ಇನ್‌ಸ್ಟಾಗ್ರಾಮ್‌ನಲ್ಲಿ ದೀರ್ಘಾವಧಿಯ ವೀಡಿಯೊವನ್ನು ಪೋಸ್ಟ್ ಮಾಡುವುದು ಹೇಗೆ?

|

ಮೆಟಾ ಒಡೆತನದ ಇನ್‌ಸ್ಟಾಗ್ರಾಮ್‌ ಜನಪ್ರಿಯ ಸೊಶೀಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ಒಂದಾಗಿದೆ. ತನ್ನ ವಿಶೇಷ ಫೀಚರ್ಸ್‌ಗಳ ಮೂಲಕ ಜನಪ್ರಿಯ ಫೋಟೋ ಶೇರಿಂಗ್‌ ಅಪ್ಲಿಕೇಶನ್‌ ಎನಿಸಿಕೊಂಡಿದೆ. ಬಳಕೆದಾರರ ಅನುಕೂಲಕ್ಕಾಗಿ ಅನೇಕ ಫೀಚರ್ಸ್‌ಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಈ ಪೈಕಿ ಇನ್‌ಸ್ಟಾಗ್ರಾಮ್‌ ವೀಡಿಯೋಸ್‌,ಸ್ಟೋರೀಸ್‌ ಫೀಚರ್ಸ್‌ ಕೂಡ ಸೇರಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ವೀಡಿಯೋಗಳನ್ನು ಸಹ ಶೇರ್‌ ಮಾಡಬಹುದಾಗಿದೆ.

ಇನ್‌ಸ್ಟಾಗ್ರಾಮ್‌

ಹೌದು, ಇನ್‌ಸ್ಟಾಗ್ರಾಮ್‌ನಲ್ಲಿ ನಿಮ್ಮ ನೆಚ್ಚಿನ ಫೋಟೋ ಮತ್ತು ವೀಡಿಯೊಗಳನ್ನು ಪೋಸ್ಟ್‌ಮಾಡಬಹುದು. ಆದರೆ ಶಾರ್ಟ್‌ ವೀಡಿಯೊಗಳನ್ನು ಮಾತ್ರ ಪೋಸ್ಟ್‌ಮಾಡಲು ಸಾದ್ಯ. ಒಂದು ವೇಳೆ ನೀವು ಹೆಚ್ಚಿನ ಅವಧಿಯ ವೀಡಿಯೋಗಳನ್ನು ಪೋಸ್ಟ್‌ ಮಾಡಲು ಬಯಸಿದರೆ ಅದಕ್ಕೂ ಕೂಡ ಅವಕಾಶವಿದೆ. ಆದರೆ ಇದಕ್ಕಾಗಿ ನೀವು ಕೆಲವು ಟ್ರಿಕ್ಸ್‌ಗಳನ್ನು ಫಾಲೋ ಮಾಡಬೇಕಾಗುತ್ತದೆ. ಅದರಲ್ಲೂ ಒಂದು ಗಂಟೆಯ ಅವಧಿಯ ವೀಡಿಯೊ ಪೋಸ್ಟ್‌ ಮಾಡಲು ನೀವು ಏನ ಮಾಡಬಹುದು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಇನ್‌ಸ್ಟಾಗ್ರಾಮ್‌

