ಮುಂದಿನ ವರ್ಷ ವಾಟ್ಸಾಪ್‌ನಲ್ಲಿ ಏನೆಲ್ಲಾ ಬದಲಾವಣೆ ಆಗಲಿದೆ ಗೊತ್ತಾ?

|

ಜನಪ್ರಿಯ ಮೆಸೇಜಿಂಗ್‌ ಅಪ್ಲಿಕೇಶನ್‌ಗಳ ಸಾಲಿನಲ್ಲಿ ವಾಟ್ಸಾಪ್‌ ಅಗ್ರಸ್ಥಾನದಲ್ಲಿದೆ. ತನ್ನ ಪ್ರತಿಸ್ಫರ್ಧಿಗಳಿಗಿಂತ ಭಿನ್ನವಾಗಿ ಬಳಕೆದಾರರ ನೆಚ್ಚಿನ ಆಯ್ಕೆಯಾಗಿ ಗುರುತಿಸಿಕೊಂಡಿದೆ. ಇದಲ್ಲದೆ ವಿಶ್ವದಲ್ಲಿಯೇ ಅತಿ ಹೆಚ್ಚು ಸಕ್ರಿಯ ಬಳಕೆದಾರರನ್ನು ಪಡೆದುಕೊಂಡಿದೆ. ಇದರ ನಡುವೆಯೂ ಬಳಕೆದಾರರ ಅನುಭವವನ್ನು ಇನ್ನಷ್ಟು ಉತ್ತಮಗೊಳಿಸಲು ಹೊಸ ಫೀಚರ್ಸ್‌ಗಳಲ್ಲಿ ಕಾರ್ಯನಿರ್ವಹಿಸುತ್ತಲೇ ಬಂದಿದೆ. ಇದಕ್ಕೆ ತಕ್ಕಂತೆ ಇನ್ನು ಅನೇಕ ಫೀಚರ್ಸ್‌ಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ವಾಟ್ಸಾಪ್‌ ಕೆಲಸ ಮಾಡುತ್ತಿದೆ.

ವಾಟ್ಸಾಪ್‌

ಹೌದು, ವಾಟ್ಸಾಪ್‌ ಎಂದಿನಂತೆ ಈ ವರ್ಷವೂ ಅನೇಕ ಫೀಚರ್ಸ್‌ಗಳನ್ನು ಪರಿಚಯಿಸಿದೆ. ಅದರಂತೆ ಮುಂದಿನ ವರ್ಷ ಅಂದರೆ 2023ಕ್ಕೆ ವಾಟ್ಸಾಪ್‌ ಹಲವು ಜನಪ್ರಿಯ ಫೀಚರ್ಸ್‌ಗಳನ್ನು ಪರಿಚಯಿಸುವ ನಿರೀಕ್ಷೆಯಿದೆ. ಇದರಿಂದ ಬಳಕೆದಾರರು ವಾಟ್ಸಾಪ್‌ನಲ್ಲಿ ಸಾಕಷ್ಟು ಬದಲಾವಣೆಗಳನ್ನು ಕಾಣುವ ಸಾದ್ಯತೆಯಿದೆ. ಇದರಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿರುವ ಫೀಚರ್ಸ್‌ಗಳು ಕೂಡ ಸೇರಿವೆ. ಹಾಗಾದ್ರೆ 2023ಕ್ಕೆ ವಾಟ್ಸಾಪ್‌ ಪರಿಚಯಿಸಲಿರುವ ಬಹುನಿರೀಕ್ಷಿತ ಫೀಚರ್ಸ್‌ಗಳು ಯಾವುವು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಶೆಡ್ಯೂಲಿಂಗ್‌ ಮೆಸೇಜಸ್‌

