ವಾಟ್ಸಾಪ್‌ನಲ್ಲಿ ಸ್ಕ್ರೀನ್ ಲಾಕ್ ಫೀಚರ್ಸ್‌ ಅನ್ನು ಸಕ್ರಿಯಗೊಳಿಸುವುದು ಹೇಗೆ?

|

ವಾಟ್ಸಾಪ್‌ ಅಪ್ಲಿಕೇಶನ್‌ ಬಳಕೆದಾರರ ನೆಚ್ಚಿನ ಜನಪ್ರಿಯ ಮೆಸೇಜಿಂಗ್‌ ಅಪ್ಲಿಕೇಶನ್‌ ಎನಿಸಿಕೊಂಡಿದೆ. ಬಳಕೆದಾರರ ಅನುಕೂಲಕ್ಕಾಗಿ ಅನೇಕ ಫೀಚರ್ಸ್‌ಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಇನ್ನು ವಾಟ್ಸಾಪ್‌ನ ಎಲ್ಲಾ ಚಾಟ್‌ಗಳು ಎಂಡ್ ಟು ಎಂಡ್ ಎನ್‌ಕ್ರಿಪ್ಟ್ ಆಗಿವೆ. ಆದರೂ ಕೂಡ ವಾಟ್ಸಾಪ್‌ ಬಳಕೆದಾರರು ತಮ್ಮ ಚಾಟ್‌ಗಳು ಮತ್ತು ಡೇಟಾವನ್ನು ಸುರಕ್ಷಿತವಾಗಿರಿಸಲು ಹಲವು ಸೆಕ್ಯುರ್‌ ಫೀಚರ್ಸ್‌ಗಳನ್ನು ನೀಡುತ್ತಿದೆ. ಈ ಫೀಚರ್ಸ್‌ಗಳಲ್ಲಿ ಸ್ಕ್ರೀನ್‌ ಲಾಕ್‌ ಫೀಚರ್ಸ್‌ ಕೂಡ ಒಂದಾಗಿದೆ.

ವಾಟ್ಸಾಪ್‌

ಹೌದು, ವಾಟ್ಸಾಪ್‌ ಅಪ್ಲಿಕೇಶನ್‌ ಒಳಗೊಡಿರುವ ಸೆಕ್ಯುರ್‌ ಫೀಚರ್ಸ್‌ಗಳಲ್ಲಿ ಸ್ಕ್ರೀನ್‌ ಲಾಕ್‌ ಫೀಚರ್ಸ್‌ ಕೂಡ ಸೇರಿದೆ. ಈ ಹೊಸ ಫೀಚರ್ಸ್‌ ಆಂಡ್ರಾಯ್ಡ್‌ ಮತ್ತು ಐಒಎಸ್‌ ಎರಡೂ ಪ್ಲಾಟ್‌ಫಾರ್ಮ್‌ಗಳಲ್ಲಿ ಕೂಡ ಲಭ್ಯವಿದೆ. ವಾಟ್ಸಾಪ್‌ ಸ್ಕ್ರೀನ್ ಲಾಕ್ ಫೀಚರ್ಸ್‌ ಫಿಂಗರ್‌ಪ್ರಿಂಟ್ ಜೊತೆಗೆ ಫೇಸ್ ಅನ್‌ಲಾಕ್‌ನೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗಾದ್ರೆ ನಿಮ್ಮ ವಾಟ್ಸಾಪ್‌ ಖಾತೆಯಲ್ಲಿ ತಕ್ಷಣವೇ ಸ್ಕ್ರೀನ್ ಲಾಕ್ ಫೀಚರ್ಸ್‌ ಅನ್ನು ಆಕ್ಟಿವ್‌ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಆಂಡ್ರಾಯ್ಡ್‌ ನಲ್ಲಿ ವಾಟ್ಸಾಪ್‌ ಸ್ಕ್ರೀನ್ ಲಾಕ್ ಫೀಚರ್ಸ್‌ ಅನ್ನು ಸಕ್ರಿಯಗೊಳಿಸುವುದು ಹೇಗೆ?

ಆಂಡ್ರಾಯ್ಡ್‌ ನಲ್ಲಿ ವಾಟ್ಸಾಪ್‌ ಸ್ಕ್ರೀನ್ ಲಾಕ್ ಫೀಚರ್ಸ್‌ ಅನ್ನು ಸಕ್ರಿಯಗೊಳಿಸುವುದು ಹೇಗೆ?

