ಇಂಟರ್‌ನೆಟ್‌ ಬಳಕೆಯಿಂದ ಯುವಜನತೆಯ ತೂಕ ಹೆಚ್ಚಳ

  By Suneel
  |

  ಪ್ರಸ್ತುತ ದಿನಗಳಲ್ಲಿ ನಾವು ಗ್ಯಾಜೆಟ್ಸ್‌ಇಲ್ಲದೇ ಒಂದು ದಿನವು ಇರಲಾರೆವು ಎನ್ನುವ ಪರಿಸ್ಥಿತಿಗೆ ಬಂದು ನಿಂತಿದ್ದೇವೆ. ಅದು ನಿಜವು ಹೌದು. ಸಾಮಾನ್ಯವಾಗಿ ಹದಿಹರೆಯದವರು ಸ್ಮಾರ್ಟ್‌ಫೋನ್‌ ಹಾಗೂ ಇತರೆ ಗ್ಯಾಜೆಟ್ಸ್‌ಗಳನ್ನು ಮಾಹಿತಿಯಿಂದ ಹಿಡಿದು ಮನರಂಜನೆವರೆಗೆ ಬಳಸುತ್ತಾರೆ. ಹಾಗೆ ನಿದ್ದೆ ಸಮಯ ಬಿಟ್ಟು ಮಿಕ್ಕೆಲ್ಲಾ ಬಿಟ್ಟಿರಲಾರದಂತೆ ಅಚ್ಚಿಕೊಂಡಿರುವ ಯುವಜನತೆಗೆ ಇನ್ನೊಂದು ವಿಷಯ ತಿಳಿದಿಲ್ಲಾ ಎನಿಸುತ್ತೇ. ದಿನನಿತ್ಯ ಮೊಬೈಲ್‌ಗಳಲ್ಲಿ ಇಂಟರ್‌ನೆಟ್‌ ಬಳಸುವ ಯುವಜನತೆಗೆ ಅನಾರೋಗ್ಯಕರ ಮಾಹಿತಿಯೊಂದು ಹೊರಬಿದ್ದಿದೆ.

  ಓದಿರಿ: ಇಂಟರ್‌ನೆಟ್‌ನಲ್ಲಿ ಹಾಸ್ಯಕ್ಕೆ ಒಳಗಾದ ಒಬಾಮ ಫೋಟೊಗಳು

  ಇಂಟರ್‌ನೆಟ್‌ ಬಳಕೆ ಯುವಜನತೆಯ ಅನಾರೋಗ್ಯದಲ್ಲಿ ಪರಿಣಾಮಕಾರಿ ಪ್ರಭಾವ ಬೀರುತ್ತದೆ ಎಂಬ ಹೊಸ ವಿಷಯವನ್ನು ಅಧ್ಯಯನವೊಂದು ಹೊರಹಾಕಿದೆ. ಅಧ್ಯಯನದ ಅಂಶಗಳೇನು ಎಂಬ ಕುತೂಹಲ ನಿಮಗಿದ್ದರೇ ಈ ಲೇಖನ ಓದಿ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ದೇಹ ತೂಕ ಹೆಚ್ಚಳ

  ಒಂದು ಗಂಟೆಗಿಂತ ಅಧಿಕವಾಗಿ ಇಂಟರ್‌ನೆಟ್‌ ಬಳಕೆ ಮಾಡುವುದರಿಂದ ಅನಾರೋಗ್ಯಕರ ದೇಹ ತೂಕವು ಹೆಚ್ಚಾಗುತ್ತದೆ ಮತ್ತು ಅಧಿಕವಾಗಿ ಬಿಪಿ ಹೆಚ್ಚಿಳವಾಗುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ.

  ರಕ್ತದ ಒತ್ತಡದಲ್ಲಿ ಏರಿಕೆ

  ಒಂದು ವಾರಕ್ಕೆ 14 ಗಂಟೆಗಳ ಕಾಲ ಇಂಟರ್‌ನೆಟ್‌ ಬಳಕೆಯಲ್ಲಿ ತೊಡಗಿದ್ದ ಯುವಜನತೆಯನ್ನು ಪರೀಕ್ಷೆಗೊಳಪಡಿಸಿದಾಗ ಇವರಲ್ಲಿ ಬಿಪಿ ಹೆಚ್ಚಳವಾಗಿರುವ ಬಗ್ಗೆ ಅಧ್ಯಯನ ಮಾಹಿತಿ ನೀಡಿದೆ.

