಟರ್‌ನೆಟ್ ಬೆಲೆ ಎಲ್ಲರನ್ನು ಹೌರಾರುವಂತೆ ಮಾಡಿದೆ. ಪ್ರಯಾಣದ ವೇಳೆ ಅರ್ಧ ಗಂಟೆ ಇಂಟರ್‌ನೆಟ್ ಬಳಕೆಗೆ 500 ರೂ. ಹಾಗೂ ಗಂಟೆಗೆ 1,000 ರೂಪಾಯಿ ಶುಲ್ಕ ವಿಧಿಸಲಾಗುತ್ತದೆ ಎಂದು ಹೇಳಲಾಗಿದ್ದು, ಪ್ರಯಾಣಿಕರು ಹೌರಾರಿದ್ದಾರೆ.!

ಪ್ರಯಾಣಿಕರು ಶಾಕ್.

ಪ್ರಯಾಣಿಕರು ಶಾಕ್.

ವಿಮಾನಪ್ರಯಾಣದಲ್ಲಿ ಮೊಬೈಲ್ ಮತ್ತು ಇಂಟರ್‌ನೆಟ್ ಬಳಕೆ ಸುದ್ದಿ ಕೇಳಿ ಖುಷಿಯಾಗಿದ್ದೆವು. ಆದರೆ, ಅರ್ಧಗಂಟೆ ಇಂಟರ್‌ನೆಟ್ ಬಳಕೆಗೆ 500 ರಿಂದ 1,000 ರೂಪಾಯಿ ಶುಲ್ಕ ವಿಧಿಸುವುದನ್ನು ಕೇಳಿ ಶಾಕ್ ಆಗಿದೆ ಎಂದು ವಿಮಾನ ಪ್ರಯಾಣಿಕರು ಹೇಳಿದ್ದಾರೆ. ಇದು ಸಾಮಾನ್ಯರಿಗೆ ಸಾಧ್ಯವಾಗದು ಎಂದು ಕೆಲವರು ಅಭಿಪ್ರಾಯ ಪಟ್ಟಿದ್ದಾರೆ.

ಬೆಲೆ ಏಕೆ ಹೆಚ್ಚು?

ಬೆಲೆ ಏಕೆ ಹೆಚ್ಚು?

ಇಂಟರ್‌ನೆಟ್ ಸೇವೆಯನ್ನು ಅಳವಡಿಸಲು ಪ್ರತಿ ವಿಮಾನಕ್ಕೂ 36ರಿಂದ 72 ಲಕ್ಷ ರು.ವರೆಗೂ ವೆಚ್ಚವಾಗಲಿದೆ. ಆ ವೆಚ್ಚವನ್ನು ಪ್ರಯಾಣಿಕರಿಗೆ ಬಳಕೆ ಶುಲ್ಕದ ರೂಪದಲ್ಲಿ ಕಂಪನಿಗಳು ಹೇರಲಿವೆ ಎಂದು ವರದಿಗಳು ಪ್ರಕಟಿಸಿವೆ. ಆದರೆ, ಉಚಿತ ಡೇಟಾದ ನಿರೀಕ್ಷೆಯಲ್ಲಿರುವ ಜನರು ಇದನ್ನು ಒಪ್ಪುತ್ತಾರ ಎಂಬುದನ್ನು ಕಾದುನೋಡಬೇಕಿದೆ.!

Best Mobiles in India

English summary
The government, in its notification, said Indian and foreign airlines and shipping companies operating in the country can provide in-flight and maritime voice and data services in partnership with a valid Indian telecom licence holder. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X