ಹಂತ:1 ಮೊದಲಿಗೆ ವಾಟ್ಸಾಪ್‌ ಅಪ್ಲಿಕೇಶನ್ ಅನ್ನು ಅಪ್ಡೇಟ್‌ ಮಾಡಿ, ನಂತರ ಅಪ್ಲಿಕೇಶನ್ ತೆರೆಯಿರಿ.
ಹಂತ:2 ನಂತರ ಸ್ಕ್ರೀನ್‌ ಮೇಲಿನ ಬಲ ಮೂಲೆಯಲ್ಲಿ ತೋರಿಸಿರುವ ಮೂರು-ಡಾಟ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
ಹಂತ:3 ಇದೀಗ ಸೆಟ್ಟಿಂಗ್ಸ್‌ ಮೆನುಗೆ ಹೋಗಿ.
ಹಂತ:4 ನಂತರ ಪಟ್ಟಿಯಲ್ಲಿನ ಅಕೌಂಟ್‌ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
ಹಂತ:5 ಪ್ರೈವೆಸಿ ಮೇಲೆ ಟ್ಯಾಪ್ ಮಾಡಿ.
ಹಂತ:6 ಕೆಳಗೆ ಸ್ಕ್ರಾಲ್ ಮಾಡಿ ಮತ್ತು ಫಿಂಗರ್‌ಪ್ರಿಂಟ್ ಲಾಕ್ ಆಯ್ಕೆಯನ್ನು ಟ್ಯಾಪ್ ಮಾಡಿ.
ಹಂತ:7 ನಂತರ ಫಿಂಗರ್‌ಪ್ರಿಂಟ್‌ನೊಂದಿಗೆ ಅನ್‌ಲಾಕ್‌ನ ಮುಂದಿನ ಟಾಗಲ್ ಅನ್ನು ನೀವು ಆಕ್ಟಿವ್‌ ಮಾಡಬೇಕಾಗುತ್ತದೆ.

ಒಂದು ವೇಳೆ ನಿಮ್ಮ ಡಿವೈಸ್‌ ಫಿಂಗರ್‌ಪ್ರಿಂಟ್ ಲಾಕ್ ಹೊಂದಿದ್ದರೆ, ನೀವು ಅದನ್ನು ಪ್ರತ್ಯೇಕವಾಗಿ ವಾಟ್ಸಾಪ್‌ಗೆ ಸೆಟ್‌ ಮಾಡಬೇಕಾದ ಅವಶ್ಯಕತೆ ಬರುವುದಿಲ್ಲ. ನೀವು ಒಮ್ಮೆ ಸ್ಕ್ರೀನ್ ಲಾಕ್ ಫೀಚರ್ಸ್‌ ಆಕ್ಟಿವ್‌ ಮಾಡಿದರೆ, ನೀವು ಪ್ರತಿ ಬಾರಿ ಅಪ್ಲಿಕೇಶನ್ ಅನ್ನು ತೆರೆಯುವಾಗ ನೀವು ಪಿನ್‌ ಅಥವಾ ಬಯೋಮೆಟ್ರಿಕ್ ಅನ್ನು ಇನ್‌ಪುಟ್ ಮಾಡಬೇಕಾಗುತ್ತದೆ.

ಐಫೋನ್‌ನಲ್ಲಿ ವಾಟ್ಸಾಪ್‌ ಸ್ಕ್ರೀನ್ ಲಾಕ್ ಅನ್ನು ಆಕ್ಟಿವ್‌ ಮಾಡುವುದು ಹೇಗೆ?

ಐಫೋನ್‌ನಲ್ಲಿ ವಾಟ್ಸಾಪ್‌ ಸ್ಕ್ರೀನ್ ಲಾಕ್ ಅನ್ನು ಆಕ್ಟಿವ್‌ ಮಾಡುವುದು ಹೇಗೆ?