  ಆಂಡ್ರಿಯಾ ಕ್ಯಾಸ್ಸಿಡಿ ಬುಶ್ರೊ

  'ಇಂಟರ್‌ನೆಟ್‌ ಬಳಸುವುದು ನಮ್ಮ ದಿನನಿತ್ಯ ಜೀವನದ ಒಂದು ಚಟುವಟಿಕೆಯಾಗಿದೆ, ಆದರೆ ಅದು ನಮ್ಮನ್ನು ನಾಶ ಪಡಿಸಬಾರದು', ಎಂದು ಅಧ್ಯಯನದ ಮುಖ್ಯ ಲೇಖಕ ಆಂಡ್ರಿಯಾ ಕ್ಯಾಸ್ಸಿಡಿ ಬುಶ್ರೊ ಹೇಳಿದ್ದಾರೆ.

  ವಾರಕ್ಕೆ 25 ಗಂಟೆಗಳಿಗಿಂತ ಹೆಚ್ಚು

  ಈ ಅಧ್ಯಯನದಲ್ಲಿ ಯುವಜನತೆ ಹೆಚ್ಚು ಇಂಟರ್‌ನೆಟ್‌ ಬಳಕೆದಾರರಾಗಿದ್ದು, ವಾರಕ್ಕೆ 25 ಗಂಟೆಗಳಿಗಿಂತ ಹೆಚ್ಚು ಬಳಕೆ ಮಾಡುತ್ತಾರೆ ಎನ್ನಲಾಗಿದೆ.

  14-17 ರ ವಯಸ್ಸಿನ 335 ಯುವಕರಿಂದ ಮಾಹಿತಿ

  ಈ ಅಧ್ಯಯನಕ್ಕೆ 14-17 ರ ವಯಸ್ಸಿನ 335 ಯುವಕರ ಮಾಹಿತಿಯನ್ನು ವಿಶ್ಲೇಷಿಸಿದ್ದು, ದೈಹಿಕ ಪರೀಕ್ಷೆಯಲ್ಲಿ ರಕ್ತದ ಒತ್ತಡವನ್ನು ಕಲೆಹಾಕಲಾಗಿದೆ.

  ಶೇಕಡ 43 ಯುವಜನತೆಯ ತೂಕ ಹೆಚ್ಚಳ

  ಕಡಿಮೆ ಇಂಟರ್‌ನೆಟ್‌ ಬಳಸುವ ಶೇಕಡ 23 ಬಳಕೆದಾರರಿಗಿಂತ, ಹೆಚ್ಚು ಇಂಟರ್‌ನೆಟ್‌ ಬಳಸುವ ಶೇಕಡ 43 ಯುವಜನತೆಯ ತೂಕ ಹೆಚ್ಚಳವಾಗಿದೆ.

  ದೈಹಿಕ ಚಟುವಟಿಕೆಗಳಲ್ಲಿ ತೊಡಗಲು ಸಲಹೆ

  'ಯುವಜನತೆಯು ಕಂಪ್ಯೂಟರ್‌ ಮತ್ತು ಸ್ಮಾರ್ಟ್‌ಫೋನ್‌ ಬಳಕೆಯಿಂದ ಬ್ರೇಕ್‌ ತೆಗೆದುಕೊಂಡು ಕೆಲವು ದೈಹಿಕ ಚಟುವಟಿಕೆಗಳಲ್ಲಿ ತೊಡಗುವುದು ಮುಖ್ಯವಾಗಿದೆ' ಎಂದು ಕ್ಯಾಸ್ಸಿಡಿ ಬುಶ್ರೋ ಹೇಳಿದ್ದಾರೆ.

  ಶಿಫಾರಸ್ಸು

  ಈ ಅಧ್ಯಯನದ ಶಿಫಾರಸ್ಸಿನಲ್ಲಿ "ಪೋಷಕರು ಮಕ್ಕಳು ಇಂಟರ್‌ನೆಟ್‌ನಲ್ಲಿ ತೊಡಗುವ ಸಮಯವನ್ನು ಮಿತಿಗೊಳಿಸಬೇಕಿದೆ. ವಾರದಲ್ಲಿ 5 ದಿನಗಳು ಮಾತ್ರ ಇಂಟರ್‌ನೆಟ್‌ ಬಳಕೆಮಾಡಲು ಅವಕಾಶ ನೀಡಬೇಕು'' ಎಂದು ಕ್ಯಾಸ್ಸಿಡಿ ಬುಶ್ರೋ ಹೇಳಿದ್ದಾರೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  Teenagers who spend hours on the internet may be at risk of gaining unhealthy weight and having high blood pressure, say researchers.

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more