ಈ ಆಪ್ಸ್‌ ಬಳಸಿ ನೀವು ವಿಡಿಯೋ ಕ್ರಿಯೆಟ್ ಮಾಡಿದ್ರೆ, ಆ ವಿಡಿಯೋ ಪಕ್ಕಾ ವೈರಲ್‌!

|

ಪ್ರಸ್ತುತ ದಿನಗಳಲ್ಲಿ ಆನ್‌ಲೈನ್‌ ವೀಡಿಯೋ ಕಂಟೆಂಟ್‌ ಕ್ರಿಯೆಟರ್‌ಗಳ ಸಂಖ್ಯೆ ಹೆಚ್ಚಾಗುತ್ತಿದೆ. ತಮ್ಮ ವೀಡಿಯೋ ಕಂಟೆಂಟ್‌ಗಳ ಮೂಲಕ ಹೆಚ್ಚು ಜನರನ್ನು ತಲುಪುವ ಪ್ರಯತ್ನವನ್ನು ಪ್ರತಿಯೊಬ್ಬರೂ ಮಾಡುತ್ತಲೇ ಇದ್ದಾರೆ. ಇದಕ್ಕೆ ಪೂರಕವಾಗಿ ಹಲವು ವೀಡಿಯೊ ಕಂಟೆಟ್‌ ಅಪ್ಲಿಕೇಶನ್‌ಗಳು ಲಭ್ಯವಿವೆ. ಹೆಚ್ಚು ಜನರಿಗೆ ತಲುಪುವ ವೀಡಿಯೋ ಕಂಟೆಂಟ್‌ಗಳ ಮೂಲಕ ಹಣಗಳಿಸುವುದಕ್ಕೆ ಕೂಡ ಸಾಧ್ಯವಿದೆ. ಇದೇ ಕಾರಣಕ್ಕೆ ವೀಡಿಯೋ ಕಂಟೆಂಟ್‌ ಕ್ರಿಯೆಟರ್‌ಗಳು ತಮ್ಮ ವೀಡಿಯೋ ಹೆಚ್ಚು ಜನರಿಗೆ ತಲುಪಿಸಬೇಕೆಂದು ಪ್ರಯತ್ನ ಪಡುತ್ತಲೇ ಇರುತ್ತಾರೆ.

ಆನ್‌ಲೈನ್‌ನಲ್ಲಿ

ಹೌದು, ಆನ್‌ಲೈನ್‌ನಲ್ಲಿ ಹಣ ಮಾಡುವ ವಿಧಾನಗಳಲ್ಲಿ ವೀಡಿಯೊ ಕಂಟೆಂಟ್‌ ಕ್ರಿಯೆಟ್‌ ಮಾಡುವುದು ಕೂಡ ಸೇರಿದೆ. ನೀವು ಮಾಡುವ ವೀಡಿಯೊ ಕಂಟೆಂಟ್‌ ಹೆಚ್ಚು ಜನರಿಗೆ ತಲುಪಿದಂತೆ ನಿಮ್ಮ ಆದಾಯವೂ ಕೂಡ ಹೆಚ್ಚಾಗಲಿದೆ. ಇದೇ ಕಾರಣಕ್ಕೆ ವೀಡಿಯೋಗಳನ್ನು ಆನ್‌ಲೈನ್‌ನಲ್ಲಿ ವೈರಲ್‌ ಮಾಡುವುದಕ್ಕೆ ಪ್ರತಿಯೊಬ್ಬರೂ ಕೂಡ ಪ್ರಯತ್ನಿಸುತ್ತಾರೆ. ಹಾಗಂತ ಎಲ್ಲಾ ವೀಡಿಯೊಗಳು ಕೂಡ ವೈರಲ್‌ ಆಗುವುದಿಲ್ಲ. ಆದರೆ ವೀಡಿಯೊ ಕಂಟೆಂಟ್‌ ಕ್ರಿಯೆಟರ್ಸ್‌ ಮಾತ್ರ ತಮ್ಮ ವೀಡಿಯೊ ವೈರಲ್‌ ಆಗುವಂತೆ ಮಾಡಲು ಬಗೆಬಗೆಯ ಪ್ರಯತ್ನ ನಡೆಸುತ್ತಲೇ ಇದ್ದಾರೆ.

