ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಸ್ಟೋರೇಜ್‌ ಸ್ಪೇಸ್‌ ಫ್ರೀ ಮಾಡೋದು ಹೇಗೆ?

|

ಸ್ಮಾರ್ಟ್‌ಫೋನ್‌ ಇಲ್ಲದೆ ಹೊರ ಹೋಗುವುದು ಕೂಡ ಅನುಮಾನ ಎನ್ನುವ ಕಾಲಘಟ್ಟದಲ್ಲಿ ನಾವಿದ್ದೇವೆ. ಪ್ರತಿಯೊಬ್ಬರೂ ಕೂಡ ಹೊಸ ಸ್ಮಾರ್ಟ್‌ಫೋನ್‌ ಹೊಂದುವುದಕ್ಕೆ ಬಯಸುತ್ತಾರೆ. ಇನ್ನು ಸ್ಮಾರ್ಟ್‌ಫೋನ್‌ ಕೊಂಡುವಾಗ ಹಲವು ವಿಚಾರಗಳನ್ನು ಗಮನಿಸಲೇಬೇಕು. ಕ್ಯಾಮೆರಾ ವಿಶೇಷ, ಡಿಸ್‌ಪ್ಲೇ, ಸ್ಟೋರೇಜ್‌ ವಿಚಾರಗಳು ಪ್ರಮುಖವಾಗುತ್ತದೆ. ಅದರಲ್ಲೂ ನಿಮ್ಮ ಸ್ಮಾರ್ಟ್‌ಫೋನ್‌ ಸ್ಟೋರೇಜ್‌ ಸ್ಪೇಸ್‌ 128GB ಅಥವಾ 64 GB ಗಿಂತ ಕಡಿಮೆಯಿದ್ದರೆ, ಹೆಚ್ಚಿನ ಫೈಲ್‌ ಸಂಗ್ರಹ ಆಗುತ್ತಿದ್ದ ಹಾಗೇ ಸ್ಟೋರೇಜ್‌ ಸಮಸ್ಯೆ ಸೃಷ್ಟಿಯಾಗುತ್ತದೆ.

ಸ್ಟೋರೇಜ್‌

ಹೌದು, ಸ್ಮಾರ್ಟ್‌ಫೋನ್‌ಗಳಲ್ಲಿ ಸ್ಟೋರೇಜ್‌ ಸಾಮರ್ಥ್ಯದ ಕಡಿಮೆ ಇದ್ದರೆ ನಿಮಗೆ ಫೈಲ್‌ ಸ್ಟೋರೇಜ್‌ ಮಾಡುವುದು ಕಷ್ಟವಾಗಲಿದೆ. ಹೆಚ್ಚಿನ ಫೈಲ್‌, ಅಪ್ಲಿಕೇಶನ್‌ ಡೌನ್‌ಲೋಡ್‌ ಮಾಡಿದರೆ ನೋಟಿಫಿಕೇಶನ್ ಬಾರ್‌ನಲ್ಲಿ 'ಔಟ್ ಆಫ್ ಸ್ಟೋರೇಜ್' ಸಂದೇಶ ಬರಲಿದೆ. ಇಂತಹ ಸಮಯದಲ್ಲಿ ಸ್ಟೋರೇಜ್‌ ಸ್ಪೇಸ್‌ ಅನ್ನು ಫ್ರೀಗೊಳಿಸಬೇಕಾದ ಅನಿವಾರ್ಯತೆ ಇದೆ. ತಮಗೆ ಬೇಡವಾದ ಅಪ್ಲಿಕೇಶನ್‌ಗಳನ್ನು ಡಿಲೀಟ್‌ ಮಾಡುತ್ತಾರೆ. ಈ ಮೂಲಕ ಸ್ಟೋರೇಜ್‌ ಸ್ಪೇಸ್‌ ಫ್ರೀ ಮಾಡಲು ಮುಂದಾಗುತ್ತಾರೆ. ಹಾಗೊಂದು ವೇಳೆ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಸ್ಟೋರೇಜ್‌ ಕಂಪ್ಲೀಟ್‌ ಆಗಿದ್ದರೆ ಸ್ಟೋರೇಜ್‌ ಸ್ಪೇಸ್‌ ಫ್ರೀ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಸ್ಟೋರೇಜ್

