ನೀವು ಬಳಸಬಹುದಾದ ಅತ್ಯುತ್ತಮ ಪಾಸ್‌ವರ್ಡ್‌ ಮ್ಯಾನೇಜರ್‌ಗಳ ವಿವರ ಇಲ್ಲಿದೆ!

|

ಇಂದಿನ ದಿನಗಳಲ್ಲಿ ಆನ್‌ಲೈನ್‌ನಲ್ಲಿ ನೀವು ಪ್ರವೇಶಿಸುವ ಪ್ರತಿಯೊಂದು ಖಾತೆಗೂ ಪಾಸ್‌ವರ್ಡ್‌ಗಳನ್ನು ಬಳಸುವುದು ಸಾಮಾನ್ಯ. ಆದರೆ ಪ್ರತಿಯೊಂದು ಪಾಸ್‌ವರ್ಡ್‌ ಅನ್ನು ನೆನಪಿನಲ್ಲಿಟ್ಟುಕೊಳ್ಳುವುದು ಸ್ವಲ್ಪ ಕಷ್ಟವಾಗಲಿದೆ. ಇದೇ ಕಾರಣಕ್ಕೆ ನಿಮ್ಮ ಪಾಸ್‌ವರ್ಡ್‌ಗಳನ್ನು ಮ್ಯಾನೇಜ್‌ ಮಾಡುವುದಕ್ಕೆ ಪಾಸ್‌ವರ್ಡ್‌ ಮ್ಯಾನೇಜರ್‌ ಸಹಾಯ ಮಾಡಲಿದೆ. ಪಾಸ್‌ವರ್ಡ್ ಮ್ಯಾನೇಜರ್‌ ನಿಮ್ಮ ಪಾಸ್‌ವರ್ಡ್ ಅನ್ನು ಎನ್‌ಕ್ರಿಪ್ಟ್ ಮಾಡಿದ 'ವಾಲ್ಟ್'ನಲ್ಲಿ ಸೇವ್‌ ಮಾಡುತ್ತಾರೆ. ಇದರಿಂದ ನಿಮ್ಮ ಪಾಸ್‌ವರ್ಡ್‌ಗಳನ್ನು ಮಲ್ಟಿ ಡಿವೈಸ್‌ ಮತ್ತು ಬ್ರೌಸರ್‌ಗಳಲ್ಲಿ ಹಿಂಪಡೆಯಲು ಸಾಧ್ಯವಾಗಲಿದೆ.

ಪಾಸ್‌ವರ್ಡ್‌

ಹೌದು, ಆನ್‌ಲೈನ್‌ ಖಾತೆಗಳಿಗೆ ನೀವು ಬಳಸುವ ಪಾಸ್‌ವರ್ಡ್‌ಗಳನ್ನು ಪಾಸ್‌ವರ್ಡ್‌ ಮ್ಯಾನೇಜರ್‌ ಮೂಲಕ ಸೇವ್‌ ಮಾಡಬಹುದು. ಇದರಿಂದ ಹಲವು ಪಾಸ್‌ವರ್ಡ್‌ಗಳನ್ನು ನೆನಪಿನಲ್ಲಿಟ್ಟುಕೊಳ್ಳಲು ಕಷ್ಟ ಪಡುವ ಪ್ರಮೇಯವೇ ಬರುವುದಿಲ್ಲ. ಪಾಸ್‌ವರ್ಡ್‌ ಮ್ಯಾನೇಜರ್‌ ವಾಲ್ಟ್‌ ವಿವಿಧ ಸೇವೆಗಳಿಗೆ ಎಲ್ಲಾ ಇತರ ಪಾಸ್‌ವರ್ಡ್‌ಗಳನ್ನು ಎನ್‌ಕ್ರಿಪ್ಟ್ ಮಾಡಲು ಬಳಸಲಾಗುತ್ತದೆ. ಹಾಗಾದ್ರೆ ನಿಮ್ಮ ಪಾಸ್‌ವರ್ಡ್‌ಗಳನ್ನು ಮ್ಯಾನೇಜ್‌ ಮಾಡುವ ಅತ್ಯುತ್ತಮ ಪಾಸ್‌ವರ್ಡ್‌ ಮ್ಯಾನೇಜರ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಐಕ್ಲೌಡ್ ಕೀಚೈನ್

