ಗೂಗಲ್‌ಮೀಟ್‌ ಎಕೋ ಸೌಂಡ್‌ ಪ್ರಾಬ್ಲಂ ಕ್ಲಿಯರ್‌ ಮಾಡಲಿದೆ ಈ ಹೊಸ ಫೀಚರ್ಸ್‌!

|

ಕೊರೊನಾ ವೈರಸ್‌ ಬಂದ ನಂತರ ಜನರ ಜೀವನಶೈಲಿಯಲ್ಲಿ ಸಾಕಷ್ಟು ಬದಲಾಗಿದೆ. ಕಚೇರಿಯಲ್ಲಿ ಹೋಗಿ ಕೆಲಸ ನಿರ್ವಹಿಸುತ್ತಿದ್ದ ಮಂದಿಯೆಲ್ಲಾ ಮನೆಯಿಂದಲೇ ಕಾರ್ಯನಿರ್ವಹಿಸುತ್ತಿದ್ದಾರೆ. ಇದೇ ಕಾರಣಕ್ಕೆ ವರ್ಚುವಲ್‌ ಮೀಟಿಂಗ್‌ ಅನ್ನೊದು ಇದೀಗ ಸಾಮಾನ್ಯವಾಗಿ ಬಿಟ್ಟಿದೆ. ಇನ್ನು ವರ್ಚುವಲ್‌ ಮೀಟಿಂಗ್‌ ನಡೆಸುವುದಕ್ಕೆ ಹಲವು ವೀಡಿಯೊ ಕಾನ್ಫರೆನ್ಸಿಂಗ್‌ ಅಪ್ಲಿಕೇಶನ್‌ಗಳು ಲಭ್ಯವಿದೆ. ಇವುಗಳಲ್ಲಿ ಗೂಗಲ್‌ ಮೀಟ್‌ ಅಪ್ಲಿಕೇಶನ್‌ ಕೂಡ ಒಂದಾಗಿದೆ. ಇನ್ನು ಗೂಗಲ್‌ ಮೀಟ್‌ ಕೂಡ ತನ್ನ ಪ್ಲಾರ್ಟ್‌ಫಾರ್ಮ್‌ನಲ್ಲಿ ಹಲವು ಆಕರ್ಷಕ ಫೀಚರ್ಸ್‌ಗಳನ್ನು ಒಳಗೊಂಡಿದೆ.

ಗೂಗಲ್‌ ಮೀಟ್‌

ಹೌದು, ಗೂಗಲ್‌ ಮೀಟ್‌ ಜನಪ್ರಿಯ ವೀಡಿಯೋ ಕಾನ್ಫರೆನ್ಸಿಂಗ್‌ ಅಪ್ಲಿಕೇಶನ್‌ಗಳಲ್ಲಿ ಒಂದಾಗಿದೆ. ಗೂಗಲ್‌ ಮೀಟ್‌ ಬಳಸಿ ಆನ್‌ಲೈನ್‌ ಕ್ಲಾಸ್‌, ಆನ್‌ಲೈನ್‌ ಮೀಟಿಂಗ್‌ ಸೇರಿದಂತೆ ಹಲವು ಈವೆಂಟ್‌ಗಳನ್ನು ನಡೆಸಬಹುದಾಗಿದೆ. ಹಾಗೆಯೇ ಈ ವೀಡಿಯೊ ಕಾನ್ಫರೆನ್ಸಿಂಗ್ ಅಪ್ಲಿಕೇಶನ್‌ಗಳು ಕೆಲವು ಸಮಸ್ಯೆಗಳನ್ನು ಹೊಂದಿರುವ ಸಾಧ್ಯತೆ ಇದೆ. ಕರೆಯ ಸಮಯದಲ್ಲಿ ಆಡಿಯೋ ಸಮಸ್ಯೆಗಳನ್ನು ಪರಿಹರಿಸಲು ಇದೀಗ ಗೂಗಲ್ ಮೀಟ್ ಹೊಸ ಫೀಚರ್ಸ್‌ ಸೇರಿಸಿದೆ. ಹಾಗಾದ್ರೆ ಗೂಗಲ್‌ ಮೀಟ್‌ ಒಳಗೊಂಡಿರುವ ಟ್ರಿಕ್ಸ್‌ಗಳೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಮೀಟಿಂಗ್

ನೀವು ಇತ್ತೀಚೆಗೆ ಯಾವುದೇ ವೀಡಿಯೋ ಮೀಟಿಂಗ್ ಸಾಫ್ಟ್‌ವೇರ್ ಅನ್ನು ಬಳಸಿದ್ದರೆ, ಮಾತನಾಡುವಾಗ ಎಕೋ ಸೌಂಡ್‌ ಬರುವುದನ್ನು ನೀವು ಗಮನಿಸಿರಬಹುದು. ಇದು ಸಂಭವಿಸುವುದಕ್ಕೆ ಹಲವಾರು ಕಾರಣಗಳಿವೆ. ಇದರಲ್ಲಿ ಸಾಮಾನ್ಯ ಕಾರಣವೆಂದರೆ ನಿಮ್ಮ ಸುತ್ತಮುತ್ತಲಿನ ಯಾವುದೋ ನಿಮ್ಮ ಕಂಪ್ಯೂಟರ್ ನಿಮ್ಮ ಆಡಿಯೊವನ್ನು ಮತ್ತೆ ಕರೆಗೆ ಕಳುಹಿಸುತ್ತದೆ. ಇದರಿಂದ ಭಾಗವಹಿಸಿರುವ ಮೀಟಿಂಗ್‌ನಲ್ಲಿ ಎಲ್ಲವೂ ಅಸ್ಪಷ್ಟವಾಗಿ ಕೇಳಲಿದೆ. ಇದು ನಿಮಗೆ ಕಿರಕಿರಿ ಎನಿಸಲಿದೆ. ಆದರೆ ಇನ್ಮುಂದೆ ಗೂಗಲ್‌ಮೀಟ್‌ನಲ್ಲಿ ನೀವು ಇಂತಹ ಸಮಸ್ಯೆಯನ್ನು ಸುಲಭವಾಗಿ ಪತ್ತೆ ಹಚ್ಚಬಹುದಾಗಿದೆ. ಕರೆ ಸಮಯದಲ್ಲಿ ಉಂಟಾಗುವ ಸಿಸ್ಟಂ ಸಮಸ್ಯೆಯನ್ನು ಇದೀಗ ಗೂಗಲ್ ಗುರುತಿಸಲಿದೆ. ಅಷ್ಟೇ ಅಲ್ಲ ಕರೆ ಸಮಸ್ಯೆಗಳನ್ನು ಹೇಗೆ ಬಗೆಹರಿಸಬೇಕೆಂಬ ಸಲಹೆಗಳೊಂದಿಗೆ ನಿಮಗೆ ತಿಳಿಸುತ್ತದೆ.

ಗೂಗಲ್

ದ ವರ್ಜ್ ವರದಿಯ ಪ್ರಕಾರ, ಕರೆ ಸಮಯದಲ್ಲಿ ವಾಯ್ಸ್‌ ಎಕೋಗೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಗೂಗಲ್ ಮೀಟ್ ಈಗ ನಿಮಗೆ ತಿಳಿಸುತ್ತದೆ. ಇದರರ್ಥ ನಿಮ್ಮ ಧ್ವನಿಯು ನಿಮ್ಮ ತುದಿಯಲ್ಲಿ ಎಕೋ ಬರುತ್ತಿರುವುದನ್ನು ನೀವು ಗುರುತಿಸಲು ಸಾಧ್ಯವಾಗದಿದ್ದರೂ ಸಹ, ನೀವು ಗೂಗಲ್‌ಮೀಟ್‌ ಇಂಟರ್ಫೇಸ್‌ನಲ್ಲಿ ಕೆಂಪು ಚುಕ್ಕೆಯನ್ನು ನೋಡಬಹುದು. ಅಂದರೆ ಗೂಗಲ್‌ಮೀಟ್‌ ಮೀಟಿಂಗ್‌ ಸಮಯದಲ್ಲಿ ವಾಯ್ಸ್‌ ಸಮಸ್ಯೆ ಬಂದಾಗ ರೆಡ್‌ ಕಲರ್‌ ಡಾಟ್‌ ಅನ್ನು ಕಾಣಬಹುದಾಗಿದೆ. ಇದನ್ನು ಗೂಗಲ್‌ ಒದಗಿಸಿದ ಮಾಹಿತಿಯ ಆಧಾರದ ಮೇಲೆ ಸಮಸ್ಯೆಯನ್ನು ಪರಿಹರಿಸಬಹುದು.