ಇಲ್ಲವೇ

ಇನ್ನು ಯಾವುದೇ ವಿಷಯದ ಬಗ್ಗೆ ಮಾರುಕಟ್ಟೆಯಲ್ಲಿ ಬೇಡಿಕೆ ಸೃಷ್ಟಿಸುವಲ್ಲಿ, ಇಲ್ಲವೇ ಬಝ್ ಮಾಡುವಲ್ಲಿ ಕಂಟೆಂಟ್‌ ವೀಡಿಯೋಗಳು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಇದೇ ಕಾರಣಕ್ಕೆ ಕೆಲವು ಬ್ರ್ಯಾಂಡ್‌ಗಳು ತಮ್ಮ ಪ್ರಾಡಕ್ಟ್‌ಗಳ ಬಗ್ಗೆ ಪ್ರಮೋಷನ್‌ ಮಾಡುವುದಕ್ಕಾಗಿ ಕೆಲವು ಕಂಟೆಂಟ್‌ ಕ್ರಿಯೆಟರ್ಸ್‌ಗಳನ್ನು ಉಪಯೋಗಿಸಿಕೊಳ್ಳುತ್ತಾರೆ. ಆದರೆ ಕೆಲವೊಮ್ಮೆ, ನಿಮ್ಮ ಕಂಟೆಂಟ್‌ ಅನ್ನು ನೀವು ವೈರಲ್‌ ಮಾಡುವುದಕ್ಕೆ ಕೆಲವು ಅಪ್ಲಿಕೇಶನ್‌ಗಳ ಸಹಾಯವನ್ನು ಪಡೆದುಕೊಳ್ಳಬಹುದಾಗಿದೆ. ಹಾಗಾದ್ರೆ ನಿಮ್ಮ ಕಂಟೆಂಟ್‌ ವೈರಲ್‌ ಮಾಡುವುದಕ್ಕೆ ಸಹಾಯ ಮಾಡುವ ಪ್ರಮುಖ ಅಪ್ಲಿಕೇಶನ್‌ಗಳ ವಿವರವನ್ನು ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಮುಂದೆ ಓದಿರಿ.

ಡಿಜಿಟಲ್‌

ಇಂದಿನ ಡಿಜಿಟಲ್‌ ಯುಗದಲ್ಲಿ ಹೆಚ್ಚಿನ ಜನರು ಆನ್‌ಲೈನ್‌ನಲ್ಲಿ ತಮ್ಮದೇ ಆದ ವೀಡಿಯೊ ಕಂಟೆಂಟ್‌ಗಳ ಮೂಲಕ ಹೆಚ್ಚಿನ ಜನರನ್ನು ತಲುಪುವ ಪ್ರಯತ್ನವನ್ನು ಮಾಡುತ್ತಾರೆ. ಅದರಂತೆ ಈಗಾಗಲೇ ಅನೇಕ ವೀಡಿಯೊ ಕಂಟೆಂಟರ್ಸ್‌ ಸಾಕಷ್ಟು ಜನರನ್ನು ತಲುಪಿದ್ದಾರೆ. ಅಲ್ಲದೆ ಹೆಚ್ಚಿನ ವೀಕ್ಷಕರನ್ನು ಪಡೆಯುವ ಮೂಲಕ ಆನ್‌ಲೈನ್‌ನಲ್ಲಿ ಆದಾಯವನ್ನು ಗಳಿಸುತ್ತಿದ್ದಾರೆ. ಮನೆಯಲ್ಲಿಯೇ ಕುಳಿತು ಸಮಾಜದಲ್ಲಿ ಹೆಚ್ಚು ಜನರನ್ನು ತಲುಪುವ ವೀಡಿಯೊ ಕಂಟೆಂಟರ್ಸ್‌ಗಳು ತಮ್ಮ ವೀಡಿಯೋಗಳನ್ನು ಇನ್ನಷ್ಟು ವೈರಲ್‌ ಮಾಡುವುದಕ್ಕೆ ಈ ಕೆಳಗಿನ ಅಪ್ಲಿಕೇಶನ್‌ಗಳನ್ನು ಬಳಸಬಹುದಾಗಿದೆ.

