ಮ್ಯೂಸಿಕ್‌ ಪ್ರಿಯರನ್ನು ರಂಜಿಸುವ ಅತ್ಯುತ್ತಮ ಮ್ಯೂಸಿಕ್‌ ಅಪ್ಲಿಕೇಶನ್‌ಗಳು ಇಲ್ಲಿವೆ!

|

ರೇಡಿಯೋಗಳನ್ನು ಮನೆಯಲ್ಲಿ ನೇತು ಹಾಕಿ ಮನೆ ಮಂದಿಯೆಲ್ಲಾ ಹಾಡುಗಳನ್ನು ಕೇಳುವ ಕಾಲವೊಂದಿತ್ತು. ಅಂದಿನ ದಿನಗಳಲ್ಲಿ ರೇಡಿಯೋ ಮೂಲಕ ಹಾಡುಗಳನ್ನು ಆಲಿಸುವುದಕ್ಕಾಗಿಯೇ ಒಂದಿಷ್ಟು ಸಮಯವನ್ನು ಎಲ್ಲರೂ ಮೀಸಲಿಡುತ್ತಿದ್ದರೂ. ನಂತರದ ದಿನಗಳಲ್ಲಿ ಮ್ಯೂಸಿಕ್‌ ಕ್ಯಾಸೆಟ್‌ಗಳ ಮೂಲಕ ಹಾಡನ್ನು ಆಲಿಸುವುದು ಸಾಮಾನ್ಯವಾಗಿತ್ತು. ಆದರೆ ಇಂದು ಕಾಲ ಬದಲಾಗಿದೆ, ಹಾಡನ್ನು ಕೇಳುವುದಕ್ಕೆ ಯಾವುದೇ ಕ್ಯಾಸೆಟ್‌ ಹಾಗೂ ಚಿತ್ರಮಂಜರಿ ಕಾರ್ಯಕ್ರಮದ ಅಗತ್ಯವಿಲ್ಲ. ನಿಮ್ಮ ನೆಚ್ಚಿನ ಹಾಡುಗಳನ್ನು ಮ್ಯೂಸಿಕ್‌ ಅಪ್ಲಿಕೇಶನ್‌ಗಳಲ್ಲಿಯೇ ಆಲಿಸಬಹುದಾಗಿದೆ.

ಅಪ್ಲಿಕೇಶನ್‌ಗಳ

ಹೌದು, ಜನಪ್ರಿಯ ಅಪ್ಲಿಕೇಶನ್‌ಗಳ ಸಾಲಿನಲ್ಲಿ ಮ್ಯೂಸಿಕ್‌ ಅಪ್ಲಿಕೇಶನ್‌ಗಳು ಕೂಡ ಸೇರಿವೆ. ಮ್ಯೂಸಿಕ್‌ ಅಪ್ಲಿಕೇಶನ್‌ಗಳು ಲಕ್ಷಾಂತರ ಹಾಡುಗಳ ಲೈಬ್ರೆರಿಯನ್ನು ಹೊಂದಿರುವುದರಿಂದ ನಿಮಗಿಷ್ಟವಾದ ಯಾವ ಹಾಡನ್ನು ಬೇಕಾದರೂ ಕೇಳಬಹುದಾಗಿದೆ. ಇನ್ನು ಈ ಮ್ಯೂಸಿಕ್‌ ಅಪ್ಲಿಕೇಶನ್‌ಗಳಲ್ಲಿ ಕೆಲವು ಅಪ್ಲಿಕೇಶನ್‌ಗಳು ಉಚಿತವಾಗಿ ಮ್ಯೂಸಿಕ್‌ ಸ್ಟ್ರೀಮ್‌ ಮಾಡುವುದಕ್ಕೆ ಅವಕಾಶ ನೀಡುತ್ತಿವೆ. ಹಾಗಾದ್ರೆ ನೀವು ಕೂಡ ಮ್ಯೂಸಿಕ್‌ ಅನ್ನು ಆಲಿಸಬೇಕಾದರೆ ಯಾವ ಮ್ಯೂಸಿಕ್‌ ಅಪ್ಲಿಕೇಶನ್‌ಗಳು ಬೆಸ್ಟ್‌ ಅನ್ನೊದನ್ನ ಈ ಲೇಖನದಲ್ಲಿ ತಿಳಿಯೋಣ ಬನ್ನಿರಿ.