ಶೆಡ್ಯೂಲಿಂಗ್‌ ಮೆಸೇಜಸ್‌

ವಾಟ್ಸಾಪ್‌ ಮುಂದಿನ ವರ್ಷ ಪರಿಚಯಿಸಲಿರುವ ಬಹುಮುಖ್ಯ ಫೀಚರ್ಸ್‌ಗಳಲ್ಲಿ ಶೆಡ್ಯೂಲಿಂಗ್‌ ಮೆಸೇಜಸ್‌ ಕೂಡ ಒಂದಾಗಿದೆ. ಇದರಿಂದ ನೀವು ವಾಟ್ಸಾಪ್‌ನಲ್ಲಿ ಮೆಸೇಜ್‌ ಅನ್ನು ಶೆಡ್ಯೂಲ್‌ ಮಾಡುವುದಕ್ಕೆ ಸಾಧ್ಯವಾಗಲಿದೆ. ಕೆಲಸದ ವಿಚಾರವಾಗಿ ವಾಟ್ಸಾಪ್‌ ಬಳಸುವ ಬಳಕೆದಾರರಿಗೆ ಇದು ಸಾಕಷ್ಟು ಉಪಯುಕ್ತವಾಗಲಿದೆ. ಅಂದರೆ ಅಡ್ಮಿನ್‌ ಮತ್ತು ಕೆಲಸಗಾರರು ಇತರರ ಗೌಪ್ಯತೆಯನ್ನು ಗೌರವಿಸಲು ಬಯಸಿದರೆ ಮರುದಿನ ಬೆಳಿಗ್ಗೆ ಸಂದೇಶಗಳನ್ನು ಶೆಡ್ಯೂಲ್‌ ಮಾಡಲು ಇದು ಅವಕಾಶ ನೀಡಲಿದೆ.

ಎಡಿಟ್‌ ಮೆಸೇಜ್‌

ಎಡಿಟ್‌ ಮೆಸೇಜ್‌

ವಾಟ್ಸಾಪ್‌ ತನ್ನ ಬಳಕೆದಾರರಿಗೆ ಎಡಿಟ್‌ ಮೆಸೇಜ್‌ ಆಯ್ಕೆ ನೀಡಲು ಸಾಕಷ್ಟು ದಿನಗಳಿಂದ ಕಾರ್ಯನಿರ್ವಹಿಸುತ್ತಿದೆ. ಈ ಆಯ್ಕೆಯು ಮುಂದಿನ ವರ್ಷದಲ್ಲಿ ಬಳಕೆದಾರರಿಗೆ ಲಭ್ಯವಾಗಲಿದೆ. ಇದು ಬಳಕೆದಾರರಿಗೆ ಪಠ್ಯವನ್ನು ಕಳುಹಿಸಿದ ನಂತರ ಅದನ್ನು ಎಡಿಟ್‌ ಮಾಡಲು ಅನುಮತಿಸುತ್ತದೆ. ಅಂದರೆ ನೀವು ಕಳುಹಿಸಿದ ಸಂದೇಶವನ್ನು ಎಡಿಟ್‌ ಮಾಡಬಹುದಾಗಿದೆ. ಇದರಿಂದ ನೀವು ಕಳುಹಿಸಿದ ಸಂದೇಶದಲ್ಲಿ ತಪ್ಪುಕಂಡುಬಂದರೆ ಮರಳಿ ರಿ ಎಡಿಟ್‌ ಮಾಡಬಹುದು.

ಅನ್ ಸೆಂಡ್

ಅನ್ ಸೆಂಡ್

ವಾಟ್ಸಾಪ್‌ ಬಳಕೆದಾರರ ಸಾಕಷ್ಟು ದಿನಗಳಿಂದ ನಿರೀಕ್ಷಿಸುತ್ತಿರುವ ಆಯ್ಕೆಗಳಲ್ಲಿ ಅನ್‌ಸೆಂಡ್‌ ಆಯ್ಕೆಯು ಕೂಡ ಒಂದಾಗಿದೆ. ಈ ಆಯ್ಕೆಯು ಚಾಟ್‌ನಲ್ಲಿ ಟ್ಯಾಕಿ ಲೇಬಲ್ ಅನ್ನು ಬಿಡುತ್ತದೆ.

