ಗೂಗಲ್‌ ಪೇನಲ್ಲಿ ವಹಿವಾಟು ಹಿಸ್ಟರಿಯನ್ನು ಶಾಶ್ವತವಾಗಿ ಡಿಲೀಟ್‌ ಮಾಡುವುದು ಹೇಗೆ?

|

ಜನಪ್ರಿಯ ಪಾವತಿ ಅಪ್ಲಿಕೇಶನ್‌ಗಳಲ್ಲಿ ಗೂಗಲ್‌ ಪೇ ಮುಂಚೂಣಿಯಲ್ಲಿ ಕಾಣಿಸಿಕೊಂಡಿದೆ. ನಿಮ್ಮ ಸ್ನೇಹಿತರು, ಕುಟುಂಬಸ್ಥರು, ಸ್ಥಳೀಯ ಅಂಗಡಿಗಳು ಸೇರಿದಂತೆ ಡಿಜಿಟಲ್‌ ಪಾವತಿ ಮಾಡುವುದಕ್ಕೆ ಅವಕಾಶವನ್ನು ನೀಡಲಿದೆ. ಇನ್ನು ನೀವು ನಡೆಸುವ ಪ್ರತಿ ವಾಹಿವಾಟಿಗೂ ಕ್ಯಾಶ್‌ಬ್ಯಾಕ್‌ ಆಫರ್‌, ರಿವಾರ್ಡ್‌ಗಳನ್ನು ನೀಡುತ್ತದೆ. ಇದರಿಂದ ಹೆಚ್ಚಿನ ಜನರು ಡಿಜಿಟಲ್‌ ಪಾವತಿ ಮಾಡುವುದಕ್ಕೆ ಗೂಗಲ್‌ ಪೇ ಅನ್ನು ಬಳಸುತ್ತಿದ್ದಾರೆ. ಇನ್ನು ಗೂಗಲ್‌ ಪೇ ಅಪ್ಲಿಕೇಶನ್‌ನಲ್ಲಿ ನೀವು ನಡೆಸುವ ವ್ಯವಹಾರಗಳ ಹಿಸ್ಟರಿ ಹಾಗೆಯೇ ಇರುತ್ತದೆ.

ಗೂಗಲ್‌ ಪೇ

ಹೌದು, ಗೂಗಲ್‌ ಪೇ ಮೂಲಕ ನೀವು ನಡೆಸುವ ಪ್ರತಿವಹಿವಾಟಿನ ವಿವರ ಹಿಸ್ಟರಿಯಲ್ಲಿರುತ್ತದೆ. ಇದನ್ನು ಕೆಲವೊಮ್ಮೆ ನೀವು ಡಿಲೀಟ್‌ ಮಾಡುವುದಕ್ಕೆ ಬಯಸಬಹುದು. ಆದರೆ ಕೆಲವಿರಿಗೆ ಗೂಗಲ್‌ ಪೇನಲ್ಲಿ ವಹಿವಾಟು ಹಿಸ್ಟರಿ ಡಿಲೀಟ್‌ ಮಾಡುವುದಕ್ಕೆ ಬರುವುದಿಲ್ಲ. ಹಾಗಾದ್ರೆ ನಿಮ್ಮ ಈ ವ್ಯವಹಾರಗಳ ದಾಖಲೆಯನ್ನು ಗೂಗಲ್‌ ಪೇನಲ್ಲಿ ಡಿಲೀಟ್‌ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಗೂಗಲ್‌ ಪೇನಲ್ಲಿ ನಿಮ್ಮ ವಹಿವಾಟು ಹಿಸ್ಟರಿಯನ್ನು ಶಾಶ್ವತವಾಗಿ ಡಿಲೀಟ್‌ ಮಾಡುವುದು ಹೇಗೆ?

