ಅಮೇಜಾನ್ ನಿಂದ ಐಐಟಿ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಶಿಕ್ಷಣ

By Gizbot Bureau
|

ಭಾರತೀಯ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ ಖರಗ್ಪುರವು ಅಮೇಜಾನ್ ವೆಬ್ ಸರ್ವೀಸ್ ನ್ನು ವಿದ್ಯಾರ್ಥಿಗಳಿಗೆ ಕ್ಲೌಡ್ ಕಂಪ್ಯೂಟಿಂಗ್ ಮತ್ತು ಆರ್ಟಿಫಿಶಿಯಲ್ ಇಂಟಲಿಜೆನ್ಸ್ ನ ಕೌಶಲ್ಯಗಳನ್ನು ಪಡೆದುಕೊಳ್ಳಲು ನೀಡುವ ಶಿಕ್ಷಣಕ್ಕಾಗಿ ಬಳಸುತ್ತದೆ ಎಂಬುದನ್ನು ಇನ್ಸಿಟ್ಯೂಟ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಮೇಜಾನ್ ನಿಂದ ಐಐಟಿ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಶಿಕ್ಷಣ

ಎಲ್ಲಾ ಬ್ರ್ಯಾಂಚಿನ ವಿದ್ಯಾರ್ಥಿಗಳಿಗೆ ಅಂದರೆ ಇನ್ಸಿಟ್ಯೂಟ್ ನ ಎಲ್ಲಾ ವಿದ್ಯಾರ್ಥಿಗಳಿಗೆ ಎಡಬ್ಲ್ಯೂಎಸ್ ಎಜುಕೇಷನ್ ಪ್ರೊಗ್ರಾಮ್ ನ್ನು ಪರಿಚಯಿಸುವುದಕ್ಕೆ ಖುಷಿ ಇದೆ ಮತ್ತು ಎಲ್ಲಾ ವಿದ್ಯಾರ್ಥಿಗಳಿಗೆ ಕೃತಕ ಬುದ್ಧಿಮತ್ತೆಯ ಬಗ್ಗೆ ವಿದ್ಯಾಭ್ಯಾಸ ನೀಡುವುದಕ್ಕೆ ಸಂತೋಷವಿದೆ. ಈ ಮೂಲಕ ನಾವು ಇನ್ನಷ್ಟು ಆಕರ್ಷಕ ಯೋಜನೆಗಳ ಆವಿಷ್ಕಾರಕ್ಕೆ ಮುನ್ನುಡಿ ಬರೆಯಲಿದ್ದೇವೆ ಎಂಬ ವಿಶ್ವಾಸವಿದೆ ಎಂದು ಐಐಟಿಕೆಜಿಪಿಯ ಪ್ರೊಫೆಸರ್ ಆಗಿರುವ ಪಿ ಪಿ ಚಕ್ರಬರ್ತಿ ತಿಳಿಸಿದ್ದಾರೆ.

ಎಡಬ್ಲೂಎಸ್ ಎಜುಕೇಟ್ ಕಾರ್ಯಕ್ರಮವು ಅಮೇಜಾನಿನ ಜಾಗತಿಕ ಉಪಕ್ರಮವಾಗಿದ್ದು ಕ್ಲೌಡ್ ಸಂಬಂಧಿತ ಕಲಿಕೆಯ ವೇಗವನ್ನು ಇದು ಹೆಚ್ಚಿಸಲಿದೆ ಮತ್ತು ಕ್ಲೌಡ್ ಗೆ ಸಂಬಂಧಿತ ಅಧ್ಯಯನ ಮತ್ತು ನಾಳೆಯ ನೌಕರರ ಶಕ್ತಿಯನ್ನು ಅಭಿವೃದ್ಧಿಗೊಳಿಸುವುದಕ್ಕೆ ಇದು ನೆರವಾಗುತ್ತದೆ.

