50,000ರೂ, ಒಳಗೆ ಲಭ್ಯವಾಗುವ ಅತ್ಯುತ್ತಮ ಲ್ಯಾಪ್‌ಟಾಪ್‌ಗಳು!

|

ಇಂದಿನ ದಿನಗಳಲ್ಲಿ ಲ್ಯಾಪ್‌ಟಾಪ್‌ ಅತ್ಯಗತ್ಯ ಡಿವೈಸ್‌ಗಳಲ್ಲಿ ಒಂದೆನಿಸಿಕೊಂಡಿದೆ. ಶಿಕ್ಷಣಕ್ಕಾಗಿ, ಹಾಗೂ ಮನೆಯಿಂದಲೇ ಕಾರ್ಯನಿರ್ವಹಣೆ ಮಾಡುವುದಕ್ಕಾಗಲಿ ಲ್ಯಾಪ್‌ಟಾಪ್‌ನ ಅವಶ್ಯಕತೆ ತುಂಬಾ ಇದೆ. ಇದೇ ಕಾರಣಕ್ಕೆ ಮಾರುಕಟ್ಟೆಯಲ್ಲಿ ಲ್ಯಾಪ್‌ಟಾಪ್‌ಗಳ ಬೇಡಿಕೆ ಹೆಚ್ಚಾಗಿದೆ. ಇನ್ನು ನೀವು ಆನ್‌ಲೈನ್‌ನಲ್ಲಿ ಲ್ಯಾಪ್‌ಟಾಪ್‌ ಖರೀದಿಸುವುದಾದರೆ ಹಲವು ಅಂಶಗಳನ್ನು ಪರಿಗಣಿಸಬೇಕಾಗುತ್ತದೆ. ಲ್ಯಾಪ್‌ಟಾಪ್‌ ಮಾಡೆಲ್‌, ಬೆಲೆ, ಬ್ಯಾಟರಿ ಸಾಮರ್ಥ್ಯ ಎಲ್ಲವೂ ಕೂಡ ಮುಖ್ಯವಾಗಲಿದೆ.

ಲ್ಯಾಪ್‌ಟಾಪ್‌

ಹೌದು, ಲ್ಯಾಪ್‌ಟಾಪ್‌ ಖರೀದಿಸುವಾಗ ಹಲವು ಅಂಶಗಳನ್ನು ಗಮನಿಸಬೇಕಾಗುತ್ತದೆ. ಅದರಲ್ಲೂ ಹೆಚ್ಚಿನ ಜನರು ಲ್ಯಾಪ್‌ಟಾಪ್‌ನ ಬೆಲೆಯನ್ನು ಗಮನಿಸುತ್ತಾರೆ. ಇನ್ನು ನೀವು 50,000ರೂ.ಒಳಗಿನ ಲ್ಯಾಪ್‌ಟಾಪ್‌ಗಳನ್ನು ಖರೀದಿಸಬೇಕಾದರೆ ಹಲವು ಜನಪ್ರಿಯ ಬ್ರ್ಯಾಂಡ್‌ಗಳ ಆಯ್ಕೆಯನ್ನು ಕಾಣಬಹುದು. ಇವುಗಳಲ್ಲಿ ನಿಮಗೆ ಯಾವುದು ಉತ್ತಮ ಎನಿಸಲಿದೆಯೋ ಆ ಲ್ಯಾಪ್‌ಟಾಪ್‌ ಅನ್ನು ನೀವು ಖರೀದಿಸಬಹುದು. ಹಾಗಾದ್ರೆ ಭಾರತದಲ್ಲಿ ಪ್ರಸ್ತುತ 50,000ರೂ,ಕ್ಕಿಂತ ಕಡಿಮೆ ಬೆಲೆಯಲ್ಲಿ ಖರೀದಿಸಬಹುದಾದ ಅತ್ಯುತ್ತಮ ಲ್ಯಾಪ್‌ಟಾಪ್‌ಗಳು ಯಾವುವು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಆಸುಸ್‌ ವಿವೋಬುಕ್‌ S510UN-BQ217T

