ಭಾರತದಲ್ಲಿ 5G ಶುರುವಾದರೆ ಏನೆಲ್ಲಾ ಬದಲಾಗಲಿದೆ? ಭವಿಷ್ಯದ ಮೇಲೆ ಇದರ ಪರಿಣಾಮ ಏನು?

|

ಭಾರತದಲ್ಲಿ 5G ನೆಟ್‌ವರ್ಕ್‌ನ ಚರ್ಚೆ ಕಳೆದೆರಡು ದಿನಗಳಿಂದ ಮತ್ತೆ ಮುನ್ನಲೆಗೆ ಬಂದಿದೆ. ದೂರಸಂಪರ್ಕ ಇಲಾಖೆಯ 5G ತರಂಗಾಂತರ ಹರಾಜನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಂಪಟ ಸಭೆ ಅನುಮೋದಿಸಿದ ನಂತರ 5G ನೆಟ್‌ವರ್ಕ್‌ ಬಗೆಗಿನ ವಿಚಾರಗಳು ಸಾಕಷ್ಟು ಹರಿದಾಡ್ತಿದೆ. ಭಾರತದಲ್ಲಿ ಶೀಘ್ರದಲ್ಲೇ 5G ನೆಟ್‌ವರ್ಕ್‌ ಲಭ್ಯವಾಗುವುದರಿಂದ ಇದರಿಂದಾಗುವ ಉಪಯೋಗ ಏನು? 5G ಬಂದ ನಂತರ ಭಾರತದ ಆರ್ಥಿಕತೆಯಲ್ಲಿ ಏನೆಲ್ಲಾ ಪ್ರಗತಿ ಸಾಧ್ಯವಾಗಲಿದೆ ಎಂಬ ಚರ್ಚೆ ಶುರುವಾಗಿದೆ.

5G

ಹೌದು, ಭಾರತದಲ್ಲಿ 5G ನೆಟ್‌ವರ್ಕ್‌ ಶೀಘ್ರದಲ್ಲೇ ಲಭ್ಯವಾಗಲಿದೆ. ಐದನೇ ತಲೆಮಾರಿನ ನೆಟ್‌ವರ್ಕ್‌ ಅಥವಾ 5G ನೆಟ್‌ವರ್ಕ್‌ 4Gಗಿಂತ ಹತ್ತುಪಟ್ಟು ವೇಗವಾಗಿ ಕೆಲಸ ಮಾಡಲಿದೆ ಅನ್ನೊದು ಸಾಕಷ್ಟು ಕುತೂಹಲವನ್ನು ಸೃಷ್ಟಿಸಿದೆ. ಸದ್ಯ ಭಾರತ ಸರ್ಕಾರ ದೊಡ್ಡ ಟೆಕ್ ಸಂಸ್ಥೆಗಳಿಂದ ಕ್ಯಾಪ್ಟಿವ್ 5G ನೆಟ್‌ವರ್ಕ್‌ಗಳನ್ನು ಸ್ಥಾಪಿಸಲು ತನ್ನ ಒಪ್ಪಿಗೆ ನೀಡಿದೆ. ಸಂಪೂರ್ಣವಾಗಿ 5G ನೆಟ್‌ವರ್ಕ್‌ ದೇಶದಲ್ಲಿ ಹೊಸ ಮನ್ವಂತರಕ್ಕೆ ಕಾರಣವಾಗಲಿದೆ ಎನ್ನಲಾಗಿದೆ. ಹಾಗಾದ್ರೆ 5G ನೆಟ್‌ವರ್ಕ್‌ ಭಾರತದಲ್ಲಿ ಏನೆಲ್ಲಾ ಬದಲಾವಣೆಗಳಿಗೆ ಕಾರಣವಾಗಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