ಈ ರೀತಿಯ ಕಾರ್ಯಕ್ರಮಕ್ಕೆ ಯಾವುದೇ ರೀತಿಯ ಉಪಕರಣಗಳು ಮತ್ತು ಸಂಪನ್ಮೂಲಗಳ ಅಗತ್ಯವಿರುವುದಿಲ್ಲ.ಎಡಬ್ಲ್ಯೂಎಸ್ ನಲ್ಲಿ ಅತ್ಯುತ್ತಮ ತಂತ್ರಗಾರಿಕೆಯನ್ನು ಮತ್ತು ಕ್ಲೌಡ್ ಕಂಪ್ಯೂಟಿಂಗ್ ತಂತ್ರಜ್ಞಾನದಲ್ಲಿ ಇತ್ತೀಚೆಗಿನ ಪ್ರಗತಿಯನ್ನು ಸಾಧಿಸುವುದಕ್ಕೆ ವಿದ್ಯಾರ್ಥಿಗಳಿಗೆ ಇದು ಹೆಚ್ಚು ನೆರವು ನೀಡುತ್ತದೆ ಮತ್ತು ವಿದ್ಯಾರ್ಜನೆಯಲ್ಲಿ ಎದುರಾಗುವ ಸವಾಲುಗಳಿಗೆ ವೇಗವಾಗಿ ಪರಿಹಾರ ಕಂಡುಕೊಳ್ಳುವುದಕ್ಕೆ ಇದು ಸಹಾಯ ಮಾಡುತ್ತದೆ ಎಂದು ಅಮೇಜಾನ್ ಪ್ರೈವೇಟ್ ಲಿಮಿಟೆಡ್ ನ ಅಧ್ಯಕ್ಷ ರಾಹುಲ್ ಶರ್ಮಾ ತಿಳಿಸಿದ್ದಾರೆ.

ಐಐಟಿ ಖರಗ್ಪುರ ಜೊತೆಗೆ ಇನ್ನತ ಕಲಿಕೆಯ ಪ್ರಯಾಣದಲ್ಲಿ ನಾವು ಕೆಲಸ ಮಾಡುವ ಮೂಲಕ ಕೆಲಸ ಮಾಡುವುದಕ್ಕೆ ನಮಗೆ ಖುಷಿಯಿದೆ ಮತ್ತು ಆ ಮೂಲಕ ಹೊಸ ಪ್ರತಿಭೆಯ ಅನಾವರಣೆಕ್ಕೆ ನಾವು ಸಹಾಯ ಮಾಡುತ್ತೇವೆ ಎಂದು ಅಮೇಜಾನ್ ತಿಳಿಸಿದೆ.

ಎಡಬ್ಲ್ಯೂಎಸ್ ಎಜುಕೇಷನ್ ನ ಭಾಗವಾಗಿ ವಿದ್ಯಾರ್ಥಿಗಳು 30ಕ್ಕೂ ಹೆಚ್ಚು ಘಂಟೆಗಳ ವಿಷಯದೊಂದಿದೆ ಯಂತ್ರ ಕಲಿಕೆ, ಸೈಬರ್ ಭದ್ರತೆ, ಸಾಫ್ಟ್ ವೇರ್ ಅಭಿವೃದ್ಧಿ ಸೇರಿದಂತೆ ಉದ್ಯೋಗಾವಕಾಶದಲ್ಲಿ ಬೇಡಿಕೆ ಇರುವ ವಿಚಾರಗಳ ಅಧ್ಯಯನಕ್ಕೆ ಇದು ನೆರವು ನೀಡುತ್ತದೆ ಮತ್ತು ಭವಿಷ್ಯದ ವಿದ್ಯಾರ್ಥಿಗಳಿಗೆ ಸಹಾಯ ಮಾಡುತ್ತದೆ.

ಅಧ್ಯಯನದ ನಂತರ ಎಡಬ್ಲ್ಯೂಎಸ್ ಎಜುಕೇಟ್ ಸರ್ಟಿಫಿಕೇಟ್ ನ್ನು ನೀಡಲಾಗುತ್ತದೆ ಅಥವಾ ಎಡಬ್ಲ್ಯೂಎಸ್ ಎಜುಕೇಟ್ ಬ್ಯಾಡ್ಜ್ ಕೂಡ ಸಿಗುತ್ತದೆ.

Best Mobiles in India

English summary
Here's how IIT Kharagpur plans to train students with the help of Amazon

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X