ಇನ್‌ಸ್ಟಾಗ್ರಾಮ್‌ ಈಗಾಗಲೇ ತನ್ನ ಬಳಕೆದಾರರ ಅನುಕೂಲಕ್ಕಾಗಿ 2018 ರಲ್ಲಿ IGTV ಅನ್ನು ಪರಿಚಯಿಸಿತು. ಇದು ಆರಂಭದಲ್ಲಿ ಲೋಕಲ್‌ ಅಪ್ಲಿಕೇಶನ್‌ನಲ್ಲಿ ಲಭ್ಯವಿತ್ತು. ಆದರೆ ಈ ಐಕಾನ್ ಅನ್ನು ಕಳೆದ ವರ್ಷ ತೆಗೆದುಹಾಕಲಾಗಿದೆ. Instagram ಟಿವಿ ಈಗ ಪ್ರಮುಖ ಆಪ್ ಸ್ಟೋರ್‌ಗಳಲ್ಲಿ ಸ್ವತಂತ್ರ ಅಪ್ಲಿಕೇಶನ್‌ನಂತೆ ಲಭ್ಯವಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ನೀವು ಸುದೀರ್ಘ ವೀಡಿಯೊವನ್ನು ಪೋಸ್ಟ್ ಮಾಡಲು, ಮೊಬೈಲ್‌ನಲ್ಲಿ ಉದ್ದವು ಸೀಮಿತವಾಗಿರುವುದರಿಂದ ನಿಮ್ಮ ಲ್ಯಾಪ್‌ಟಾಪ್/ಕಂಪ್ಯೂಟರ್‌ನಲ್ಲಿ ನಿಮ್ಮ IG ಅಕೌಂಟ್‌ ಅನ್ನು ತೆರೆಯಬೇಕಾಗುತ್ತದೆ. ಇದರ ಮೂಲಕ ವಿಡಿಯೋವನ್ನು ಪೋಸ್ಟ್‌ ಮಾಡಬಹುದಾಗಿದೆ. ಇದಕ್ಕಾಗಿ ಈ ಕೆಳಗಿನ ಹಂತಗಳನ್ನು ಅನುಸರಿಸಿ.

ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ಗಂಟೆ ಅವಧಿಯ ವೀಡಿಯೊವನ್ನು ಪೋಸ್ಟ್ ಮಾಡುವುದು ಹೇಗೆ?

ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ಗಂಟೆ ಅವಧಿಯ ವೀಡಿಯೊವನ್ನು ಪೋಸ್ಟ್ ಮಾಡುವುದು ಹೇಗೆ?

ಹಂತ:1 ಮೊದಲಿಗೆ ನಿಮ್ಮ ಐಜಿಟಿವಿ ಅಪ್ಲಿಕೇಶನ್‌ ಅಕೌಂಟ್‌ ತೆರೆಯಿರಿ.
ಹಂತ:2 ನಂತರ ಮೇಲಿನ ಬಲಭಾಗದಲ್ಲಿರುವ ಪ್ಲಸ್ ಐಕಾನ್ ಮೇಲೆ ಟ್ಯಾಪ್ ಮಾಡಿ.
ಹಂತ:3 ಪಾಪ್-ಅಪ್ ಪುಟವು ಕಂಪ್ಯೂಟರ್‌ನಿಂದ ವೀಡಿಯೊವನ್ನು ಆಯ್ಕೆ ಮಾಡಲು ನಿಮ್ಮನ್ನು ಕೇಳುತ್ತದೆ.
ಹಂತ:4 ಅದರ ಮೇಲೆ ಕ್ಲಿಕ್ ಮಾಡಿ, ನಂತರ ನೀವು ಉಳಿಸಿದ ಫೋಲ್ಡರ್‌ನಿಂದ ನೀವು ಪೋಸ್ಟ್ ಮಾಡಲು ಬಯಸುವ ವೀಡಿಯೊವನ್ನು ಆಯ್ಕೆ ಮಾಡಿ.
ಹಂತ:5 ನಂತರ ನೀವು ಕೆಳಗೆ ಕಾಣುವ ಆಕಾರ ಅನುಪಾತ ಐಕಾನ್ ಮೇಲೆ ಟ್ಯಾಪ್ ಮಾಡಿ, ಇದು ಫ್ರೇಮ್ ಅನ್ನು ಆಯ್ಕೆ ಮಾಡಲು ನಿಮಗೆ ಅನುಮತಿಸುತ್ತದೆ.
ಹಂತ:6 ಇದಾದ ನಂತರ ಮೇಲಿನ ಬಲ ಮೂಲೆಯಲ್ಲಿರುವ ಮುಂದಿನ ಆಯ್ಕೆಯನ್ನು ಕ್ಲಿಕ್ ಮಾಡಿ.
ಹಂತ:7 ವೀಡಿಯೊದಿಂದ ಕವರ್ ಫೋಟೋವನ್ನು ಆಯ್ಕೆ ಮಾಡಲು ಮತ್ತು ಟ್ರಿಮ್ ಮಾಡಲು ನಿಮ್ಮನ್ನು ಕೇಳಲಾಗುತ್ತದೆ.
ಹಂತ:8 ಆದ್ಯತೆಯ ಕವರ್ ಫೋಟೋವನ್ನು ಆಯ್ಕೆ ಮಾಡಿ, ನಂತರ ಮುಂದಿನ ಬಟನ್ ಟ್ಯಾಪ್ ಮಾಡಿ.
ಹಂತ:9 ಇದಾದ ನಂತರ ಕ್ಯಾಪ್ಯನ್‌ ಬರೆದು ನಿಮ್ಮ ಸ್ನೇಹಿತರು/ಸಹೋದ್ಯೋಗಿಗಳನ್ನು ಟ್ಯಾಗ್ ಮಾಡಿ ಶೇರ್‌ ಬಟನ್ ಕ್ಲಿಕ್‌ ಮಾಡಿರಿ. ಇದೀಗ ನೀವು ಶೇರ್‌ ಮಾಡಿದ ವೀಡಿಯೋ IGTV ಅಡಿಯಲ್ಲಿ ಕಾಣಲಿದೆ.

