ಆಧಾರ್‌ ವಿಚಾರದಲ್ಲಿ ಹೊಸ ಸುತ್ತೋಲೆ ಪ್ರಕಟಿಸಿದ ಕೇಂದ್ರ ಸರ್ಕಾರ!

|

ಕೇಂದ್ರ ಸರ್ಕಾರ ಆಧಾರ್‌ ಕಾರ್ಡ್‌ ವಿಚಾರವಾಗಿ ಈ ಹಿಂದೆ ನೀಡಿದ್ದ ಪ್ರಕಟಣೆಯನ್ನು ಇದೀಗ ಹಿಂತೆಗೆದುಕೊಂಡಿದೆ. ಆಧಾರ್‌ ಕಾರ್ಡ್‌ನ ದುರುಪಯೋಗವನ್ನು ತಡೆಗಟ್ಟುವ ಉದ್ದೇಶದಿಂದ ಯಾವುದೇ ಸಂಸ್ಥೆಯೊಂದಿಗೆ ತಮ್ಮ ಆಧಾರ್ ವಿವರಗಳ ಫೋಟೊಕಾಪಿಯನ್ನು ಹಂಚಿಕೊಳ್ಳಬೇಡಿ ಎಂದು ಕೇಂದ್ರ ಸರ್ಕಾರ ಪತ್ರಿಕಾ ಪ್ರಕಟಣೆ ನೀಡತ್ತು. ಆದರೆ ಇದೀಗ ಕೇಂದ್ರ ಸರ್ಕಾರ ತನ್ನ ಪ್ರಕಟಣೆಯನ್ನು ಹಿಂತೆಗೆದುಕೊಂಡಿದ್ದು, ಸರ್ಕಾರವು ತನ್ನ ಹಳೆಯ ಸುತ್ತೋಲೆಯನ್ನು ಹಿಂತೆಗೆದುಕೊಳ್ಳಲು 'ತಪ್ಪಾದ ವ್ಯಾಖ್ಯಾನದ ಸಾಧ್ಯತೆ' ಕಾರಣವನ್ನು ಉಲ್ಲೇಖಿಸಿದೆ.

ಕೇಂದ್ರ

ಹೌದು, ಕೇಂದ್ರ ಸರ್ಕಾರ ಹೊಸ ಪ್ರಕಟಣೆಯಲ್ಲಿ ಆಧಾರ್‌ ಕಾರ್ಡ್‌ ನಕಲು ಪ್ರತಿ ಹಂಚಿಕೊಳ್ಳುವ ಬಗ್ಗೆ ಹೊಸ ಆದೇಶ ನೀಡಿದೆ. ಈ ಹಿಂದೆ ನೀಡಿದ್ದ ಸುತ್ತೋಲೆಯಲ್ಲಿ ತಪ್ಪಾದ ವ್ಯಾಖ್ಯಾನವನ್ನು ಮಾಡಲಾಗಿತ್ತು ಎಂದು ಸಾರ್ವಜನಕರಿಗೆ ತಿಳಿಸಿದೆ. ಫೋಟೋಶಾಪ್ ಮಾಡಲಾದ ಆಧಾರ್ ಕಾರ್ಡ್ ಅನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆಯಿದೆ ಎಂದು ಹಿಂದಿನ ಹೇಳಿಕೆಯಲ್ಲಿ ಹೇಳಿತ್ತು. ಹಾಗಾದ್ರೆ ಕೇಂದ್ರ ಸರ್ಕಾರ ಈ ಹಿಂದೆ ಹೊರಡಿಸಿದ್ದ ಸುತ್ತೋಲೆಯಲ್ಲಿ ಏನಿದೆ? ಹೊಸ ಸುತ್ತೋಲೆಯಲ್ಲಿ ಏನು ಹೇಳಲಾಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಕೇಂದ್ರ ಸರ್ಕಾ

ಕೇಂದ್ರ ಸರ್ಕಾರ ಕೆಲವು ದಿನಗಳ ಹಿಂದೆ ಜನರು ತಮ್ಮ ಆಧಾರ್‌ನ ಫೋಟೊಕಾಪಿಯನ್ನು ಯಾವುದೇ ಸಂಸ್ಥೆಯೊಂದಿಗೆ ಹಂಚಿಕೊಳ್ಳಬಾರದು. ಏಕೆಂದರೆ ಅದು ದುರುಪಯೋಗವಾಗಬಹುದು ಎಂದು ಪ್ರಕಟಣೆಯನ್ನು ನೀಡಿತ್ತು. ಇದಕ್ಕೆ ಬದಲಾಗಿ ಕೇವಲ ಆಧಾರ್ ಸಂಖ್ಯೆಯ ಕೊನೆಯ 4 ಅಂಕೆಗಳನ್ನು ಮಾತ್ರ ಪ್ರದರ್ಶಿಸುವ ಫೇಸ್‌ಮಾಸ್ಕ್ಡ್‌ ಆಧಾರ್ ಅನ್ನು ಬಳಸಬಹುದು ಎಂದು ಹೇಳಿತ್ತು. ಆದರೆ ಇದೀಗ ಪತ್ರಿಕಾ ಪ್ರಕಟಣೆಯ ತಪ್ಪಾದ ವ್ಯಾಖ್ಯಾನದ ಸಾಧ್ಯತೆಯ ದೃಷ್ಟಿಯಿಂದ, ತಕ್ಷಣವೇ ಜಾರಿಗೆ ಬರುವಂತೆ ಹಿಂದಿನ ಪ್ರಕಟಣೆಯನ್ನು ಹಿಂತೆಗೆದುಕೊಳ್ಳಲಾಗಿದೆ ಎಂದು ಸರ್ಕಾರವು ಹೇಳಿದೆ.