ಸ್ಪಾಟಿಫೈ

ಸ್ಪಾಟಿಫೈ

ಪ್ರಸ್ತುತ ದಿನಗಳಲ್ಲಿ ಮ್ಯೂಸಿಕ್‌ ಪ್ರಿಯರನ್ನು ಅತಿ ಹೆಚ್ಚು ಗಮನಸೆಳೆದಿರುವ ಅಪ್ಲಿಕೇಶನ್‌ ಸ್ಪಾಟಿಫೈ ಆಗಿದೆ. ಸ್ಪಾಟಿಫೈ ಅಪ್ಲಿಕೇಶನ್‌ ಉಚಿತ ಸ್ಟ್ರೀಮಿಂಗ್‌ ಅನ್ನು ಕೂಡ ನೀಡಲಿದೆ. ಆದರೆ ನೀವು ಉಚಿತ ಸ್ಟ್ರೀಮಿಂಗ್‌ ಅನುಭವ ಪಡೆಯುವಾಗ ಜಾಹಿರಾತುಗಳ ಹಾವಳಿಯನ್ನು ಕೂಡ ಸಹಿಸಿಕೊಳ್ಳಬೇಕಾಗುತ್ತದೆ. ಆದರೆ ಜಾಹಿರಾತು ಮುಕ್ತ ಮ್ಯೂಸಿಕ್‌ ಸ್ಟ್ರೀಮಿಂಗ್‌ ಪಡೆಯಬೇಕಾದರೆ ಪಾವತಿಸಿದ ಚಂದಾದಾರಿಕೆಯನ್ನು ಪಡೆದುಕೊಳ್ಳಬೇಕಾಗುತ್ತದೆ. ಇನ್ನು ಸ್ಪಾಟಿಫೈ ಮ್ಯೂಸಿಕ್‌ ಅಪ್ಲಿಕೇಶನ್‌ ಸುಮಾರು 90 ಮಿಲಿಯನ್‌ಗೂ ಅಧಿಕ ಹಾಡುಗಳ ಸಂಗ್ರಹವನ್ನು ಹೊಂದಿದೆ. ಇದರಲ್ಲಿ ಆಫ್‌ಲೈನ್‌ ಆಲಿಸುವಿಕೆ, ಪಾಡ್‌ಕ್ಯಾಸ್ಟ್‌ಗಳು ಹಾಗೂ ಪ್ರತಿನಿತ್ಯ ಹೊಸ ಹಾಡುಗಳನ್ನು ನೀಡಲಿದೆ.

ಜಿಯೋಸಾವನ್ (JioSaavn)

ಜಿಯೋಸಾವನ್ (JioSaavn)

ಜಿಯೋ ಸಾವನ್‌ ಅಪ್ಲಿಕೇಶನ್‌ ಕೂಡ ಪ್ರಸಿದ್ದ ಮ್ಯೂಸಿಕ್‌ ಸ್ಟ್ರೀಮಿಂಗ್‌ ಅಪ್ಲಿಕೇಶನ್‌ ಆಗಿದೆ. ಜಿಯೋ ಸಾವನ್‌ ಎಂದರೆ ಹಿಂದಿಯಲ್ಲಿ ಮಳೆಗಾಲ ಎನ್ನುವ ಅರ್ಥ ಬರುತ್ತದೆ. ಮಳೆಗೂ ಸಂಗೀತಕ್ಕೂ ಹೋಲಿಕೆ ಇರುವುದರಿಂದ ಈ ಹೆಸರು ಸಾಕಷ್ಟು ಗಮನಸೆಳೆದಿದೆ. ಇನ್ನು ಈ ಅಪ್ಲಿಕೇಶನ್‌ ಇಂಗ್ಲೀಷ್, ಹಿಂದಿ ಮತ್ತು ಇತರ ಭಾರತೀಯ ಭಾಷೆಗಳಲ್ಲಿ 45 ಮಿಲಿಯನ್ ಹಾಡುಗಳ ಸಂಗ್ರಹಗಳನ್ನು ಹೊಂದಿದೆ. ಈ ಅಪ್ಲಿಕೇಶನ್‌ನಲ್ಲಿ ಪ್ರೀಮಿಯಂ ಪ್ಲಾನ್‌ಗಳು ಕೂಡ ಲಭ್ಯವಿದೆ. ಈ ಪ್ಲಾನ್‌ಗಳು ತಿಂಗಳಿಗೆ 99ರೂ.ಬೆಲೆಯಲ್ಲಿ ಪ್ರಾರಂಭವಾಗುತ್ತವೆ. ಇದಲ್ಲದೆ ಈ ಅಪ್ಲಿಕೇಶನ್‌ನಲ್ಲಿ ನೀವು ಪ್ರಾಯೋಗಿಕವಾಗಿ 90 ದಿನಗಳವರೆಗೆ ಉಚಿತವಾಗಿ ಮ್ಯೂಸಿಕ್‌ ಸ್ಟ್ರೀಮಿಂಗ್‌ ಪಡೆಯಬಹುದು.

