ಮೆಸೇಜಿಂಗ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸಂಭಾಷಣೆಯನ್ನು ಮ್ಯೂಟ್ ಮಾಡುವುದು ಹೇಗೆ?

|

ಇಂದಿನ ದಿನಗಳಲ್ಲಿ ಮೆಸೇಜಿಂಗ್‌ ಪ್ಲಾಟ್‌ಫಾರ್ಮ್‌ಗಳು ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದುಕೊಂಡಿವೆ. ಇದರಲ್ಲಿ ವಾಟ್ಸಾಪ್‌, ಫೇಸ್‌ಬುಕ್‌ ಮೆಸೇಂಜರ್‌, ಟೆಲಿಗ್ರಾಮ್‌ ಅಪ್ಲಿಕೇಶನ್‌ಗಳು ಮುಂಚೂಣಿಯಲ್ಲಿವೆ. ಇನ್ನು ಈ ಅಪ್ಲಿಕೇಶನ್‌ಗಳ ಮೂಲಕ ಹೆಚ್ಚಿನ ಸ್ಮಾರ್ಟ್‌ಫೋನ್ ಬಳಕೆದಾರರು ದಿನನಿತ್ಯದ ಆಧಾರದ ಮೇಲೆ ಹೆಚ್ಚಿನ ಸಂದೇಶಗಳನ್ನು ಸ್ವೀಕರಿಸುತ್ತಾರೆ. ಆದರೆ ಸಂದೇಶಗಳು ಬರುವ ಸಂಖ್ಯೆ ಹೆಚ್ಚಾದಂತೆ ನಿಮಗೆ ಕಿರಿಕಿರಿ ಎನಿಸಿದರೆ ಅಚ್ಚರಿಯಿಲ್ಲ. ಇದೇ ಕಾರಣಕ್ಕೆ ಕೆಲವು ಸಂದೇಶಗಳನ್ನು ಮ್ಯೂಟ್‌ ಮಾಡುವುದಕ್ಕೆ ಮುಂದಾಗುತ್ತಾರೆ.

ಮೆಸೇಜಿಂಗ್‌

ಹೌದು, ಮೆಸೇಜಿಂಗ್‌ ಪ್ಲಾಟ್‌ಫಾರ್ಮ್‌ಗಳ ಮೂಲಕ ಸ್ವೀಕರಿಸುವ ಸಂದೇಶಗಳು ಕಿರಿಕಿರಿ ಎನಿಸಿದಾಗ ಮ್ಯೂಟ್‌ ಮಾಡುವುದು ಸಾಮಾನ್ಯ. ಮೆಸೇಜ್‌ಗಳನ್ನು ಮ್ಯೂಟ್ ಮಾಡುವ ಮೂಲಕ ಎಲ್ಲಾ ನೋಟಿಫಿಕೇಶನ್‌ಗಳ ಕಿರಕಿರಿಯನ್ನು ತಪ್ಪಿಸಬಹುದು. ಹಾಗಾದ್ರೆ ನೀವು ನಿಮಗೆ ತಿಳಿಸಲು ಬಯಸದ ಸಂಭಾಷಣೆಗಳನ್ನು ನೀವು ಹೇಗೆ ಮ್ಯೂಟ್ ಮಾಡಬಹುದು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಾಟ್ಸಾಪ್‌ನಲ್ಲಿ ಸಂಭಾಷಣೆಯನ್ನು ಮ್ಯೂಟ್ ಮಾಡುವುದು ಹೇಗೆ?

ವಾಟ್ಸಾಪ್‌ನಲ್ಲಿ ಸಂಭಾಷಣೆಯನ್ನು ಮ್ಯೂಟ್ ಮಾಡುವುದು ಹೇಗೆ?