5G

ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ 5G ತರಂಗಾಂತರ ಹರಾಜನ್ನು ಅನುಮೋದಿಸಲಾಗಿದೆ. ಅಲ್ಲದೆ ಟೆಲಿಕಾಂ ಸೇವಾ ಪೂರೈಕೆದಾರರಿಗೆ ವ್ಯಾಪಾರ ಮಾಡುವ ವೆಚ್ಚವನ್ನು ಕಡಿಮೆ ಮಾಡುವುದಕ್ಕಾಗಿ ಸರ್ಕಾರವು ಹರಾಜನ್ನು ಘೋಷಿಸಿದೆ. ಇದಕ್ಕಾಗಿ ಜುಲೈ ಅಂತ್ಯದ ವೇಳೆಗೆ 20 ವರ್ಷಗಳ ಮಾನ್ಯತೆಯೊಂದಿಗೆ ಸರ್ಕಾರವು ಒಟ್ಟು 72097.85 MHz ಸ್ಪೆಕ್ಟ್ರಮ್ ಅನ್ನು ಹರಾಜು ಮಾಡಲಿದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ. ಅಲ್ಲದೆ ಏರ್‌ವೇವ್‌ಗಳಿಗೆ ಮುಂಗಡ ಪಾವತಿಯನ್ನು ಸಹ ತೆಗೆದುಹಾಕಿದೆ ಮತ್ತು ಯಶಸ್ವಿ ಬಿಡ್‌ದಾರರು 5G ಸ್ಪೆಕ್ಟ್ರಮ್‌ಗೆ 20 ಸಮಾನ ಮಾಸಿಕ ಕಂತುಗಳಲ್ಲಿ (EMI ಗಳು) ಪಾವತಿಸಬಹುದು ಎಂದು ಹೇಳಿದೆ. ಜೊತೆಗೆ ಅಭಿವೃದ್ಧಿಯನ್ನು ಸಕ್ರಿಯಗೊಳಿಸಲು ಮತ್ತು ಆವಿಷ್ಕಾರಗಳನ್ನು ಉತ್ತೇಜಿಸಲು ಖಾಸಗಿ ಕ್ಯಾಪ್ಟಿವ್ ನೆಟ್‌ವರ್ಕ್‌ಗಳನ್ನು ಸ್ಥಾಪಿಸಲು ಕ್ಯಾಬಿನೆಟ್ ನಿರ್ಧರಿಸಿದೆ.

ಭಾರತದಲ್ಲಿ 5G ಸೇವೆಯಿಂದ ಏನೆಲ್ಲಾ ಪ್ರಯೋಜನ!

ಭಾರತದಲ್ಲಿ 5G ಸೇವೆಯಿಂದ ಏನೆಲ್ಲಾ ಪ್ರಯೋಜನ!

ಇನ್ನು ಶೀಘ್ರದಲ್ಲೇ ಭಾರತದಲ್ಲಿ 5G ಸೇವೆಗಳು ಬರುವುದರಿಂದ ಸಾಕಷ್ಟು ಬದಲಾವಣೆಗಳನ್ನು ನಿರೀಕ್ಷಿಸಲಾಗಿದೆ. ಏಕೆಂದರೆ 5G ಸೇವೆಗಳು 4Gಗಿಂತ ಹತ್ತುಪಟ್ಟು ವೇಗವಾಗಿ ದೊರೆಯಲಿವೆ. ಒಂದು ಹಂತದ ವರದಿಯ ಪ್ರಕಾರ 5G ಸೇವೆ ಲಭ್ಯವಾದರೆ ಭಾರತದಲ್ಲಿ ಸೇವಾ ಪೂರೈಕೆದಾರರಿಗೆ 5G-ಸಕ್ರಿಯಗೊಳಿಸಿದ ಡಿಜಿಟಲೀಕರಣದ ಆದಾಯದ ಯೋಜಿತ ಮೌಲ್ಯವು 2030 ರ ವೇಳೆಗೆ ಸರಿಸುಮಾರು USD 17 ಶತಕೋಟಿ ಆಗಿರುತ್ತದೆ ಎನ್ನಲಾಗಿದೆ. ಇನ್ನು 5G ಸೇವೆ ಕೇವಲ ಬೆಳೆಯುತ್ತಿರುವ ನಿರ್ವಹಣೆಯನ್ನು ನಿರ್ವಾಹಕರಿಗೆ ಮಾತ್ರ ಸಕ್ರಿಯಗೊಳಿಸುವುದಿಲ್ಲ. ಬದಲಿಗೆ ಗ್ರಾಹಕರ ಡೇಟಾ ಅಗತ್ಯಗಳು ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸುವಂತೆ ಮಾಡಲಿದೆ.

5G

ಇದಲ್ಲದೆ 5G ಸೇವೆ ಗ್ರಾಹಕರಿಗೆ ಸ್ಮಾರ್ಟ್ ಮತ್ತು ಹೆಚ್ಚು ಸಂಪರ್ಕಿತ ಜಗತ್ತನ್ನು ಸಕ್ರಿಯಗೊಳಿಸುತ್ತದೆ. ಇದರಿಂದ 5Gಯ ಆರಂಭಿಕ ಹಂತಗಳಲ್ಲಿ, ಸುಧಾರಿತ ಮೊಬೈಲ್ ಬ್ರಾಡ್‌ಬ್ಯಾಂಡ್ (eMBB) ಮತ್ತು ಸ್ಥಿರ ವೈರ್‌ಲೆಸ್ ಪ್ರವೇಶ (FWA)ವನ್ನು ಬಳಸಬೇಕಾಗುತ್ತದೆ. ಇವುಗಳು ಭಾರತದಲ್ಲಿ ಕಡಿಮೆ ಸ್ಥಿರ ಬ್ರಾಡ್‌ಬ್ಯಾಂಡ್ ಪೆನೆಟ್ರೇಷನ್ ಸಮಸ್ಯೆಯನ್ನು ಪರಿಹರಿಸಲು ಸಹಾಯ ಮಾಡುತ್ತದೆ. ಜೊತೆಗೆ ಪ್ರಯಾಣದಲ್ಲಿರುವಾಗ ಗ್ರಾಹಕರ ಡೇಟಾ ಅನುಭವವನ್ನು ಸುಧಾರಿಸುತ್ತದೆ. ಗ್ರಾಹಕರಿಗೆ ಅವಶ್ಯವಿರುವ ಡೇಟಾ ಅಗತ್ಯಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಪೂರೈಸಲು 5G ಸಹಾಯ ಮಾಡಲಿದೆ, ಇದರಿಂದಾಗಿ ಒಟ್ಟಾರೆ ಗ್ರಾಹಕ ಅನುಭವವು ಉತ್ತಮವಾಗಿರುತ್ತದೆ.