ಐಕ್ಲೌಡ್ ಕೀಚೈನ್

ಆಪಲ್‌ ಡಿವೈಸ್‌ನಲ್ಲಿ ನಿಮ್ಮ ಪಾಸ್‌ವರ್ಡ್‌ಗಳನ್ನು ಸೇವ್‌ ಮಾಡಲು ಬಳಸಬಹುದಾದ ಪಾಸ್‌ವರ್ಡ್‌ ಮ್ಯಾನೇಜರ್‌ಗಳಲ್ಲಿ ಐಕ್ಲೌಡ್‌ ಕೀಚೈನ್‌ ಪ್ರಮುಖವಾಗಿದೆ. ಇದನ್ನು ಆಪಲ್‌ ಕಂಪೆನಿಯೇ ಅಭಿವೃದ್ದಿಪಡಿಸಿದ್ದು, ಇದರಲ್ಲಿ ಐಫೋನ್‌ ಬಳಕೆದಾರರು ತಮ್ಮ Apple ID ಅನ್ನು ಬಳಸಿಕೊಂಡು ಕೀಚೈನ್ ಅನ್ನು ಸೆಟ್‌ ಮಾಡಿದರೆ, ತಮ್ಮ ಪಾಸ್‌ವರ್ಡ್‌ಗಳು ಮತ್ತು ಇತರ ಸುರಕ್ಷಿತ ಮಾಹಿತಿಯನ್ನು ಡಿವೈಸ್‌ನಲ್ಲಿ ಅಪ್ಡೇಟ್‌ ಮಾಡಬಹುದು. ಇನ್ನು ಆಪಲ್‌ ಐಕ್ಲೌಡ್‌ ಕೀಚೈನ್‌ ಸೆಟ್‌ ಮಾಡಬೇಕಾದರೆ ಮೊದಲಿಗೆ ಸೆಟ್ಟಿಂಗ್‌ಗಳು> ನಿಮ್ಮ Apple ID> iCloud ನಲ್ಲಿ ಟ್ಯಾಪ್ ಮಾಡುವ ಮೂಲಕ ಮತ್ತು iCloud ಕೀಚೈನ್ ಆನ್ ಆಗಿದೆಯೇ ಎಂದು ಖಚಿತಪಡಿಸಿಕೊಳ್ಳಬೇಕಾಗುತ್ತದೆ. ನಂತರ ನೀವು iOS ನಲ್ಲಿ iCloud ಕೀಚೈನ್ ಅನ್ನು ಆನ್ ಮಾಡಬಹುದು.

ಗೂಗಲ್‌ ಪಾಸ್‌ವರ್ಡ್‌ ಮ್ಯಾನೇಜರ್‌

ಗೂಗಲ್‌ ಪಾಸ್‌ವರ್ಡ್‌ ಮ್ಯಾನೇಜರ್‌

ಆಂಡ್ರಾಯ್ಡ್‌ ಡಿವೈಸ್‌ ಬಳಕೆದಾರರು ತಮ್ಮ ಪಾಸ್‌ವರ್ಡ್‌ಗಳನ್ನು ಸೇವ್‌ ಮಾಡಲು ಗೂಗಲ್‌ ಪಾಸ್‌ವರ್ಡ್‌ ಮ್ಯಾನೇಜರ್‌ ಅನ್ನು ಬಳಸಬಹುದು. ನೀವು ಗೂಗಲ್‌ ಕ್ರೋಮ್‌ ಬ್ರೌಸರ್‌ನಲ್ಲಿ ಪಾಸ್‌ವರ್ಡ್‌ಗಳನ್ನು ನಮೂದಿಸುವಾಗ ಪಾಸ್‌ವರ್ಡ್‌ ಅನ್ನು ಸೇವ್‌ ಮಾಡುವೀರಾ ಎನ್ನುವ ಪಾಪ್‌ ಅನ್ನು ಕಾಣಬಹುದು. ಇದನ್ನು ನೀವು ಹೌದು ಎಂದು ಕ್ಲಿಕ್ ಮಾಡಿದರೆ, ನೀವು ಅವುಗಳನ್ನು ಗೂಗಲ್‌ ಪಾಸ್‌ವರ್ಡ್ ಮ್ಯಾನೇಜರ್‌ನಲ್ಲಿ ಸ್ಟೋರೇಜ್‌ ಮಾಡಬಹುದು. ಇನ್ನು ನಿಮ್ಮ ಗೂಗಲ್‌ ಅಕೌಂಟ್‌ನೊಂದಿಗೆ ಸೈನ್‌ಇನ್‌ ಮಾಡುವ ಮೂಲಕ ಎಲ್ಲಾ ಬ್ರೌಸರ್‌ಗಳಲ್ಲಿ ನಿಮ್ಮ ಪಾಸ್‌ವರ್ಡ್‌ಗಳನ್ನು ಪ್ರವೇಶಿಸಬಹುದು.

