ವಾಟ್ಸಾಪ್‌ನಲ್ಲಿ ಈ ಸಲಹೆಗಳನ್ನು ತಪ್ಪದೆ ಅನುಸರಿಸಿ!

|

ಮೆಟಾ ಒಡೆತನದ ವಾಟ್ಸಾಪ್‌ ಅತ್ಯಂತ ಜನಪ್ರಿಯ ಮೆಸೇಜಿಂಗ್‌ ಅಪ್ಲಿಕೇಶನ್‌ ಎನಿಸಿಕೊಂಡಿದೆ. ಇನ್ನು ವಾಟ್ಸಾಪ್‌‌ ತನ್ನ ಬಳಕೆದಾರರ ಅನುಕೂಲಕ್ಕಾಗಿ ಅನೇಕ ಫೀಚರ್ಸ್‌ಗಳನ್ನು ಪರಿಚಯಿಸಿದೆ. ಅಲ್ಲದೆ ಕಾಲಕಾಲಕ್ಕೆ ತಕ್ಕಂತೆ ಹೊಸ ಫೀಚರ್ಸ್‌ಗಳನ್ನು ಪರಿಚಯಿಸುತ್ತಾ ಬಂದಿದೆ. ವಾಟ್ಸಾಪ್‌ ಪರಿಚಯಿಸಿರುವ ಅನೇಕ ಫೀಚರ್ಸ್‌ಗಳಲ್ಲಿ ಕೆಲವು ಫೀಚರ್ಸ್‌ಗಳು ಗೌಪ್ಯ ಫೀಚರ್ಸ್‌ಗಳಾಗಿವೆ. ಇನ್ನು ಕೆಲವು ಫೀಚರ್ಸ್‌ಗಳು ಬಳಕೆದಾರರ ಪ್ರೈವೆಸಿ ಕಾಪಾಡುವ ಫೀಚರ್ಸ್‌ಗಳಾಗಿವೆ.

ವಾಟ್ಸಾಪ್‌

ಹೌದು, ವಾಟ್ಸಾಪ್‌ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಅನೇಕ ಪ್ರೈವೆಸಿ ಫೀಚರ್ಸ್‌ಗಳನ್ನು ಒಳಗೊಂಡಿದೆ. ಈ ಫೀಚರ್ಸ್‌ಗಳು ಬಳಕೆದಾರರ ಡೇಟಾ ಮತ್ತು ಪ್ರೈವೆಸಿಯನ್ನು ಕಾಪಾಡುತ್ತವೆ. ಆದರೂ ಕೂಡ ವಾಟ್ಸಾಪ್‌ ಬಳಕೆದಾರರು ತಮ್ಮ ವೈಯಕ್ತಿಕ ಸಂದೇಶಗಳು ಮತ್ತು ಫೈಲ್‌ಗಳನ್ನು ಸುರಕ್ಷಿತವಾಗಿರಿಸಲು ಕೆಲವು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಹಾಗಾದ್ರೆ ವಾಟ್ಸಾಪ್‌ನಲ್ಲಿ ನೀವು ಅನುಸರಿಸಲೇಬೇಕಾದ ಕೆಲವು ನಿಯಮಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಎರಡು ಹಂತದ ಪರಿಶೀಲನೆಯನ್ನು ಸಕ್ರಿಯಗೊಳಿಸಿ

