ವಿಶ್ವದ ಟಾಪ್‌ 5 ಪ್ರೀಮಿಯಂ ಸ್ಮಾರ್ಟ್‌ವಾಚ್‌ ಬ್ರ್ಯಾಂಡ್‌ಗಳು!

|

ಪ್ರಸ್ತುತ ದಿನಗಳಲ್ಲಿ ಸ್ಮಾರ್ಟ್‌ ಡಿವೈಸ್‌ಗಳಿಗೆ ಸಾಕಷ್ಟು ಬೇಡಿಕೆ ಇದೆ. ಇದೇ ಕಾರಣಕ್ಕೆ ಸ್ಮಾರ್ಟ್‌ಫೋನ್‌ಗಳಿಂದ ಹಿಡಿದು ಸ್ಮಾರ್ಟ್‌ಟಿವಿಗಳ ತನಕ, ಅನೇಕ ಗ್ಯಾಜೆಟ್ಸ್‌ಗಳು ಮಾರುಕಟ್ಟೆಯಲ್ಲಿ ಸಖತ್‌ ಸೌಂಡ್‌ ಮಾಡುತ್ತಿವೆ. ಇದರಲ್ಲಿ ಸ್ಮಾರ್ಟ್‌ವಾಚ್‌ಗಳು ಕೂಡ ಸಾಕಷ್ಟು ಪ್ರಸಿದ್ಧಿಯನ್ನು ಪಡೆದುಕೊಂಡಿವೆ. ಹಲವು ಜನಪ್ರಿಯ ಕಂಪೆನಿಗಳು ತಮ್ಮದೇ ಆದ ವೈವಿಧ್ಯಮಯ ಸ್ಮಾರ್ಟ್‌ವಾಚ್‌ಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಸದ್ಯ ಟೆಕ್‌ ಮಾರುಕಟ್ಟೆಯಲ್ಲಿ ಫಿಟ್ನೆಸ್‌ ಆಧಾರಿತ ಸ್ಮಾರ್ಟ್‌ವಾಚ್‌ಗಳಿಗೆ ಹೆಚ್ಚಿನ ಬೇಡಿಕೆ ಇದೆ.

ಸ್ಮಾರ್ಟ್‌ವಾಚ್‌

ಹೌದು, ಟೆಕ್‌ ವಲಯದಲ್ಲಿ ಸ್ಮಾರ್ಟ್‌ವಾಚ್‌ಗಳು ಜನಪ್ರಿಯತೆಯನ್ನು ಪಡೆದುಕೊಂಡಿವೆ. ಇನ್ನು ಸ್ಮಾರ್ಟ್‌ವಾಚ್‌ಗಳಲ್ಲಿ ಕೂಡ ಬಜೆಟ್‌ ಬೆಲೆ ಹಾಗೂ ಮಧ್ಯಮ ಮತ್ತು ಪ್ರೀಮಿಯಂ ಪ್ರೈಸ್‌ಟ್ಯಾಗ್‌ನ ವಾಚ್‌ಗಳು ಲಭ್ಯವಿವೆ. ಇದರಲ್ಲಿ ಆಪಲ್, ಸ್ಯಾಮ್‌ಸಂಗ್ ಮತ್ತು ಗಾರ್ಮಿನ್ ನಂತಹ ಪ್ರಮುಖ ಕಂಪೆನಿಗಳ ಸ್ಮಾರ್ಟ್‌ವಾಚ್‌ಗಳು ಪ್ರೀಮಿಯಂ ಶ್ರೇಣಿಯಲ್ಲಿ ಲಭ್ಯವಾಗಲಿವೆ. ಹಾಗಾದ್ರೆ ಪ್ರಸ್ತುತ ಟೆಕ್‌ ಮಾರುಕಟ್ಟೆಯಲ್ಲಿ ಟಾಪ್‌ ಪ್ರೀಮಿಯಂ ಸ್ಮಾರ್ಟ್‌ವಾಚ್‌ ಬ್ರ್ಯಾಂಡ್‌ಗಳು ಯಾವುವು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಆಪಲ್

