ನಿಮ್ಮ SBI ಇಂಟರ್ನೆಟ್ ಬ್ಯಾಂಕಿಂಗ್ ಪಾಸ್‌ವರ್ಡ್ ಅನ್ನು ರಿಸೆಟ್‌ ಮಾಡುವುದು ಹೇಗೆ?

|

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಬಳಕೆದಾರರಿಗೆ ಆನ್‌ಲೈನ್‌ನಲ್ಲಿ ಬಹಳಷ್ಟು ಸೇವೆಗಳನ್ನು ಪ್ರವೇಶಿಸಲು ಅವಕಾಶ ನೀಡಿದೆ. ಆನ್‌ಲೈನ್‌ನಲ್ಲಿ ಬ್ಯಾಂಕಿಂಗ್‌ ಮಾಡುವುದಕ್ಕೆ ಅವಕಾಶ ನೀಡಿರುವುದರಿಂದ ಗ್ರಾಹಕರು ಸುಲಭವಾಗಿ ಬ್ಯಾಂಕಿಂಗ್‌ ಸೇವೆ ಪಡೆಯಲು ಸಾಧ್ಯವಾಗಿದೆ. ಆನ್‌ಲೈನ್‌ನಲ್ಲಿ ತಮ್ಮ ಖಾತೆಗೆ ಸಂಬಂಧಿಸಿದ ಮಾಹಿತಿಯನ್ನು ಪ್ರವೇಶಿಸುವುದರಿಂದ ಹಿಡಿದು ಇತರ ಸೇವೆಗಳನ್ನು ಪ್ರವೇಶಿಸುವವರೆಗೆ, ಎಸ್‌ಬಿಐ ಗ್ರಾಹಕರು ಎಸ್‌ಬಿಐನ ಆನ್‌ಲೈನ್ ಪ್ಲಾಟ್‌ಫಾರ್ಮ್ ಮೂಲಕ ಸಾಕಷ್ಟು ಮಾಡಬಹುದು.

ಎಸ್‌ಬಿಐ

ಹೌದು, ಎಸ್‌ಬಿಐ ಬ್ಯಾಂಕ್‌ ಗ್ರಾಹಕರು ಆನ್‌ಲೈನ್‌ ಬ್ಯಾಂಕಿಂಗ್‌ ಮೂಲಕ ಹಲವು ಸೇವೆಗಳನ್ನು ಪಡೆದುಕೊಳ್ಳಬಹುದು. ಆದರೆ ಹಲವಾರು ಸೇವೆಗಳು ಮತ್ತು ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳನ್ನು ಬಳಸುವುದಕ್ಕೆ ಬಳಕೆದಾರಹೆಸರು ಮತ್ತು ಪಾಸ್‌ವರ್ಡ್‌ಗಳು ಅತ್ಯವಶ್ಯಕ. ಕೆಲವೊಮ್ಮೆ ನಿಮ್ಮ ಪಾಸ್‌ವರ್ಡ್‌ ನಿಮಗೆ ಮರೆತು ಹೋದರೆ ಆನ್‌ಲೈನ್‌ ಬ್ಯಾಂಕಿಂಗ್‌ ಪ್ರವೇಶಿಸುವುದಕ್ಕೆ ಸಾಧ್ಯವಾಗುವುದಿಲ್ಲ. ಇಂತಹ ಸಮಯದಲ್ಲಿ ನೀವು ನಿಮ್ಮ ಪಾಸ್‌ವರ್ಡ್‌ ಅನ್ನು ರಿ ಸೆಟ್‌ ಮಾಡಬೇಕಾಗುತ್ತದೆ. ಹಾಗಾದ್ರೆ ಎಸ್‌ಬಿಐ ಬ್ಯಾಂಕ್‌ ಗ್ರಾಹಕರು ಆನ್‌ಲೈನ್‌ ಬ್ಯಾಂಕಿಂಗ್‌ ಪಾಸ್‌ವರ್ಡ್‌ ಅನ್ನು ರಿ ಸೆಟ್‌ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತವಿ ಓದಿರಿ.

ಎಸ್‌ಬಿಐ

ಎಸ್‌ಬಿಐ ಬಳಕೆದಾರರು ಆನ್‌ಲೈನ್‌ ಸೇವೆಗಳನ್ನು ಪಡೆಯಬೇಕಾದರೆ ಪಾಸ್‌ವರ್ಡ್‌ ನಮೂದಿಸುವುದು ಕಡ್ಡಾಯ. ಎಸ್‌ಬಿಐ ತನ್ನ ಬಳಕೆದಾರರಿಗೆ ಅವರ ಖಾತೆಗಳಿಗೆ ಸರಿಯಾದ ಪಾಸ್‌ವರ್ಡ್‌ಗಳನ್ನು ನಮೂದಿಸಲು ಮತ್ತು ಅವರ ಪ್ರೊಫೈಲ್‌ಗಳಿಗೆ ಲಾಗ್-ಇನ್ ಮಾಡಲು ಮೂರು ಪ್ರಯತ್ನಗಳನ್ನು ನೀಡುತ್ತದೆ. ಈ ಮೂರು ಪ್ರಯತ್ನಗಳು ಮುಗಿದ ನಂತರವೂ ನೀವು ಸರಿಯಾದ ಪಾಸ್‌ವರ್ಡ್‌ ನಮೂದಿಸದೆ ಹೋದರೆ ನಿಮ್ಮ ಖಾತೆಯಿಂದ ಲಾಕ್‌ಔಟ್‌ ಆಗುತ್ತೀರಿ. ಇದಿರಂ ನೀವು SBI ಇಂಟರ್ನೆಟ್ ಬ್ಯಾಂಕಿಂಗ್ ಪಾಸ್‌ವರ್ಡ್ ಮರೆತಿದ್ದರೆ ಪಾಸ್‌ವರ್ಡ್ ಅನ್ನು ರಿ ಸೆಟ್‌ ಮಾಡಲು ನಿಮಗೆ ಅವಕಾಶವನ್ನು ಸಹ ನೀಡಲಿದೆ.