ಗೂಗಲ್‌ ಪೇನಲ್ಲಿ ನಿಮ್ಮ ವಹಿವಾಟು ಹಿಸ್ಟರಿಯನ್ನು ಶಾಶ್ವತವಾಗಿ ಡಿಲೀಟ್‌ ಮಾಡುವುದು ಹೇಗೆ?

ಹಂತ:1 ಮೊದಲಿಗೆ ಗೂಗಲ್‌ ಕ್ರೋಮ್‌ ತೆರೆಯಿರಿ ಮತ್ತು "https://www.google.com" ವೆಬ್‌ಸೈಟ್‌ಗೆ ಭೇಟಿ ನೀಡಿ
ಹಂತ:2 "ಗೂಗಲ್‌ ಅಕೌಂಟ್‌" ಗಾಗಿ ಹುಡುಕಿ ಮತ್ತು ನಿಮ್ಮ ಖಾತೆಗೆ ಲಾಗ್ ಇನ್ ಮಾಡಿ
ಹಂತ:3 ಇದೀಗ ಮೇಲಿನ ಎಡ ಮೂಲೆಯಲ್ಲಿರುವ ಮೂರು ಅಡ್ಡ ರೇಖೆಗಳ ಮೇಲೆ ಕ್ಲಿಕ್ ಮಾಡುವ ಮೂಲಕ "ಡೇಟಾ ಮತ್ತು ಗೌಪ್ಯತೆ" ಆಯ್ಕೆಮಾಡಿ
ಹಂತ:4 "ಹಿಸ್ಟರಿ ಸೆಟ್ಟಿಂಗ್ಸ್‌" ವಿಭಾಗಕ್ಕೆ ಹೋಗಿ ಮತ್ತು "ವೆಬ್ ಮತ್ತು ಅಪ್ಲಿಕೇಶನ್ ಆಕ್ಟಿವಿಟಿ">"ಮ್ಯಾನೇಜ್ ಆಲ್ ವೆಬ್ & ಅಪ್‌ ಆಕ್ಟಿವಿಟಿ
" ಆಯ್ಕೆಮಾಡಿ.

ಗೂಗಲ್‌ಪೇ

ಹಂತ:5 ನಂತರ ಸರ್ಚ್ ಬಾರ್‌ನಲ್ಲಿ ಲಂಬವಾಗಿರುವ ಮೂರು ಸಾಲುಗಳ ಮೇಲೆ ಟ್ಯಾಪ್ ಮಾಡಿ ಮತ್ತು "ಆದರ್‌ ಗೂಗಲ್‌ ಆಕ್ಟಿವಿಟಿ" ಆಯ್ಕೆಮಾಡಿ
ಹಂತ:6 ಗೂಗಲ್‌ಪೇ ಅನುಭವದ ಅಡಿಯಲ್ಲಿ, "ಮ್ಯಾನೇಜ್‌ ಆಕ್ಟಿವಿಟಿ " ಟ್ಯಾಪ್ ಮಾಡಿ
ಹಂತ:7 ನೀವು "ಡಿಲೀಟ್‌" ಗಾಗಿ ಡ್ರಾಪ್-ಡೌನ್ ಅನ್ನು ನೋಡುತ್ತೀರಿ. ಇದರಲ್ಲಿ ನೀವು ವಹಿವಾಟಿನ ಹಿಸ್ಟರಿಯನ್ನು ಯಾವ ಭಾಗವನ್ನು ಡಿಲೀಟ್‌ ಮಾಡಲು ಬಯಸುತ್ತೀರಿ ಎಂಬುದನ್ನು ನೀವು ಆಯ್ಕೆ ಮಾಡಬಹುದು.