ಎರಡು ಹಂತದ ಪರಿಶೀಲನೆಯನ್ನು ಸಕ್ರಿಯಗೊಳಿಸಿ

ವಾಟ್ಸಾಪ್‌ ಖಾತೆಯಲ್ಲಿ ನಿಮ್ಮ ಗೌಪ್ಯತೆಯನ್ನು ಕಾಪಾಡಲು ಎರಡು ಹಂತದ ಪರಿಶೀಲನೆಯನ್ನು ಸಕ್ರಿಯಗೊಳಿಸುವುದು ಸೂಕ್ತ. ಈ ಇಂಟರ್‌ಬಿಲ್ಟ್‌ ಫೀಚರ್ಸ್‌ ಅನ್ನು ಆನ್ ಮಾಡುವುದರಿಂದ ಅನಧಿಕೃತ ಲಾಗಿನ್‌ಗಳನ್ನು ತಡೆಯಬಹುದಾಗಿದೆ. ವಾಟ್ಸಾಪ್‌ ಸೆಟ್ಟಿಂಗ್ಸ್‌/ ಅಕೌಂಟ್‌/ ಎರಡು ಹಂತದ ಪರಿಶೀಲನೆಗೆ ನ್ಯಾವಿಗೇಟ್ ಮಾಡಿ ಮತ್ತು 'ಸಕ್ರಿಯಗೊಳಿಸಿ' ಬಟನ್ ಕ್ಲಿಕ್ ಮಾಡಿ. ನಂತರ ಆರು-ಅಂಕಿಯ ಯೂನಿಕ್‌ ಪಿನ್ ಅನ್ನು ನಮೂದಿಸಬೇಕಾಗುತ್ತದೆ. ಹೀಗೆ ಮಾಡುವುದರಿಂದ ನಿಮ್ಮ ವಾಟ್ಸಾಪ್‌ ಖಾತೆಯನ್ನು ಬೇರೆ ಡಿವೈಸ್‌ನಲ್ಲಿ ಆರು ಅಂಕಿಯ ಪಿನ್ ಇಲ್ಲದೆ ಪ್ರವೇಶಿಸಲು ಸಾಧ್ಯವಾಗುವುದಿಲ್ಲ.

ಲಿಂಕ್‌ ಕ್ಲಿಕ್‌ ಮಾಡುವ ಪರಿಶೀಲಿಸಿ

ಲಿಂಕ್‌ ಕ್ಲಿಕ್‌ ಮಾಡುವ ಪರಿಶೀಲಿಸಿ

ವಾಟ್ಸಾಪ್‌ನಲ್ಲಿ ಬರುವ ಅಪರಿಚಿತ ಲಿಂಕ್‌ಗಳನ್ನು ಕ್ಲಿಕ್‌ ಮಾಡುವ ಮುನ್ನ ಪರಿಶೀಲಿಸುವುದು ಸೂಕ್ತ. ಏಕೆಂದರೆ ದುರುದ್ದೇಶಪೂರಿತ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ಮೋಸ ಮಾಡುವ ಸಾಧ್ಯತೆಗಳು ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿವೆ. ಆದರಿಂದ ನೀವು ಸ್ವೀಕರಿಸಿದ ಲಿಂಕ್ ಅನ್ನು ಪರಿಶೀಲಿಸುವ ಮೂಲಕ ಹಾನಿಕಾರಕ ವೆಬ್ ಪೇಜ್‌ಗಳಿಗೆ ಹೋಗುವುದನ್ನು ತಪ್ಪಿಸಬಹುದು.

ಸೆಕ್ಯೂರಿಟಿ ನೋಟಿಫಿಕೇಷನ್ಸ್ ಸಕ್ರಿಯಗೊಳಿಸಿ

ಸೆಕ್ಯೂರಿಟಿ ನೋಟಿಫಿಕೇಷನ್ಸ್ ಸಕ್ರಿಯಗೊಳಿಸಿ

ವಾಟ್ಸಾಪ್‌ನ ಸೆಕ್ಯೂರಿಟಿ ನೋಟಿಫಿಕೇಷನ್ಸ್ ಬಳಕೆದಾರರಿಗೆ ತಮ್ಮ ಚಾಟ್‌ಗಳು ಯಾವಾಗ ತೊಂದರೆಗೆ ಒಳಗಾಗುವ ಸಾಧ್ಯತೆಯಿದೆ ಅನ್ನೊದನ್ನ ತಿಳಿಸುತ್ತದೆ. ವಾಟ್ಸಾಪ್‌ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ಅನ್ನು ಹೊಂದಿದೆ. ಇದರಿಂದ ಎರಡು ಖಾತೆಗಳಲ್ಲಿ ಒಂದನ್ನು ಹೊಸ ಸಾಧನಕ್ಕೆ ಸರಿಸಿದರೆ, ಬದಲಾವಣೆಯನ್ನು ತಿಳಿಸುವ ಎಲ್ಲಾ ಚಾಟ್‌ಗಳಿಗೆ ತ್ವರಿತ ಎಚ್ಚರಿಕೆಯನ್ನು ಕಳುಹಿಸಲಾಗುತ್ತದೆ. ಹಾಗಾಗಿ, ನಿಮ್ಮ ವಾಟ್ಸಾಪ್‌ ಅಕೌಂಟ್‌ ಅನ್ನು ಬೇರೆಡೆಯಿಂದ ಹ್ಯಾಕ್ ಮಾಡಿ ಲಾಗ್ ಇನ್ ಆಗಿದ್ದರೆ, ನಿಮಗೆ ಸೆಕ್ಯೂರಿಟಿ ನೋಟಿಫಿಕೇಷನ್ಸ್ ಮೂಲಕ ತಿಳಿಯಲಿದೆ.