ಫೋನ್ ಸ್ಟೋರೇಜ್ ಫುಲ್ ಹಾಗೂ ಬೇಗ ಬ್ಯಾಟರಿ ಖಾಲಿ ಆಗುವುದು ಕೆಲವು ಸ್ಮಾರ್ಟ್‌ಫೋನ್ ಬಳಕೆದಾರರ ಸಮಸ್ಯೆಯಾಗಿರುತ್ತದೆ. ಸ್ಟೋರೇಜ್ ಫುಲ್‌ನಿಂದಾಗಿ ಹೊಸ ಆಪ್ ಡೌನ್‌ಲೋಡ್, ವಿಡಿಯೋ, ಡೌನ್‌ಲೋಡ್ ಕಾರ್ಯಗಳು ನಿಧಾನವಾಗುತ್ತವೆ. ಹಾಗಾದ್ರೆ ಸ್ಮಾರ್ಟ್‌ಫೋನ್‌ನಲ್ಲಿ ಸ್ಟೋರೇಜ್‌ ಸ್ಪೇಸ್‌ ಪ್ರೀ ಮಾಡೋದು ಹೇಗೆ ಅನ್ನೊದನ್ನ ಕೆಳಗಿನ ಹಂತಗಳಲ್ಲಿ ತಿಳಿಯಿರಿ.

ಸ್ಮಾರ್ಟ್‌ಫೋನ್‌ನಲ್ಲಿ ಸ್ಟೋರೇಜ್‌ ಸ್ಪೇಸ್‌ ಫ್ರೀ ಮಾಡುವುದು ಹೇಗೆ?

ಸ್ಮಾರ್ಟ್‌ಫೋನ್‌ನಲ್ಲಿ ಸ್ಟೋರೇಜ್‌ ಸ್ಪೇಸ್‌ ಫ್ರೀ ಮಾಡುವುದು ಹೇಗೆ?

ಹಂತ:1 ಮೊದಲಿಗೆ ನಿಮ್ಮ ಸ್ಮಾರ್ಟ್‌ಫೋನ್‌ನ ಸೆಟ್ಟಿಂಗ್‌ಗೆ ಹೋಗಿ
ಹಂತ:2 ನಂತರ ಸ್ಟೋರೇಜ್‌ ಅನ್ನು ಆಯ್ಕೆಮಾಡಿ
ಹಂತ:3 ಇಲ್ಲಿ ನೀವು ಫೈಲ್ ವರ್ಗಗಳ ಪಟ್ಟಿಯನ್ನು ಕಾಣಲಿದೆ. ಇಲ್ಲಿ 'ಫ್ರೀ ಅಪ್ ಸ್ಪೇಸ್' ಆಯ್ಕೆಯನ್ನು ಕ್ಲಿಕ್ ಮಾಡಿ
ಹಂತ:4 ನಂತರ ಗೂಗಲ್ ಫೈಲ್ಸ್ ಆಪ್ ಅಥವಾ 'ರಿಮೋವ್‌ ಐಟಂ' ಫೀಚರ್ ಆಯ್ಕೆ ಮಾಡುವ ಆಯ್ಕೆ ಕಾಣಲಿದೆ.
ಹಂತ:5 'ರಿಮೋವ್‌ ಐಟಂ ಫೀಚರ್ಸ್‌ ನೀವು ಬ್ಯಾಕಪ್ ಮಾಡಿರುವ ಫೋಟೋಗಳು ಮತ್ತು ವೀಡಿಯೊಗಳನ್ನು ಡಿಲೀಟ್‌ ಮಾಡುವ ಆಯ್ಕೆಯನ್ನು ನೀಡಲಿದೆ.
ಹಂತ:6 ಇದಲ್ಲದೆ ಹೆಚ್ಚುವರಿಯಾಗಿ, ನೀವು ಡೌನ್‌ಲೋಡ್ ಮಾಡಿದ ಫೈಲ್‌ಗಳು ಮತ್ತು ನೀವು ಬಳಸದ ಅಪ್ಲಿಕೇಶನ್‌ಗಳನ್ನು ಸಹ ತೆಗೆದುಹಾಕಬಹುದು