ಈ ಮೂಲಕ ಗೂಗಲ್‌ ಪೇ ಅಪ್ಲಿಕೇಶನ್‌ನಲ್ಲಿ ನೀವು ನಡೆಸಿದ ವಹಿವಾಟಿನ ಹಿಸ್ಟರಿಯನ್ನು ಡಿಲೀಟ್‌ ಮಾಡಬಹುದು. ಆದರೆ ವಹಿವಾಟಿನ ಹಿಸ್ಟರಿಯನ್ನು ಡಿಲೀಟ್‌ ಮಾಡಲು ಹೊಸ ಅಪ್ಡೇಟ್‌ ಆಗಲು 12 ಗಂಟೆಗಳವರೆಗೆ ಸಮಯ ತೆಗೆದುಕೊಳ್ಳುತ್ತದೆ.

ಗೂಗಲ್‌

ಇದಲ್ಲದೆ ಗೂಗಲ್‌ ಪೇನಲ್ಲಿ ಅಪರಿಚಿತ ಸಂಖ್ಯೆಗಳಿಂದ ಬರುವ ಮನಿ ರಿಕ್ವೆಸ್ಟ್‌ ಸಂಖ್ಯೆಗಳನ್ನು ನೀವು ಬ್ಲಾಕ್‌ ಮಾಡುವುದಕ್ಕೆ ಅವಕಾಶವಿದೆ. ಇದಕ್ಕಾಗಿ ನೀವು ಈ ಕೆಳಗಿನ ಹಂತಗಳನ್ನು ಅನುಸರಿಸಬೇಕಾಗುತ್ತದೆ.
* ನಿಮ್ಮ ಆಂಡ್ರಾಯ್ಡ್‌ ಫೋನ್‌ನಲ್ಲಿ ಗೂಗಲ್‌ ಪೇ ಅಪ್ಲಿಕೇಶನ್ ತೆರೆಯಿರಿ
* ನೀವು ನಿರ್ಬಂಧಿಸಲು ಬಯಸುವ ಬಳಕೆದಾರರ ಚಾಟ್‌ಬಾಕ್ಸ್ ತೆರೆಯಿರಿ
* ಮೇಲಿನ ಎಡ ಮೂಲೆಯಲ್ಲಿರುವ ಮೂರು ಲಂಬ ರೇಖೆಗಳ ಮೇಲೆ ಟ್ಯಾಪ್ ಮಾಡಿ ಮತ್ತು "ಬ್ಲಾಕ್" ಆಯ್ಕೆಮಾಡಿ.

ಐಫೋನ್ ಮೂಲಕ ಗೂಗಲ್‌ ಪೇ ನಲ್ಲಿ ಕೆಲವರನ್ನು ಬ್ಲಾಕ್ ಮಾಡಲು ಹೀಗೆ ಮಾಡಿ

ಐಫೋನ್ ಮೂಲಕ ಗೂಗಲ್‌ ಪೇ ನಲ್ಲಿ ಕೆಲವರನ್ನು ಬ್ಲಾಕ್ ಮಾಡಲು ಹೀಗೆ ಮಾಡಿ

* ಐಫೋನ್/ಐಪಾಡ್‌ ನಲ್ಲಿ ಗೂಗಲ್‌ ಪೇ ಅಪ್ಲಿಕೇಶನ್ ತೆರೆಯಿರಿ
* ನಿಮ್ಮ ಪರದೆಯ ಕೆಳಗಿನಿಂದ, ನಿಮ್ಮ ಸಂಪರ್ಕಗಳನ್ನು ನೋಡಲು ಮೇಲಕ್ಕೆ ಸ್ಲೈಡ್ ಮಾಡಿ
* ನೀವು ನಿರ್ಬಂಧಿಸಲು ಬಯಸುವ ವ್ಯಕ್ತಿಯ ಹೆಸರನ್ನು ಟ್ಯಾಪ್ ಮಾಡಿ
* 'ಮೋರ್' ಆಯ್ಕೆ ಟ್ಯಾಪ್ ಮಾಡಿ ಮತ್ತು ನಂತರ 'ಬ್ಲಾಕ್' ಆಯ್ಕೆಮಾಡಿ.

Best Mobiles in India

Read more about:
English summary
Here's the detailed guidebook on how you can delete your Google Pay transaction history permanently.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X