ಹಂತ:1 ಮೊದಲಿಗೆ ವಾಟ್ಸಾಪ್‌ ಅಪ್ಲಿಕೇಶನ್ ತೆರೆಯಿರಿ.
ಹಂತ:2 ಮೊಬೈಲ್ ಸ್ಕ್ರೀನ್‌ ಬಲಭಾಗದಲ್ಲಿ ತೋರಿಸಿರುವ ಸೆಟ್ಟಿಂಗ್ಸ್‌ ಮೆನುಗೆ ಹೋಗಿ.
ಹಂತ:3 ನಂತರ ಲಿಸ್ಟ್‌ನಲ್ಲಿರುವ ಅಕೌಂಟ್‌ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
ಹಂತ:4 ಮುಂದೆ, ನೀವು ಗೌಪ್ಯತೆ ಆಯ್ಕೆಯನ್ನು ಟ್ಯಾಪ್ ಮಾಡಬೇಕಾಗುತ್ತದೆ.
ಹಂತ:5 ಕೆಳಗೆ ಸ್ಕ್ರಾಲ್ ಮಾಡಿ ಮತ್ತು ಸ್ಕ್ರೀನ್ ಲಾಕ್ ಆಯ್ಕೆಯನ್ನು ಕ್ಲಿಕ್ ಮಾಡಿ.
ಹಂತ:6 ನೀವು ಇದರಲ್ಲಿ ಟಾಗಲ್ ಅನ್ನು ಆಕ್ಟಿವ್‌ ಮಾಡಬೇಕಾಗುತ್ತದೆ.

ಇನ್ನು ಐಫೋನ್‌ನಲ್ಲಿ ನೀವು ಫಿಂಗರ್‌ಪ್ರಿಂಟ್ ಲಾಕ್ ಅನ್ನು ಸಕ್ರಿಯಗೊಳಿಸಿದ್ದರೆ, ವಾಟ್ಸಾಪ್‌ಗೆ ಪ್ರತ್ಯೇಕವಾಗಿ ಫಿಂಗರ್‌ಪ್ರಿಂಟ್‌ ಲಾಕ್‌ ಸೆಟ್‌ ಮಾಡುವ ಅವಶ್ಯಕತೆ ಬರುವುದಿಲ್ಲ.

ವಾಟ್ಸಾಪ್‌

ಇದಲ್ಲದೆ ವಾಟ್ಸಾಪ್‌ ಸದ್ಯದಲ್ಲೇ ಹೊಸ ಡ್ರಾಯಿಂಗ್‌ ಟೂಲ್‌ ಫೀಚರ್ಸ್‌ ಅನ್ನು ಕೆಲವೇ ಕೆಲ ಬೀಟಾ ಪರೀಕ್ಷಕರಿಗೆ ಹೊರತರುತ್ತಿದೆ. ಫ್ಯೂಚರ್‌ ಅಪ್ಡೇಟ್‌ ಇನ್‌ಸ್ಟಾಲ್‌ ಮಾಡಿದ ನಂತರ ಹೆಚ್ಚಿನ ಆಕ್ಟಿವಿಟಿಯನ್ನು ಜಾರಿಗೊಳಿಸುವ ಪ್ಲಾನ್‌ ಮಾಡಿದೆ. ಇನ್ನು ವಾಟ್ಸಾಪ್‌ ಹೊಸ ಡ್ರಾಯಿಂಗ್‌ ಟೂಲ್‌ನಲ್ಲಿ ಮೂರು ಹೊಸ ಟೂಲ್ಸ್‌ಗಳನ್ನು ಪರಿಚಯಿಸಲು ಪ್ಲಾನ್‌ ಮಾಡಿದೆ. ಇದರಲ್ಲಿ ಎರಡು ಹೊಸ ಪೆನ್ಸಿಲ್‌ಗಳು ಮತ್ತು ಬ್ಲರ್ ಟೂಲ್ ಸೇರಿದೆ. ನೀವು ಪ್ಲೇ ಸ್ಟೋರ್‌ನಿಂದ ಇತ್ತೀಚಿನ ಬೀಟಾ ವರ್ಷನ್‌ ಅನ್ನು ಇನ್‌ಸ್ಟಾಲ್‌ ಮಾಡಿದರೆ ನೀವು ಈ ಹೊಸ ಡ್ರಾಯಿಂಗ್ ಟೂಲ್‌ಗಳನ್ನು ಬಳಸಬಹುದಾಗಿದೆ. ಒಂದು ವೇಳೆ ನೀವು ಹೊಸ ಡ್ರಾಯಿಂಗ್ ಎಡಿಟರ್ ಟೂಲ್‌ ನೋಡದಿದ್ದರೆ ಅದು ನಿಮ್ಮ ವಾಟ್ಸಾಪ್‌ ಅಕೌಂಟ್‌ಗೆ ಸಿದ್ಧವಾಗಿಲ್ಲ ಎಂದರ್ಥ.

Best Mobiles in India

English summary
WhatsApp screen lock feature was introduced years ago but is still relevant, especially with rising cyber-attacks worldwide.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X