ಹಂತ:1 ಮೊದಲಿಗೆ ನಿಮ್ಮ ಚಾಟ್‌ಗೆ ಹೋಗಿ
ಹಂತ:2 ನೀವು ಮ್ಯೂಟ್ ಮಾಡಲು ಬಯಸುವ ಸಂಭಾಷಣೆಯ ಮೇಲೆ ಲಾಂಗ್‌ ಪ್ರೆಸ್‌ ಮಾಡಿರಿ.
ಹಂತ:3 ನಂತರ ಮೇಲಿನ ಬಾರ್‌ನಲ್ಲಿ, ಮ್ಯೂಟ್ ಐಕಾನ್ ಅನ್ನು ಒತ್ತಿರಿ
ಹಂತ:4 ಇದೀಗ ಪಾಪ್ ಅಪ್ ಆಗುವ ಸಂವಾದ ಪೆಟ್ಟಿಗೆಯಲ್ಲಿ, ನೀವು ಸಂಭಾಷಣೆಯನ್ನು ಮ್ಯೂಟ್ ಮಾಡಲು ಬಯಸುವ ಅವಧಿಯನ್ನು ಆಯ್ಕೆಮಾಡಿ.
ಹಂತ:5 ನಂತರ ನೀವು ಸಂಭಾಷಣೆಯನ್ನು ಶಾಶ್ವತವಾಗಿ ಮ್ಯೂಟ್ ಮಾಡುವುದನ್ನು ಆಯ್ಕೆ ಮಾಡಬಹುದು
ಹಂತ:6 ಇದೀಗ ಸಂಭಾಷಣೆಯನ್ನು ಮ್ಯೂಟ್ ಮಾಡಬಹುದಾಗಿದೆ.

ಫೇಸ್‌ಬುಕ್ ಮೆಸೆಂಜರ್‌ನಲ್ಲಿ ಸಂಭಾಷಣೆಯನ್ನು ಮ್ಯೂಟ್ ಮಾಡುವುದು ಹೇಗೆ?

ಫೇಸ್‌ಬುಕ್ ಮೆಸೆಂಜರ್‌ನಲ್ಲಿ ಸಂಭಾಷಣೆಯನ್ನು ಮ್ಯೂಟ್ ಮಾಡುವುದು ಹೇಗೆ?

ಹಂತ:1 ಮೊದಲಿಗೆ ಫೇಸ್‌ಬುಕ್‌ ಮೆಸೆಂಜರ್‌ನಲ್ಲಿ ನಿಮ್ಮ ಚಾಟ್‌ಗೆ ಹೋಗಿ
ಹಂತ:2 ನಂತರ ನೀವು ಮ್ಯೂಟ್ ಮಾಡಲು ಬಯಸುವ ಸಂಭಾಷಣೆಯ ಮೇಲೆ ಲಾಂಗ್‌ ಪ್ರೆಸ್‌‌ ಮಾಡಿರಿ.
ಹಂತ:3 ಇದೀಗ ಪಾಪ್ ಅಪ್ ಆಗುವ ಆಯ್ಕೆಗಳಲ್ಲಿ, "ಅಧಿಸೂಚನೆಗಳನ್ನು ಮ್ಯೂಟ್ ಮಾಡಿ" ಆಯ್ಕೆಮಾಡಿ.
ಹಂತ:4 ನಂತರ ಪಾಪ್ ಅಪ್ ಆಗುವ ಸಂವಾದ ಪೆಟ್ಟಿಗೆಯಲ್ಲಿ, ನೀವು ಸಂಭಾಷಣೆಯನ್ನು ಮ್ಯೂಟ್ ಮಾಡಲು ಬಯಸುವ ಅವಧಿಯನ್ನು ಆಯ್ಕೆಮಾಡಿ ಮತ್ತು ಒಕೆ ಒತ್ತಿರಿ.
ಇದೀಗ ನಿಮ್ಮ ಸಂಭಾಷಣೆಯು ಮ್ಯೂಟ್ ಆಗಿ ಕಾಣಿಸುತ್ತದೆ.

ಫೇಸ್‌ಬುಕ್‌ನಲ್ಲಿ ಆಟೋ-ಪ್ಲೇ ವೀಡಿಯೊವನ್ನು ಆಫ್ ಮಾಡುವುದು ಹೇಗೆ?

ಫೇಸ್‌ಬುಕ್‌ನಲ್ಲಿ ಆಟೋ-ಪ್ಲೇ ವೀಡಿಯೊವನ್ನು ಆಫ್ ಮಾಡುವುದು ಹೇಗೆ?

