2016 ಕ್ಕಾಗಿ ವಾಟ್ಸಾಪ್ ಹೊರತಂದಿದೆ ಅತ್ಯಾಧುನಿಕ ಫೀಚರ್ಸ್

By Shwetha
|

ವಾಟ್ಸಾಪ್‌ಗೆ ಯಾವುದೇ ರೀತಿಯ ಇಂಟ್ರಡಕ್ಶನ್‌ನ ಅಗತ್ಯವೇ ಇಲ್ಲ. ಇದೊಂದು ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ ಆಗಿದ್ದು ಇಡಿಯ ವಿಶ್ವದಲ್ಲಿಯೇ 800 ಮಿಲಿಯನ್ ಸಕ್ರಿಯ ಬಳಕೆದಾರರು ಈ ತ್ವರಿತ ಅಪ್ಲಿಕೇಶನ್ ಅನ್ನು ಬಳಸುತ್ತಿದ್ದಾರೆ. ವಾಟ್ಸಾಪ್‌ನಲ್ಲಿ ಸಂದೇಶಗಳನ್ನು ಕಳುಹಿಸುವುದು, ವೀಡಿಯೊಗಳನ್ನು ಹಂಚುವುದು ಮೊದಲಾದ ಕೆಲಸಗಳನ್ನು ನಾವು ನಿರ್ವಹಿಸುತ್ತಿದ್ದೇವೆ. ಇದು ಸಾಕಷ್ಟು ಹೊಸ ಹೊಸ ಫೀಚರ್‌ಗಳೊಂದಿಗೆ ಬಂದಿದ್ದು ಬಳಕೆದಾರರಿಗೆ ಸಂದೇಶದ ನೂತನ ಅನುಭವವನ್ನು ನೀಡುತ್ತಿದೆ.

ಇಂದಿನ ಲೇಖನಲ್ಲಿ ವಾಟ್ಸಾಪ್ ಮಾಡಿರುವ ಸಾಕಷ್ಟು ಬದಲಾವಣೆಗಳನ್ನು ನಾವು ನಿಮ್ಮ ಮುಂದೆ ಹಂಚಿಕೊಳ್ಳಲಿದ್ದು ಈ ತ್ವರಿತ ಅಪ್ಲಿಕೇಶನ್ ಏಕೆ ಇಷ್ಟೊಂದು ಕೌತುಕಮಯವಾಗಿದೆ ಎಂಬುದನ್ನು ನಾವು ತಿಳಿಸಲಿದ್ದೇವೆ. ಹಾಗಿದ್ದರೆ ತಡಮಾಡದೇ ಕೆಳಗಿನ ಸ್ಲೈಡರ್‌ಗಳಲ್ಲಿ ನಾವು ನೀಡಿರುವ ಮಾಹಿತಿಗಳನ್ನು ಅರಿತುಕೊಂಡು ವಾಟ್ಸಾಪ್‌ನ ಹೊಸ ಹೊಸ ಬದಲಾವಣೆಗಳನ್ನು ಆನಂದಿಸಿ.

#1

#1

ವಾಟ್ಸಾಪ್‌ನಲ್ಲಿರುವ ನ್ಯೂ ಯೂಸರ್ ಸೆಟ್ಟಿಂಗ್ಸ್ ಪುಟ 2.12.506 ನ ಒಂದು ಭಾಗವಾಗಿ ಮಾರ್ಪಟ್ಟಿದೆ. ಆಂಡ್ರಾಯ್ಡ್ ಡಿವೈಸ್‌ಗಳನ್ನು ಇದಿನ್ನೂ ರೋಲ್ ಔಟ್ ಆಗಬೇಕಿದೆ. ಸೆಟ್ಟಿಂಗ್ಸ್ ಪುಟದಲ್ಲಿ ಒಳಭಾಗದ ಆಪ್ಶನ್‌ಗಳಲ್ಲಿ ಇದು ಕೆಲವೊಂದು ಮಾರ್ಪಾಡುಗಳನ್ನು ತರಲಿದೆ.

#2

#2

ವಾಟ್ಸಾಪ್ ಅಂತೂ ಕೊನೆಗೆ ಅಪ್‌ಡೇಟ್ ಒಂದನ್ನು ಹೊರತಂದಿದ್ದು, ಇದನ್ನು ಬಳಸಿ ಚಾಟ್ ಮೂಲಕ ಡಾಕ್ಯುಮೆಂಟ್‌ಗಳನ್ನು ಕಳುಹಿಸಬಹುದಾಗಿದೆ.

