ಜಿಯೋಗೆ ಮೋಸ!..ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾಗೆ 3,050 ಕೋಟಿ ದಂಡ!

|

ಮೂರು ವರ್ಷಗಳ ಹಿಂದೆ ರಿಲಯನ್ಸ್ ಜಿಯೋ ಕಾರ್ಯಾಚರಣೆ ಆರಂಭಿಸಿದಾಗ ಇಂಟರ್ ಕನೆಕ್ಷನ್ ಪೋರ್ಟ್‌ಗಳನ್ನು(ಅಂತರ ಸಂಪರ್ಕ) ಅನ್ಲಾಕ್ ಮಾಡಿದ್ದಕ್ಕಾಗಿ, ಭಾರತಿ ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಕಂಪೆನಿಗಳಿಗೆ 3,050 ಕೋಟಿ ದಂಡ ವಿಧಿಸುವ ಟೆಲಿಕಾಂ ನಿಯಂತ್ರಕರ ನಿರ್ಧಾರವನ್ನು ಡಿಜಿಟಲ್ ಕಮ್ಯುನಿಕೇಷನ್ಸ್ ಕಮಿಷನ್ (ಡಿಸಿಸಿ) ಬುಧವಾರ ಎತ್ತಿಹಿಡಿದಿದೆ.

ಜಿಯೋಗೆ ಮೋಸ!..ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾಗೆ 3,050 ಕೋಟಿ ದಂಡ!

2016ರಲ್ಲಿ ಜಿಯೋ ಆರಂಭವಾದ ಸಂದರ್ಭದಲ್ಲಿ ಜಿಯೋ ಗ್ರಾಹಕರು ಒಳ ಬರುವ ಮತ್ತು ಹೊರ ಹೋಗುವ ಕರೆಗಳಲ್ಲಿ ಸಮಸ್ಯೆ ಎದುರಿಸುತ್ತಿದ್ದರು. ಇದಕ್ಕೆ ಕೆಲ ಟೆಲಿಕಾಂ ಕಂಪೆನಿಗಳು ಇಂಟರ್ ಕನೆಕ್ಷನ್ ಪೋರ್ಟ್‌ಗಳನ್ನು ಅನ್‌ಲಾಕ್ ಮಾಡಿರುವುದೇ ಕಾರಣ ಎಂದು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರಕ್ಕೆ(ಟ್ರಾಯ್) ಜಿಯೋ ಕಂಪೆನಿಯು ದೂರು ಸಲ್ಲಿಸಿತ್ತು.

ಈ ಬಗ್ಗೆ ವಿಚಾರಣೆ ನಡೆಸಿದ ಟ್ರಾಯ್, ಜಿಯೋಗೆ ಅಂತರ್ ಸಂಪರ್ಕ ನೀಡದೇ ಲೋಪ ಎಸಗಿದ್ದಕ್ಕೆ ಏರ್‌ಟೆಲ್ ಮತ್ತು ವೊಡಾಫೋನ್ಗಳಿಗೆ 1,050 ಕೋಟಿ ಹಾಗೂ ಐಡಿಯಾಗೆ 950 ಕೋಟಿ ರೂ.ದಂಡ ವಿಧಿಸಿ ಸರ್ಕಾರಕ್ಕೆ ಶಿಫಾರಸ್ಸು ಮಾಡಿತ್ತು. ಇದೀಗ ಡಿಜಿಟಲ್ ಕಮ್ಯೂನಿಕೇಷನ್ ಕಮಿಷನ್ ಸಹ ಟ್ರಾಯ್ ವಿಧಿಸಿರುವ ದಂಡವನ್ನು ಎತ್ತಿಹಿಡಿದು ಸರ್ಕಾರಕ್ಕೆ ಶಿಫಾರಸು ಮಾಡಿದೆ.

ಜಿಯೋಗೆ ಮೋಸ!..ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾಗೆ 3,050 ಕೋಟಿ ದಂಡ!

