ಬಜೆಟ್‌ ಬೆಲೆಯಲ್ಲಿ ಲಭ್ಯವಾಗುವ ಅತ್ಯುತ್ತಮ ಸ್ಮಾರ್ಟ್‌ ಸ್ಪೀಕರ್‌ಗಳು!

|

ಪ್ರಸ್ತುತ ದಿನಗಳಲ್ಲಿ ಸ್ಮಾರ್ಟ್‌ ಸ್ಪೀಕರ್‌ಗಳು ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿವೆ. ಸ್ಮಾರ್ಟ್‌ಹೋಮ್‌ಗಳ ಪರಿಕಲ್ಪನೆ ಹೆಚ್ಚಾದಂತೆ ಸ್ಮಾರ್ಟ್‌ಸ್ಪೀಕರ್‌ಗಳ ಬೇಡಿಕೆ ಕೂಡ ಹೆಚ್ಚಾಗಿದೆ. ಅಲೆಕ್ಸಾ, ಗೂಗಲ್ ಅಸಿಸ್ಟೆಂಟ್ ಮತ್ತು ಇತರ ಡಿಜಿಟಲ್ ವಾಯ್ಸ್‌ ಅಸಿಸ್ಟೆಂಟ್‌ಗಳು ಇಂದು ಮುಂಚೂಣಿಯಲ್ಲಿ ಗುರುತಿಸಕೊಂಡಿವೆ. ಇವುಗಳ ಮೂಲಕ ಹ್ಯಾಡ್ಸ್‌ ಫ್ರೀ ಕೆಲಸಗಳನ್ನು ಮಾಡಬಹುದಾಗಿದೆ. ಇದರಿಂದ ನೀವು ಏನೇ ಹೇಳಿದರೂ ಕೂಡ ಸ್ಮಾರ್ಟ್‌ ಸ್ಪೀಕರ್‌ಗಳು ರಿಯಾಕ್ಟ್‌ ಮಾಡಲಿವೆ. ಗೂಗಲ್‌ನಲ್ಲಿ ನಿಮ್ಮ ಪ್ರಶ್ನೆಯನ್ನು ಟೈಪ್ ಮಾಡುವುದಕ್ಕಿಂತ ಅಲೆಕ್ಸಾ ಅಥವಾ ಗೂಗಲ್ ಅಸಿಸ್ಟೆಂಟ್‌ನಲ್ಲಿ ಕೇವಲ ಪ್ರಶ್ನೆ ಕೇಳಿದರೆ ಸಾಕು ಉತ್ತರ ಸಿಗಲಿದೆ.

ಸ್ಮಾರ್ಟ್ ಹೋಮ್

ಹೌದು, ನಿಮ್ಮ ಮನೆಯನ್ನು ಸ್ಮಾರ್ಟ್ ಹೋಮ್ ಆಗಿ ಪರಿವರ್ತಿಸಲು ನೀವು ಬಯಸಿದರೆ, ನೀವು ಸ್ಮಾರ್ಟ್ ಸ್ಪೀಕರ್‌ಗಳನ್ನು ಬಳಸಬಹುದು. ಸ್ಮಾರ್ಟ್‌ ಸ್ಪೀಕರ್‌ಗಳು ನಿಮ್ಮ ಅಸಿಸ್ಟೆಂಟ್‌ಗಳಾಗಿ ಕಾರ್ಯನಿರ್ವಹಿಸಲಿವೆ. ನೀವು ಮ್ಯೂಸಿಕ್‌ ಪ್ಲೇ ಮಾಡು ಎಂದರೆ ಪ್ಲೇ ಮಾಡಲಿವೆ. ಮ್ಯೂಸಿಕ್‌ ಆಫ್‌ ಮಾಡು ಎಂದರೆ ಆಫ್‌ ಮಾಡಲಿವೆ. ಇದೇ ಕಾರಣಕ್ಕೆ ಕಳೆದ ಕೆಲವು ವರ್ಷಗಳಿಂದ ಸ್ಮಾರ್ಟ್ ಸ್ಪೀಕರ್‌ಗಳು ಭಾರತದಲ್ಲಿ ಜನಪ್ರಿಯವಾಗಿವೆ. ಇನ್ನು ಈ ಸ್ಮಾರ್ಟ್‌ ಸ್ಪೀಕರ್‌ಗಳನ್ನು ನೀವು ಕೈಗೆಟುಕುವ ಬೆಲೆಯಲ್ಲಿ ಕೂಡ ಖರೀದಿಸಬಹುದು. ಹಾಗಾದ್ರೆ 5,000 ರೂ. ಅಡಿಯಲ್ಲಿ ಖರೀದಿಸಬಹುದಾದ ಅತ್ಯುತ್ತಮವಾದ ಸ್ಮಾರ್ಟ್‌ಸ್ಪೀಕರ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಅಮೆಜಾನ್‌ ಎಕೋ ಡಾಟ್ (4th Gen)