#3

#3

ಹೊಸ ಕ್ಯಾರೆಕ್ಟರ್‌ಗಳೊಂದಿಗೆ ಹೊಸ ಫೇಶಿಯಲ್ ಎಕ್ಸ್‌ಪ್ರೆಶನ್ ಜೊತೆಗೆ ವಾಟ್ಸಾಪ್ ಸಾಕಷ್ಟು ಎಮೋಜಿಗಳನ್ನು ಸೇರಿಸಿದೆ.

#4

#4

ಆಂಡ್ರಾಯ್ಡ್, ಐಓಎಸ್ ಮತ್ತು ಸಾಕಷ್ಟು ಪ್ಲಾಟ್‌ಫಾರ್ಮ್ ಸೇರಿದಂತೆ ತನ್ನ ಅಪ್ಲಿಕೇಶನ್‌ಗೆ ವಾರ್ಷಿಕ ಚಂದಾದಾರಿಕೆಯನ್ನು ಹಿಂದಕ್ಕೆ ತೆಗೆದುಕೊಂಡಿದೆ.

#5

#5

ಹೊಸ ಅಪ್‌ಡೇಟ್ ಬಳಕೆದಾರರಿಗೆ 256 ಸದಸ್ಯರನ್ನು ಸೇರಿಸಲು ಅನುಮತಿಯನ್ನು ನೀಡುತ್ತದೆ ಈ ಹಿಂದೆ ಈ ಸಂಖ್ಯೆ 100 ಕ್ಕೆ ಸೀಮಿತವಾಗಿತ್ತು. 1 ಬಿಲಿಯನ್‌ಗಿಂತಲೂ ಅಧಿಕ ಮಾಸಿಕ ಸಕ್ರಿಯ ಬಳಕೆದಾರರನ್ನು ವಾಟ್ಸಾಪ್ ಹೊಂದಿದೆ ಎಂಬುದಾಗಿ ಘೋಷಣೆ ಮಾಡಿದ ಸ್ವಲ್ಪ ದಿನಗಳ ನಂತರ ಈ ಹೊಸ ಅಪ್‌ಡೇಟ್ ಬಂದಿದೆ.

#6

#6

ವಾಟ್ಸಾಪ್ ಅಪ್‌ಡೇಟ್ ಅನ್ನು ಬಿಡುಗಡೆ ಮಾಡಿದ್ದು, ಇದು ಭಾಷಾ ಬೆಂಬಲವನ್ನು ಉರ್ದು ಹಾಗೂ ಬೆಂಗಾಳಿಗೆ ನೀಡುತ್ತಿದೆ.

#7

#7

ಸ್ಟಾರ್ಡ್ ಮೆಸೇಜಸ್ ಫೀಚರ್, ಬಳಕೆದಾರರಿಗೆ ಬುಕ್ ಮಾರ್ಕ್ ಮಾಡಿದ ಸಂದೇಶಗಳನ್ನು ಪ್ರವೇಶಿಸಲು ಅನುಮತಿಯನ್ನು ನೀಡುತ್ತಿದೆ ಇದು ಇಮೇಜಸ್, ವೀಡಿಯೊಗಳು ಅಥವಾ ಇತರ ವಿಷಯಗಳನ್ನು ಒಳಗೊಂಡಿದೆ.

#8

#8

3 ಡಿ ಟಚ್ ಸಾಮರ್ಥ್ಯಗಳೊಂದಿಗೆ ವಾಟ್ಸಾಪ್ ತನ್ನ ಐಓಎಸ್ ಅಪ್ಲಿಕೇಶನ್ ಅನ್ನು ಅಪ್‌ಡೇಟ್ ಮಾಡಿದ್ದು ಆಪಲ್‌ನ ಪೀಕ್ ಹಾಗೂ ಪಾಪ್ 3 ಡಿ ಟಚ್ ಫೀಚರ್‌ಗಳಿಗೆ ಇದು ಬೆಂಬಲವನ್ನು ನೀಡುತ್ತಿದೆ.