ಅಡ್ಜೂಮಾ

ಅಡ್ಜೂಮಾ

ಪ್ರಸ್ತುತ ದಿನಗಳಲ್ಲಿ ಡಿಜಿಟಲ್ ಮಾರ್ಕೆಟಿಂಗ್ ಇಲ್ಲದೆ ಯಾವುದೇ ಕಂಟೆಂಟ್‌ ಕ್ರಿಯೆಟರ್ಸ್‌ಗಳು ಆದಾಯಗಳಿಸುವುದಕ್ಕೆ ಸಾಧ್ಯವಿಲ್ಲ. ನಿಮ್ಮ ವೀಡಿಯೋ ಕಂಟೆಂಟ್‌ ಮೂಲಕ ಡಿಜಿಟಲ್‌ ಮಾರ್ಕೆಟೆಂಗ್‌ ಮಾಡಬೇಕಾದರೆ Adzooma ಅಪ್ಲಿಕೇಶನ್‌ ಸೂಕ್ತವಾಗಿದೆ. ಈ ಅಪ್ಲಿಕೇಶನ್‌ ಆಲ್-ಇನ್-ಒನ್ ಡಿಜಿಟಲ್ ಮಾರ್ಕೆಟಿಂಗ್ ಪ್ಲಾಟ್‌ಫಾರ್ಮ್ ಆಗಿದ್ದು, ಕ್ರಿಯೆಟರ್ಸ್‌ ತಮ್ಮ ಬ್ಯುಸಿನೆಸ್‌ ಅನ್ನು ಅಳೆಯುವುದಕ್ಕೆ ಅವಕಾಶ ನೀಡಲಿದೆ. ಟ್ಯುಟೋರಿಯಲ್‌ಗಳ ಜೊತೆಗೆ ಪರಿಣಾಮಕಾರಿಯಾದ ಜಾಹಿರಾತು ಪ್ರಯೋಜನಗಳನ್ನು ಪಡೆದುಕೊಳ್ಳುವುದಕ್ಕೆ ಅವಕಾಶ ನೀಡಲಿದೆ.

ಗ್ರಾಮರ್ಲಿ (Grammarly)

ಗ್ರಾಮರ್ಲಿ (Grammarly)

ದೋಷ-ಮುಕ್ತ ಸಂವಹನಕ್ಕಾಗಿ ಗ್ರಾಮರ್ಲಿ ಅಪ್ಲಿಕೇಶನ್‌ ನಿಮಗೆ ಸಹಾಯ ಮಾಡಲಿದೆ. ಇದು AI-ಚಾಲಿತ ಮತ್ತು ಕ್ಲೌಡ್-ಆಧಾರಿತ ಟೈಪಿಂಗ್ ಸಹಾಯಕವಾಗಿದ್ದು, ಕಾಗುಣಿತ, ವ್ಯಾಕರಣ ದೋಷಗಳು, ವಿರಾಮಚಿಹ್ನೆಗಳು, ಭಾಷೆಯ ಧ್ವನಿ ಇತ್ಯಾದಿಗಳನ್ನು ಪರಿಶೀಲಿಸಲು ಮತ್ತು ಸರಿಪಡಿಸಲು ರಚನೆಕಾರರಿಗೆ ಸಹಾಯ ಮಾಡುತ್ತದೆ. ಇದು ವಿಷಯದ ದೋಷಗಳನ್ನು ಗುರುತಿಸುತ್ತದೆ ಅಲ್ಲದೆ ಅದಕ್ಕೆ ಸೂಕ್ತವಾದ ಪರ್ಯಾಯ ಪದಗಳನ್ನು ತಿಳಿಸುತ್ತದೆ. ಇದರಿಂದ ನಿಮ್ಮ ಕಂಟೆಂಟ್‌ ಯಾವುದೇ ತಪ್ಪುಗಳಿಲ್ಲದೆ ಸ್ಪಷ್ಟವಾಗಿರಲಿದೆ. ಇದು ಕೂಡ ಹೆಚ್ಚಿನ ಜನರನ್ನು ತಲುಪಲು ಸಾಧ್ಯವಾಗಲಿದೆ.

