ಪಕ್ಕಾ ಸ್ವದೇಶಿ ಸ್ಮಾರ್ಟ್‌ವಾಚ್‌! ಮಹಿಳೆಯರ ಸುರಕ್ಷತೆಯೆ ಇದರ ಪ್ಲಸ್‌ ಪಾಯಿಂಟ್‌!

|

ಭಾರತದ ಟೆಕ್‌ ವಲಯದಲ್ಲಿ ವಿದೇಶಿ ಕಂಪೆನಿಗಳದ್ದೆ ಕಾರುಭಾರು. ವಿದೇಶಿ ಕಂಪೆನಿಗಳ ಅಬ್ಬರದ ನಡುವೆಯೂ ಕೆಲವು ಸ್ವದೇಶಿ ಬ್ರ್ಯಾಂಡ್‌ಗಳು ತಮ್ಮದೇ ಆದ ಪ್ರಾಬಲ್ಯವನ್ನು ಉಳಿಸಿಕೊಂಡಿವೆ. ಇದೇ ಸಾಲಿನಲ್ಲಿ ಸ್ವದೇಶಿ ಸ್ಮಾರ್ಟ್‌ವಾಚ್‌ ಬ್ರ್ಯಾಂಡ್‌ ಹ್ಯಾಪಿಪೋಲಾ ಕೂಡ ಸೇರಲಿದೆ. ಹ್ಯಾಪಿಪೋಲಾ ಸ್ಮಾರ್ಟ್‌ವಾಚ್‌ ಬ್ರ್ಯಾಂಡ್‌ ಮಹಿಳೆಯರ ಆಶಯಗಳಿಗೆ ತಕ್ಕಂತ ಸ್ಮಾರ್ಟ್‌ವಾಚ್‌ಗಳನ್ನು ಪರಿಚಯಿಸುವಲ್ಲಿ ಮುಂಚೂಣಿಯಲ್ಲಿದೆ. ಇದೀಗ ಅದೇ ಹಾದಿಯಲ್ಲಿ ಹೊಸ ಫ್ಲೋರಲ್‌ ಸ್ಮಾರ್ಟ್‌ವಾಚ್‌ ಬಿಡುಗಡೆ ಮಾಡಿದೆ.

ಸ್ವದೇಶಿ

ಹೌದು, ಸ್ವದೇಶಿ ಬ್ರ್ಯಾಂಡ್‌ ಹ್ಯಾಪಿಪೋಲಾ ಭಾರತದಲ್ಲಿ ಹೊಸ ಫ್ಲೋರಲ್‌ ಸ್ಮಾರ್ಟ್‌ವಾಚ್‌ ಪರಿಚಯಿಸಿದೆ. ಈ ಸ್ಮಾರ್ಟ್‌ವಾಚ್‌ ಮಹಿಳೆಯನ್ನೇ ಗುರಿಯಾಗಿಸಿಕೊಂಡು ಡಿಸೈನ್‌ ಮಾಡಲಾಗಿದೆ. ಇದರಲ್ಲಿ ಮಹಿಳೆಯರ ಋತುಚಕ್ರ ಟ್ರ್ಯಾಕಿಂಗ್‌, ಗರ್ಭಧಾರಣೆಯ ಟ್ರ್ಯಾಕಿಂಗ್‌ ಸೇರಿದಂತೆ ಮಹಿಳೆಯರ ಆರೋಗ್ಯಕ್ಕೆ ಸಂಬಂಧಿಸಿದ ಹಲವು ಫೀಚರ್ಸ್‌ಗಳನ್ನು ಒಳಗೊಂಡಿದೆ. ಹಾಗಾದ್ರೆ ಫ್ಲೋರಲ್‌ ಸ್ಮಾರ್ಟ್‌ವಾಚ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಹ್ಯಾಪಿಪೋಲಾ ಫ್ಲೋರಲ್‌ ಸ್ಮಾರ್ಟ್‌ವಾಚ್‌ ವಿನ್ಯಾಸ ಹೇಗಿದೆ?

ಹ್ಯಾಪಿಪೋಲಾ ಫ್ಲೋರಲ್‌ ಸ್ಮಾರ್ಟ್‌ವಾಚ್‌ ವಿನ್ಯಾಸ ಹೇಗಿದೆ?