ಇನ್‌ಸ್ಟಾಗ್ರಾಮ್‌

ಇನ್ನು ಇನ್‌ಸ್ಟಾಗ್ರಾಮ್‌ ಇತ್ತೀಚಿಗೆ ಟೇಕ್ ಎ ಬ್ರೇಕ್ ಎನ್ನುವ ಹೊಸ ಫೀಚರ್ಸ್‌ ಪರಿಚಯಿಸಿದೆ. ಈ ಹೊಸ ಫೀಚರ್ಸ್‌ ಅನ್ನು ಸೆಟ್ಟಿಂಗ್ಸ್‌ ಪ್ಯಾನಲ್‌ ಮೂಲಕ ಸಕ್ರಿಯಗೊಳಿಸಬಹುದು. ಈ ಫೀಚರ್ಸ್‌ ಮೂಲಕ ಇನ್‌ಸ್ಟಾಗ್ರಾಮ್‌ನಲ್ಲಿ ಸ್ಕ್ರೋಲಿಂಗ್‌ ಮಾಡುವ ಬಳಕೆದಾರರು ನಿರ್ದಿಷ್ಟ ಅವಧಿಯ ನಂತರ ಬ್ರೇಕ್‌ ತೆಗೆದುಕೊಳ್ಳಬಹುದು. ಇದಕ್ಕಾಗಿ ನೀವು 10 ನಿಮಿಷಗಳು, 20 ನಿಮಿಷಗಳು ಅಥವಾ 30 ನಿಮಿಷಗಳ ಆಯ್ಕೆಯನ್ನು ಮಾಡಬಹುದು. ಒಮ್ಮೆ ಬ್ರೇಕ್‌ ಸಮಯವನ್ನು ಆಯ್ಕೆ ಮಾಡಿದ ನಂತರ ನಿಮಗೆ ಆಲರ್ಟ್‌ ಅನ್ನು ನೀಡಲಿದೆ. ನಿರ್ದಿಷ್ಟ ಸಮಯದ ನಂತರ ಬಳಕೆದಾರರಿಗೆ "ದೀರ್ಘವಾದ ಉಸಿರನ್ನು ತೆಗೆದುಕೊಳ್ಳಿ", "ಏನನ್ನಾದರೂ ಬರೆಯಿರಿ", "ಮಾಡಬೇಕಾದ ಪಟ್ಟಿಯನ್ನು ಪರಿಶೀಲಿಸಿ" ಅಥವಾ "ಹಾಡನ್ನು ಆಲಿಸಿ" ಎಂದು ವಿನಂತಿಸುತ್ತದೆ.

