India

ಟಿಕೆಟ್‌ ವೆಂಡಿಂಗ್ ಮೆಷಿನ್‌ನಲ್ಲಿ ಯುಪಿಐ ಬಳಸಿ ರೈಲು ಟಿಕೆಟ್ ಪಡೆಯಲು ಹೀಗೆ ಮಾಡಿ?

|

ಭಾರತೀಯ ರೈಲ್ವೆ ಇಲಾಖೆ ತನ್ನ ಪ್ರಯಾಣಿಕರಿಗಾಗಿ ವಿಶೇಷ ಸೇವೆಗಳನ್ನು ನೀಡುತ್ತಲೇ ಬಂದಿದೆ. ಇದರಿಂದ ಪ್ರಯಾಣಿಕರಿಗೆ ಸಾಕಷ್ಟು ಅನುಕೂಲವಾಗಿದೆ. ಇದರಲ್ಲಿ ಆನ್‌ಲೈನ್‌ನಲ್ಲಿಯೇ ರೈಲು ಟಿಕೆಟ್ ಕಾಯ್ದಿರಿಸುವ ಸೇವೆ ಕೂಡ ಸೇರಿದೆ. ಆನ್‌ಲೈನ್‌ನಲ್ಲಿ ರೈಲು ಟಿಕೆಟ್‌ ರಿಸರ್ವ್‌ ಮಾಡುವುದಕ್ಕೆ ಅವಕಾಶ ನೀಡಿದ ನಂತರ ರೈಲು ನಿಲ್ದಾಣದ ಟಿಕೆಟಿಂಗ್ ಕೌಂಟರ್‌ನಲ್ಲಿ ಟಿಕೆಟ್‌ಗಾಗಿ ಸರದಿ ಸಾಲು ನಿಲ್ಲುತ್ತಿದ್ದವರ ಸಂಖ್ಯೆ ಕಡಿಮೆಯಾಗಿದೆ. ಇತ್ತಿಚಿನ ದಿನಗಳಲ್ಲಿ ರೈಲು ಟಿಕೆಟ್‌ ಬುಕ್ಕಿಂಗ್‌ ಮಾಡುವುದಕ್ಕೆ ಯುಪಿಐ ಪಾವತಿ ಅಪ್ಲಿಕೇಶನ್‌ಗಳಲ್ಲಿ ಕೂಡ ಅವಕಾಶ ನೀಡಿವೆ.

ರೈಲು ಟಿಕೆಟ್

ಹೌದು, ಆನ್‌ಲೈನ್‌ನಲ್ಲಿ ರೈಲು ಟಿಕೆಟ್ ಬುಕಿಂಗ್ ಮಾಡುವುದು ಇಂದಿನ ದಿನಗಳಲ್ಲಿ ತುಂಬಾ ಸರಳವಾಗಿದೆ. ಇದಕ್ಕಾಗಿ ಯುಪಿಐ ಪಾವತಿ ಅಪ್ಲಿಕೇಶನ್‌ಗಳು ಸಾಕಷ್ಟು ಅನುಕೂಲ ಮಾಡಿಕೊಟ್ಟಿವೆ. ಆದರೆ ಕೆಲವೊಮ್ಮೆ ನೀವು ಅನಿರೀಕ್ಷಿತವಾಗಿ ರೈಲು ಪ್ರಯಾಣ ಮಾಡಬೇಕಾದ ಅನಿವಾರ್ಯತೆ ಬರಬಹುದು. ಇಂತಹ ಸಮಯದಲ್ಲಿ ರೈಲು ನಿಲ್ದಾಣದಲ್ಲಿರುವ ಟಿಕೆಟ್‌ ವೆಂಡಿಂಗ್ ಮೆಷಿನ್‌ನಲ್ಲಿ ನೀವು ಯುಪಿಐ ಪಾವತಿ ಅಪ್ಲಿಕೇಶನ್‌ ಬಳಸಿ ರೈಲು ಟಿಕೆಟ್‌ ಪಡೆಯಬಹುದು. ಹಾಗಾದ್ರೆ ರೈಲು ನಿಲ್ದಾಣದಲ್ಲಿ ಟಿಕೆಟ್‌ ವೆಂಡಿಂಗ್ ಮೆಷಿನ್‌ನಲ್ಲಿ ಯುಪಿಐ ಬಳಸಿ ಟಿಕೆಟ್‌ ಪಡೆಯುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ರೈಲು