ಆಪಲ್

ಆಪಲ್ ಕಂಪೆನಿ ಪ್ರೀಮಿಯಂ ಸ್ಮಾರ್ಟ್‌ವಾಚ್‌ ಮಾರುಕಟ್ಟೆಯಲ್ಲಿ ಅಗ್ರಸ್ಥಾನದಲ್ಲಿ ಕಾಣಿಸಿಕೊಂಡಿರುವ ಬ್ರ್ಯಾಂಡ್‌ ಎನಿಸಿಕೊಂಡಿದೆ. ಕಳೆದ ವರ್ಷ ಬಿಡುಗಡೆಯಾದ ಆಪಲ್‌ ಕಂಪೆನಿಯ ವಾಚ್‌ 7 ಸರಣಿಯನ್ನು ಸ್ಮಾರ್ಟ್‌ವಾಚ್‌ ಮಾರುಕಟ್ಟೆಯಲ್ಲಿ ಸಾಕಷ್ಟು ಸಂಚಲನ ಸೃಷ್ಟಿಸಿದೆ. ಅದರಲ್ಲೂ ಆಪಲ್ ಕಂಪೆನಿ 2022ರ ಮೊದಲ ತ್ರೈಮಾಸಿಕದಲ್ಲಿ ಒಟ್ಟಾರೆ 14% YYY ಹೆಚ್ಚಳವನ್ನು ದಾಖಲಿಸಿದೆ. ಇನ್ನು ಆಪಲ್‌ ವಾಚ್‌ ಸೀರೀಸ್‌ 7 41mm ಮತ್ತು 45mm ಆಯ್ಕೆಯ ಎರಡು ರೂಪಾಂತರಗಳನ್ನು ಹೊಂದಿದೆ. ಇದು ರೆಟಿನಾ ಡಿಸ್‌ಪ್ಲೇ ಹೊಂದಿದ್ದು, ಬಾಗಿದ ಮಾದರಿಯ ಡಿಸ್‌ಪ್ಲೇ ಹೊಂದಿದೆ. ಸ್ಮಾರ್ಟ್‌ವಾಚ್‌ನ ಡಿಸ್‌ಪ್ಲೇ ಸುತ್ತಲಿನ ಏರಿಯಾ ಕೇವಲ 1.7 ಮಿಮೀ ದಪ್ಪ ಮತ್ತು ಆಲ್‌ವೇಸ್‌ ಆನ್ ಸ್ಕ್ರೀನ್ ಮೋಡ್ 70%ರಷ್ಟು ಬ್ರೈಟ್‌ನೆಸ್‌ ಅನ್ನು ಒಳಗೊಂಡಿದೆ.

ಸ್ಯಾಮ್‌ಸಂಗ್‌

ಸ್ಯಾಮ್‌ಸಂಗ್‌

ಸ್ಯಾಮ್‌ಸಂಗ್‌ ಕಂಪೆನಿ ಪ್ರೀಮಿಯಂ ಹಾರ್ಡ್‌ವೇರ್ ಅನ್ನು ಒದಗಿಸುವ ಕೆಲವು ಸ್ಮಾರ್ಟ್‌ವಾಚ್ ಬ್ರಾಂಡ್‌ಗಳಲ್ಲಿ ಒಂದಾಗಿದೆ. ದಕ್ಷಿಣ ಕೊರಿಯಾದ ಸ್ಮಾರ್ಟ್‌ವಾಚ್‌ ಮಾರುಕಟಗಟೆಯಲ್ಲಿ ವರ್ಷದಿಂದ ವರ್ಷಕ್ಕೆ 46% ಹೆಚ್ಚಳವನ್ನು ಸಾಧಿಸುವ ಮೂಲಕ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ಇನ್ನು ಸ್ಯಾಮ್‌ಸಂಗ್‌ನ ಜನಪ್ರಿಯ ಸ್ಮಾರ್ಟ್‌ವಾಚ್‌ಗಳಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ ವಾಚ್‌ 4 ಸರಣಿ ಕೂಡ ಸೇರಿದೆ. ಇದರಲ್ಲಿ ಗ್ಯಾಲಕ್ಸಿ ವಾಚ್ 4 ಮತ್ತು ಸ್ಯಾಮ್‌ಸಂಗ್ ಗ್ಯಾಲಕ್ಸಿ ವಾಚ್ 4 ಕ್ಲಾಸಿಕ್ ಒನ್ UI ವಾಚ್ 3 ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು ಹೊಸ ವೇರ್ OS ಅನ್ನು ಆಧರಿಸಿದೆ. ಸ್ಯಾಮ್‌ಸಂಗ್ ತನ್ನ ಧರಿಸಬಹುದಾದ ಫೋಕಸ್ಡ್ ಎಕ್ಸಿನೋಸ್ W920 SoC ಅನ್ನು ಸ್ಮಾರ್ಟ್ ವಾಚ್‌ಗಳಿಗಾಗಿ ಬಳಸಿದೆ. ಇದನ್ನು 1.5GB RAM ನೊಂದಿಗೆ ಜೋಡಿಸಲಾಗಿದೆ.

