ಇನ್‌ಸ್ಟಾಗ್ರಾಮ್‌ನಲ್ಲಿ ನಿಮ್ಮ ಫಾಲೋವರ್ಸ್‌ ಲಿಸ್ಟ್‌ ಅನ್ನು ಹೈಡ್‌ ಮಾಡುವುದು ಹೇಗೆ?

|

ಮೆಟಾ ಒಡೆತನದ ಇನ್‌ಸ್ಟಾಗ್ರಾಮ್‌ ಜನಪ್ರಿಯ ಸೊಶೀಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ಒಂದಾಗಿದೆ. ಇನ್ನು ಬಳಕೆದಾರರ ಅನುಕೂಲಕ್ಕಾಗಿ ಇನ್‌ಸ್ಟಾಗ್ರಾಮ್‌ ಅನೇಕ ಫೀಚರ್ಸ್‌ಗಳನ್ನು ಪರಿಚಯಿಸಿದೆ. ಇದರಲ್ಲಿ ಬಳಕೆದಾರರ ಗೌಪ್ಯತೆ ಮತ್ತು ಪ್ರೈವೆಸಿ ಕಾಪಾಡುವ ಫೀಚರ್ಸ್‌ಗಳನ್ನು ಕೂಡ ಒಳಗೊಂಡಿದೆ. ಆದರೆ ಇನ್‌ಸ್ಟಾಗ್ರಾಮ್‌ ಸಾಕಷ್ಟು ಗೌಪ್ಯತೆ ಫೀಚರ್ಸ್‌ಗಳನ್ನು ಒದಗಿಸಿದರೂ ಕೂಡ ನೀವು ಕೆಲವು ತಂತ್ರಗಳೊಂದಿಗೆ ನಿಮ್ಮನ್ನು ನೀವು ಕಾಳಜಿ ವಹಿಸಬಹುದಾಗಿದೆ.

ಇನ್‌ಸ್ಟಾಗ್ರಾಮ್‌

ಹೌದು, ಇನ್‌ಸ್ಟಾಗ್ರಾಮ್‌ನಲ್ಲಿ ಗೌಪ್ಯತೆ ಫೀಚರ್ಸ್‌ಗಳ ಮೂಲಕ ನಿಮ್ಮ ಪ್ರೈವೆಸಿಯನ್ನು ಕಾಪಾಡಿಕೊಳ್ಳಬಹುದಾಗಿದೆ. ಇದರಿಂದ ನಿಮ್ಮ ಇನ್‌ಸ್ಟಾಗ್ರಾಮ್‌ ಫಾಲೋವರ್ಸ್‌ ಅನ್ನು ಬೇರೆಯವರು ನೋಡದ ರೀತಿಯಲ್ಲಿಯೂ ಸಹ ಸೆಟ್‌ ಮಾಡಿಕೊಳ್ಳಬಹುದು. ಇದರಿಂದ ಬೇರೆಯವರು ನಿಮ್ಮ ಅನುಯಾಯಿಗಳ ಪಟ್ಟಿಯನ್ನು ನೋಡುವುದಕ್ಕೆ ಸಾಧ್ಯವಾಗುವುದಿಲ್ಲ. ಹಾಗಾದ್ರೆ ಇನ್‌ಸ್ಟಾಗ್ರಾಮ್‌ನಲ್ಲಿ ನಿಮ್ಮ ಫಾಲೋವರ್ಸ್‌ ಲಿಸ್ಟ್‌ ಅನ್ನು ಹೈಡ್‌ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಇನ್‌ಸ್ಟಾಗ್ರಾಮ್‌ನಲ್ಲಿ ಫಾಲೋವರ್ಸ್‌ ಲಿಸ್ಟ್‌ ಅನ್ನು ಹೈಡ್‌ ಮಾಡುವುದು ಹೇಗೆ?

ಇನ್‌ಸ್ಟಾಗ್ರಾಮ್‌ನಲ್ಲಿ ಫಾಲೋವರ್ಸ್‌ ಲಿಸ್ಟ್‌ ಅನ್ನು ಹೈಡ್‌ ಮಾಡುವುದು ಹೇಗೆ?

ಇನ್‌ಸ್ಟಾಗ್ರಾಮ್‌ನಲ್ಲಿ ಫಾಲೋವರ್ಸ್‌ ಲಿಸ್ಟ್‌ ಮತ್ತು ಫಾಲೋವರ್ಸ್‌ಗಳನ್ನು ನೀಡು ಹೈಡ್‌ ಮಾಡುವುದಕ್ಕೆ ಕೆಲವು ಮಾರ್ಗಗಳಿವೆ. ಇದರಲ್ಲಿ ನೀವು ಖಾಸಗಿ ಖಾತೆಯನ್ನು ಹೊಂದಿದ್ದರೆ, ನೀವು ಅನುಸರಿಸುವವರ ಸಂಖ್ಯೆಯನ್ನು ಮರೆಮಾಡಲು ಸಾಧ್ಯವಿಲ್ಲ. ಆದರೆ ನೀವು ನಿಜವಾಗಿಯೂ ನಿಮ್ಮನ್ನು ಅನುಸರಿಸುತ್ತಿರುವವರು ಮತ್ತು ನೀವು ಯಾರನ್ನು ಅನುಸರಿಸುತ್ತೀರಿ ಅನ್ನೊದನ್ನ ಹೈಡ್‌ ಮಾಡುವುದಕ್ಕೆ ಅವಕಾಶವಿದೆ.

