ಕೊರೊನಾ ವಿರುದ್ದ ಹೋರಾಡಲಿದೆ ಈ ಹೊಸ ವ್ಯಾಕ್ಸಿನ್‌! ಆನ್‌ಲೈನ್‌ನಲ್ಲಿ ನೋಂದಾಯಿಸಲು ಹೀಗೆ ಮಾಡಿ!

|

ಕೊರೊನಾ ವೈರಸ್‌ ಮತ್ತೆ ಸದ್ದು ಮಾಡ್ತಿದೆ. ಚೀನಾದಲ್ಲಿ ಅಬ್ಬರಿಸುತ್ತಿರುವ ಕೊರೊನಾದ ಹೊಸ ತಳಿ BF.7 ಭಾರತದಲ್ಲಿ ಕೂಡ ಆತಂಕವನ್ನು ಸೃಷ್ಟಿಸಿದೆ. ಇದೇ ಕಾರಣಕ್ಕೆ ಭಾರತದಲ್ಲಿ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗ್ತಿದೆ. ಕೇಂದ್ರ ಸರ್ಕಾರವೂ ಸೇರಿದಂತೆ ರಾಜ್ಯ ಸರ್ಕಾರ ಕೂಡ ದೇಶವಾಸಿಗಳಿಗೆ ಬೂಸ್ಟರ್‌ ಡೋಸ್‌ ತೆಗೆದುಕೊಳ್ಳುವಂತೆ ಸಲಹೆ ನೀಡಿದೆ. ಇದರ ನಡುವೆ ಇದೀಗ ಭಾರತದಲ್ಲಿ ಮೂಗಿನ ಮೂಲಕ ತೆಗೆದುಕೊಳ್ಳುವ ಲಸಿಕೆಗೆ ಅನುಮೋದಿಸಿದೆ.

ಭಾರತದಲ್ಲಿ

ಹೌದು, ಭಾರತದಲ್ಲಿ ನಾಸಲ್ ವ್ಯಾಕ್ಸೀನ್ ಅನ್ನು ಬೂಸ್ಟರ್‌ ಡೋಸ್‌ ಆಗಿ ಬಳಸುವುದಕ್ಕೆ ಭಾರತ ಸರ್ಕಾರ ಅನುಮೋದಿಸಿದೆ. ಹದಿನೆಂಟು ವರ್ಷಕ್ಕಿಂತ ಮೇಲ್ಪಟ್ಟ ನಾಗರಿಕರು ಈ ವ್ಯಾಕ್ಸಿನ್‌ ಅನ್ನು ತೆಗೆದುಕೊಳ್ಳಬಹುದಾಗಿದೆ. ಭಾರತ್ ಬಯೋಟೆಕ್‌ನ ಇಂಟ್ರಾನಾಸಲ್ ಕೋವಿಡ್ ವ್ಯಾಕ್ಸಿನ್‌ ಇದೀಗ ಬೂಸ್ಟರ್‌ ಡೋಸ್‌ ಆಗಿ ದೊರೆಯಲಿದೆ. ಇದನ್ನು ಹೆಟೆರೊಲಾಜಸ್ ಬೂಸ್ಟರ್ ಆಗಿ ಬಳಸಲಾಗುವುದು ಎನ್ನಲಾಗಿದೆ. ಹಾಗಾದ್ರೆ ನಾಸಲ್ ವ್ಯಾಕ್ಸೀನ್ ಅನ್ನು ಪಡೆಯಲು ಆನ್‌ಲೈನ್‌ ಮೂಲಕ ಬುಕ್ಕಿಂಗ್‌ ಮಾಡೋದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಕೋವಿಡ್-19 ನಾಸಲ್ ವ್ಯಾಕ್ಸೀನ್ ಅನ್ನು ಯಾರೆಲ್ಲ ಪಡೆಯಬಹುದು?