#9

#9

ಚಾಟ್ ಹಿಸ್ಟ್ರಿ ಮತ್ತು ಮೀಡಿಯಾಗಾಗಿ ಗೂಗಲ್ ಡ್ರೈವ್ ಮೂಲಕ ವಾಟ್ಸಾಪ್ ಬ್ಯಾಕಪ್ ಮತ್ತು ರೀಸ್ಟೋರ್ ಆಯ್ಕೆಗಳನ್ನು ವಾಟ್ಸಾಪ್ ಸ್ವೀಕರಿಸಿದೆ. ಈ ಫೀಚರ್ ಬಳಕೆದಾರರಿಗೆ ಚಾಟ್ ಹಿಸ್ಟ್ರಿ, ವಾಯ್ಸ್ ಸಂದೇಶಗಳನ್ನು, ಫೋಟೋಗಳು ಮತ್ತು ವೀಡಿಯೊಗಳನ್ನು ಗೂಗಲ್ ಡ್ರೈವ್‌ನಲ್ಲಿ ಬ್ಯಾಕಪ್ ಮಾಡಲು ಅನುಮತಿಸುತ್ತದೆ.

#10

#10

ತ್ವರಿತ ರಿಪ್ಲೈ ಫೀಚರ್ ಡಿವೈಸ್‌ನಲ್ಲಿ ಪಾಪ್ ಅಪ್ ಆಗುವಂತಹ ವಾಟ್ಸಾಪ್ ಅಧಿಸೂಚನೆ ಬಳಕೆದಾರರಿಗೆ ತ್ವರಿತವಾಗಿ ಉತ್ತರಿಸುವ ಅನುಕೂಲವನ್ನು ಮಾಡಿಕೊಡುತ್ತಿದೆ.

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಲೇಖನಗಳು

ಫೋನ್ ಸುರಕ್ಷತೆಗಾಗಿ ಸೂಪರ್ ಟಾಪ್ 10 ಸಲಹೆಗಳು</a><br /><a href=ಮೊಬೈಲ್ ಬ್ಯಾಂಕಿಂಗ್: ಸ್ವಲ್ಪ ಯಾಮಾರಿದರೂ ಅಪಾಯ ಖಂಡಿತ
ಐಫೋನ್‌ನಲ್ಲಿ ಯಾರು ತಿಳಿಯದ ಸೀಕ್ರೇಟ್ ಕೀಬೋರ್ಡ್‌
ಫೇಸ್‌ಬುಕ್‌ ಹ್ಯಾಕ್ ಆಗಿರುವುದನ್ನು ಕಂಡುಹಿಡಿಯುವುದು ಹೇಗೆ? ಸುರಕ್ಷತೆ ಹೇಗೆ?" title="ಫೋನ್ ಸುರಕ್ಷತೆಗಾಗಿ ಸೂಪರ್ ಟಾಪ್ 10 ಸಲಹೆಗಳು
ಮೊಬೈಲ್ ಬ್ಯಾಂಕಿಂಗ್: ಸ್ವಲ್ಪ ಯಾಮಾರಿದರೂ ಅಪಾಯ ಖಂಡಿತ
ಐಫೋನ್‌ನಲ್ಲಿ ಯಾರು ತಿಳಿಯದ ಸೀಕ್ರೇಟ್ ಕೀಬೋರ್ಡ್‌
ಫೇಸ್‌ಬುಕ್‌ ಹ್ಯಾಕ್ ಆಗಿರುವುದನ್ನು ಕಂಡುಹಿಡಿಯುವುದು ಹೇಗೆ? ಸುರಕ್ಷತೆ ಹೇಗೆ?" loading="lazy" width="100" height="56" />ಫೋನ್ ಸುರಕ್ಷತೆಗಾಗಿ ಸೂಪರ್ ಟಾಪ್ 10 ಸಲಹೆಗಳು
ಮೊಬೈಲ್ ಬ್ಯಾಂಕಿಂಗ್: ಸ್ವಲ್ಪ ಯಾಮಾರಿದರೂ ಅಪಾಯ ಖಂಡಿತ
ಐಫೋನ್‌ನಲ್ಲಿ ಯಾರು ತಿಳಿಯದ ಸೀಕ್ರೇಟ್ ಕೀಬೋರ್ಡ್‌
ಫೇಸ್‌ಬುಕ್‌ ಹ್ಯಾಕ್ ಆಗಿರುವುದನ್ನು ಕಂಡುಹಿಡಿಯುವುದು ಹೇಗೆ? ಸುರಕ್ಷತೆ ಹೇಗೆ?

Best Mobiles in India

English summary
Now you can send documents on the instant messaging app, ability to add up to 256 members in a group, but that's not it! There is much more in the app that you may still now know about.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X