ಗಾನ

ಗಾನ

ಇಂದಿನ ಯುವ ಜನತೆಯನ್ನು ಹೆಚ್ಚು ಸೆಳೆದಿರುವ ಮ್ಯೂಸಿಕ್‌ ಅಪ್ಲಿಕೇಶನ್‌ಗಳಲ್ಲಿ ಗಾನ.ಕಾಮ್‌ ಕೂಡ ಸೇರಿದೆ. ಗಾನ ಅಪ್ಲಿಕೇಶನ್‌ ಭಾರತದಲ್ಲಿನ 21 ಭಾಷೆಯ 45 ಮಿಲಿಯನ್‌ಗೂ ಅಧಿಕ ಹಾಡುಗಳ ಸಂಗ್ರಹವನ್ನು ಹೊಂದಿದೆ. ಇನ್ನು ಗಾನ.ಕಾಮ್‌ ತನ್ನ ಬಳಕೆದಾರರಿಗೆ ತಮ್ಮದೇ ಆದ ಪಬ್ಲಿಕ್‌ ಮ್ಯೂಸಿಕ್‌ ಪ್ಲೇ ಲಿಸ್ಟ್‌ ಅನ್ನು ಕ್ರಿಯೆಟ್‌ ಮಾಡುವುದಕ್ಕೆ ಅವಕಾಶ ಕೂಡ ನೀಡಲಿದೆ. ಇನ್ನು ಹೆಚ್ಚಿನ ಮ್ಯೂಸಿಕ್‌ ಅನುಭವವನ್ನು ಪಡೆಯುವುದಕ್ಕೆ ನೀವು ಪ್ರೀಮಿಯಂ ಪ್ಲಾನ್‌ಗಳನ್ನು ಆಯ್ಕೆ ಮಾಡಬಹುದು. ಈ ಪ್ಲಾನ್‌ಗಳಲ್ಲಿ ನೀವು ಹೆಚ್‌ಡಿ ಮ್ಯೂಸಿಕ್‌ ಸ್ಟ್ರೀಮಿಂಗ್‌, ಜಾಹಿರಾತು ಮುಕ್ತ ಮ್ಯೂಸಿಕ್‌ ಅನುಭವ ಹಾಗೂ ಅನಿಯಮಿತ ಹಾಡುಗಳ ಆಫ್‌ಲೈನ್ ಡೌನ್‌ಲೋಡ್ ಅನ್ನು ಕಾಣಬಹುದು.