ಅಮೆಜಾನ್‌ ಎಕೋ ಡಾಟ್ (4th Gen)

ಅಮೆಜಾನ್‌ ಎಕೋ ಡಾಟ್‌ ಸ್ಮಾರ್ಟ್‌ ಸ್ಪೀಕರ್‌ ಎಂಟ್ರಿ ಲೆವೆಲ್ ಸ್ಪೀಕರ್ ಆಗಿದೆ. ಇದು ಅಮೆಜಾನ್‌ ಅಲೆಕ್ಸಾವನ್ನು ಬಳಸುವುದಕ್ಕೆ ಅನುವು ಮಾಡಿಕೊಡಲಿದೆ. ಇನ್ನು ಅಮೆಜಾನ್‌ ಎಕೋ ಡಾಟ್ 4 ನೇ ಜನ್ ವಿನ್ಯಾಸವು ಅದರ ಹಿಂದಿನ ಕೌಂಟರ್ಪಾರ್ಟ್ಸ್ಗಿಂತ ಸಂಪೂರ್ಣವಾಗಿ ಭಿನ್ನವಾಗಿದೆ. ಈ ಸ್ಮಾರ್ಟ್ ಸ್ಪೀಕರ್ ಗ್ಲೋಬ್‌ನಂತಹ ವಿನ್ಯಾಸದಲ್ಲಿ ಬರುತ್ತದೆ. ಪ್ರಸ್ತುತ ಅಮೆಜಾನ್‌ ಎಕೋ ಡಾಟ್‌ 4th Gen ಬೆಲೆ 3,999ರೂ.ಆಗಿದ್ದು ಅಮೆಜಾನ್‌ನಲ್ಲಿ ಖರೀದಿಗೆ ಲಭ್ಯವಿದೆ.