ಟ್ರಾಯ್ ನೀಡಿದ ಶಿಫಾರಸುಗಳ ಬಗ್ಗೆ ಗಂಭೀರ ಚರ್ಚೆ ನಡೆಸಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಟೆಲಿಕಾಂ ಕಾರ್ಯದರ್ಶಿ ಅರುಣ್ ಸುಂದರರಾಜನ್ ಅವರು ತಿಳಿಸಿದ್ದಾರೆ. ಡಿಸಿಸಿ ಈಗ ದಂಡಕ್ಕೆ ಅನುಮೋದನೆ ನೀಡಿರುವುದರಿಂದ ಈಗಾಗಲೇ ಆರ್ಥಿಕ ಮುಗ್ಗಟ್ಟಿನಲ್ಲಿರುವ ವೊಡಾಫೋನ್ ಐಡಿಯಾ ಮತ್ತು ಏರ್‌ಟೆಲ್ ಕಂಪೆನಿಗಳಿಗೆ ಭಾರೀ ಹಿನ್ನಡೆಯಾಗಿದೆ ಎಂದು ಹೇಳಲಾಗಿದೆ.

ನೀವು PF ಖಾತೆಯನ್ನು ಹೊಂದಿದ್ದರೆ ಶೀಘ್ರವೇ ಈ ಕೆಲಸ ಮಾಡಿ!ನೀವು PF ಖಾತೆಯನ್ನು ಹೊಂದಿದ್ದರೆ ಶೀಘ್ರವೇ ಈ ಕೆಲಸ ಮಾಡಿ!

ಟ್ರಾಯ್ ನೀಡಿದ ಶಿಫಾರಸುಗಳ ಬಗ್ಗೆ ಗಂಭೀರ ಚರ್ಚೆ ನಡೆಸಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಟೆಲಿಕಾಂ ಕಾರ್ಯದರ್ಶಿ ಅರುಣ್ ಸುಂದರರಾಜನ್ ಅವರು ತಿಳಿಸಿದ್ದಾರೆ. ಡಿಸಿಸಿ ಸರ್ಕಾರದ ನೇಮಿಸಿದ ಸಮಿತಿಯಾಗಿದ್ದು ಟೆಲಿಕಾಂ ಸಚಿವಾಲಯ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ,ನೀತಿ ಆಯೋಗ ಮತ್ತು ಆರ್ಥಿಕ ವ್ಯವಹಾರಗಳ ಇಲಾಖೆಯ ಹಿರಿಯ ಅಧಿಕಾರಿಗಳಿರುತ್ತಾರೆ.

ಯಾವುದೇ ಕಾರಣಕ್ಕೂ ಹಾಸಿಗೆ ಮೇಲೆ ಫೋನ್ ಚಾರ್ಜ್ ಮಾಡಲೇಬೇಡಿ!!ಯಾವುದೇ ಕಾರಣಕ್ಕೂ ಹಾಸಿಗೆ ಮೇಲೆ ಫೋನ್ ಚಾರ್ಜ್ ಮಾಡಲೇಬೇಡಿ!!

ಟೆಲಿಕಾಂ ಕಂಪನಿಗಳ ಮಧ್ಯೆ ಒಂದು ಕರೆ ಪೂರ್ಣಗೊಳ್ಳಬೇಕಾದರೆ ಪಾಯಿಂಟ್ಸ್ ಆಫ್ ಇಂಟರ್ ಕನೆಕ್ಷನ್ ಬಳಕೆ ಮಾಡಲಾಗುತ್ತದೆ. ಮಾರುಕಟ್ಟೆಯಲ್ಲಿ ಸ್ಪರ್ಧೆಯನ್ನು ಕಡಿಮೆ ಮಾಡಲು ಟೆಲಿಕಾಂ ಕಂಪನಿಗಳು ಉದ್ದೇಶಪೂರ್ವಕವಾಗಿ ಪಾಯಿಂಟ್ಸ್ ಆಫ್ ಇಂಟರ್ ಕನೆಕ್ಷನ್ ತಡೆಯುವ ಕೆಲಸ ಮಾಡಿವೆ ಎಂದು ಆರೋಪ ಕೇಳಿಬಂದಿತ್ತು. ಇದಕ್ಕೆ ಈಗ ದಂಡ ಪಾವತಿಸಬೇಕಾದ ಸಮಯ ಬಂದಿದೆ.

Best Mobiles in India

English summary
Digital Communications Commission's decision is a setback to Airtel and Voda Idea, already buried under a pile of debt and are facing losses. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X