ಹಳೆಯ ಫೋನ್ ಕಳೆದುಕೊಂಡರೆ ವಾಟ್ಸಾಪ್‌ ಖಾತೆ ಲಾಗ್ ಔಟ್ ಮಾಡಿ

ಹಳೆಯ ಫೋನ್ ಕಳೆದುಕೊಂಡರೆ ವಾಟ್ಸಾಪ್‌ ಖಾತೆ ಲಾಗ್ ಔಟ್ ಮಾಡಿ

ನೀವು ನಿಮ್ಮ ಸಿಮ್‌ ಜೊತೆಗೆ ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಕಳೆದುಕೊಂಡರೆ, ನೀವು ತ್ವರಿತವಾಗಿ ನಕಲಿ ಸಿಮ್ ಕಾರ್ಡ್ ಮೂಲಕ ವಾಟ್ಸಾಪ್‌ ಖಾತೆಯನ್ನು ಮೊದಲಿಗೆ ಲಾಗ್‌ಔಟ್‌ ಮಾಡಿ. ಹೊಸ ಫೋನ್‌ನಲ್ಲಿ ವಾಟ್ಸಾಪ್‌ ಡೌನ್‌ಲೋಡ್‌ ಮಾಡಿ ಮತ್ತು OTP ಬಳಸಿಕೊಂಡು ಲಾಗ್ ಇನ್ ಮಾಡಿ. ಹೊಸ ಡಿವೈಸ್‌ನಿಂದ ನಿಮ್ಮ ಖಾತೆಗೆ ಲಾಗ್ ಇನ್ ಮಾಡುವುದರಿಂದ ನಿಮ್ಮ ಹಳೆಯ ಫೋನ್‌ನಿಂದ ವಾಟ್ಸಾಪ್‌ ಅಕೌಂಟ್‌ ತಕ್ಷಣವೇ ಲಾಗ್ ಔಟ್ ಆಗುತ್ತದೆ.

ವಿಭಿನ್ನ ಪ್ರೊಫೈಲ್ ಚಿತ್ರವನ್ನು ಬಳಸಿ

ವಿಭಿನ್ನ ಪ್ರೊಫೈಲ್ ಚಿತ್ರವನ್ನು ಬಳಸಿ

ನಿಮ್ಮ ಪ್ರೊಫೈಲ್ ಚಿತ್ರವನ್ನು ಸ್ಕ್ರೀನ್‌ಶಾಟ್‌ ತೆಗೆದುಕೊಳ್ಳುವ ಮೂಲಕವು ಕೆಲವು ನಿಮ್ಮ ವಿವರಗಳನ್ನು ತಿಳಿಯುವ ಪ್ರಯತ್ನ ನಡೆಸಬಹುದು. ಆದರಿಂದ ನೀವು ನಿಮ್ಮ ಫೋನಿನಲ್ಲಿ ಸೇವ್‌ ಮಾಡಿರದ ಸಂಖ್ಯೆಗಳು ವಾಟ್ಸಾಪ್‌ ಪ್ರೊಫೈಲ್‌ ಪಿಕ್‌ ಕಾಣದಂತೆ ಹೈಡ್‌ ಮಾಡಬಹುದು.

Best Mobiles in India

English summary
Here are five WhatsApp tips that can help you secure you personal messages

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X