ಶಾಕಿಂಗ್ ನ್ಯೂಸ್!..ಇನ್ಮುಂದೆ ಫೇಸ್‌ಬುಕ್, ಟ್ವಿಟರ್ ಖಾತೆ ತೆರೆಯಲು ಬೇಕು ಆಧಾರ್?!

|

ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ಟ್ರೋಲಿಂಗ್, ಸುಳ್ಳು ಸುದ್ದಿಗಳಿಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಮುಂದಾಗಿದ್ದು ಸಾಮಾಜಿಕ ಜಾಲತಾಣಗಳಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಬೇಕಾದ ನಿಯಮವನ್ನು ತರಲು ತಯಾರಾಗಿದೆ ಎಂಬ ವಿಶೇಷ ಸುದ್ದಿ ಹೊರಬಿದ್ದಿದೆ. ಸುಳ್ಳು ಸುದ್ದಿ ಹರಡುವ, ಶಾಂತಿ ಕದಡುವ, ಕೋಮು ಗಲಭೆಗಳನ್ನು ಪ್ರಚೋದಿಸುವ ಸಾಮಾಜಿಕ ಜಾಲತಾಣ ಬಳಕೆದಾರರನ್ನು ನಿಯಂತ್ರಣದಲ್ಲಿಡಲು ಇದು ಸೂಕ್ತ ಕ್ರಮ ಎಂದು ಹೇಳಲಾಗುತ್ತಿದೆ.

ಹೌದು, ಪ್ರಮುಖ ಸೋಷಿಯಲ್ ಮೀಡಿಯಾಗಳಾದ ಫೇಸ್‌ಬುಕ್, ಟ್ವಿಟರ್ ಮತ್ತು ಹೆಲೊ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳು ಹಾಗು ಟ್ರೋಲ್ ಗಳು ವ್ಯಾಪಕವಾಗಿ ಹರಡುತ್ತಿವೆ. ಈ ಸಮಾಜಿಕ ಜಾಲತಾಣಗಳನ್ನು ಹೆಚ್ಚು ಜನರು ಬಳಸುತ್ತಿದ್ದು, ಇವುಗಳ ಮೂಲಕವೇ ಸುಳ್ಳು ಸುದ್ದಿಗಳನ್ನು ಹೆಚ್ಚು ಹರಿಬಿಡಲಾಗುತ್ತದೆ. ಹಲವು ಸಂದರ್ಭಗಳಲ್ಲಿ ಹೀಗೆ ಮಾಡುವ ಪೇಜ್ ಅಡ್ಮಿನ್‌ಗಳು ಯಾರು ಎನ್ನುವುದೇ ತಿಳಿಯುವುದಿಲ್ಲ. ಹಾಗಾಗಿ, ಇದಕ್ಕೆ ಇದಕ್ಕೆಲ್ಲ ಕಡಿವಾಣ ಹಾಕಲು ಸರ್ಕಾರ ಮುಂದಾಗಿದೆ ಎನ್ನಲಾಗುತ್ತಿದೆ.

ಶಾಕಿಂಗ್ ನ್ಯೂಸ್!..ಇನ್ಮುಂದೆ ಫೇಸ್‌ಬುಕ್, ಟ್ವಿಟರ್ ಖಾತೆ ತೆರೆಯಲು ಬೇಕು ಆಧಾರ್?!

ಸಾಮಾಜಿಕ ಜಾಲತಾಣ ಬಳಕೆದಾರರನ್ನು ನಿಯಂತ್ರಣ ಮಾಡುವ ಉದ್ದೇಶದಿಂದ ಸೋಷಿಯಲ್ ಮೀಡಿಯಾ ಖಾತೆಗಳಿಗೆ ಆಧಾರ್ ಕಾರ್ಡ್, ಪಾಸ್ ಪೋರ್ಟ್, ಮೊಬೈಲ್ ನಂಬರ್ ನಂತಹ ಅಧಿಕೃತ ಗುರುತಿನ ಚೀಟಿ ಜೋಡಣೆ ಮಾಡುವುದನ್ನು ಕಡ್ಡಾಯಗೊಳಿಸಲಾಗುತ್ತಿದೆ ಎನ್ನಲಾಗಿದೆ. ಹಾಗಾದರೆ, ಏನಿದು ಕುತೋಹಲದ ವರದಿ?, ಸಾಮಾಜಿಕ ಜಾಲತಾಣಗಳಿಗೆ ಆಧಾರ್ ಲಿಂಕಿಂಗ್ ಉತ್ತಮವಾಗಿದೆಯೇ? ಇದರಿಂದ ಆಗಬಹುದಾದ ಪರಿಣಾಮಗಳು ಯಾವುದು ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಆಧಾರ್ ಕಾರ್ಡ್ ಲಿಂಕ್!

ಆಧಾರ್ ಕಾರ್ಡ್ ಲಿಂಕ್!

