ವಾಟ್ಸಾಪ್‌ನಲ್ಲಿ ಏರ್‌ಟೆಲ್‌ ಪೇಮೆಂಟ್ಸ್ ಬ್ಯಾಂಕ್‌ ಸೇವೆ ಪಡೆಯುವುದು ಹೇಗೆ?

|

ಮೆಟಾ ಒಡೆತನದ ವಾಟ್ಸಾಪ್‌ ಜನಪ್ರಿಯ ಮೆಸೇಜಿಂಗ್‌ ಅಪ್ಲಿಕೇಶನ್‌ ಎನಿಸಿಕೊಂಡಿದೆ. ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಮೆಸೇಜ್‌ ಮಾಡುವುದಕ್ಕೆ ಮಾತ್ರವಲ್ಲ ಹಾಣ ಪಾವತಿಸುವುದಕ್ಕೂ ವಾಟ್ಸಾಪ್‌ ಪೇ ಮೂಲಕ ಅವಕಾಶ ಮಾಡಿಕೊಟ್ಟಿದೆ. ಇದೇ ಕಾರಣಕ್ಕೆ ವಾಟ್ಸಾಪ್‌ನಲ್ಲಿಯೂ ಕೂಡ ನೀವು ಬ್ಯಾಂಕಿಂಗ್‌ ವಹಿವಾಟುಗಳನ್ನು ನಡೆಸಬಹುದಾಗಿದೆ. ಇದೀಗ ವಾಟ್ಸಾಪ್‌ನಲ್ಲಿ ಏರ್‌ಟೆಲ್‌ ಪೇಮೆಂಟ್‌ ಬ್ಯಾಂಕ್‌ ಪಾವತಿ ಸೇವೆಗಳಿಗೂ ರಿಜಿಸ್ಟಾರ್‌ ಮಾಡಬಹುದಾಗಿದೆ. ಏರ್‌ಟೆಲ್ ಪೇಮೆಂಟ್ಸ್‌ ಬ್ಯಾಂಕ್‌ನಿಂದ ಸೇವೆಗಳನ್ನು ಪ್ರವೇಶಿಸುವುದು ನಿಮ್ಮ ಕಂಟ್ಯಾಕ್ಟ್‌ ಲಿಸ್ಟ್‌ಗೆ ಹೊಸ ಫೋನ್ ಸಂಖ್ಯೆಯನ್ನು ಸೇರಿಸುವಷ್ಟು ಸರಳವಾಗಿದೆ.

ವಾಟ್ಸಾಪ್‌

ಹೌದು, ವಾಟ್ಸಾಪ್‌ ನಲ್ಲಿ ಏರ್‌ಟೆಲ್‌ ಪೇಮೆಂಟ್ಸ್‌ ಬ್ಯಾಂಕ್‌ ಸೇವೆಯನ್ನು ನೋಂದಾಯಿಸುವುದು ಸುಲಭವಾಗಿದೆ. ಇದರಿಂದ 24×7 ಬ್ಯಾಂಕಿಂಗ್‌ ಸೌಲಭ್ಯಗಳನ್ನು ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಬಹುದಾಗಿದೆ. ಇನ್ನು ಏರ್‌ಟೆಲ್‌ ಪೇಮೆಂಟ್ಸ್‌ ಬ್ಯಾಂಕ್‌ ಕೂಡ ಎಂಡ್‌ ಟು ಎಂಡ್‌ ಎನ್‌ಕ್ರಿಪ್ಶನ್‌ ಹೊಂದಿರುವುದರಿಂದ ನಿಮ್ಮ ಮಾಹಿತಿ ಸುರಕ್ಷಿತವಾಗಿರಲಿದೆ. ಹಾಗಾದ್ರೆ ವಾಟ್ಸಾಪ್‌ನಲ್ಲಿ ಏರ್‌ಟೆಲ್‌ ಪೇಮೆಂಟ್ಸ್‌ ಬ್ಯಾಂಕ್‌ ಸೇವೆಗಳನ್ನು ಪಡೆಯುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಾಟ್ಸಾಪ್‌ನಲ್ಲಿ ಏರ್‌ಟೆಲ್ ಪಾವತಿ ಬ್ಯಾಂಕ್ ಸೇವೆಗಳಿಗೆ ನೋಂದಾಯಿಸುವುದು ಹೇಗೆ?

ವಾಟ್ಸಾಪ್‌ನಲ್ಲಿ ಏರ್‌ಟೆಲ್ ಪಾವತಿ ಬ್ಯಾಂಕ್ ಸೇವೆಗಳಿಗೆ ನೋಂದಾಯಿಸುವುದು ಹೇಗೆ?