ಕ್ಯಾನ್ವಾ

ಕ್ಯಾನ್ವಾ

ಕ್ಯಾನ್ವಾ ಅಪ್ಲಿಕೇಶನ್‌ ಆನ್‌ಲೈನ್ ಗ್ರಾಫಿಕ್ ವಿನ್ಯಾಸ ಅಪ್ಲಿಕೇಶನ್ ಆಗಿದೆ. ಇದರ ಮೂಲಕ ನಿಮ್ಮ ನಿಮ್ಮ ಕಲ್ಪನೆಯ ಕಂಟೆಂಟ್‌ ವಿಶ್ಯುಯಲ್‌ ಅನ್ನು ಕ್ರಿಯೆಟ್‌ ಮಾಡಲು ಸಹಾಯ ಮಾಡಲಿದೆ. ಅಲ್ಲದೆ ಈ ಪ್ಲಾಟ್‌ಫಾರ್ಮ್‌ ಮೂಲಕ ರಿಯಲ್‌ ಟೈಂನಲ್ಲಿ ವಿಶ್ಯುಯಲ್‌ ಕಂಟೆಂಟ್‌ ಅನ್ನು ಎಡಿಟ್‌ ಮಾಡುವುದಕ್ಕೆ, ರಿಯಾಕ್ಷನ್‌ ಎಕ್ಸ್‌ಚೇಂಜ್‌, ಪಡೆಯುವುದಕ್ಕೆ ಇದು ಸಹಾಯ ಮಾಡಲಿದೆ. ನೀವು ಸೃಜನಶೀಲ ಪೋಸ್ಟ್‌ಗಳನ್ನು ಮಾಡುವುದಕ್ಕೆ ಕ್ಯಾನ್ವಾ ಅಪ್ಲಿಕೇಶನ್‌ ಅನ್ನು ಬಳಸಬಹುದಾಗಿದೆ. ಇದರಿಂದ ನಿಮ್ಮ ವೀಡಿಯೊ ಎಲ್ಲಾ ಜನರಿಗೂ ತಲುಪುವಂತೆ ಮಾಡಬಹುದು.

ಮನಿ ಆಪ್‌

ಮನಿ ಆಪ್‌

ಮನಿ ಆಪ್‌ ಮೂಲಕ ಕಂಟೆಂಟ್‌ ಕ್ರಿಯೆಟರ್ಸ್‌ ಅಕೌಂಟೆಂಟ್ ಅಗತ್ಯವಿಲ್ಲದೇ ತಮ್ಮ ಎಲ್ಲಾ ಹಣ-ಸಂಬಂಧಿತ ಪ್ರಕ್ರಿಯೆಗಳನ್ನು ಪರಿಹರಿಸಬಹುದು. ಇದರಲ್ಲಿರುವ ಒಂದು ಡ್ಯಾಶ್‌ಬೋರ್ಡ್‌ನಲ್ಲಿ ತಮ್ಮ ಗಳಿಕೆಯನ್ನು ಪ್ರದರ್ಶಿಸಲಿದೆ. ಇದರಿಂದ ಕ್ರಿಯೆಟರ್ಸ್‌ಗೆ ತಮ್ಮ ಹಣಕಾಸು ನಿರ್ವಹಣೆಯ ಬಗ್ಗೆ ಸಹಾಯ ಮಾಡಲಿದೆ. ಆದಾಯ, ಖರ್ಚು, ಬಾಕಿ ಇರುವ ದಿನಾಂಕಗಳು, ಮಾಸಿಕ ಹಣಕಾಸು ಕ್ಯಾಲೆಂಡರ್ ಅನ್ನು ಅಪ್ಲಿಕೇಶನ್‌ನಲ್ಲಿ ಟ್ರ್ಯಾಕ್ ಮಾಡಬಹುದು. ಅಲ್ಲದೆ ಬಹು ಆದಾಯದ ಸ್ಟ್ರೀಮ್‌ಗಳಿಂದ ಅವರ ಹಿಂದಿನ ಮತ್ತು ಮುಂಬರುವ ಗಳಿಕೆಗಳ ಬಗ್ಗೆ ಟ್ರ್ಯಾಕ್‌ ಮಾಡಲು ಇದು ಸಹಾಯ ಮಾಡಲಿದೆ.