ಹುವಾವೇ

ಹುವಾವೇ

ಪ್ರೀಮಿಯಂ ಸ್ಮಾರ್ಟ್‌ವಾಚ್‌ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಂಡಿರುವ ಬ್ರ್ಯಾಂಡ್‌ಗಳಲ್ಲಿ ಹುವಾವೇ ಕಂಪೆನಿ ಕೂಡ ಸೇರಿದೆ. ಇದು ಸ್ಮಾರ್ಟ್‌ವಾಚ್‌ ಮಾರುಕಟ್ಟೆಯಲ್ಲಿ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ. ಆದರೆ GMS ನಿರ್ಬಂಧಗಳಿಂದ ಉಂಟಾದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ದುರ್ಬಲ ಸ್ಥಾನದಿಂದಾಗಿ ಸ್ವಲ್ಪ ಹಿನ್ನಡೆ ಅನುಭವಿಸಿದೆ ಎನ್ನಲಾಗಿದೆ.

ಶಿಯೋಮಿ

ಶಿಯೋಮಿ

ಶಿಯೋಮಿ ಕಂಪೆನಿ ಜನಪ್ರಿಯ ಸ್ಮಾರ್ಟ್‌ಫೋನ್‌ಗಳಿಗೆ ಮಾತ್ರವಲ್ಲ ಆಕರ್ಷಕ ಸ್ಮಾರ್ಟ್‌ವಾಚ್‌ಗಳಿಗೂ ಕೂಡ ಪ್ರಸಿದ್ಧಿಯನ್ನು ಪಡೆದುಕೊಂಡಿದೆ. ಈಗಾಗಲೇ ಹಲವು ಆಕರ್ಷಕ ಸ್ಮಾರ್ಟ್‌ವಾಚ್‌ಗಳನ್ನು ಪರಿಚಯಿಸಿರುವ ಶಿಯೋಮಿ ಮಾರುಕಟ್ಟೆಯಲ್ಲಿ ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿದೆ. ಶಿಯೋಮಿ ಕಂಪೆನಿ ಸ್ಮಾರ್ಟ್‌ವಾಚ್‌ ಮಾರುಕಟ್ಟೆಯಲ್ಲಿ ವರ್ಷದಿಂದ ವರ್ಷಕ್ಕೆ 69%ಬೆಳವಣಿಗೆಯನ್ನು ಸಾಧಿಸಿದೆ.

ಗಾರ್ಮಿನ್

ಗಾರ್ಮಿನ್

ಇನ್ನು ಸ್ಮಾರ್ಟ್‌ವಾಚ್‌ ಮಾರುಕಟ್ಟೆಯಲ್ಲಿ ಸಾಕಷ್ಟು ಪ್ರಖ್ಯಾತಿ ಪಡೆದ ಬ್ರ್ಯಾಂಡ್‌ಗಳಲ್ಲಿ ಗಾರ್ಮಿನ್ ಕಂಪೆನಿ ಕೂಡ ಒಂದು. ಗಾರ್ಮಿನ್‌ ಕಂಪೆನಿ ಸ್ಮಾರ್ಟ್ ವಾಚ್‌ಗಳು ಹೆಚ್ಚು ದುಬಾರಿ ಶ್ರೇಣಿಯನ್ನು ಹೊಂದಿವೆ. ಆದರೂ ಕೂಡ ಸ್ಮಾರ್ಟ್‌ವಾಚ್‌ ಮಾರುಕಟ್ಟೆಯಲ್ಲಿ ಐದನೇ ಸ್ಥಾನವನ್ನು ಗಳಿಸುವಲ್ಲಿ ಯಶಸ್ವಿಯಾಗಿದೆ. ಹೆಚ್ಚಿನ ಬೆಲೆಯ ಕಾರಣದಿಂದಾಗಿ ಆದಾಯದ ವಿಷಯದಲ್ಲಿ ಬ್ರ್ಯಾಂಡ್ ಮೂರನೇ ಸ್ಥಾನದಲ್ಲಿ ಕೂಡ ಗುರುತಿಸಿಕೊಂಡಿದೆ.

Best Mobiles in India

Read more about:
English summary
Apple, Samsung and Garmin manufacture and sell premium range of smartwatches with higher revenues compared to other brands, suggest a Counterpoint study

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X