ಅಷ್ಟಕ್ಕೂ ನಡೆದಿದ್ದೇನು?

ಅಷ್ಟಕ್ಕೂ ನಡೆದಿದ್ದೇನು?

ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ (MeitY) ದೇಶದ ನಾಗರಿಕರಿಗೆ ತಮ್ಮ ಆಧಾರ್ ವಿವರಗಳನ್ನು ಯಾರೊಂದಿಗೂ ಹಂಚಿಕೊಳ್ಳದಂತೆ ಎಚ್ಚರಿಕೆ ನೀಡುವ ಸುತ್ತೋಲೆಯನ್ನು ಎರಡು ದಿನಗಳ ಹಿಂದೆ ಹೊರಡಿಸಿತ್ತು. ತನ್ನ ಸುತ್ತೋಲೆಯಲ್ಲಿ, ನಾಗರಿಕರು ತಮ್ಮ ಆಧಾರ್ ಕಾರ್ಡ್‌ನ ಫೋಟೋ ಪ್ರತಿಗಳನ್ನು ಯಾವುದೇ ಸಂಸ್ಥೆಯೊಂದಿಗೆ ಹಂಚಿಕೊಳ್ಳಬಾರದು ಎಂದು Meity ಹೇಳಿದೆ. ಅದರ ಜೊತೆಗೆ, ತಮ್ಮ ಆಧಾರ್ ಪ್ರತಿಯನ್ನು ಡೌನ್‌ಲೋಡ್ ಮಾಡಲು ಇಂಟರ್ನೆಟ್ ಕೆಫೆಯಲ್ಲಿ ಸಾರ್ವಜನಿಕ ಕಂಪ್ಯೂಟರ್ ಬಳಸದಂತೆ ನಾಗರಿಕರಿಗೆ ಸಚಿವಾಲಯ ಸಲಹೆ ನೀಡಿದೆ.

ನಾಗರಿಕರ

ಇನ್ನು ಹೆಚ್ಚುವರಿಯಾಗಿ, ನಾಗರಿಕರ ಆಧಾರ್ ಸಂಖ್ಯೆಗಳ ಕೊನೆಯ ನಾಲ್ಕು ಅಂಕೆಗಳನ್ನು ಮಾತ್ರ ಪ್ರದರ್ಶಿಸುವ 'ಮಾಸ್ಕ್ಡ್ ಆಧಾರ್' ಅನ್ನು ಬಳಸಲು ಸರ್ಕಾರವು ನಾಗರಿಕರಿಗೆ ಸಲಹೆ ನೀಡಿದೆ. ಈ ಫೇಸ್‌ ಮಾಸ್ಕ್ಡ್‌ ಆಧಾರ್ ಅನ್ನು UIDAI ನ ಅಧಿಕೃತ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಬಹುದು. ಇದಲ್ಲದೆ, UIDAI ನಿಂದ ಪರವಾನಗಿ ಪಡೆದ ಸಂಸ್ಥೆಗಳಿಗೆ ಮಾತ್ರ ವ್ಯಕ್ತಿಯ ಗುರುತನ್ನು ಸ್ಥಾಪಿಸಲು ಆಧಾರ್ ಅನ್ನು ಬಳಸಲು ಅನುಮತಿಸಲಾಗಿದೆ ಎಂದು MeitY ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಅಲ್ಲದೆ ಖಾಸಗಿ ಸಂಸ್ಥೆ ನಿಮ್ಮ ಆಧಾರ್ ಕಾರ್ಡ್‌ನ ಫೋಟೊಕಾಪಿಯನ್ನು ಹುಡುಕಿದರೆ, ದಯವಿಟ್ಟು ಅವರು UIDAI ನಿಂದ ಮಾನ್ಯವಾದ ಬಳಕೆದಾರ ಪರವಾನಗಿಯನ್ನು ಹೊಂದಿದ್ದಾರೆಯೇ ಎಂದು ಪರಿಶೀಲಿಸಿ ಎಂದು ಹೇಳಿದೆ. ಆದರೆ ಈ ಸುತ್ತೋಲೆಯನ್ನು ಇದೀಗ ಹಿಂಪಡೆಯಲಾಗಿದೆ.

Best Mobiles in India

English summary
MeitY in its release noted that only organisations that had obtained license from the UIDAI were allowed to use Aadhaar for establising identity of a person.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X