ಕೋವಿಡ್-19 ನಾಸಲ್ ವ್ಯಾಕ್ಸೀನ್ ಅನ್ನು ಯಾರೆಲ್ಲ ಪಡೆಯಬಹುದು?

ಕೇಂದ್ರ ಸರ್ಕಾರವು ಅನುಮೋದಿಸಿರುವ ಭಾರತ್ ಬಯೋಟೆಕ್‌ನ ಇಂಟ್ರಾನಾಸಲ್ ವ್ಯಾಕ್ಸಿನ್‌ iNCOVACC ಅನ್ನು 18 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರು ಪಡೆಯಬಹುದು ಎಂದು ಹೇಳಲಾಗಿದೆ. ಅಲ್ಲದೆ ಈ ವ್ಯಾಕ್ಸಿನ್‌ ಅನ್ನು Covaxin ಅಥವಾ Covishield ನ 2 ಡೋಸ್‌ಗಳನ್ನು ತೆಗೆದುಕೊಂಡ ವಯಸ್ಕರು ಬೂಸ್ಟರ್‌ ಡೂಸ್‌ ಆಗಿ ತೆಗೆದುಕೊಳ್ಳಬಹುದಾಗಿದೆ.

ನಾಸಲ್ ವ್ಯಾಕ್ಸೀನ್ ಎಲ್ಲಿ ಲಭ್ಯವಾಗಲಿದೆ?

ನಾಸಲ್ ವ್ಯಾಕ್ಸೀನ್ ಎಲ್ಲಿ ಲಭ್ಯವಾಗಲಿದೆ?

ಮೂಗಿನ ಮೂಲಕ ತೆಗೆದುಕೊಳ್ಳಬಹುದಾದ ಸೂಜಿ ಮುಕ್ತ ವ್ಯಾಕ್ಸಿನ್‌ ಇದಾಗಿದೆ. ಈ ವ್ಯಾಕ್ಸಿನ್‌ ಖಾಸಗಿ ಆಸ್ಪತ್ರೆಗಳಲ್ಲಿ ಲಭ್ಯವಿದ್ದು, ಜನರು CoWIN ಪ್ಲಾಟ್‌ಫಾರ್ಮ್ ಮೂಲಕ ಬುಕ್‌ ಮಾಡಬಹುದಾಗಿದೆ. ಈ ವ್ಯಾಕ್ಸಿನ್‌ ಅನ್ನು ಈಗಾಗಲೇ CoWIN ವೆಬ್‌ಸೈಟ್ ಮತ್ತು ಅಪ್ಲಿಕೇಶನ್ ಮೂಲಕ ಆನ್‌ಲೈನ್‌ನಲ್ಲಿ ಬುಕ್ಕಿಂಗ್‌ ಮಾಡುವುದಕ್ಕೆ ಅವಕಾಶ ನೀಡಲಾಗಿದೆ.

ಭಾರತದಲ್ಲಿ ನಾಸಲ್ ವ್ಯಾಕ್ಸೀನ್ ಬೆಲೆ ಎಷ್ಟು?

ಭಾರತದಲ್ಲಿ ನಾಸಲ್ ವ್ಯಾಕ್ಸೀನ್ ಬೆಲೆ ಎಷ್ಟು?

iNCOVACC ನಾಸಲ್ ವ್ಯಾಕ್ಸೀನ್ ಖಾಸಗಿ ಆಸ್ಪತ್ರೆಗಳಲ್ಲಿ 5% GST ಹೊರತುಪಡಿಸಿ 800 ರೂ. ಬೆಲೆಯನ್ನು ಪಡೆದಿದೆ. ಇದನ್ನು ಹೆಟೆರೊಲಾಜಸ್ ಬೂಸ್ಟರ್ ಆಗಿ ಬಳಸಲಾಗುವುದು ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಮೊದಲು ಲಭ್ಯವಾಗಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಆನ್‌ಲೈನ್‌ನಲ್ಲಿ ಕೋವಿಡ್ ನಾಸಲ್ ವ್ಯಾಕ್ಸೀನ್ ಅನ್ನು ಬುಕ್ ಮಾಡುವುದು ಹೇಗೆ?