ನಿರ್ದಿಷ್ಟ

ಇದಲ್ಲದೆ ನೀವು ನಿರ್ದಿಷ್ಟ ಬಳಕೆದಾರರನ್ನು ನಿಮ್ಮ ಪ್ರೊಫೈಲ್ ವೀಕ್ಷಿಸದಂತೆ ತಡೆಯಬೇಕಾದರೆ ನೀವು ಅವರನ್ನು ನಿಮ್ಮ ಖಾತೆಯಿಂದ ಬ್ಲಾಕ್‌ ಮಾಡಬೇಕಾಗುತ್ತದೆ. ನೀವು ಬ್ಲಾಕ್‌ ಮಾಡಿದ ಅಕೌಂಟ್‌ನಿಂದ ನಿಮ್ಮ ಪ್ರೊಫೈಲ್‌ ಅನ್ನು ಹುಡುಕುವುದಕ್ಕೆ ಸಾಧ್ಯವಾಗುವುದಿಲ್ಲ. ಜೊತೆಗೆ ನಿಮ್ಮ ಫಾಲೋವರ್ಸ್‌ ಲಿಸ್ಟ್‌ ಅನ್ನು ನೋಡುವುದಕ್ಕೆ ಸಾಧ್ಯವಾಗುವುದಿಲ್ಲ. ಜೊತೆಗೆ ನಿಮ್ಮ ಖಾತೆಯ ಫಾಲೋವರ್ಸ್‌ ಲಿಸ್ಟ್‌ನಿಂದ ಯಾವುದೇ ವಿವರಗಳನ್ನು ಹುಡುಕುವುದಕ್ಕೆ ಅವಕಾಶ ಸಿಗುವುದಿಲ್ಲ. ಆದರೆ ಅವರು ಬೇರೆ ಅಕೌಂಟ್‌ ಅನ್ನು ಬಳಸಿದರೆ ಮಾತ್ರ ನಿಮ್ಮ ಪ್ರೊಫೈಲ್‌ ನೋಡುವುದಕ್ಕೆ ಸಾಧ್ಯವಾಗಲಿದೆ.

ಇನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಯಾವುದೇ ಬಳಕೆದಾರರನ್ನು ಬ್ಲಾಕ್‌ ಮಾಡಬೇಕಾದರೆ, ಮೊದಲಿಗೆ ಅವರ ಪ್ರೊಫೈಲ್‌ಗೆ ಹೋಗಬೇಕಾಗುತ್ತದೆ. ನಂತರ ಪ್ರೋಪೈಲ್‌ನಲ್ಲಿ ಮೇಲಿನ ಬಲ ಮೂಲೆಯಲ್ಲಿರುವ ಮೂರು ಡಾಟ್ ಮೆನುವಿನಲ್ಲಿ ಟ್ಯಾಪ್ ಮಾಡಿ ಮತ್ತು ಬ್ಲಾಕ್ ಆಯ್ಕೆಮಾಡಿ. ಹೀಗೆ ಮಾಡುವ ಮೂಲಕ ನೀವು ಇಷ್ಟ ಪಡದಿರುವ ಬಳಕೆದಾರರನ್ನು ಬ್ಲಾಕ್‌ ಮಾಡಬಹುದಾಗಿದೆ. ಇದಲ್ಲದೆ ಪ್ಲಾಟ್‌ಫಾರ್ಮ್‌ನಲ್ಲಿ ಕೂಡ ಬಳಕೆದಾರರನ್ನು ನಿರ್ಬಂಧಿಸುವ ಆಯ್ಕೆಯನ್ನು ಇನ್‌ಸ್ಟಾಗ್ರಾಮ್‌ ನೀಡಿದೆ. ಇದರಲ್ಲಿಯೂ ಬ್ಲಾಕ್ ಆಯ್ಕೆಯಂತೆಯೇ ಪ್ರೊಫೈಲ್ ಮೆನುವಿನಲ್ಲಿ ಈ ಆಯ್ಕೆಯನ್ನು ನೀಡಲಾಗಿದೆ.

ಇನ್‌ಸ್ಟಾಗ್ರಾಮ್‌ನಲ್ಲಿ ಚಾಟ್‌ಗಳನ್ನು ಹೈಡ್‌ ಮಾಡುವುದು ಹೇಗೆ?