ಆಸುಸ್‌ ವಿವೋಬುಕ್‌ S510UN-BQ217T

50,000ರೂ.ಒಳಗೆ ನೀವು ಖರೀದಿಸಬಹುದಾದ ಲ್ಯಾಪ್‌ಟಾಪ್‌ಗಳಲ್ಲಿ ಆಸುಸ್‌ ವಿವೋಬುಕ್‌ S510UN-BQ217T ಕೂಡ ಸೇರಿದೆ. ಈ ಲ್ಯಾಪ್‌ಟಾಪ್‌ 15.60 ಇಂಚಿನ ಡಿಸ್‌ಪ್ಲೇ ಹೊಂದಿದ್ದು, ಇದು 1.6GHz ವೇಗದ ಇಂಟೆಲ್ ಕೋರ್ i5 ಪ್ರೊಸೆಸರ್‌ ಬಲವನ್ನು ಪಡೆದುಕೊಂಡಿದ್ದು, ವಿಂಡೋಸ್‌ 10 ನಲ್ಲಿ ಕಾರ್ಯನಿರ್ವಹಿಸಲಿದೆ. ಈ ಲ್ಯಾಪ್‌ಟಾಪ್‌ 8GB RAM ಮತ್ತು 1TB HDD ಸ್ಟೋರೇಜ್‌ ಹಾಗೂ ಎನ್‌ವಿಡಿಯಾ ಜಿಪೋರ್ಸ್‌ MX150 ಗ್ರಾಫಿಕ್ಸ್ ಅನ್ನು ಒಳಗೊಂಡಿದೆ. ಪ್ರಸ್ತುತ ಈ ಲ್ಯಾಪ್‌ಟಾಪ್‌ 49,990ರೂ.ಬೆಲೆಯಲ್ಲಿ ಲಭ್ಯವಾಗಲಿದೆ.

ಹೆಚ್‌ಪಿ 15-DA0070TX

ಹೆಚ್‌ಪಿ 15-DA0070TX

ಹೆಚ್‌ಪಿ 15-DA0070TX ಲ್ಯಾಪ್‌ಟಾಪ್‌ 50,000ರೂ.ಒಳಗೆ ಲಭ್ಯವಾಗುವ ಆಯ್ಕೆಗಳಲ್ಲಿ ಅತ್ಯುತ್ತಮ ಆಯ್ಕೆಯಾಗಿದೆ. ಇದು 15.60 ಇಂಚಿನ ಡಿಸ್‌ಪ್ಲೇ ಹೊಂದಿರುವ ವಿಂಡೋಸ್‌ 10 ಲ್ಯಾಪ್‌ಟಾಪ್ ಆಗಿದೆ. ಈ ಲ್ಯಾಪ್‌ಟಾಪ್‌ ಇಂಟೆಲ್‌ ಕೋರ್‌ i3 ಪ್ರೊಸೆಸರ್‌ ಅನ್ನು ಪಡದುಕೊಂಡಿದೆ. ಇದು 8GB RAM ಮತ್ತು 1TB HDD ಇಂಟರ್‌ ಸ್ಟೋರೇಜ್‌ ಅನ್ನು ಹೊಂದಿದ್ದು, 13 ಗಂಟೆಗಳ ವರೆಗಿನ ಬ್ಯಾಟರಿ ಬ್ಯಾಕ್‌ಅಪ್‌ ಕೂಡ ನೀಡಲಿದೆ. ಇನ್ನು ಈ ಲ್ಯಾಪ್‌ಟಾಪ್‌ ಪ್ರಸ್ತುತ 49,279ರೂ.ಬೆಲೆಯಲ್ಲಿ ಲಭ್ಯವಾಗಲಿದೆ.

ಡೆಲ್‌ 15 (2021) ಲ್ಯಾಪ್‌ಟಾಪ್ i3-1115G4

ಡೆಲ್‌ 15 (2021) ಲ್ಯಾಪ್‌ಟಾಪ್ i3-1115G4

ಡೆಲ್‌ ಕಂಪೆನಿಯ ಡೆಲ್‌ 15 i3-1115G4 (2021) ಲ್ಯಾಪ್‌ಟಾಪ್‌ 50,000ರೂ, ಒಳಗೆ ಖರೀದಿಸಬಹುದಾದ ಲ್ಯಾಪ್‌ಟಾಪ್‌ಗಳಲ್ಲಿ ಉತ್ತಮ ಆಯ್ಕೆಯಾಗಿದೆ. ಈ ಲ್ಯಾಪ್‌ಟಾಪ್ 15.6 ಇಂಚಿನ ಡಿಸ್‌ಪ್ಲೇ ಹೊಂದಿದೆ. ಇದು 8GB RAM ಮತ್ತು 256GB SSD ಸ್ಟೋರೇಜ್‌ ಹೊಂದಿದೆ. ಈ ಲ್ಯಾಪ್‌ಟಾಪ್‌ ಇಂಟೆಲ್‌ ಯುಎಚ್‌ಡಿ ಗ್ರಾಪಿಕ್ಸ್‌ ಅನ್ನು ಹೊಂದಿದೆ. ಪ್ರಸ್ತುತ ಇದರ ಬೆಲೆ 41,250ರೂ.ಆಗಿದೆ.