ಇನ್‌ಸ್ಟಾಗ್ರಾಮ್‌

ಇದಲ್ಲದೆ, ಇನ್‌ಸ್ಟಾಗ್ರಾಮ್‌ ಮತ್ತೊಂದು ಫೀಚರ್ಸ್‌ ಅನ್ನು ಪರಿಚಯಿಸಿದೆ. ಇದು ಬಳಕೆದಾರರು ದೀರ್ಘಕಾಲದವರೆಗೆ ನಿರ್ದಿಷ್ಟ ವಿಷಯದ ಅಡಿಯಲ್ಲಿ ಪೋಸ್ಟ್‌ಗಳನ್ನು ನೋಡುತ್ತಿರುವಾಗ ಇತರ ವಿಷಯಗಳನ್ನು ಪರಿಶೀಲಿಸಲು ಅವಕಾಶ ನೀಡಲಿದೆ. ಕಂಪನಿಯು ತನ್ನ ಬಳಕೆದಾರರಿಗೆ ಅವರು ಹಂಚಿಕೊಳ್ಳುವ ವಿಷಯದ ಮೇಲೆ ಹೆಚ್ಚಿನ ನಿಯಂತ್ರಣವನ್ನು ನೀಡಲು ಬಯಸುತ್ತದೆ ಎಂದು ಹೇಳಿದೆ. ಇದಕ್ಕಾಗಿ, ಬಳಕೆದಾರರು ಹಳೆಯ ಫೋಟೋಗಳನ್ನು ಒಂದೊಂದಾಗಿ ಡಿಲೀಟ್‌ ಮಾಡುವ ಬದಲು ದೊಡ್ಡ ಪ್ರಮಾಣದಲ್ಲಿ ಡಿಲೀಟ್‌ ಮಾಡಬಹುದಾದ ಫೀಚರ್ಸ್‌ ಅನ್ನು ಪರಿಚಯಿಸುತ್ತಿದೆ. ಇದು ಬಳಕೆದಾರರನ್ನು ಟ್ಯಾಗ್ ಮಾಡುವುದರಿಂದ ಅಥವಾ ಅವರು ಅನುಸರಿಸದ ಹದಿಹರೆಯದವರನ್ನು ಮೆನ್ಶನ್‌ ಮಾಡುವುದನ್ನ ತಡೆಯಲಿದೆ.

ಇನ್‌ಸ್ಟಾಗ್ರಾಮ್ ವೀಡಿಯೊಗಳನ್ನು ಡೆಸ್ಕ್‌ಟಾಪ್‌ನಲ್ಲಿ ಡೌನ್‌ಲೋಡ್ ಮಾಡುವುದು ಹೇಗೆ?

ಇನ್‌ಸ್ಟಾಗ್ರಾಮ್ ವೀಡಿಯೊಗಳನ್ನು ಡೆಸ್ಕ್‌ಟಾಪ್‌ನಲ್ಲಿ ಡೌನ್‌ಲೋಡ್ ಮಾಡುವುದು ಹೇಗೆ?