ಯುಟ್ಯೂಬ್‌ ಮ್ಯೂಸಿಕ್‌

ಯುಟ್ಯೂಬ್‌ ಮ್ಯೂಸಿಕ್‌

ಭಾರತದಲ್ಲಿ ಹೆಚ್ಚಿನ ಜನರನ್ನು ಆಕರ್ಷಿಸಿರುವ ಮ್ಯೂಸಿಕ್‌ ಸ್ಟ್ರೀಮಿಂಗ್‌ ಅಪ್ಲಿಕೇಶನ್‌ಗಳಲ್ಲಿ ಯುಟ್ಯೂಬ್‌ ಮ್ಯೂಸಿಕ್‌ ಕೂಡ ಒಂದಾಗಿದೆ. ಯುಟ್ಯೂಬ್ ಮ್ಯೂಸಿಕ್ ಅಪ್ಲಿಕೇಶನ್‌ ಪೇಯ್ಡ್ ಪ್ಲಾನ್ ಕೂಡ ಹೊಂದಿದೆ. ಇದರಲ್ಲಿ ಜಾಹೀರಾತು ಮುಕ್ತ ಮ್ಯೂಸಿಕ್‌ ಸ್ಟ್ರೀಮಿಂಗ್, ಸ್ಕಿಪ್ಪಿಂಗ್ ಮತ್ತು ಸ್ಕ್ರಬ್ಬಿಂಗ್, ಆಫ್‌ಲೈನ್ ಮತ್ತು ಬ್ಯಾಕ್‌ಗ್ರೌಂಡ್‌ ಪ್ಲೇಬ್ಯಾಕ್ ಅನ್ನು ನೀಡಲಿದೆ. ಇನ್ನು ಯುಟ್ಯೂಬ್‌ನಲ್ಲಿ ವೀಡಿಯೋ ಮತ್ತು ಆಡಿಯೋ ಎರಡನ್ನು ಸ್ಟ್ರೀಮಿಂಗ್‌ ಮಾಡುವುದಕ್ಕೆ ಅವಕಾಶ ಇರುವುದರಿಂದ ಯುಟ್ಯೂಬ್‌ ಮ್ಯೂಸಿಕ್‌ ಸಾಕಷ್ಟು ಪ್ರಸಿದ್ಧಿ ಪಡೆದುಕೊಂಡಿದೆ. ಜೊತೆಗೆ ಬಳಕೆದಾರರ ಮ್ಯೂಸಿಕ್‌ ಸ್ಟ್ರೀಮಿಂಗ್ ಹಿಸ್ಟರಿಯನ್ನು ಆಧರಿಸಿ ಅತ್ಯುತ್ತಮ ಹಾಡುಗಳನ್ನು ಶಿಫಾರಸು ಮಾಡುವಂತಹ ಅಲ್ಗಾರಿದಮ್ ಅನ್ನು ಒಳಗೊಂಡಿದೆ.

ಅಮೆಜಾನ್ ಪ್ರೈಮ್ ಮ್ಯೂಸಿಕ್

ಅಮೆಜಾನ್ ಪ್ರೈಮ್ ಮ್ಯೂಸಿಕ್

ನೀವು ಮ್ಯೂಸಿಕ್‌ ಅನ್ನು ಸ್ಟ್ರೀಮಿಂಗ್‌ ಮಾಡುವುದಕ್ಕೆ ಬಳಸಬಹುದಾದ ಅತ್ಯುತ್ತಮ ಅಪ್ಲಿಕೇಶನ್‌ಗಳಲ್ಲಿ ಅಮೆಜಾನ್‌ ಪ್ರೈಮ್‌ ಮ್ಯೂಸಿಕ್‌ ಕೂಡ ಸೇರಿದೆ. ಅಮೆಜಾನ್‌ ಪ್ರೈಮ್‌ ನಲ್ಲಿ ಎಂಟ್ರಿ ಲೆವೆಲ್‌ ಮ್ಯೂಸಿಕ್‌ ಸ್ಟ್ರೀಮಿಂಗ್‌ ಸೇವೆಯನ್ನು ಪಡೆದುಕೊಳ್ಳಬಹುದು. ಅಲ್ಲದೆ ಅಮೆಜಾನ್‌ ಪ್ರೈಮ್‌ ಚಂದಾದಾರಿಕೆಯನ್ನು ಹೊಂದಿದ್ದರೆ ಅಮೆಜಾನ್‌ ಮ್ಯೂಸಿಕ್‌ಗೆ ಎಂಟ್ರಿ ಪಡೆಯಬಹುದಾಗಿದೆ. ಇದರಲ್ಲಿ ನೀವು 2 ಮಿಲಿಯನ್‌ಗೂ ಅಧಿಕ ಹಾಡುಗಳನ್ನು ಆಲಿಸುವುದಕ್ಕೆ ಅವಕಾಶವಿದೆ. ಇದಲ್ಲದೆ ನೀವು ಅನ್‌ಲಿಮಿಟೆಡ್‌ ಮ್ಯೂಸಿಕ್‌ ಅನುಭವ ಪಡೆಯುವುದಕ್ಕೆ ಅಮೆಜಾನ್‌ ಮ್ಯೂಸಿಕ್‌ ಚಂದಾದಾರಿಕೆಯನ್ನು ಖರೀದಿಸಬಹುದಾಗಿದೆ.