ಗೂಗಲ್‌ ನೆಸ್ಟ್‌ ಮಿನಿ

ಗೂಗಲ್‌ ನೆಸ್ಟ್‌ ಮಿನಿ

ಗೂಗಲ್‌ ನೆಸ್ಟ್‌‌ ಮಿನಿ ಇತ್ತೀಚಿನ ತಲೆಮಾರಿನ ಹೊಸ ಸ್ಮಾರ್ಟ್ ಸ್ಪೀಕರ್ ಆಗಿದೆ. ಈ ಹಿಂದೆ ಗೂಗಲ್‌ ಹೋಮ್‌ ಎಂದು ಕರೆಯಲ್ಪಡುತ್ತಿದ್ದ ಡಿವೈಸ್‌ ಇದೀಗ ಗೂಗಲ್‌ ನೆಸ್ಟ್‌ ಮಿನಿ ಆಗಿ ಬದಲಾಗಿದೆ. ಇನ್ನು ಈ ಸ್ಮಾರ್ಟ್‌ ಸ್ಪೀಕರ್‌ ಗೂಗಲ್‌ ಅಸಿಸ್ಟೆಂಟ್‌ ಅನ್ನು ಬೆಂಬಲಿಸಲಿದೆ. ಗೂಗಲ್‌ ನೆಸ್ಟ್‌ ಮಿನಿ ಮೂಲಕ ನೀವು ಗೂಗಲ್‌ ಅಸಿಸ್ಟೆಂಟ್‌ ಅನ್ನು ಬಳಸಬಹುದಾಗಿದೆ. ಗೂಗಲ್‌ ಅಸಿಸ್ಟೆಂಟ್‌ ನಿಮ್ಮ ಪ್ರಶ್ನೆಗಳಿಗೆ ಉತ್ತರಿಸಲಿದೆ. ಟಿವಿಗಳು , ಸ್ಮಾರ್ಟ್ ಬಲ್ಬ್‌ಗಳು, ಸ್ಮಾರ್ಟ್ ಏರ್ ಕಂಡಿಷನರ್‌ಗಳು ಮತ್ತು ಇನ್ನೂ ಹೆಚ್ಚಿನ ಉತ್ಪನ್ನಗಳನ್ನು ಒಳಗೊಂಡಂತೆ ಸ್ಮಾರ್ಟ್ ಹೋಮ್ ಡಿವೈಸ್‌ಗಳನ್ನು ಕಂಟ್ರೋಲ್‌ ಮಾಡಲು ನಿಮಗೆ ಅನುಮತಿಸುತ್ತದೆ. ಪ್ರಸ್ತುತ ಗೂಗಲ್‌ ನೆಸ್ಟ್‌ ಮಿನಿ ಬೆಲೆ 3,999ರೂ.ಆಗಿದ್ದು ಫ್ಲಿಪ್‌ಕಾರ್ಟ್‌ನಿಂದ ಖರೀದಿಸಲು ಲಭ್ಯವಿದೆ.

ಲೆನೊವೊ ಸ್ಮಾರ್ಟ್ ಕ್ಲಾಕ್‌

ಲೆನೊವೊ ಸ್ಮಾರ್ಟ್ ಕ್ಲಾಕ್‌

ಲೆನೊವೊ ಸ್ಮಾರ್ಟ್ ಕ್ಲಾಕ್‌ ಸ್ಕ್ರೀನ್‌ ಸ್ಪೀಕರ್ ಆಗಿದೆ. ಇದು ಸ್ಮಾರ್ಟ್ ನೈಟ್‌ಸ್ಟ್ಯಾಂಡ್ ಆಗಿದ್ದು, ನೀವು ಮಲಗುವ ಸ್ಥಳದಲ್ಲಿ ಇರಿಸಿಕೊಳ್ಳಬಹುದು. ಇದರಲ್ಲಿ ನೀವು ದಿನಾಂಕ ಮತ್ತು ಸಮಯವನ್ನು ತಿಳಿಯಬಹುದು. ಇದಲ್ಲದೆ ವೀಡಿಯೊಗಳು ಮತ್ತು ಇತರ ವೀಕ್ಷಿಸಬಹುದಾದ ವಿಷಯವನ್ನು ಸಹ ಪ್ಲೇ ಮಾಡುತ್ತದೆ. ಇದು ನಿಮ್ಮ ಮನೆಯ ಅಲಂಕಾರಕ್ಕೆ ಸೂಕ್ತವಾಗಿ ಹೊಂದಿಕೊಳ್ಳಲಿದೆ. ಜೊತೆಗೆ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಪ್ರತ್ಯುತ್ತರ ನೀಡಲು ಗೂಗಲ್‌ ಅಸಿಸ್ಟೆಂಟ್‌ ಅನ್ನು ಬಳಸುತ್ತದೆ. ಇದಲ್ಲದೆ ಸ್ಮಾರ್ಟ್ ಹೋಮ್ ಡಿವೈಸ್‌ಗಳನ್ನು ಕಂಟ್ರೋಲ್‌ ಮಾಡಲು ನಿಮಗೆ ಅನುಮತಿಸುತ್ತದೆ. ಪ್ರಸ್ತುತ ಲೆನೊವೊ ಸ್ಮಾರ್ಟ್‌ ಕ್ಲಾಕ್‌ ಬೆಲೆ 4,999ರೂ. ಆಗಿದೆ.

Best Mobiles in India

English summary
Here's Best smart speakers under Rs 5,000 in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X