ಹೆಚ್‌ಪಿ ಕ್ರೋಮ್‌ಬುಕ್‌ 14 ಇಂಚು

ಹೆಚ್‌ಪಿ ಕ್ರೋಮ್‌ಬುಕ್‌ 14 ಇಂಚು

ಈ ಲ್ಯಾಪ್‌ಟಾಪ್ ಟಚ್‌ ಸ್ಕ್ರೀನ್‌ ಲ್ಯಾಪ್‌ಟಾಪ್‌ ಆಗಿದ್ದು ನಿಮಗೆ ಉತ್ತಮ ಅನುಭವ ನೀಡಲಿದೆ. ಇದು 14 ಇಂಚಿನ ಡಿಸ್‌ಪ್ಲೇ ಹೊಂದಿದ್ದು, ಹಗುರವಾದ ಗಾತ್ರವನ್ನು ಹೊಂದಿದೆ. ಈ ಲ್ಯಾಪ್‌ಟಾಪ್ ಇಂಟೆಲ್ ಸೆಲೆರಾನ್ N4020 ಪ್ರೊಸೆಸರ್‌ ಬಲವನ್ನು ಪಡೆದಿದೆ. ಜೊತೆಗೆ 4 GB RAM ಮತ್ತು 4 MB ಸ್ಟೋರೇಜ್‌ ಹೊಂದಿದ್ದು, ಸುಲಭವಾಗಿ ಎಲ್ಲಿಗೆ ಹೋದರೂ ಕ್ಯಾರಿ ಮಾಡಬಹುದಾಗಿದೆ. ಪ್ರಸ್ತುತ ಈ ಲ್ಯಾಪ್‌ಟಾಪ್‌ ನಿಮಗೆ 23,490ರೂ ಬೆಲೆಯಲ್ಲಿ ಲಭ್ಯವಾಗಲಿದೆ.

ಆಸುಸ್‌ ವಿವೋಬುಕ್‌ 14 (2020) ಫುಲ್‌ ಹೆಚ್‌ಡಿ ಲ್ಯಾಪ್‌ಟಾಪ್

ಆಸುಸ್‌ ವಿವೋಬುಕ್‌ 14 (2020) ಫುಲ್‌ ಹೆಚ್‌ಡಿ ಲ್ಯಾಪ್‌ಟಾಪ್

ಆಸುಸ್‌ ಕಂಪೆನಿ ಜನಪ್ರಿಯ ಲ್ಯಾಪ್‌ಟಾಪ್‌ ಬ್ರ್ಯಾಂಡ್‌ಗಳಲ್ಲಿ ಒಂದಾಗಿದೆ. ಇದರ ಆಸುಸ್‌ ವಿವೋಬುಕ್‌ 14 (2020) ಫುಲ್‌ ಹೆಚ್‌ಡಿ ಲ್ಯಾಪ್‌ಟಾಪ್ 50,000ರೂ ಒಳಗೆ ದೊರೆಯುವ ಲ್ಯಾಪ್‌ಟಾಪ್‌ ಎನಿಸಿಕೊಂಡಿದೆ. ಈ ಲ್ಯಾಪ್‌ಟಾಪ್‌ 14 ಇಂಚಿನ ಫುಲ್‌ಹೆಚ್‌ಡಿ ಡಿಸ್‌ಪ್ಲೇ ಹೊಂದಿದ್ದು, ಇದನ್ನು ಸುಲಭವಾಗಿ ಕ್ಯಾರಿ ಮಾಡಬಹುದಾಗಿದೆ. ಇದು 4GB RAM ಮತ್ತು 1TB HDD ಸ್ಟೋರೇಜ್‌ ಅನ್ನು ಹೊಂದಿದ್ದು, 6 ಗಂಟೆಗಳ ಬ್ಯಾಟರಿ ಅವಧಿಯನ್ನು ನೀಡಲಿದೆ. ಪ್ರಸ್ತುತ ಈ ಲ್ಯಾಪ್‌ಟಾಪ್‌ 30,990ರೂ.ಬೆಲೆಯಲ್ಲಿ ದೊರೆಯಲಿದೆ.