* ಮೊದಲಿಗೆ ನಿಮ್ಮ ವಾಟ್ಸಾಪ್‌ ಬ್ಯುಸಿನೆಸ್‌ ಅಕೌಂಟ್‌ನಲ್ಲಿ 8800688006 ನಂಬರ್‌ ಅನ್ನು ಸೇವ್‌ ಮಾಡಬೇಕಾಗುತ್ತದೆ.
* ನಂತರ ನೀವು ಸೇವ್‌ ಮಾಡಿದ ಸಂಖ್ಯೆಯಿಂದ ನೀವು 'ಹಾಯ್' ಎಂಬ ಸಂದೇಶವನ್ನು ಕಳುಹಿಸಬೇಕಾಗುತ್ತದೆ.
ಇನ್ನು ವಾಟ್ಸಾಪ್‌ನಲ್ಲಿ ಏರ್‌ಟೆಲ್‌ ಪೇಮೆಂಟ್ಸ್‌ ಬ್ಯಾಂಕ್‌ ಸೇವೆಯನ್ನು ನೋಂದಾಯಿಸುವುದರಿಂದ ನಿಮಗೆ 24×7 ಬ್ಯಾಂಕಿಂಗ್ ಸೌಲಭ್ಯ ಲಭ್ಯವಾಗಲಿದೆ. ಅಲ್ಲದೆ ಏರ್‌ಟೆಲ್ ಎಂಡ್ ಟು ಎಂಡ್ ಎನ್‌ಕ್ರಿಪ್ಶನ್ ಅನ್ನು ಬಳಸುವುದರಿಂದ ಮಾಹಿತಿಯು ಸುರಕ್ಷಿತ ಮತ್ತು ಸುರಕ್ಷಿತವಾಗಿದೆ ಎಂದು ವಾಟ್ಸಾಪ್‌ ಭರವಸೆಯನ್ನು ನೀಡಿದೆ.

ವಾಟ್ಸಾಪ್‌ ಏರ್‌ಟೆನ್‌ಲ್ಲಿ ಯಾವೆಲ್ಲಾ ಸೇವೆಗಳನ್ನು ಪ್ರವೇಶಿಸಬಹುದು?

ವಾಟ್ಸಾಪ್‌ ಏರ್‌ಟೆನ್‌ಲ್ಲಿ ಯಾವೆಲ್ಲಾ ಸೇವೆಗಳನ್ನು ಪ್ರವೇಶಿಸಬಹುದು?

* ಬ್ಯಾಂಕಿಂಗ್ ಸೇವೆಗಳು: ನಿಮ್ಮ ಬ್ಯಾಂಕ್ ಅಕೌಂಟ್‌ ಡಿಟಟೆಲ್ಸ್‌ ಬಗ್ಗೆ ತಿಳಿದುಕೊಳ್ಳಬಹುದು.
* ಗಿಫ್ಟ್‌ ಕಾರ್ಡ್ಸ್‌ ಮತ್ತು ಗೋಲ್ಡ್‌: ಇದರಲ್ಲಿ ಬಳಕೆದಾರರು ಗಿಫ್ಟ್‌ ಕಾರ್ಡ್ಸ್‌ ಮತ್ತು ಡಿಜಿಟಲ್ ಗೋಲ್ಡ್‌ ಅನ್ನು ಖರೀದಿಸಬಹುದು.
* ಫಾಸ್ಟ್‌ಟ್ಯಾಗ್‌ ಸೇವೆಗಳು: ನಿಮ್ಮ ಫಾಸ್ಟ್‌ಟ್ಯಾಗ್‌ ಅಕೌಂಟ್‌ ಡಿಟೇಲ್ಸ್‌ ತಿಳಿದುಕೊಳ್ಳಬಹುದು.
* ಲೋನ್ಸ್‌: ಏರ್‌ಟೆಲ್ ಪೇಮೆಂಟ್ಸ್‌ ಬ್ಯಾಂಕ್‌ಗಳು ತನ್ನ ಬಳಕೆದಾರರಿಗೆ ವಾಟ್ಸಾಪ್‌ ಮೂಲಕ ವೈಯಕ್ತಿಕ ಸಾಲಗಳನ್ನು ನೀಡಲಿವೆ.
* ರೀಚಾರ್ಜ್‌ಗಳು ಮತ್ತು ಬಿಲ್ ಪಾವತಿಗಳು: ಬಳಕೆದಾರರು ತಮ್ಮ ಮೊಬೈಲ್ ಅನ್ನು ರೀಚಾರ್ಜ್ ಮಾಡಬಹುದು. ಅಲ್ಲದೆ ತಮ್ಮ ಯುಟಿಲಿಟಿ ಬಿಲ್‌ಗಳನ್ನು ಪಾವತಿಸುವುದಕ್ಕೆ ಸಾಧ್ಯವಾಗಲಿದೆ.