ಕಾಸ್ಮೊಫೀಡ್

ಕಾಸ್ಮೊಫೀಡ್

ನಿಮ್ಮ ಕಂಟೆಂಟ್‌ ಹೆಚ್ಚು ಹೆಚ್ಚು ಜನರನ್ನು ತಲುಪಬೇಕಾದರೆ ನಿಮಗೆ ಕಾಸ್ಮೊಫೀಡ್‌ ಅಪ್ಲಿಕೇಶನ್‌ ಸಹಾಯ ಮಾಡಲಿದೆ. ಕಾಸ್ಮೊಫೀಡ್‌ ಅಪ್ಲಿಕೇಶನ್‌ ಕ್ರಿಯೆಟರ್ಸ್‌ ವರ್ಕ್‌ ಫ್ಲೋ ಮತ್ತು ಡಿಸ್ಟ್ರಿಬ್ಯೂಷನ್‌ ನಂತಹ ಸಮಸ್ಯೆಗಳನ್ನು ಬೆಂಬಲಿಸುತ್ತದೆ. ವಿಶೇಷವಾಗಿ ಹಣಕಾಸು, ಕ್ರಿಪ್ಟೋ, ಶಿಕ್ಷಣ, ವಿನ್ಯಾಸ, ಕಥೆ ಹೇಳುವಿಕೆ ಮತ್ತು ಚಲನಚಿತ್ರ ನಿರ್ಮಾಣದಲ್ಲಿ ಕಂಟೆಂಟ್‌ ಕ್ರಿಯೆಟರ್ಸ್‌ ತಮ್ಮ ಸಮುದಾಯವನ್ನು ರಚಿಸಬಹುದು. ಇದರಲ್ಲಿ ಈವೆಂಟ್‌ಗಳನ್ನು ಆಯೋಜಿಸಬಹುದು, ಕೋರ್ಸ್‌ಗಳನ್ನು ಮಾರಾಟ ಮಾಡುವ ಮೂಲಕ ಹಣಗಳಿಸಬಹುದಾಗಿದೆ. ಇದು ನಿಮ್ಮ ವೀಡಿಯೋವನ್ನುನ ಹೆಚ್ಚು ಜನರನ್ನು ತಲುಪಿಸುವಲ್ಲಿ ಹೆಚ್ಚು ಉಪಯುಕ್ತವಾಗಿದೆ.

ವೀಡಿಯೊ

ಇನ್ನು ನೀವು ನಿಮ್ಮ ವೀಡಿಯೊ ಕಂಟೆಂಟ್‌ ಮೂಲಕ ಲಾಭದಾಯಕ ಬ್ಯುಸಿನೆಸ್‌ ಮಾಡಬೇಕಾದರೆ ಈ ಅಪ್ಲಿಕೇಶನ್‌ಗಳು ನಿಮಗೆ ಸಹಾಯ ಮಾಡಲಿವೆ. ಇಂದಿನ ಡಿಜಿಟಲ್‌ ಯುಗದಲ್ಲಿ ನಿಮ್ಮ ವೀಡಿಯೋಗಳು ವೈರಲ್‌ ಆಗಬೇಕಾದರೆ ಸೃಜನಶೀಲತೆ ಅತ್ಯಗತ್ಯವಾಗಿದೆ. ಕಂಟೆಂಟ್‌ ಕ್ರಿಯೆರ್ಸ್‌ಗಳು ಯಾವುದೇ ವಿಷಯದ ಬಗ್ಗೆ ಸೂಕ್ತ ಜ್ಞಾನ, ತಿಳುವಳಿಕೆಹೊಂದಿರುವುದು ಸೂಕ್ತ. ಅಲ್ಲದೆ ನಿಮ್ಮ ವೀಡಿಯೋವನ್ನು ವೀಕ್ಷಿಸುವ ಪ್ರೇಕ್ಷಕರು/ಗ್ರಾಹಕ ತೊಡಗಿಸಿಕೊಳ್ಳುವಿಕೆ, ಹಣಗಳಿಕೆ ಮತ್ತು ಹಣದ ನಿರ್ವಹಣೆಯನ್ನು ಕೇಂದ್ರೀಕರಿಸುವುದು ಕಡ್ಡಾಯವಾಗಿದೆ. ಇದರಿಂದ ನಿಮ್ಮ ವೀಡಿಯೋಗಳು ಹೆಚ್ಚು ಜನರನ್ನು ತಲುಪಿಸಬಹುದಾಗಿದೆ.

Best Mobiles in India

Read more about:
English summary
Every content creator needs help, even though he is the perfect one- but as we all say, no one is perfect and there is a scope for improvement

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X