ಗೂಗಲ್‌

ಗೂಗಲ್‌ ಮೀಟ್‌ ಸೇವೆಯು ಕೆಲವು ಆಡಿಯೋ ಸಮಸ್ಯೆಗಳನ್ನು ತನ್ನದೇ ಆದಾರದ ಮೇಲೆ ತೆಗೆದುಹಾಕುವ ಕೆಲಸ ಮಾಡುತ್ತದೆ. "ಹೆಚ್ಚಿನ ಸಮಯ, ಮೀಟ್ ಪ್ರತಿಧ್ವನಿಯನ್ನು ತೆಗೆದುಹಾಕಲು ಆಡಿಯೊವನ್ನು ಬುದ್ಧಿವಂತಿಕೆಯಿಂದ ನಿಯಂತ್ರಿಸುತ್ತದೆ. ಆದಾಗ್ಯೂ, ಇತರರು ಮಾತನಾಡುವಾಗ ನಿಮ್ಮ ಸಾಧನದಿಂದ ಪ್ರತಿಧ್ವನಿಯನ್ನು ಕೇಳುವಂತೆ ಮಾಡುತ್ತದೆ. ಇಂತಹ ಸಮಯದಲ್ಲಿ ನಿಮ್ಮ ಡಿವೈಸ್‌ ಪ್ರತಿಧ್ವನಿಯನ್ನು ಉಂಟುಮಾಡುತ್ತದೆ ಎಂದು ತಿಳಿಯುವುದು ಕಷ್ಟಕರವಾಗಿತ್ತು. ಆದರೆ ಇದನ್ನು ಗೂಗಲ್‌ ಇದೀಗ ಸುಲಭವಾಗಿ ಪತ್ತೆ ಹಚ್ಚಲಿದೆ.

ಗೂಗಲ್

ವರದಿಯ ಪ್ರಕಾರ, ಗೂಗಲ್ ನೀಡುವ ಕೆಲವು ಪಾಯಿಂಟರ್‌ಗಳು ನಿಮ್ಮ ಡೀಫಾಲ್ಟ್ ಮೈಕ್ ಮತ್ತು ಸ್ಪೀಕರ್ ಸೆಟಪ್‌ನಿಂದ ಹೆಡ್‌ಫೋನ್‌ಗಳನ್ನು ಬಳಸಲು ಬದಲಿಸುತ್ತವೆ, ನಿಮ್ಮ ವಾಲ್ಯೂಮ್ ಅನ್ನು ಕಡಿಮೆ ಮಾಡುತ್ತವೆ ಮತ್ತು ನಿಮ್ಮ ಮೈಕ್ರೊಫೋನ್ ಅನ್ನು ಮ್ಯೂಟ್ ಮಾಡುತ್ತವೆ. ಆದಾಗ್ಯೂ, ಬಳಕೆದಾರರು ಕರೆಯನ್ನು ಕೈಬಿಡಲು ಮತ್ತು ಮತ್ತೆ ಸೇರಲು ಮತ್ತು ತಮ್ಮ ಪ್ರಸ್ತುತ ಸುತ್ತಮುತ್ತಲಿನಿಂದ ಹೊರಹೋಗಲು ಪ್ರಯತ್ನಿಸಬಹುದು ಮತ್ತು ಈ ಸಮಸ್ಯೆಗಳನ್ನು ಸರಿಪಡಿಸಲು ಪ್ರಯತ್ನಿಸಬಹುದು.

Best Mobiles in India

English summary
Here’s how Google Meet will help users resolve echo issues. No, you don't have to download Google Meet app again.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X