ಬಿಟ್‌ವಾರ್ಡನ್

ಬಿಟ್‌ವಾರ್ಡನ್

ಬಿಟ್‌ವಾರ್ಡನ್ ಒಂದು ಉಚಿತ ಮತ್ತು ಒಪನ್‌-ಸೋರ್ಸ್‌ ಪಾಸ್‌ವರ್ಡ್ ಮ್ಯಾನೇಜರ್‌ ಆಗಿದೆ. ಇದು ಎನ್‌ಕ್ರಿಪ್ಟ್ ಮಾಡಿದ ವಾಲ್ಟ್‌ನಲ್ಲಿ ಪಾಸ್‌ವರ್ಡ್‌ಗಳು ಮತ್ತು ಇತರ ಸೂಕ್ಷ್ಮ ಮಾಹಿತಿಯನ್ನು ಸಂಗ್ರಹಿಸಲು ಅನುಮತಿಸುತ್ತದೆ. ಈ ಸೇವೆಯನ್ನು ನೀವು ವೆಬ್ ಇಂಟರ್ಫೇಸ್, ಡೆಸ್ಕ್‌ಟಾಪ್‌ ಅಪ್ಲಿಕೇಶನ್, ಬ್ರೌಸರ್ ಎಕ್ಸ್‌ಟೆನ್ಶನ್‌ ಮತ್ತು ಕಮಾಂಡ್-ಲೈನ್ ಇಂಟರ್‌ಫೇಸ್ ಸೇರಿದಂತೆ ವಿವಿಧ ರೂಪಗಳಲ್ಲಿ ಲಭ್ಯವಿದೆ. ಇದು ವೈಯುಕ್ತಿಕ ಪ್ಲಾನ್‌ ಉಚಿತವಾಗಿದೆಯಾದರೂ, ಸಂಸ್ಥೆಗಳಿಗೆ ಪ್ರೀಮಿಯಂ ಪಾವತಿಸಿದ ಯೋಜನೆಗಳನ್ನು ಸಹ ನೀಡುತ್ತದೆ.

ಲಾಸ್ಟ್‌ಪಾಸ್

ಲಾಸ್ಟ್‌ಪಾಸ್

ನೀವು ಬಳಸಬಹುದಾದ ಅತ್ಯುತ್ತಮ ಪಾಸ್‌ವರ್ಡ್‌ ಮ್ಯಾನೇಜರ್‌ ಅಪ್ಲಿಕೇಶನ್‌ಗಳಲ್ಲಿ ಲಾಸ್ಟ್‌ಪಾಸ್‌ ಕೂಡ ಒಂದಾಗಿದೆ. ಇದರಲ್ಲಿ ಬಳಕೆದಾರರು ಅನಿಯಮಿತ ಸಂಖ್ಯೆಯ ಪಾಸ್‌ವರ್ಡ್‌ಗಳನ್ನು ಸುರಕ್ಷಿತವಾಗಿ ಸ್ಟೋರೇಜ್‌ ಮಾಡಬಹುದಾಗಿದೆ. ಆದರೆ ನೀವು ಇವುಗಳನ್ನು ಒಂದು ಡಿವೈಸ್‌ ಪ್ರಕಾರದಲ್ಲಿ ಮಾತ್ರ ಪ್ರವೇಶಿಸಬಹುದು. ಇನ್ನು ಲಾಸ್ಟ್‌ಪಾಸ್‌ ಡೆಸ್ಕ್‌ಟಾಪ್‌ ಮತ್ತು ಮೊಬೈಲ್ ಡಿವೈಸ್‌ಗಳಲ್ಲಿ ಲಭ್ಯವಾಗಲಿದೆ.

ಡ್ಯಾಶ್ಲೇನ್

ಡ್ಯಾಶ್ಲೇನ್

ಡ್ಯಾಶ್ಲೇನ್‌ ಕೂಡ ನೀವು ಬಳಸಬಹುದಾದ ಪಾಸ್‌ವರ್ಡ್‌ ಮ್ಯಾನೇಜರ್‌ಗಳಲ್ಲಿ ಒಂದಾಗಿದೆ. ಇದು ಡಾರ್ಕ್ ವೆಬ್ ಸ್ಕ್ಯಾನಿಂಗ್ ಮತ್ತು ಸುರಕ್ಷಿತ VPN ಸೇರಿದಂತೆ ಹೆಚ್ಚುವರಿ ಭದ್ರತಾ ಫೀಚರ್ಸ್‌ಗಳನ್ನು ಒದಗಿಸುವ ಪಾಸ್‌ವರ್ಡ್ ಮ್ಯಾನೇಜರ್‌ ಆಗಿದೆ. ಆದರೆ ಈ ಸೇವೆಯಲ್ಲಿ ಬಳಕೆದಾರರು ಕೇವಲ 50 ಪಾಸ್‌ವರ್ಡ್‌ಗಳನ್ನು ಮಾತ್ರ ಸ್ಟೋರೇಜ್‌ ಮಾಡಬಹುದಾಗಿದೆ.

Best Mobiles in India

Read more about:
English summary
It can be really difficult to create, manage and remember strong passwords for the many services that you use every day.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X