5G

5G ಸೇವೆ ಪಡೆದುಕೊಳ್ಳುವ ಗ್ರಾಹಕರು ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ 4K ವೀಡಿಯೊವನ್ನು ವೀಕ್ಷಿಸಲು ಅವಕಾಶ ಪಡೆಯಲಿದ್ದಾರೆ. ಅಲ್ಲದೆ AR/VR, ಮೊಬೈಲ್ ಗೇಮಿಂಗ್ ಅಪ್ಲಿಕೇಶನ್‌ಗಳು ಮತ್ತು ವಿವಿಧ ತಲ್ಲೀನಗೊಳಿಸುವ ಚಟುವಟಿಕೆಗಳು ಮತ್ತು ಹೊಸ ಅಪ್ಲಿಕೇಶನ್‌ಗಳನ್ನು ಬಳಸಲು ಅನುಮತಿಸುತ್ತದೆ. ಇದಲ್ಲದೆ ಮನರಂಜನೆಯನ್ನು ಪಡೆಯಲು ಸುರಕ್ಷಿತವಾದ ಮಾರ್ಗವನ್ನು ಕಲ್ಪಿಸಲಿದೆ. ಅಲ್ಲದೆ 5G ಆಗಮನದಿಂದ ಡೇಟಾ ಡೌನ್‌ಲೋಡ್ ವೇಘ ಹೆಚ್ಚಾಗಲಿದೆ. ಮೂರು ಪಟ್ಟು ಹೆಚ್ಚಿನ ಸ್ಪೆಕ್ಟ್ರಮ್ ದಕ್ಷತೆ ಮತ್ತು ಅತಿ ಕಡಿಮೆ ಸುಪ್ತತೆಯನ್ನು ಕಾಣಬಹುದಾಗಿದೆ.

ಭಾರತದಲ್ಲಿ 5G ಏಕೆ ಮುಖ್ಯ ಎನಿಸಿಕೊಂಡಿದೆ?

ಭಾರತದಲ್ಲಿ 5G ಏಕೆ ಮುಖ್ಯ ಎನಿಸಿಕೊಂಡಿದೆ?

ಭಾರತದಲ್ಲಿ 5G ನೆಟ್‌ವರ್ಕ್‌ ಹೆಚ್ಚಿನ ಇಂಟರ್‌ನೆಟ್‌ ವೇಗಕ್ಕಾಗಿ ಅತಿ ಅವಶ್ಯಕ ಎನಿಸಿದೆ. ಇದು ಹೆಚ್ಚಿನ ಮಲ್ಟಿ-GBPS ಗರಿಷ್ಠ ಡೇಟಾ ವೇಗವನ್ನು ನೀಡುವಂತೆ ವಿನ್ಯಾಸಗೊಳಿಸಲಾಗಿದೆ. ಅಲ್ಟ್ರಾ ಲೋ ಲೆಟೆನ್ಸಿ, ಕ್ರಿಯೆ ಮತ್ತು ಪ್ರತಿಕ್ರಿಯೆಯ ನಡುವಿನ ಹೆಚ್ಚಿನ ನೆಟ್‌ವರ್ಕ್ ವಿಶ್ವಾಸಾರ್ಹತೆಯನ್ನು ಹೊಂದಿದೆ. ಹೆಚ್ಚಿನ ಜನರನ್ನು ಮತ್ತು ಹೆಚ್ಚಿನ ಸಾಧನಗಳನ್ನು ಬೆಂಬಲಿಸುವ ಬೃಹತ್ ನೆಟ್‌ವರ್ಕ್ ಸಾಮರ್ಥ್ಯ ಇದರಲ್ಲಿದೆ. ಯಾವುದೇ ಸಮಯದಲ್ಲಿ ಅನೇಕ ಉದ್ಯಮ ಅಪ್ಲಿಕೇಶನ್‌ಗಳು ಮತ್ತು ಬಳಕೆದಾರರನ್ನು ಬೆಂಬಲಿಸುವ ಸಾಮರ್ಥ್ಯ ಹೊಂದಿದೆ.