ಹ್ಯಾಪಿಪೋಲಾ ಫ್ಲೋರಲ್ ಸ್ಮಾರ್ಟ್‌ವಾಚ್‌ 1.32-ಇಂಚಿನ AMOLED ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ ವೃತ್ತಾಕಾರದ ಡಯಲ್ ಅನ್ನು ಹೊಂದಿದ್ದು, 100ಕ್ಕೂ ಹೆಚ್ಚು ವಾಚ್ ಫೇಸ್‌ಗಳಿಗೆ ಬೆಂಬಲವನ್ನು ನೀಡಲಿದೆ. ಇನ್ನು ಸ್ಮಾರ್ಟ್‌ವಾಚ್‌ನಲ್ಲಿ ಹಾರ್ಟ್‌ಬೀಟ್‌ ಸೆನ್ಸಾರ್‌, SpO2 ಮಾನಿಟರ್, ಸ್ಲೀಪ್‌ ಟ್ರ್ಯಾಕರ್ ಮತ್ತು ರಕ್ತದೊತ್ತಡ ಮಾನಿಟರ್ ಮಾಡುವ ಫೀಚರ್ಸ್‌ಗಳನ್ನು ನೀಡಲಾಗಿದೆ. ಈ ಸ್ಮಾರ್ಟ್‌ವಾಚ್ IP68 ರೇಟಿಂಗ್‌ ವಾಟರ್‌ ಪ್ರೂಫ್‌ ವ್ಯವಸ್ಥೆ ಪಡೆದಿದೆ.

ಏನೆಲ್ಲಾ ಫೀಚರ್ಸ್‌ ಒಳಗೊಂಡಿದೆ?

ಏನೆಲ್ಲಾ ಫೀಚರ್ಸ್‌ ಒಳಗೊಂಡಿದೆ?

ಹ್ಯಾಪಿಪೋಲಾ ಫ್ಲೋರಲ್ ಸ್ಮಾರ್ಟ್‌ವಾಚ್‌ ಮಹಿಳೆಯರ ಆರೋಗ್ಯಕ್ಕೆ ಸಂಬಂಧಿಸಿದ ಫೀಚರ್ಸ್‌ಗಳನ್ನು ಒಳಗೊಂಡಿದೆ. ಇದರಲ್ಲಿ ಮಹಿಳೆಯರ ಋತುಚಕ್ರದ ಅವಧಿ, ಗರ್ಭಧಾರಣೆಯ ಟ್ರ್ಯಾಕಿಂಗ್‌ ಮಾಡುವ ಫೀಚರ್ಸ್‌ಗಳನ್ನು ನೀಡಲಾಗಿದೆ. ಇದಲ್ಲದೆ ಫ್ಲೋರಲ್ ಸ್ಮಾರ್ಟ್ ವಾಚ್ ಸ್ಟೆಪ್ಸ್‌, ಕ್ಯಾಲೊರಿ ಬರ್ನಿಂಗ್‌ ಮತ್ತು ದೂರವನ್ನು ಪತ್ತೆಹಚ್ಚುವ ಸಾಮರ್ಥ್ಯವನ್ನು ಒಳಗೊಂಡಿದೆ. ಇದಲ್ಲದೆ ನೀವು ಸ್ವಲ್ಪ ಸಮಯದವರೆಗೆ ಸ್ಥಳಾಂತರಗೊಳ್ಳದಿದ್ದರೆ ಇದು ರಿಮೈಂಡರ್‌ಗಳನ್ನು ಕೂಡ ನೀಡಲಿದೆ.

ಸ್ಪೋರ್ಟ್ಸ್‌ ಫೀಚರ್ಸ್‌ಗಳೇನು?

ಸ್ಪೋರ್ಟ್ಸ್‌ ಫೀಚರ್ಸ್‌ಗಳೇನು?

ಈ ಸ್ಮಾರ್ಟ್‌ವಾಚ್‌ ಸೈಕ್ಲಿಂಗ್, ಸ್ವಿಮ್ಮಿಂಗ್‌, ರನ್ನಿಂಗ್‌ ಮತ್ತು ಹೆಚ್ಚಿನ ದೈಹಿಕ ಚಟುವಟಿಕೆಗಳನ್ನು ಟ್ರ್ಯಾಕ್ ಮಾಡಲು ಬಳಕೆದಾರರಿಗೆ 10 ಸ್ಪೋರ್ಟ್ಸ್‌ ಮೋಡ್‌ಗಳನ್ನು ಒಳಗೊಂಡಿದೆ. ಇದಲ್ಲದೆ ನಿಮ್ಮ ನೆಚ್ಚಿನ ಸಂಪರ್ಕಗಳನ್ನು ಸ್ಟೋರೇಜ್‌ ಮಾಡುವ ಮತ್ತು ಸಂಖ್ಯೆಯನ್ನು ಡಯಲ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಈ ಸ್ಮಾರ್ಟ್‌ವಾಚ್‌ ಬ್ಲೂಟೂತ್ ಕರೆಗೆ ಬೆಂಬಲವನ್ನು ಸಹ ನೀಡಲಿದೆ.