ಸುರಕ್ಷತೆ

ಸುರಕ್ಷತೆ

ಸದ್ಯ ಏರ್‌ಟೆಲ್ ಪೇಮೆಂಟ್ಸ್‌ ಬ್ಯಾಂಕ್‌ ನೀಡಿರುವ ಮಾಹಿತಿ ಬ್ಯಾಂಕ್ ಪ್ರಕಾರ, ಎಲ್ಲಾ ಸಂದೇಶಗಳು ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್‌ ಮೂಲಕ ಸೆಕ್ಯುರ್‌ ಆಗಿರಲಿವೆ. ಬಳಕೆದಾರರ ಖಾತೆ ಮಾಹಿತಿಯನ್ನು ಯಾರೊಂದಿಗೂ ಶೇರ್‌ ಮಾಡುವುದಿಲ್ಲ ಎಂದು ಏರ್‌ಟೆಲ್‌ ಬ್ಯಾಂಕ್‌ ಹೇಳಿದೆ. ಅಲ್ಲದೆ ಬಳಕೆದಾರರು ವಾಟ್ಸಾಪ್‌ ನಲ್ಲಿ ಪಿನ್‌ ನಂತಹ ಯಾವುದೇ ಗೌಪ್ಯ ಮಾಹಿತಿಯನ್ನು ನಮೂದಿಸುವ ಅಗತ್ಯವಿಲ್ಲ. ಹೆಚ್ಚುವರಿಯಾಗಿ, ಏರ್‌ಟೆಲ್ ಪೇಮೆಂಟ್ಸ್ ಬ್ಯಾಂಕ್‌ನ ವಾಟ್ಸಾಪ್ ಬ್ಯಾಂಕಿಂಗ್ ಸೇವೆಗಳನ್ನು ಬಳಸಲು ಯಾವುದೇ ಶುಲ್ಕಗಳನ್ನು ವಿಧಿಸಲಾಗುವುದಿಲ್ಲ.

ವಾಟ್ಸಾಪ್ ಪೇ ಮೂಲಕ ಹಣವನ್ನು ಕಳುಹಿಸುವುದು ಹೇಗೆ?

ವಾಟ್ಸಾಪ್ ಪೇ ಮೂಲಕ ಹಣವನ್ನು ಕಳುಹಿಸುವುದು ಹೇಗೆ?

ಇತರ ಬಳಕೆದಾರರು ವಾಟ್ಸಾಪ್ ಅಥವಾ ವಾಟ್ಸಾಪ್ ಹೊರಗೆ ಕಳುಹಿಸಿದ ಹಣವನ್ನು ಸ್ವೀಕರಿಸುವುದು ಸುಲಭ. ವಾಟ್ಸಾಪ್ ಪೇ ಅನ್ನು ಬಳಸುವ ಯಾರಿಂದಲೂ ನೀವು ಹಣವನ್ನು ಪಡೆಯಬಹುದು, ಅವರು ಯುಪಿಐ ಅನ್ನು ಆಧರಿಸಿದ ಅಪ್ಲಿಕೇಶನ್ ಅನ್ನು ವಾಟ್ಸಾಪ್‌ನಂತೆಯೇ ಬಳಸುತ್ತಿರಬೇಕು. ಪಾವತಿಗಳಿಗಾಗಿ ಯುಪಿಐ ಬಳಸುವುದರ ಒಂದು ದೊಡ್ಡ ಅನುಕೂಲವೆಂದರೆ ಬಳಕೆದಾರರು ವಿಭಿನ್ನ ಅಪ್ಲಿಕೇಶನ್‌ಗಳನ್ನು ಬಳಸಿದರೂ ಪರಸ್ಪರ ಹಣವನ್ನು ಕಳುಹಿಸಬಹುದು. ಇದರರ್ಥ ಬಳಕೆದಾರರು Google Pay ನಲ್ಲಿದ್ದರೂ ಸಹ, ಅವರು ನಿಮಗೆ WhatsApp Pay ನಲ್ಲಿ ಹಣವನ್ನು ಕಳುಹಿಸಬಹುದು. ಇದೇ ರೀತಿಯಾಗಿ, ಫೋನ್‌ಪೇ ಅನ್ನು ಮಾತ್ರ ಬಳಸುವ ಬಳಕೆದಾರರಿಗೆ ನೀವು ವಾಟ್ಸಾಪ್ ಪೇ ನಿಂದ ಹಣವನ್ನು ಕಳುಹಿಸಲು ಸಾಧ್ಯವಾಗುತ್ತದೆ.

Best Mobiles in India

English summary
Here's How to register for Airtel Payments Bank services on WhatsApp

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X