ಸ್ಟೋರೇಜ್‌

ಈ ಮೂಲಕ ನಿಮ್ಮ ಸ್ಟೋರೇಜ್‌ ಸ್ಪೇಸ್‌ ಅನ್ನು ಫ್ರೀ ಮಾಡಬಹುದು. ಸಾಮಾನ್ಯವಾಗಿ ಫೋನ್‌ನ ಹೆಚ್ಚಿನ ಮೆಮೊರಿ ಸ್ಟೋರೇಜ್‌ಗೆ ಹೋಗುತ್ತದೆ, ಆದ್ದರಿಂದ ಮೊದಲು ಸ್ಟೋರೇಜ್‌ ಸ್ಪೇಸ್‌ ಅನ್ನು ಫ್ರೀ ಮಾಡಬೇಕಾಗುತ್ತದೆ. ಹೆಚ್ಚುವರಿಯಾಗಿ, ನಿಮ್ಮ ಸ್ಮಾರ್ಟ್‌ಫೋನ್‌ ಸ್ಟೋರೇಜ್‌ ಸ್ಪೇಸ್‌ ಅನ್ನು ಪ್ರೀ ಮಾಡಲು ಸ್ಮಾರ್ಟ್ ಸ್ಟೋರೇಜ್ ಟಾಗಲ್ ಆಯ್ಕೆ ಕೂಡ ಲಭ್ಯವಿದೆ. ನೀವು ಸ್ಮಾರ್ಟ್ ಸ್ಟೋರೇಜ್ ಟಾಗಲ್ ಅನ್ನು ಆನ್ ಮಾಡಿದರೆ, ಡಿವೈಸ್‌ ಆಟೋಮ್ಯಾಟಿಕ್‌ ಬ್ಯಾಕಪ್ ಮಾಡಿದ ಫೋಟೋಗಳನ್ನು 30, 60, ಅಥವಾ 90 ದಿನಗಳ ನಂತರ ಡಿಲೀಟ್‌ ಮಾಡಲಿದೆ.

ಸ್ಮಾರ್ಟ್‌ಫೋನ್‌ನಲ್ಲಿ ನೀವು ಬಳಸದ ಅಪ್ಲಿಕೇಶನ್‌ಗಳನ್ನು ರಿಮೋವ್‌ ಮಾಡುವುದು ಹೇಗೆ?

ಸ್ಮಾರ್ಟ್‌ಫೋನ್‌ನಲ್ಲಿ ನೀವು ಬಳಸದ ಅಪ್ಲಿಕೇಶನ್‌ಗಳನ್ನು ರಿಮೋವ್‌ ಮಾಡುವುದು ಹೇಗೆ?