ಇನ್‌ಸ್ಟಾಗ್ರಾಮ್‌ನಲ್ಲಿ ಚಾಟ್‌ಗಳನ್ನು ಹೈಡ್‌ ಮಾಡುವುದು ಹೇಗೆ?

ಇನ್‌ಸ್ಟಾಗ್ರಾಮ್‌ನಲ್ಲಿ ನಿಮ್ಮ ಸಂಭಾಷಣೆಗಳನ್ನು ಹೈಡ್‌ ಮಾಡಲು ಎರಡು ಮಾರ್ಗಗಳಿವೆ.
ವಿಧಾನ-1
ಹಂತ:1 ಮೊದಲಿಗೆ ಇನ್‌ಸ್ಟಾಗ್ರಾಮ್‌ ಅಪ್ಲಿಕೇಶನ್ ತೆರೆಯಿರಿ ಮತ್ತು ಚಾಟ್‌ಗಳಿಗೆ ಹೋಗಿ
ಹಂತ:2 ನೀವು ಹೈಡ್‌ ಮಾಡಲು ಬಯಸುವ ಚಾಟ್ ಅನ್ನು ತೆರೆಯಿರಿ
ಹಂತ:3 ಚಾಟ್ ಅನ್ನು ಹೈಡ್‌ ಮಾಡಲು ವ್ಯಾನಿಶ್ ಮೋಡ್ ಅನ್ನು ಸಕ್ರಿಯಗೊಳಿಸಲು ಮೇಲಕ್ಕೆ ಸ್ವೈಪ್ ಮಾಡಿ
ಹಂತ:4 ಇದೀಗ ನೀವು ನಿಮ್ಮ ಸಂಭಾಷಣೆಯನ್ನು ಮುಂದುವರಿಸಬಹುದು. ಮೆಸೇಜ್‌ ಸ್ವೀಕರಿಸುವವರು ನಿಮ್ಮ ಪಠ್ಯವನ್ನು ಓದಿದ ನಂತರ ಅವರು ಡಿಸ್‌ಅಪಿಯರ್‌ ಆಗಲಿದ್ದಾರೆ. ನೀವು GIF ಗಳು, ಚಿತ್ರಗಳು ಮತ್ತು ವೀಡಿಯೊಗಳನ್ನು ಈ ಮೋಡ್‌ನಲ್ಲಿ ಹಂಚಿಕೊಳ್ಳಬಹುದಾಗಿದೆ. ಇದಲ್ಲದೆ ವ್ಯಾನಿಶ್‌ ಮೋಡ್‌ ಅನ್ನು ಮತ್ತೆ ಸ್ವೈಪ್ ಮಾಡುವ ಮೂಲಕ ನೀವು ಈ ಮೋಡ್ ಅನ್ನು ಆಫ್ ಮಾಡಬಹುದು.

ವಿಧಾನ-2
ಹಂತ:1 ಮೊದಲಿಗೆ ನಿಮ್ಮ ಪ್ರೊಫೈಲ್ ತೆರೆಯಿರಿ ಮತ್ತು ಮೇಲಿನ ಬಲ ಮೂಲೆಯಲ್ಲಿರುವ ಮೂರು ಮೆನು ಸಾಲುಗಳ ಮೇಲೆ ಟ್ಯಾಪ್ ಮಾಡಿ
ಹಂತ:2 ಸೆಟ್ಟಿಂಗ್ಸ್‌>ಅಕೌಂಟ್‌> ಖಾತೆ ಪ್ರಕಾರವನ್ನು ಬದಲಿಸಿ> ಬ್ಯುಸಿನೆಸ್‌ ಅಕೌಂಟ್‌ಗೆ ಬದಲಿಸಿ
ಹಂತ:3 ನಂತರ, ಸಂದೇಶಗಳ ವಿಭಾಗಕ್ಕೆ ಹೋಗಿ ಮತ್ತು ನೀವು ಹೈಡ್‌ ಮಾಡಲು ಬಯಸುವ ಚಾಟ್ ಅನ್ನು ತೆರೆಯಿರಿ
ಹಂತ:4 ಈಗ 'ಮೂವ್ ಟು ಜನರಲ್' ಆಯ್ಕೆಯನ್ನು ಟ್ಯಾಪ್ ಮಾಡಿ
ಹಂತ:5 ನಂತರ ಸೆಟ್ಟಿಂಗ್ಸ್‌ಗೆ ಹಿಂತಿರುಗಿ ಮತ್ತು ವೈಯಕ್ತಿಕ ಖಾತೆಗೆ ಬದಲಿಸಿ.
ಹಂತ:6 ಇದೀಗ ನಿಮ್ಮ ಸಂಬಂಧಿತ ಚಾಟ್‌ಗಳು ಕಣ್ಮರೆಯಾಗುತ್ತವೆ.

Best Mobiles in India

Read more about:
English summary
There are a few ways you can hide the following list and followers on Instagram.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X