ನಿಮ್ಮ SBI ಇಂಟರ್ನೆಟ್ ಬ್ಯಾಂಕಿಂಗ್ ಪಾಸ್‌ವರ್ಡ್ ಅನ್ನು ರಿಸೆಟ್‌ ಮಾಡುವುದು ಹೇಗೆ?

ನಿಮ್ಮ SBI ಇಂಟರ್ನೆಟ್ ಬ್ಯಾಂಕಿಂಗ್ ಪಾಸ್‌ವರ್ಡ್ ಅನ್ನು ರಿಸೆಟ್‌ ಮಾಡುವುದು ಹೇಗೆ?

ಹಂತ:1 ಮೊದಲಿಗೆ SBI ನೆಟ್ ಬ್ಯಾಂಕಿಂಗ್ ಪೋರ್ಟಲ್‌ಗೆ ಭೇಟಿ ನೀಡಿ.
ಹಂತ:2 ಲಾಗಿನ್ ಪೇಜ್‌ ಹೋಗಿ ನಂತರ "ಮರೆತಿರುವ ಲಾಗಿನ್ ಪಾಸ್‌ವರ್ಡ್" ಆಯ್ಕೆಯನ್ನು ಕ್ಲಿಕ್ ಮಾಡಿ.
ಹಂತ:3 ಈಗ, ನಿಮ್ಮನ್ನು ಡ್ರಾಪ್-ಡೌನ್ ಮೆನುಗೆ ನಿರ್ದೇಶಿಸಲಾಗುತ್ತದೆ.
ಹಂತ:4 ಇದರಲ್ಲಿ, "ನನ್ನ ಲಾಗಿನ್ ಪಾಸ್‌ವರ್ಡ್ ಮರೆತುಹೋಗಿದೆ" ಆಯ್ಕೆಮಾಡಿ ಮತ್ತು "ನೆಕ್ಸ್ಟ್‌" ಬಟನ್ ಮೇಲೆ ಕ್ಲಿಕ್ ಮಾಡಿ.
ಹಂತ:5 ಇದೀಗ, ನಿಮ್ಮ ಬಳಕೆದಾರರ ಹೆಸರು, ಬ್ಯಾಂಕ್ ಖಾತೆ ಸಂಖ್ಯೆ, ಜನ್ಮ ದಿನಾಂಕ ಮತ್ತು ಮೊಬೈಲ್ ಸಂಖ್ಯೆಯ ವಿವರಗಳನ್ನು ಭರ್ತಿ ಮಾಡಲು ನಿಮ್ಮನ್ನು ಕೇಳಲಾಗುತ್ತದೆ. ಈ ವಿವರಗಳನ್ನು ಭರ್ತಿ ಮಾಡಿ ಮತ್ತು ಸಬ್ಮಿಟ್‌ ಬಟನ್‌ ಒತ್ತಿರಿ.

ಮೊಬೈಲ್

ಹಂತ:6 ಎಲ್ಲಾ ವಿವರಗಳನ್ನು ಸಲ್ಲಿಸಿದ ನಂತರ, ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ OTP ಬರಲಿದೆ.
ಹಂತ:7 OTP ಅನ್ನು ನಿರ್ದಿಷ್ಟ ಸ್ಥಳದಲ್ಲಿ ನಮೂದಿಸಿ
ಹಂತ:8 ಇದೀಗ ನೀವು ಹೊಸ ಲಾಗಿನ್ ಪಾಸ್‌ವರ್ಡ್ ಅನ್ನು ರಿಸೆಟ್‌ ಮಾಡುವುದಕ್ಕೆ ಅವಕಾಶ ಸಿಗಲಿದೆ.
ಹಂತ:9 ಇಲ್ಲಿ ನಿಮ್ಮ ಹೊಸ ಪಾಸ್‌ವರ್ಡ್ ಅನ್ನು ನಮೂದಿಸಿ ಮತ್ತು ಅದನ್ನು ಪುನಃ ಟೈಪ್ ಮಾಡುವ ಮೂಲಕ ಅದನ್ನು ಖಚಿತಪಡಿಸಿ.

ಈ ಎಲ್ಲಾ ಕ್ರಮಗಳು ಮುಗಿದ ನಂತರ ನೀವು ನಿಮ್ಮ SBI ಆನ್‌ಲೈನ್ ಬ್ಯಾಂಕಿಂಗ್ ಅನ್ನು ಹೊಸ ಪಾಸ್‌ವರ್ಡ್‌ ಮೂಲಕ ಪ್ರಾರಂಭಿಸಬಹುದಾಗಿದೆ.

Best Mobiles in India

Read more about:
English summary
Did you forget your SBI internet banking password? Here is a step-by-step guide of how you can reset it.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X