ನೆಟ್‌ಫ್ಲಿಕ್ಸ್‌ನಲ್ಲಿ ನಿಮ್ಮ ಭಾಷೆಯನ್ನು ಬದಲಾಯಿಸಲು ಈ ಕ್ರಮಗಳನ್ನು ಅನುಸರಿಸಿ?

|

ಪ್ರಸ್ತುತ ದಿನಗಳಲ್ಲಿ ಭಾರತದಲ್ಲಿ ಒಟಿಟಿ ಪ್ಲಾಟ್‌ಫಾರ್ಮ್‌ಗಳು ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿವೆ. ಇದರಲ್ಲಿ ಅಮೆಜಾನ್‌ ಪ್ರೈಮ್‌, ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌, ನೆಟ್‌ಫ್ಲಿಕ್ಸ್‌, ಸೋನಿಲೈವ್‌ನಂತಹ ಸ್ಟ್ರಿಮಿಂಗ್‌ ಪ್ಲಾಟ್‌ಫಾರ್ಮ್‌ಗಳು ಮುಂಚೂಣಿಯಲ್ಲಿ ಗುರುತಿಸಿಕೊಂಡಿವೆ. ಇನ್ನು ನೆಟ್‌ಫ್ಲಿಕ್ಸ್‌ ಅಪ್ಲಿಕೇಶನ್‌ ಸಾಕಷ್ಟು ಪ್ರಸಿದ್ಧಿ ಪಡೆದುಕೊಂಡಿದೆ. ನೆಟ್‌ಫ್ಲಿಕ್ಸ್ ತನ್ನ ಬಳಕೆದಾರರಿಗೆ ವಿವಿಧ ಭಾಷೆಗಳಲ್ಲಿ ಚಲನಚಿತ್ರಗಳು ಮತ್ತು ಟಿವಿ ಕಾರ್ಯಕ್ರಮಗಳನ್ನು ವೀಕ್ಷಣೆ ಮಾಡುವುದು ಅವಕಾಶ ನೀಡಿದೆ. ಇದರಲ್ಲಿ ಹಲವು ಅಂತಾರಾಷ್ಟ್ರೀಯ ಭಾಷೆಗಳು ಹಾಗೂ ಭಾರತದ ಹಲವು ಪ್ರಾದೇಶಿಕ ಭಾಷೆಗಳು ಕೂಡ ಸೇರಿವೆ.

ನೆಟ್‌ಫ್ಲಿಕ್ಸ್‌

ಹೌದು, ನೆಟ್‌ಫ್ಲಿಕ್ಸ್‌ ಅಪ್ಲಿಕೇಶನ್‌ ನಿಮಗೆ ಹಲವು ಭಾಷೆಗಳ ಆಯ್ಕೆಯನ್ನು ನೀಡುತ್ತದೆ. ಅದರಂತೆ ನಿಮ್ಮ ಆಯ್ಕೆಯ ಭಾಷೆಯನ್ನು ಬಳಸಬಹುದಾಗಿದೆ. ಇದರಿಂದ ಅಪ್ಲಿಕೇಶನ್ ಅನ್ನು ಸುಲಭವಾಗಿ ಬಳಸಲು ನೀವು ಈ ಭಾಷೆಗಳ ನಡುವೆ ಬದಲಾಯಿಸಬಹುದಾಗಿದೆ. ಇನ್ನು ನೆಟ್‌ಫ್ಲಿಕ್ಸ್‌ನಲ್ಲಿ ಭಾಷೆಯನ್ನು ಬದಲಾಯಿಸುವುದು ಸರ್ಚ್‌, ಸ್ಟೋರೇಜ್‌ ಮತ್ತು ನಿಮ್ಮ ಆಯ್ಕೆಯ ಭಾಷೆಯಲ್ಲಿ ಪಾವತಿಯನ್ನು ಮಾಡುವ ಅವಕಾಶ ಲಭ್ಯವಿದೆ. ಹಾಗಾದ್ರೆ ನೆಟ್‌ಫ್ಲಿಕ್ಸ್‌ ಅಪ್ಲಿಕೇಶನ್‌ನಲ್ಲಿ ಭಾಷೆಯನ್ನು ಬದಲಾಯಿಸುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸ್ಮಾರ್ಟ್‌ಫೋನ್‌ನಲ್ಲಿ ನೆಟ್‌ಫ್ಲಿಕ್ಸ್‌ ಭಾಷೆಯನ್ನು ಬದಲಾಯಿಸುವುದು ಹೇಗೆ?

ಸ್ಮಾರ್ಟ್‌ಫೋನ್‌ನಲ್ಲಿ ನೆಟ್‌ಫ್ಲಿಕ್ಸ್‌ ಭಾಷೆಯನ್ನು ಬದಲಾಯಿಸುವುದು ಹೇಗೆ?