ಈಗಾಗಲೇ

ಈಗಾಗಲೇ ಭಾರತದಲ್ಲಿ 5G ಗಾಗಿ ಹೆಚ್ಚಿನ ಗ್ರಾಹಕರು ಹೆಚ್ಚಿನ ಆಸಕ್ತಿ ಹೊಂದಿದ್ದಾರೆ. ಅಲ್ಲದೆ 5G ಸೇವೆಗಳನ್ನು ಪಡೆಯಲು ಪ್ರೀಮಿಯಂ ಪಾವತಿಸಲು ಕೂಡ ಸಿದ್ಧರಿದ್ದಾರೆ. ಅದರಲ್ಲೂ ಭಾರತದಲ್ಲಿ ಕನಿಷ್ಠ 40 ಮಿಲಿಯನ್ ಸ್ಮಾರ್ಟ್‌ಫೋನ್ ಬಳಕೆದಾರರು 5G ಲಭ್ಯವಾದ ಮೊದಲ ವರ್ಷದಲ್ಲಿ ಅದನ್ನು ತೆಗೆದುಕೊಳ್ಳುವ ನಿರೀಕ್ಷೆಯಿದೆ. ಇದಲ್ಲದೆ ಎರಿಕ್ಸನ್ ಮೊಬಿಲಿಟಿ ವರದಿಯ ಪ್ರಕಾರ ಸುಮಾರು 500 ಮಿಲಿಯನ್ ಚಂದಾದಾರಿಕೆಗಳನ್ನು ಪಡೆದುಕೊಳ್ಳುವ ಸಾಧ್ಯತೆಯಿದೆ ಎನ್ನಲಾಗಿದೆ. ಹಾಗೆಯೇ 2027 ರ ಅಂತ್ಯದಲ್ಲಿ 5G ಮೊಬೈಲ್ ಚಂದಾದಾರಿಕೆಗಳಲ್ಲಿ ಸುಮಾರು 39% ಏರಿಕೆಯನ್ನು ಕಾಣಬಹುದಾಗಿದೆ.

ನೆಟ್‌ವರ್ಕ್‌

ಇನ್ನು 5G ನೆಟ್‌ವರ್ಕ್‌ ಕೆಲಸ, ಕಲಿಕೆ, ಸಾಮಾಜಿಕ ಸಂವಹನದಂತಹ ಅಗತ್ಯಗಳಿಗೆ 5G ಸೂಕ್ತವಾಗಿದೆ. ಇದು ರಿಯಲ್‌-ಟೈಂ ಸೆನ್ಸಾರ್‌ ಗುಣಮಟ್ಟವನ್ನು ಸುಧಾರಿಸುತ್ತದೆ. 5G ಯ ಪ್ರಭಾವವು ಎಲ್ಲಾ ರೀತಿಯ ಕೈಗಾರಿಕೆಗಳು ಮತ್ತು ಸಂಸ್ಥೆಗಳಲ್ಲಿ ಹಾಗೂ ಸಾರ್ವಜನಿಕ, ಖಾಸಗಿ ಮತ್ತು ಸರ್ಕಾರಗಳಲ್ಲಿ ಕಂಡುಬರುತ್ತದೆ. ಇದರಿಂದ ಆನ್‌ಲೈನ್ ಸಮಾಲೋಚನೆಗಳ ಸಂಖ್ಯೆ ಮತ್ತು ದಕ್ಷತೆಯು ಹೆಚ್ಚಾಗುವ ಸಾಧ್ಯತೆಯಿದೆ. ಜೊತೆಗೆ ಇಂಟರ್ನೆಟ್ ಆಫ್ ಥಿಂಗ್ಸ್ (ಐಒಟಿ), ಟೆಲಿಮೆಡಿಸಿನ್ ಮತ್ತು ಆರೋಗ್ಯ ಸೇವೆಗಳ ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿ 5G ಯ ಪಾತ್ರ ಮಹತ್ವದ್ದಾಗಿದೆ. ಜೊತೆಗೆ ಭಾರತ ವಿಶ್ವದ ನಂಬರ್‌ 1 ಡಿಜಿಟಲ್ ಸೂಪರ್ ಪವರ್ ರಾಷ್ಟ್ರ ಆಗುವುದಕ್ಕೆ 5G ಪ್ರಮುಖ ಪಾತ್ರವನ್ನು ವಹಿಸಲಿದೆ.

Best Mobiles in India

English summary
The growing momentum in 5G innovation is based on its potential to serve diverse use cases through performance.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X