ದೇಶಾದ್ಯಂತ ರೈಲು ನಿಲ್ದಾಣಗಳಲ್ಲಿ ಆಟೋಮ್ಯಾಟಿಕ್‌ ಟಿಕೆಟ್ ವಿತರಣಾ ಯಂತ್ರಗಳನ್ನು ಸ್ಥಾಪಿಸಲಾಗಿದೆ. ಈ ಮೆಷಿನ್‌ಗಳ ಮೂಲಕ ಡಿಜಿಟಲ್ ಟಿಕೆಟಿಂಗ್ ಸೇವೆಗಳನ್ನು ಪಡೆಯಬಹುದಾಗಿದೆ. ಇನ್ನು ರೈಲು ನಿಲ್ದಾಣಗಳಲ್ಲಿ ಡಿಜಿಟಲ್‌ ಟಿಕೆಟಿಂಗ್‌ ಸೇವೆಗಳನ್ನು ಬಳಕೆದಾರರು ಪಡೆಯುವುದಕ್ಕಾಗಿ ಪೇಟಿಎಂ ಭಾರತೀಯ ರೈಲ್ವೇಯೊಂದಿಗೆ ಸಹಯೋಗ ಹೊಂದಿದೆ. ಇದರಿಂದ ಬಳಕೆದಾರರು UPI ಮೂಲಕ ಟಿಕೆಟಿಂಗ್ ಸೇವೆಗಳಿಗೆ ಡಿಜಿಟಲ್ ಪಾವತಿ ಮಾಡುವ ಆಯ್ಕೆಯನ್ನು ಹೊಂದಿದ್ದಾರೆ. ಸದ್ಯ ಈ ಹೊಸ ಟಿಕೆಟಿಂಗ್ ಪ್ರಕ್ರಿಯೆಯು ಈಗಾಗಲೇ ಭಾರತದ ಕೆಲವು ರೈಲು ನಿಲ್ದಾಣಗಳಲ್ಲಿ ಎಲ್ಲಾ ATVM ಗಳಲ್ಲಿ ಲೈವ್ ಆಗಿದೆ.

ಟಿಕೆಟ್‌

ಇನ್ನು ಈ ಆಟೋಮ್ಯಾಟಿಕ್‌ ಟಿಕೆಟ್‌ ವೆಂಡಿಂಗ್‌ ಮೆಷಿನ್‌ಗಳಲ್ಲಿ ಲಭ್ಯವಿರುವ QR ಕೋಡ್‌ಗಳನ್ನು ಸ್ಕ್ಯಾನ್ ಮಾಡುವ ಮೂಲಕ ಪ್ರಯಾಣಿಕರು ಟಿಕೆಟ್‌ಗಳನ್ನು ಖರೀದಿಸಬಹುದು. ಇದರಲ್ಲಿ ನೀವು ಪ್ಲಾಟ್‌ಫಾರ್ಮ್ ಟಿಕೆಟ್‌ಗಳನ್ನು ಮಾತ್ರವಲ್ಲದೆ ರಿಸರ್ವೇಶನ್‌ ಟಿಕೆಟ್‌ ಅನ್ನು ಕೂಡ ಖರೀದಿಸಬಹುದು. ಇನ್ನು ಈ ಟಿಕೆಟ್‌ಗಳನ್ನು ಖರೀದಿಸುವುದಕ್ಕೆ ಪೇಟಿಎಂ ವ್ಯಾಲೆಟ್, ಪೇಟಿಎಂ UPI ಒಳಗೊಂಡಂತೆ ಪ್ರಯಾಣಿಕರು ವಿವಿಧ ಪಾವತಿ ಆಯ್ಕೆಗಳನ್ನು ಬಳಸಬಹುದು.

ಆಟೋಮ್ಯಾಟಿಕ್‌ ಟಿಕೆಟ್‌ ವೆಂಡಿಂಗ್ ಮೆಷಿನ್‌ನಲ್ಲಿ ಡಿಜಿಟಲ್ ಪಾವತಿಗಳನ್ನು ಬಳಸುವುದು ಹೇಗೆ ?

ಆಟೋಮ್ಯಾಟಿಕ್‌ ಟಿಕೆಟ್‌ ವೆಂಡಿಂಗ್ ಮೆಷಿನ್‌ನಲ್ಲಿ ಡಿಜಿಟಲ್ ಪಾವತಿಗಳನ್ನು ಬಳಸುವುದು ಹೇಗೆ ?

* ನೀವು ATVM ನಲ್ಲಿ, ಟಿಕೆಟ್ ಬುಕಿಂಗ್‌ಗಾಗಿ ಹೊರಡುವ ಮಾರ್ಗವನ್ನು ಆಯ್ಕೆಮಾಡಿ, ನಿಮ್ಮ ಸ್ಮಾರ್ಟ್ ಕಾರ್ಡ್‌ನ ವಿವರಗಳನ್ನು ನಮೂದಿಸಿ.
* ನಂತರ ATVM ನಿಮಗೆ QR ಕೋಡ್ ಅನ್ನು ಪ್ರದರ್ಶಿಸುತ್ತದೆ, ನಿಮ್ಮ Paytm ಅಪ್ಲಿಕೇಶನ್ ಅನ್ನು ಬಳಸಿ ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ಹಣ ಪಾವತಿಸಬೇಕಾಗುತ್ತದೆ.
* ನೀವು ಕೋಡ್ ಅನ್ನು ಸ್ಕ್ಯಾನ್ ಮಾಡಿದಾಗ, ಮೆಷಿನ್‌ನಲ್ಲಿ ಟಿಕೆಟ್ ಅನ್ನು ಪಡೆದುಕೊಳ್ಳಬಹುದಾದು.

ಇನ್ನು ಈ ಪ್ರಕ್ರಿಯೆಯು ಕೇವಲ ಒಂದೆರಡು ನಿಮಿಷಗಳನ್ನು ತೆಗೆದುಕೊಳ್ಳುತ್ತದೆ ಮತ್ತು ಇದನ್ನು ಬಳಸುವುದರಿಂದ, ನೀವು ಸಾಕಷ್ಟು ಸಮಯವನ್ನು ಉಳಿಸಬಹುದಾಗಿದೆ.

Most Read Articles
Best Mobiles in India

Read more about:
English summary
Paytm has collaborated with the Indian Railways to enable users to make use of digital ticketing services through the Automatic Ticket Vending Machines.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X