ಆನ್‌ಲೈನ್‌ನಲ್ಲಿ ಕೋವಿಡ್ ನಾಸಲ್ ವ್ಯಾಕ್ಸೀನ್ ಅನ್ನು ಬುಕ್ ಮಾಡುವುದು ಹೇಗೆ?

ಭಾರತ್ ಬಯೋಟೆಕ್-iNCOVACCನ ನಾಸಲ್ ವ್ಯಾಕ್ಸೀನ್ ಪ್ರಸ್ತುತ ದೇಶದ ಪ್ರಮುಖ ಖಾಸಗಿ ಆಸ್ಪತ್ರೆಗಳಲ್ಲಿ ಲಭ್ಯವಿದೆ. ಈ ವ್ಯಾಕ್ಸಿನ್‌ ಪಡೆಯುವುದಕ್ಕೆ ಆನ್‌ಲೈನ್‌ ಮೂಲಕ ನಿಮ್ಮ ಅಪಾಯಿಟ್‌ಮೆಂಟ್‌ ತೆಗೆದುಕೊಳ್ಳುವುದಕ್ಕೆ ಈ ಕೆಳಗಿನ ಹಂತಗಳನ್ನು ಅನುಸರಿಸಿ.
ಹಂತ:1 ಮೊದಲಿಗೆ ಕೋವಿನ್‌ ಅಧಿಕೃತ ವೆಬ್‌ಸೈಟ್ cowin.gov.in/ ಗೆ ಹೋಗಿ
ಹಂತ:2 ನಂತರ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯೊಂದಿಗೆ ಲಾಗಿನ್ ಮಾಡಿ.
ಹಂತ:3 ಇದೀಗ ಪರಿಶೀಲಿಸಲು OTP ನಮೂದಿಸಿ
ಹಂತ:4 ಒಮ್ಮೆ ಲಾಗ್ ಇನ್ ಮಾಡಿದ ನಂತರ, ನಿಮ್ಮ ವ್ಯಾಕ್ಸಿನ್‌ ಸ್ಟೆಟಸ್‌ ಅನ್ನು ಕ್ಲಿಕ್ ಮಾಡಿ ಮತ್ತು ಲಭ್ಯವಿರುವ ಬೂಸ್ಟರ್ ಡೋಸ್ ಅನ್ನು ಟ್ಯಾಪ್ ಮಾಡಿ.
ಹಂತ:5 ಪಿನ್‌ಕೋಡ್ ಅಥವಾ ಜಿಲ್ಲೆಯ ಹೆಸರಿನ ಮೂಲಕ ನಿಮ್ಮ ಹತ್ತಿರದ ವ್ಯಾಕ್ಸಿನೇಷನ್ ಸೆಂಟರ್‌ ಅನ್ನು ಹುಡುಕಿ
ಹಂತ:6 ನಿಮ್ಮ ಆಯ್ಕೆಯ ಪ್ರಕಾರ ವ್ಯಾಕ್ಸಿನ್‌ ಸೆಂಟರ್‌ ಅನ್ನು ಆಯ್ಕೆಮಾಡಿ
ಹಂತ:7 ಈಗ ನಾಸಲ್ ವ್ಯಾಕ್ಸೀನ್ ಬೂಸ್ಟರ್ ಡೋಸ್ ಪಡೆಯಲು ನಿಮ್ಮ ಆದ್ಯತೆಯ ದಿನಾಂಕ ಮತ್ತು ಸಮಯವನ್ನು ಆಯ್ಕೆಮಾಡಿ
ಹಂತ:8 ನಂತರ ನಿಮ್ಮ ಸ್ಲಾಟ್ ಅನ್ನು ದೃಢೀಕರಿಸಬಹುದಾಗಿದೆ.

Best Mobiles in India

Read more about:
English summary
Here's How to book for Covid nasal vaccine online

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X