ಬ್ಯಾಟರಿ ಸಾಮರ್ಥ್ಯ ಮತ್ತು ಇತರೆ ಫೀಚರ್ಸ್‌ಗಳೇನು?

ಬ್ಯಾಟರಿ ಸಾಮರ್ಥ್ಯ ಮತ್ತು ಇತರೆ ಫೀಚರ್ಸ್‌ಗಳೇನು?

ಈ ಸ್ಮಾರ್ಟ್‌ವಾಚ್‌ ಸಿಂಗಲ್‌ ಚಾರ್ಜ್‌ನಲ್ಲಿ ನಾಲ್ಕು ದಿನಗಳವರೆಗೆ ಬ್ಯಾಟರಿ ಬಾಳಿಕೆ ನೀಡಲಿದೆ. ಇದು JYouPro ಅಪ್ಲಿಕೇಶನ್‌ಗೆ ಬೆಂಬಲವನ್ನು ನೀಡಲಿದ್ದು, ಆಂಡ್ರಾಯ್ಡ್‌ ಮತ್ತು ಐಒಎಸ್‌ ಎರಡು ಡಿವೈಸ್‌ಗಳಲ್ಲಿಯೂ ಕೂಡ ಕಾರ್ಯನಿರ್ವಹಿಸಲಿದೆ. ಇದಲ್ಲದೆ ಕ್ಯಾಮರಾ/ ಮ್ಯೂಸಿಕ್‌ ಕಂಟ್ರೋಲ್‌, ಅಲಾರಂ,ಜೊತೆಗೆ ವರ್ಚುವಲ್ ಅಸಿಸ್ಟೆಂಟ್‌ಗೆ ಪ್ರವೇಶವನ್ನು ಸಹ ನೀಡಲಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಹ್ಯಾಪಿಪೋಲಾ ಫ್ಲೋರಲ್ ಸ್ಮಾರ್ಟ್‌ವಾಚ್‌ ಭಾರತದಲ್ಲಿ 3,999ರೂ. ಬೆಲೆ ಹೊಂದಿದೆ. ಈ ಸ್ಮಾರ್ಟ್‌ವಾಚ್‌ ಹ್ಯಾಪಿಪೋಲಾ ಕಂಪನಿಯ ಅಧಿಕೃತ ವೆಬ್‌ಸೈಟ್ ಮತ್ತು ಪ್ರಮುಖ ಚಿಲ್ಲರೆ ಅಂಗಡಿಗಳ ಮೂಲಕ ಖರೀದಿಸಲು ಲಭ್ಯವಿದೆ. ಇದಲ್ಲದೆ ಸ್ಮಾರ್ಟ್‌ವಾಚ್‌ ಮಾರುಕಟ್ಟೆಯಲ್ಲಿ ಡಿಜೊ ವಾಚ್ ಆರ್ ಟಾಕ್ ಗೋ, ಫೈರ್-ಬೋಲ್ಟ್ ಹಲ್ಕ್ ಮತ್ತು ಹೆಚ್ಚಿನ ಸ್ಮಾರ್ಟ್‌ವಾಚ್‌ಗಳಿಗೆ ಪೈಪೋಟಿ ನೀಡುವ ಸಾಧ್ಯತೆಯಿದೆ.

ಡಿಜೊ

ಇನ್ನು ಇತ್ತೀಚಿಗೆ ಡಿಜೊ ಕಂಪೆನಿ ಕೂಡ ಭಾರತದಲ್ಲಿ ಡಿಜೊ ವಾಚ್ D ಪ್ಲಸ್ ಅನ್ನು ಅನಾವರಣಗೊಳಿಸಿದೆ. ಇದು SpO2 ಮಾನಿಟರ್, 300mAh ಸಾಮರ್ಥ್ಯದ ಬ್ಯಾಟರಿ ಆಯ್ಕೆಯನ್ನು ಹೊಂದಿದೆ. ಈ ಸ್ಮಾರ್ಟ್‌ವಾಚ್‌ ಆಂಡ್ರಾಯ್ಡ್‌ ಹಾಗೂ ಐಓಎಸ್‌ ಡಿವೈಸ್‌ಗಳಿಗೆ ಬೆಂಬಲ ನೀಡುತ್ತದೆ.

Best Mobiles in India

English summary
HapiPola has introduced the new Floral smartwatch in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X