ಹಂತ:1 ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಪ್ಲೇ ಸ್ಟೋರ್ ತೆರೆಯಿರಿ.
ಹಂತ:2 ನಂತರ ಪ್ಲೇ ಸ್ಟೋರ್‌ನಲ್ಲಿ ಎಡ ಮೂಲೆಯಿಂದ ಮೆನು ತೆರೆಯಿರಿ ಮತ್ತು 'ಮೈ ಅಪ್ಲಿಕೇಶನ್‌ಗಳು ಮತ್ತು ಗೇಮ್‌ಗಳಿಗೆ ಹೋಗಿ.
ಹಂತ:3 ಇದರಲ್ಲಿ ಮೇಲಿನ ಮೆನು ಸಾಲಿನಿಂದ 'ಇನ್ಸ್ಟಾಲ್' ಮೇಲೆ ಟ್ಯಾಪ್ ಮಾಡಿ.
ಹಂತ:4 ಇಲ್ಲಿ ನೀವು ಪಟ್ಟಿಯನ್ನು ಫಿಲ್ಟರ್ ಮಾಡುವ ಆಯ್ಕೆಯನ್ನು ನೀಡುತ್ತದೆ.
ಹಂತ:5 ಇಲ್ಲಿ 'ಲಾಸ್ಟ್ ಯೂಸ್ಡ್' ಅನ್ನು ಆಯ್ಕೆ ಮಾಡಿ.
ಹಂತ:6 ನೀವು ಹೆಚ್ಚು ಬಳಸಿದ ಆಪ್‌ಗಳನ್ನು ಮೇಲೆ ತೋರಿಸಲಾಗಿದೆ. ಪಟ್ಟಿಯಲ್ಲಿ ಕೆಳಗೆ ತೋರಿಸಿರುವ ಅಪ್ಲಿಕೇಶನ್‌ಗಳನ್ನು ಅಗತ್ಯಕ್ಕೆ ತಕ್ಕಂತೆ ತೆಗೆದುಹಾಕಬಹುದು.

ಅನಗತ್ಯ ಆಪ್‌ಗಳ ಅನ್‌ಇನ್‌ಸ್ಟಾಲ್/ಡಿಲೀಟ್ ಮಾಡುವುದರಿಂದ ಸ್ಟೋರೇಜ್ ಜೊತೆಗೆ ಬ್ಯಾಟರಿ ಲೈಫ್‌ಗೂ ಸಹಾಯಕವಾಗಲಿದೆ. ಅನಗತ್ಯ ಆಪ್‌ಗಳು ಹಿನ್ನಲೆಯಲ್ಲಿ ಬ್ಯಾಟರಿ ಕಬಳಿಸುವುದು ತಡೆಯಬಹುದು. ಬ್ಯಾಟರಿ ಬಾಳಿಕೆ ಹೆಚ್ಚಿಸಬಹುದು.

ಆಂಡ್ರಾಯ್ಡ್‌ನಲ್ಲಿ ಆಪ್ಸ್‌ ಡಿಲೀಟ್ ಮಾಡುವುದು ಹೇಗೆ

ಆಂಡ್ರಾಯ್ಡ್‌ನಲ್ಲಿ ಆಪ್ಸ್‌ ಡಿಲೀಟ್ ಮಾಡುವುದು ಹೇಗೆ

ಆಂಡ್ರಾಯ್ಡ್‌ನಲ್ಲಿ ಅಪ್ಲಿಕೇಶನ್‌ಗಳನ್ನು ಅನ್‌ಇನ್‌ಸ್ಟಾಲ್ ಮಾಡಲು, ಮೊದಲಿಗೆ ಡಿಲೀಟ್ ಮಾಡಲಿಚ್ಛಿಸುವ ಅಪ್ಲಿಕೇಶನ್ ಅನ್ನು ಒತ್ತಿ ಹಿಡಿದಿಟ್ಟುಕೊಳ್ಳವುದು. ನಂತರ ಅದನ್ನು ಡಿಲೀಟ್ ಮಾಡಲು ಪರದೆಯ ಮೇಲಿನ ಬಲಭಾಗದಲ್ಲಿರುವ ಕಾಣುವ ಅನ್‌ಇನ್‌ಸ್ಟಾಲ್‌ ಆಯ್ಕೆ ಎಳೆಯಿರಿ.

Most Read Articles
Best Mobiles in India

English summary
You can improve the performance of the phone by freeing up the internal storage in some easy ways.to know more visit to kannada.gizbot.com.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X