ಹಂತ:1 ಮೊದಲಿಗೆ ನಿಮ್ಮ ಮೊಬೈಲ್ ಡಿವೈಸ್‌ನಲ್ಲಿ ನೆಟ್‌ಫ್ಲಿಕ್ಸ್‌ ಅಪ್ಲಿಕೇಶನ್ ತೆರೆಯಿರಿ
ಹಂತ:2 ನಂತರ ಸ್ಕ್ರೀನ್‌ ಮೇಲಿನ ಬಲ ಮೂಲೆಯಲ್ಲಿರುವ ಪ್ರೊಫೈಲ್ ಐಕಾನ್‌ನಿಂದ ಡ್ರಾಪ್-ಡೌನ್ ಮೆನುವಿನ ಮೇಲೆ ಕ್ಲಿಕ್ ಮಾಡಿ ಮತ್ತು 'ಅಕೌಂಟ್‌' ಆಯ್ಕೆಮಾಡಿ.
ಹಂತ:3 'ಪ್ರೊಫೈಲ್ ಮತ್ತು ಪೇರೆಂಟ್‌ ಕಂಟ್ರೋಲ್ಸ್‌' ವಿಭಾಗದ ಅಡಿಯಲ್ಲಿ ನಿಮ್ಮ ಪ್ರೊಫೈಲ್‌ ಲ್ಯಾಂಗ್ವೇಜ್‌ ಬದಲಿಸಿ.
ಹಂತ:4 ನಂತರ ನಿಮ್ಮ ಆದ್ಯತೆಯ ಡಿಸ್‌ಪ್ಲೇ ಭಾಷೆಯನ್ನು ಆಯ್ಕೆ ಮಾಡಿ ಮತ್ತು ಸ್ಕ್ರೀನ್‌ ಕೆಳಭಾಗದಲ್ಲಿ ಸೇವ್‌ ಕ್ಲಿಕ್ ಮಾಡಿ.

ಸ್ಮಾರ್ಟ್ ಟಿವಿಯಲ್ಲಿ ನೆಟ್‌ಫ್ಲಿಕ್ಸ್‌ ಭಾಷೆಯನ್ನು ಬದಲಾಯಿಸುವುದು ಹೇಗೆ?

ಸ್ಮಾರ್ಟ್ ಟಿವಿಯಲ್ಲಿ ನೆಟ್‌ಫ್ಲಿಕ್ಸ್‌ ಭಾಷೆಯನ್ನು ಬದಲಾಯಿಸುವುದು ಹೇಗೆ?

ಹಂತ:1 ನಿಮ್ಮ ಸ್ಮಾರ್ಟ್ ಟಿವಿಯಲ್ಲಿ ನೆಟ್‌ಫ್ಲಿಕ್ಸ್ ಅಪ್ಲಿಕೇಶನ್ ಅನ್ನು ಪ್ರಾರಂಭಿಸಿ.
ಹಂತ:2 ನಂತರ ಪ್ರೊಫೈಲ್‌ ಪೇಜ್‌ನಲ್ಲಿ ಪ್ರತಿ ಪ್ರೊಫೈಲ್‌ನ ಕೆಳಗಿನಿಂದ ಎಡಿಟ್ ಐಕಾನ್ ಅನ್ನು ಆಯ್ಕೆಮಾಡಿ.
ಹಂತ:3 ಇದಾದ ನಂತರ ತೆರೆಯುವ ಪೇಜ್‌ನಲ್ಲಿ 'ಲ್ಯಾಂಗ್ವೇಜ್‌' ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಮತ್ತು ಪಟ್ಟಿಯಿಂದ ನಿಮ್ಮ ಆದ್ಯತೆಯ ಭಾಷೆಯನ್ನು ಆಯ್ಕೆಮಾಡಿ.
ಹಂತ:4 ನಂತರ ಸೇವ್‌ ಮತ್ತು ಸ್ಟ್ರೀಮಿಂಗ್ ಮುಂದುವರಿಸಿ.

ಸಬ್‌ ಟೈಟಲ್‌, ಕ್ಯಾಪ್ಶನ್‌ ಮತ್ತು ಪರ್ಯಾಯ ಆಡಿಯೋ ಬಳಸುವುದು ಹೇಗೆ?

ಸಬ್‌ ಟೈಟಲ್‌, ಕ್ಯಾಪ್ಶನ್‌ ಮತ್ತು ಪರ್ಯಾಯ ಆಡಿಯೋ ಬಳಸುವುದು ಹೇಗೆ?