ವಿಂಕ್ ಮ್ಯೂಸಿಕ್‌

ವಿಂಕ್ ಮ್ಯೂಸಿಕ್‌

ಏರ್‌ಟೆಲ್‌ ಒಡೆತನದ ವಿಂಕ್‌ ಮ್ಯೂಸಿಕ್‌ ಅಪ್ಲಿಕೇಶನ್‌ ಸಾಕಷ್ಟು ಕಾರಣಗಳಿಂದಾಗಿ ಅತ್ಯುತ್ತಮ ಮ್ಯೂಸಿಕ್‌ ಅಪ್ಲಿಕೇಶನ್‌ ಎನಿಸಿಕೊಂಡಿದೆ. ಈ ಅಪ್ಲಿಕೇಶನ್‌ನಲ್ಲಿ ನೀವು ಮ್ಯೂಸಿಕ್‌ ಅನ್ನು ಉಚಿತವಾಗಿ ಡೌನ್‌ಲೋಡ್ ಮಾಡಬಹುದು. ಆದರೆ ಇದು ಏರ್‌ಟೆಲ್ ಬಳಕೆದಾರರಿಗೆ ಮಾತ್ರ ಲಭ್ಯವಿದೆ. ವಿಂಕ್ ಮ್ಯೂಸಿಕ್‌ ಎಲ್ಲಾ ಪ್ರಮುಖ ಭಾರತೀಯ ಭಾಷೆಗಳಲ್ಲಿನ ಹಾಡುಗಳ ಸಂಗ್ರಹವನ್ನು ಹೊಂದಿದೆ. ಇದರ ಪ್ರೀಮಿಯಂ ಪ್ಲಾನ್‌ಗಳು ತಿಂಗಳಿಗೆ 60ರೂ.ಗಳಿಂದ ಪ್ರಾರಂಭವಾಗುತ್ತವೆ. ಇದು 1 ತಿಂಗಳ ಉಚಿತ ಪ್ರಯೋಗ ಅವಧಿಯನ್ನು ನೀಡಲಿದೆ.

ಆಪಲ್ ಮ್ಯೂಸಿಕ್

ಆಪಲ್ ಮ್ಯೂಸಿಕ್

ಆಪಲ್‌ ಕಂಪೆನಿಯ ಆಫಲ್‌ ಮ್ಯೂಸಿಕ್‌ ಐಫೋನ್‌ ಭಲಕೆದಾರರ ನೆಚ್ಚಿನ ಮ್ಯೂಸಿಕ್‌ ಅಪ್ಲಿಕೇಶನ್‌ ಆಗಿದೆ. ಪ್ರಾರಂಭದಲ್ಲಿ ಮ್ಯೂಸಿಕ್‌ ಅಪ್ಲಿಕೇಶನ್‌ ಆಗಿದ್ದ ಈ ಅಪ್ಲಿಕೇಶನ್‌ನಲ್ಲಿ ನೀವು ಇದೀಗ ವೀಡಿಯೊ ಸ್ಟ್ರೀಮಿಂಗ್ ಕೂಡ ಮಾಡಬಹುದು. ಪ್ರಸ್ತುತ ಈ ಸೇವೆಯು 100 ದೇಶಗಳಲ್ಲಿ ಲಭ್ಯವಿದೆ. ಆಪಲ್‌ ಮ್ಯೂಸಿಕ್‌ನಲ್ಲಿ 50 ಮಿಲಿಯನ್‌ಗೂ ಅಧಿಕ ಹಾಡುಗಳ ಸಂಗ್ರಹವನ್ನು ಕಾಣಬಹುದಾಗಿದೆ. ಅಲ್ಲದೆ ಈ ಅಪ್ಲಿಕೇಶನ್‌ ಅನ್ನು ಆಪಲ್‌ ಕಾರ್ ಪ್ಲೇನಲ್ಲಿ ಕೂಡ ಸ್ಟ್ರೀಮ್ ಮಾಡಬಹುದು. ಇನ್ನು ಆಪಲ್‌ ಮ್ಯೂಸಿಕ್‌ ಕೂಡ ಪ್ರೀಮಿಯಂ ಪ್ಲಾನ್‌ಗಳನ್ನು ಹೊಂದಿದ್ದು, ತಿಂಗಳಿಗೆ 49ರೂ.ಬೆಲೆಯಿಂದ ಪ್ರಾರಂಭವಾಗುತ್ತದೆ. ಇದಲ್ಲದೆ ಆಪಲ್‌ ಮ್ಯೂಸಿಕ್‌ ಉಚಿತವಾಗಿ 3 ತಿಂಗಳ ಪ್ರಾಯೋಗಿಕ ಅವಧಿಯನ್ನು ಕೂಡ ನೀಡಲಿದೆ.

Most Read Articles
Best Mobiles in India

English summary
Music has always been an integral part of every Indian’s daily lifestyle.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X