ಒಂದು ವೇಳೆ ನೀವು ನಿಮ್ಮ ಇನ್‌ಸ್ಟಾಗ್ರಾಮ್ ಅಕೌಂಟ್‌ ಡಿಲೀಟ್‌ ಮಾಡುವ ಮುನ್ನ ಅದರಲ್ಲಿರುವ ವೀಡಿಯೊಗಳನ್ನು ಡೌನ್‌ಲೋಡ್ ಮಾಡಲು ಬಯಸಿದರೆ ಅದಕ್ಕೂ ಅವಕಾಶವಿದೆ. ಇದಕ್ಕಾಗಿ ನೀವು ಥರ್ಡ್‌ ಪಾರ್ಟಿ ವೆಬ್‌ಸೈಟ್‌ಗಳನ್ನು ಬಳಸಬಹುದು. ಈ ಥರ್ಡ್‌ ಪಾರ್ಟಿ ಅಪ್ಲಿಕೇಶನ್‌ಗಳಲ್ಲಿ 4 ಕೆ ವಿಡಿಯೋ ಡೌನ್ಲೋಡರ್ ಸರಳ ಸೈಟ್‌ಗಳಲ್ಲಿ ಒಂದಾಗಿದೆ ಇದು ವಿಂಡೋಸ್, ಮ್ಯಾಕೋಸ್ ಅಥವಾ ಲಿನಕ್ಸ್‌ನಲ್ಲಿ ಬಳಸಬಹುದಾಗಿದೆ. ಅದನ್ನು ಹೇಗೆ ಬಳಸುವುದು ಎಂಬುದು ಇಲ್ಲಿದೆ .
ಹಂತ:1 ನಿಮ್ಮ ಇನ್‌ಸ್ಟಾಗ್ರಾಮ್ ಅಕೌಂಟ್ ತೆರೆಯಿರಿ, ನೀವು ಡೌನ್‌ಲೋಡ್ ಮಾಡಲು ಬಯಸುವ ವೀಡಿಯೊದ ಲಿಂಕ್ ಅನ್ನು ಕಾಪಿ ಮಾಡಿ. ಡೆಸ್ಕ್‌ಟಾಪ್‌ನಲ್ಲಿ ಯಾವುದೇ ವೀಡಿಯೊ ಮೇಲೆ ಬಲ ಕ್ಲಿಕ್ ಮಾಡಿ ಮತ್ತು ನಂತರ ಲಿಂಕ್ ಕಾಪಿ ಆಯ್ಕೆಮಾಡಿ.
ಹಂತ:2 ನಂತರ ಬ್ರೌಸರ್‌ನಲ್ಲಿ 4K ವಿಡಿಯೋ ಡೌನ್‌ಲೋಡರ್ ಓಪನ್ ಮಾಡಿ, ಗ್ರಿನ್ ಪೇಸ್ಟ್ ಲಿಂಕ್ ಬಟನ್ ಕ್ಲಿಕ್ ಮಾಡಿ.
ಹಂತ:3 ಫಾರ್ಮ್ಯಾಟ್ ಅನ್ನು ವೀಕ್ಷಿಸಲು ಮತ್ತು ಫೈಲ್‌ ಸೇವ್ ಮಾಡಲು ಲೊಕೆಶನ ಕೇಳಲು ,ಅಪ್ಲಿಕೇಶನ್ ಸಣ್ಣ ಟೈಲ್ ಅನ್ನು ಪಾಪ್ ಅಪ್ ಮಾಡುತ್ತದೆ.
ಹಂತ:4 ಆಯ್ಕೆ ಮಾಡಿದ ನಂತರ, ಡೌನ್‌ಲೋಡ್ ಆಯ್ಕೆಯನ್ನು ಕ್ಲಿಕ್ ಮಾಡಿ.
ಹಂತ:5 ಡೌನ್‌ಲೋಡ್ ಪೂರ್ಣಗೊಂಡ ನಂತರ, 4K ವಿಡಿಯೋ ಡೌನ್‌ಲೋಡರ್‌ನಲ್ಲಿನ ವೀಡಿಯೊ ಹೆಸರಿನ ಮೇಲೆ ಬಲ ಕ್ಲಿಕ್ ಮಾಡಿ ಮತ್ತು ವೀಡಿಯೊವನ್ನು ವೀಕ್ಷಿಸಲು ಪ್ಲೇ ಆಯ್ಕೆಮಾಡಿ.

Best Mobiles in India

English summary
Here's How to post an hour long video on your Instagram account.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X