ಹಂತ:1 ನೆಟ್ಫ್ಲಿಕ್ಸ್ ತೆರೆಯಿರಿ.
ಹಂತ:2 ಟಿವಿ ಕಾರ್ಯಕ್ರಮ ಅಥವಾ ಚಲನಚಿತ್ರವನ್ನು ಆಯ್ಕೆ ಮಾಡಿ.
ಹಂತ:3 ಪ್ಲೇ ಮಾಡಿ ಮತ್ತು ನಿಮ್ಮ ಡಿವೈಸ್‌ನಲ್ಲಿ ಪಟ್ಟಿ ಮಾಡಲಾದ ಕ್ರಮವನ್ನು ತೆಗೆದುಕೊಳ್ಳಿ
ಹಂತ:4 ಸ್ಕ್ರೀನ್ ಅನ್ನು ಟ್ಯಾಪ್ ಮಾಡಿ ಅಥವಾ ಕ್ಲಿಕ್ ಮಾಡಿರಿ.
ಹಂತ:5 ಈಗ, ಪರದೆಯ ಮೇಲ್ಭಾಗದಲ್ಲಿ ಅಥವಾ ಕೆಳಭಾಗದಲ್ಲಿ, ಡೈಲಾಗ್ ಅಥವಾ ಸಂವಾದ ಪೆಟ್ಟಿಗೆಯಂತೆ ಕಾಣುವ ಐಕಾನ್ ಅನ್ನು ಆಯ್ಕೆ ಮಾಡಿ.
ಹಂತ:6 ನಂತರ ಆಡಿಯೋ ಅಥವಾ ಸಬ್‌ಟೈಟಲ್‌ ಆಯ್ಕೆಗಳನ್ನು ಬದಲಾಯಿಸಿ.

ನೆಟ್‌ಫ್ಲಿಕ್ಸ್‌ನಲ್ಲಿ ಚಲನಚಿತ್ರಗಳ ಭಾಷೆ ಬದಲಾಯಿಸುವುದು ಹೇಗೆ?

ನೆಟ್‌ಫ್ಲಿಕ್ಸ್‌ನಲ್ಲಿ ಚಲನಚಿತ್ರಗಳ ಭಾಷೆ ಬದಲಾಯಿಸುವುದು ಹೇಗೆ?

ಹಂತ:1 ನಿಮ್ಮ ಮೊಬೈಲ್ ಬ್ರೌಸರ್‌ನಲ್ಲಿ, Netflix.com ಗೆ ಸೈನ್ ಇನ್ ಮಾಡಿ.
ಹಂತ:2 ನಿಮ್ಮ ಅಕೌಂಟ್‌ ಅನ್ನು ಆಯ್ಕೆ ಮಾಡಿ.
ಹಂತ:3 ನಂತರ ನಿಮ್ಮ ಪ್ರೊಫೈಲ್ ಆಯ್ಕೆಮಾಡಿ.
ಹಂತ:4 ನಿಮ್ಮ ಪ್ರೊಫೈಲ್‌ನಲ್ಲಿ ಭಾಷೆಯನ್ನು ಆಯ್ಕೆಮಾಡಿ.
ಹಂತ:5 ಚಲನಚಿತ್ರಗಳ ಭಾಷೆಗಳಿಂದ ಆದ್ಯತೆಯ ಭಾಷೆಗಳನ್ನು ಆಯ್ಕೆಮಾಡಿ.
ಹಂತ:6 ಸೇವ್‌ ಆಯ್ಕೆಮಾಡಿ.

ಮೊಬೈಲ್ ಮೂಲಕ ನೆಟ್‌ಫ್ಲಿಕ್ಸ್ ಪ್ರೈಮರಿ ಲ್ಯಾಂಗ್ವೇಜ್ ಅನ್ನು ಬದಲಾಯಿಸುವುದು ಹೇಗೆ?

ಮೊಬೈಲ್ ಮೂಲಕ ನೆಟ್‌ಫ್ಲಿಕ್ಸ್ ಪ್ರೈಮರಿ ಲ್ಯಾಂಗ್ವೇಜ್ ಅನ್ನು ಬದಲಾಯಿಸುವುದು ಹೇಗೆ?

ಹಂತ:1 ನಿಮ್ಮ ಮೊಬೈಲ್‌ನಲ್ಲಿ Netflix.com ಗೆ ಭೇಟಿ ನೀಡಿ.
ಹಂತ:2 ನಂತರ ನಿಮ್ಮ ಖಾತೆಗೆ ಸೈನ್ ಇನ್ ಮಾಡಿ.
ಹಂತ:3 ಸೈನ್ ಇನ್ ಮಾಡಿದ ನಂತರ, ನಿಮ್ಮ ಅಕೌಂಟ್‌ ಮೇಲೆ ಟ್ಯಾಪ್ ಮಾಡಿ.
ಹಂತ:4 ನಂತರ ಪ್ರೊಫೈಲ್ ಮತ್ತು ಪೇರೇಂಟ್ಸ್‌ ಕಂಟ್ರೋಲ್‌ ಅನ್ನು ಸ್ಕ್ರಾಲ್ ಮಾಡಿ, ಇದರಲ್ಲಿ ನಿಮ್ಮ ಪ್ರೊಫೈಲ್ ಪಕ್ಕದಲ್ಲಿರುವ ಡ್ರಾಪ್-ಡೌನ್ ಆಯ್ಕೆಯನ್ನು ಆರಿಸಬೇಕಾಗುತ್ತದೆ.
ಹಂತ:5 ಇದರಲ್ಲಿ ಲ್ಯಾಗ್ವೇಂಜ್‌ ಪಕ್ಕದಲ್ಲಿ ಇರುವ ಚೇಂಜ್‌ ಆಯ್ಕೆಯನ್ನು ಟ್ಯಾಪ್ ಮಾಡಿ.

Best Mobiles in India

English summary
Netflix offers movies and TV shows in a number of different languages.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X