ಸುಳ್ಳು ಸುದ್ದಿಗಳು ಹರಡದಂತೆ ತಡೆಗಟ್ಟಲು ಸೋಷಿಯಲ್ ಮೀಡಿಯಾ ಖಾತೆಗಳಿಗೆ ಆಧಾರ್ ಕಾರ್ಡ್ ಲಿಂಕ್ ಮಾಡುವ ಬಗ್ಗೆ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಸಾಮಾಜಿಕ ಜಾಲತಾಣಗಳ ಮೂಲಕ ಸುಳ್ಳು ಸುದ್ದಿ ಹರಿಬಿಡಲಾಗುತ್ತಿರುವುದರಿಂದ ಈ ಕ್ರಮ ಕೈಗೊಳ್ಳಲಾಗುತ್ತಿದೆ. ಹೀಗೆ ಮಾಡಿದರೆ ಸುಳ್ಳುಸುದ್ದಿ ಹಬ್ಬಿಸುವವರು ಸುಲಭವಾಗಿ ಸಿಕ್ಕಿಬೀಳುತ್ತಾರೆ ಎಂದು ಹೇಳಲಾಗಿದೆ.

ಬದಲಾಗಲಿದೆ ನಿಯಮ!

ಬದಲಾಗಲಿದೆ ನಿಯಮ!

ಪ್ರಮುಖ ಜಾಲತಾಣಗಳಾದ ಫೇಸ್‌ಬುಕ್ ಮತ್ತು ಟ್ವಿಟರ್ ಸೇರಿದಂತೆ ಎಲ್ಲಾ ಸಂಸ್ಥೆಗಳು ಅಧಿಕೃತ ಗುರುತಿನ ಚೀಟಿ ಪಡೆಯಬೇಕಿದೆ ಎಂದು ಹೇಳಲಾಗುತ್ತಿದೆ. ದೂರುಗಳು ಬಂದರೆ ಅಂತಹ ಸಂದರ್ಭದಲ್ಲಿ ಸೋಷಿಯಲ್ ಮೀಡಿಯಾ ಖಾತೆಗಳ ವಿವರಗಳನ್ನು ಕೇಳಲಾಗುವುದು. ಆ ವೇಳೆ ಅವುಗಳು ಸಮರ್ಪಕವಾದ ಮಾಹಿತಿ ನೀಡಬೇಕಾದ ನಿಯಮ ಬರಲಿದೆ ಎನ್ನಲಾಗುತ್ತಿದೆ.

ಐಟಿ ಕಾಯಿದೆಯಡಿ ಕ್ರಮ

ಐಟಿ ಕಾಯಿದೆಯಡಿ ಕ್ರಮ

ಸಾಮಾಜಿಕ ಜಾಲತಾಣಗಳಲ್ಲಿ ಅಕ್ರಮಗಳು ನಡೆದರೆ ಹಾಗೂ ಈ ಬಗ್ಗೆ ದೂರುಗಳು ಬಂದರೆ ಅಂತಹ ಸಂದರ್ಭದಲ್ಲಿ ಸೋಷಿಯಲ್ ಮೀಡಿಯಾ ಖಾತೆಗಳ ವಿವರಗಳನ್ನು ಪಡೆಲಾಗುವುದು. ಜಾಲತಾಣಗಳಿಂದ ಸಮರ್ಪಕವಾದ ಮಾಹಿತಿ ಪಡೆದು ನಂತರ ಆ ಖಾತೆಗಳ ಮುಖ್ಯಸ್ಥರ ವಿರುದ್ಧ ಐಟಿ ಕಾಯಿದೆಯಡಿಯಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಲಾಗಿದೆ.

ಮಾಹಿತಿ ತಂತ್ರಜ್ಞಾನ ತಿದ್ದುಪಡಿ?

ಮಾಹಿತಿ ತಂತ್ರಜ್ಞಾನ ತಿದ್ದುಪಡಿ?

ಮಾಹಿತಿ ತಂತ್ರಜ್ಞಾನ ಸಚಿವಾಲಯವು ಸಾರ್ವಜನಿಕ ಸಮಾಲೋಚನೆಗಾಗಿ ಮಾಹಿತಿ ತಂತ್ರಜ್ಞಾನ ಖಾತೆಯ ಪರಿಶೀಲನೆ ಮಧ್ಯವರ್ತಿ ಮಾರ್ಗಸೂಚಿ ಬಿಡುಗಡೆ ಮಾಡುವ ಗುರಿ ಹೊಂದಿದೆ. ಈ ನಿಯಮಗಳು ಮಧ್ಯವರ್ತಿಗಳ ಮೇಲೆ ಹೆಚ್ಚಿನ ನಿರ್ಬಂಧವನ್ನು ಹೇರಲಿದ್ದು, ಇದು ಕಾನೂನು ಬಾಹಿರ ಕಂಟೆಂಟ್ ಗುರುತಿಸಿ ತೀರ್ಪು ನೀಡುವಲ್ಲಿ ಮುಖ್ಯ ಪಾತ್ರವಹಿಸುತ್ತದೆ ಎನ್ನಲಾಗಿದೆ.