ವ್ಯಾನಿಶ್ ಮೋಡ್

ವ್ಯಾನಿಶ್ ಮೋಡ್

ವಾಟ್ಸಾಪ್‌ ಸದ್ಯದಲ್ಲೇ ಪರಿಚಯಿಸಲಿರುವ ಫೀಚರ್ಸ್‌ಗಳಲ್ಲಿ ವ್ಯಾನಿಶ್‌ ಮೋಡ್‌ ಕೂಡ ಒಂದಾಗಿದೆ. ಈಗಾಗಲೇ ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್ ಮೆಸೆಂಜರ್‌ ನಲ್ಲಿ ವ್ಯಾನಿಶ್‌ ಮೋಡ್‌ ಲಭ್ಯವಿದೆ. ಇದು ಚಾಟ್ ಕೊನೆಗೊಂಡಾಗ ಆಟೋಮ್ಯಾಟಿಕ್‌ ಆಗಿ ಡಿಲೀಟ್‌ ಆದ ತಾತ್ಕಾಲಿಕ ಚಾಟ್ ಥ್ರೆಡ್‌ಗಳನ್ನು ಕ್ರಿಯೆಟ್‌ ಮಾಡಲು ಬಳಕೆದಾರರಿಗೆ ಅನುಮತಿಸುತ್ತದೆ.

ಕಾಲ್‌ ರೆಕಾರ್ಡಿಂಗ್

ಕಾಲ್‌ ರೆಕಾರ್ಡಿಂಗ್

ವಾಟ್ಸಾಪ್‌ ನಿರೀಕ್ಷೆ ಹುಟ್ಟುಹಾಕಿರುವ ಫೀಚರ್ಸ್‌ಗಳಲ್ಲಿ ಕಾಲ್‌ ರೆಕಾರ್ಡಿಂಗ್‌ ಕೂಡ ಒಂದಾಗಿದೆ. ಇದು ವಾಟ್ಸಾಪ್‌ ಬಳಕೆದಾರರ ಬಹಳ ದಿನಗಳ ಕಾಯುವಿಕೆಗೆ ಉತ್ತರ ನೀಡಲಿದೆ ಎನ್ನಲಾಗಿದೆ. ಜೊತೆಗೆ ಇದು ಬಳಕೆದಾರರಿಗೆ ತಮ್ಮ ಕರೆಗಳನ್ನು ರೆಕಾರ್ಡ್ ಮಾಡಬೇಕೆ ಅಥವಾ ಬೇಡವೇ ಎಂಬುದನ್ನು ಆಯ್ಕೆ ಮಾಡುವ ಆಯ್ಕೆಯನ್ನು ನೀಡುತ್ತದೆ.

ಫೀಚರ್ಸ್‌ನಲ್ಲಿ

ಇನ್ನು ವಾಟ್ಸಾಪ್‌ ಇತ್ತೀಚಿಗೆ ತನ್ನ ಮೀಡಿಯಾ ಫಾರ್ವರ್ಡ್‌ ಫೀಚರ್ಸ್‌ನಲ್ಲಿ ಹೊಸ ಬದಲಾವಣೆ ಮಾಡಿದೆ. ಇದು ಐಒಎಸ್‌ ಬಳಕೆದಾರರಿಗೆ ಅನ್ವಯವಾಗಲಿದ್ದು, ಇದರಿಂದ ಐಒಎಸ್‌ ಬಳಕೆದಾರರು ಯಾವುದೇ ಚಿತ್ರ ಮತ್ತು ವೀಡಿಯವನ್ನು ಕ್ಯಾಪ್ಶನ್‌ನೊಂದಿಗೆ ಫಾರ್ವರ್ಡ್‌ ಮಾಡಲು ಅನುಮತಿಸಲಿದೆ. ಇದರಿಂದ ನೀವು ಯಾವುದೇ ಮೀಡಿಯಾ ಫೈಲ್‌ ಫಾರ್ವರ್ಡ್‌ ಮಾಡಲು ಪ್ರಯತ್ನಿಸಿದಾಗ ಅಪ್ಲಿಕೇಶನ್‌ ಕೆಳಭಾಗದಲ್ಲಿ ಹೊಸ ಕ್ಯಾಪ್ಶನ್‌ ಬಾಕ್ಸ್ ಅನ್ನು ತೋರಿಸಲಿದೆ. ನೀವು ಕ್ಯಾಪ್ಶನ್‌ ಬರೆಯಲೇಬೇಕೆಂಬ ನಿಯಮವೇನೂ ಇಲ್ಲ. ಕ್ಯಾಪ್ಶನ್‌ ಬರೆಯದಿದ್ದರೆ ಅದನ್ನು ವಜಾಗೊಳಿಸುವುದಕ್ಕೆ ಸಾಧ್ಯವಾಗಲಿದೆ.

Best Mobiles in India

English summary
Here are five top features whatsapp introducing in 2023

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X