ನೀವು ವೆಬ್ ಬ್ರೌಸರ್‌ನಲ್ಲಿ ಫೇಸ್‌ಬುಕ್‌ ಅನ್ನು ಬಳಸುತ್ತಿದ್ದರೆ ಆಟೋ ಪ್ಲೇ ವೀಡಿಯೊ ಫೀಚರ್ಸ್‌ ಆಫ್ ಮಾಡಲು ಬಯಸಿದರೆ, ಈ ಹಂತಗಳನ್ನು ಅನುಸರಿಸಿ,
ಹಂತ:1 ಮೊದಲನೆಯದಾಗಿ, ಫೇಸ್‌ಬುಕ್‌ ಪೇಜ್‌ ಮೇಲಿನ ಬಲಭಾಗದಲ್ಲಿರುವ ಡ್ರಾಪ್-ಡೌನ್ ಮೆನುಗೆ ಹೋಗಿ.
ಹಂತ:2 ನಂತರ, ಸೆಟ್ಟಿಂಗ್‌ಗಳು ಮತ್ತು ಪ್ರೈವೆಸಿಯ ಮೇಲೆ ಕ್ಲಿಕ್ ಮಾಡಿ ಮತ್ತು ಸೆಟ್ಟಿಂಗ್ಸ್‌ ಆಯ್ಕೆಮಾಡಿ.
ಹಂತ:3 ಇದೀಗ, ಲೆಫ್ಟ್‌ ಹ್ಯಾಂಡ್‌ ಮೆನುವಿನಿಂದ 'ವೀಡಿಯೊಗಳು' ಕ್ಲಿಕ್ ಮಾಡಿ ಮತ್ತು ಇದರಲ್ಲಿ ಲಭ್ಯವಿರುವ ಆಯ್ಕೆಗಳ ಟಾಗಲ್‌ನಲ್ಲಿ ಆಟೋ ಪ್ಲೇ ವೀಡಿಯೊ ಅನ್ನು ಆಫ್ ಮಾಡಲು ಸಾಧ್ಯವಾಗುತ್ತದೆ.

ಐಒಎಸ್‌ನಲ್ಲಿ ಫೇಸ್‌ಬುಕ್‌ ಆಟೋ-ಪ್ಲೇ ವೀಡಿಯೊವನ್ನು ಆಫ್ ಮಾಡುವುದು ಹೇಗೆ?

ಐಒಎಸ್‌ನಲ್ಲಿ ಫೇಸ್‌ಬುಕ್‌ ಆಟೋ-ಪ್ಲೇ ವೀಡಿಯೊವನ್ನು ಆಫ್ ಮಾಡುವುದು ಹೇಗೆ?

ಹಂತ:1 ಮೊದಲಿಗೆ ಫೇಸ್‌ಬುಕ್‌ ಅಪ್ಲಿಕೇಶನ್ ತೆರೆಯಿರಿ.
ಹಂತ:2 ಸ್ಕ್ರೀನ್‌ ಕೆಳಭಾಗದಲ್ಲಿ ತೋರಿಸಿರುವ ಮೆನು ಬಟನ್ ಮೇಲೆ ಟ್ಯಾಪ್ ಮಾಡಿ.
ಹಂತ:3 ನಂತರ ಸೆಟ್ಟಿಂಗ್ಸ್‌ ಮತ್ತು ಪ್ರೈವೆಸಿಯ ಮೇಲೆ ಟ್ಯಾಪ್ ಮಾಡಿ.
ಹಂತ:4 ಈಗ ಸೆಟ್ಟಿಂಗ್‌ಗಳನ್ನು ಆಯ್ಕೆಮಾಡಿ.
ಹಂತ:5 ಇದೀಗ ನೀವು ಸ್ಕ್ರೋಲಿಂಗ್‌ನಲ್ಲಿ ಮೀಡಿಯಾ ಮತ್ತು ಸಂಪರ್ಕಗಳ ಆಯ್ಕೆಯನ್ನು ಕಾಣಬಹುದು.
ಹಂತ:6 'ವೀಡಿಯೋಸ್‌ ಮತ್ತು ಫೋಟೋಸ್‌' ಮೇಲೆ ಟ್ಯಾಪ್ ಮಾಡಿ.
ಹಂತ:7 ನಂತರ ಕಾಣುವ ಆಟೋಪ್ಲೇ ಆಯ್ಕೆಯನ್ನು ನೀವು ಆಫ್ ಮಾಡಬಹುದು.

Best Mobiles in India

English summary
whatsapp, facebook messenger, mute conversation in whatsapp, mute conversation in messenger, mute conversation in facebook messenger

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X