ಅಧಿಕಾರಿ

ಅಧಿಕಾರಿ

ಹೊಸ ನಿಯಮಗಳು ಜಾರಿಯಾದರೆ, 50 ಲಕ್ಷಕ್ಕೂ ಹೆಚ್ಚು ಬಳಕೆದಾರರ ಹೊಂದಿರುವ ಜಾಲತಾಣ ಸಂಸ್ಥೆಯು ಭಾರತದ ಕಂಪೆನಿ ಕಾನೂನಿನಡಿಯಲ್ಲಿ ಸೇರಿಸಿಕೊಳ್ಳಬೇಕು. ಕಾನೂನು ಜಾರಿ ಸಂಸ್ಥೆಗಳೊಂದಿಗೆ ಸಹಕರಿಸಲು ಮತ್ತು ಭಾರತೀಯ ಕಾನೂನಿನ ಅಡಿಯಲ್ಲಿ ಮೇಲ್ವಿಚಾರಣೆ ಅನುಸರಣೆಗೆ 24 × 7 ಕ್ಕೆ ನೋಡಲ್ ಅಧಿಕಾರಿಯನ್ನು ನೇಮಕ ಮಾಡಿಕೊಳ್ಳಬೇಕು ಎನ್ನಲಾಗಿದೆ.

ಆಗಬಹುದಾದ ಪರಿಣಾಮಗಳು!

ಆಗಬಹುದಾದ ಪರಿಣಾಮಗಳು!

ಈ ನಿಯಮ ಜಾರಿಯಾದರೆ, ಜಾಲತಾಣಗಳಲ್ಲಿ ವಿಷಯದ ಮೂಲವನ್ನು ಪತ್ತೆ ಹಚ್ಚಲು ಸಾಧ್ಯವಾಗುತ್ತದೆ. ಈಗಾಗಲೇ ಆರೋಪಿಗಳನ್ನು ಗುರುತಿಸಲು ಸಾಧ್ಯವಿದೆಯಾದರೂ, ಈ ನಿಮಯ ಬಂದರೆ ಸುಲಭವಾಗಿ ಆರೋಪಿಗಳನ್ನು ಹಿಡಿಯಬಹುದು. ಆದರೆ, ಅಧಿಕೃತ ಗುರುತಿನ ಚೀಟಿ ಜೋಡಣೆ ಲಿಂಕ್ ಮಾಡಬೇಕು ಎನ್ನುವುದು ಮತ್ತೆ ಹಲವು ಸಮಸ್ಯೆಗಳಿಗೆ ಕಾರಣವಾಗಲಿದೆ.

ಖೋತಾ

ಖೋತಾ

ಆಧಾರ್, ಪಾಸ್ಪೋರ್ಟ್ ಸೇರಿದಂತೆ ಯಾವುದೇ ಅಧಿಕೃತ ಮಾಹಿತಿಯನ್ನು ಖಾಸಾಗಿ ಕಂಪೆನಿಗಳಿಗೆ ನೀಡುವುದು ಎಷ್ಟು ಸರಿ ಎಂದು ಹೇಳಲಾಗುತ್ತಿದೆ. ಆಧಾರ್ ವಿಷಯದಲ್ಲಿ ಸುಪ್ರೀಂ ಕೋರ್ಟ್ ಈಗಾಗಲೇ ನೀಡಿರುವ ತೀರ್ಪಿನಿಂದ ಈ ನಿಯಮ ಜಾರಿಯಾಗುವುದು ಅನುಮಾನ. ಏಕೆಂದರೆ, ಖಾಸಾಗಿ ಕಂಪೆನಿಗಳು ಇಂತಹುಗಳನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆಯೇ ಹೆಚ್ಚು.

ಬೇರೆ ದಾರಿಗಳು ಇವೆಯೇ?

ಬೇರೆ ದಾರಿಗಳು ಇವೆಯೇ?

ಸಾಮಾಜಿಕ ಜಾಲತಾಣಗಳಿಗೆ ಆಧಾರ್ ಲಿಂಕಿಂಗ್ ನಿಜವಾಗಿಯೂ ಉತ್ತಮವಾಗಲಾರದು. ಹಾಗಾಗಿ, ಸರ್ಕಾರ ಸಾಮಾಜಿಕ ಜಾಲತಾಣಗಳ ದುರುಪಯೋಗ ತಡೆಯಲು ಬೇರೆ ಬೇರೆ ಮಾರ್ಗಗಳನ್ನು ಕಂಡುಕೊಳ್ಳಬೇಕು ಎಂದು ಟೆಕ್ ತಜ್ಞರ ಅಭಿಪ್ರಾಯವಾಗಿದೆ. ಟೆಲಿಕಾಂ ಕಂಪೆನಿಗಳು ಹೊಂದಿರುವ ವ್ಯವಸ್ಥೆಯನ್ನು ಜಾಲತಾಣಗಳಿಗೂ ತರಬಹುದು ಎಂದು ಹೇಳಿದ್ದಾರೆ.

Most Read Articles
Best Mobiles in India

English summary
The government is drafting guidelines that will bind companies such as Twitter, WhatsApp, YouTube and Facebook to respond to complaints over content in a “few hours” as against the current norm of 36 hours, an official said. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more