HP 15s ಲ್ಯಾಪ್‌ಟಾಪ್

HP 15s ಲ್ಯಾಪ್‌ಟಾಪ್

ಬ್ಯುಸಿನೆಸ್‌ ಲ್ಯಾಪ್‌ಟಾಪ್‌ ಅನ್ನು ಖರೀದಿಸಲು ಬಯಸಿದರೆ ಈ ಲ್ಯಾಪ್‌ಟಾಪ್‌ ನಿಮಗೆ ಸೂಕ್ತ ಎನಿಸಲಿದೆ. ಈ ಲ್ಯಾಪ್‌ಟಾಪ್‌ ನಿಮಗೆ 50,000ರೂ ಬೆಲೆ ಒಳಗೆ ಲಭ್ಯವಾಗಲಿದೆ. ಇದು 15.6 ಇಂಚಿನ ಡಿಸ್‌ಪ್ಲೇ ಹೊಂದಿದ್ದು, ಮಲ್ಟಿಮೀಡಿಯಾ ಮತ್ತು ವಿದ್ಯಾರ್ಥಿಗಳಿಗೆ ಸೂಕ್ತವಾಗಿದೆ. ಇದಲ್ಲದೆ ಈ ಲ್ಯಾಪ್‌ಟಾಪ್ ಆಂಟಿ-ಗ್ಲೇರ್‌ ಸ್ಕ್ರೀನ್‌ ಹೊಂದಿರುವುದರಿಂದ, ಹೆಚ್ಚು ಕಾಲ ಬಳಸಿದರೂ ನಿಮ್ಮ ಕಣ್ಣುಗಳ ಮೇಲೆ ಯಾವುದೇ ರೀತಿಯ ಒತ್ತಡ ಬೀಳುವುದಿಲ್ಲ. ಪ್ರಸ್ತುತ ಈ ಲ್ಯಾಪ್‌ಟಾಪ್‌ 45,800ರೂ. ಬೆಲೆಯಲ್ಲಿ ಲಭ್ಯವಾಗಲಿದೆ.

ಲೆನೊವೊ V15 ಲ್ಯಾಪ್‌ಟಾಪ್‌

ಲೆನೊವೊ V15 ಲ್ಯಾಪ್‌ಟಾಪ್‌

ಲೆನೊವೊ V15 ಲ್ಯಾಪ್‌ಟಾಪ್‌ 50,000ರೂ ಒಳಗೆ ಲಭ್ಯವಾಗುವ ಅತ್ಯುತ್ತಮ ಆಯ್ಕೆಗಳಲ್ಲಿ ಒಂದಾಗಿದೆ. ಈ ಲ್ಯಾಪ್‌ಟಾಪ್‌ 15.6 ಇಂಚಿನ ಡಿಸ್‌ಪ್ಲೇ ಹೊಂದಿದೆ. ಇದು ಇಂಟೆಲ್‌ ಕೋರ್‌ i5 ಪ್ರೊಸೆಸರ್‌ ಹೊಂದಿದೆ. ಜೊತೆಗೆ 4GB RAM ಮತ್ತು 256GB SSD ಸ್ಟೋರೇಜ್‌ ಅನ್ನು ಒಳಗೊಂಡಿದೆ. ಇನ್ನು ಈ ಲ್ಯಾಪ್‌ಟಾಪ್ ಹೆಚ್ಚು ಪೋರ್ಟಬಲ್ ಆಗಿದ್ದು, ಕೆಲಸವನ್ನು ಸುಲಭವಾಗಿ ಪೂರೈಸುತ್ತದೆ. ಪ್ರಸ್ತುತ ಈ ಲ್ಯಾಪ್‌ಟಾಪ್‌ ಅನ್ನು ನೀವು 33,990ರೂ.ಬೆಲೆಯಲ್ಲಿ ಖರೀದಿಸಬಹುದಾಗಿದೆ.

Best Mobiles in India

English summary
While shopping for a laptop under 50000, you can choose the ideal pick depending on the screen size, RAM, storage capacity and more.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X