ಇನ್‌ಸ್ಟಾಗ್ರಾಮ್ ನಲ್ಲಿ ದೀಪಾವಳಿ ಸ್ಟಿಕ್ಕರ್ ಕಳುಹಿಸುವುದು ಹೇಗೆ?

|

ದೀಪಾವಳಿ ಸಂಭ್ರಮ ಎಲ್ಲರಲ್ಲೂ ಮನೆ ಮಾಡಿದೆ. ಈಗಾಗಲೇ ಹಲವು ಸಾಮಾಜಿಕ ಜಾಲತಾಣಗಳು ದೀಪಾವಳಿ ಸಂಭ್ರಮಕ್ಕೆ ಜೊತೆಯಾಗಿದ್ದು, ತಮ್ಮದೇ ಆದ ರೀತಿಯಲ್ಲಿ ಭಾರತೀಯರಿಗೆ ಶುಭಾಶಯ ತಿಳಿಸಿವೆ. ಹಾಗೆಯೇ ಕೆಲವು ಇ-ಕಾಮರ್ಸ್‌ ತಾಣಗಳು ಸಹ ಗ್ಯಾಜೆಟ್‌ಗಳ ಮೇಲೆ ಭರ್ಜರಿ ಆಫರ್‌ಗಳನ್ನು ಘೋಷಣೆ ಮಾಡಿ ಗ್ರಾಹರಿಗೆ ಹಬ್ಬದ ಸಂಭ್ರಮವನ್ನು ಇನ್ನಷ್ಟು ಹೆಚ್ಚಿಸಿವೆ. ಇದರ ನಡುವೆ ಮೆಟಾ ಒಡೆತನದ ಇನ್‌ಸ್ಟಾಗ್ರಾಮ್‌ ಮೂಲಕ ನೀವು ಈ ದೀಪಾವಳಿ ಸಂಭ್ರಮವನ್ನು ಇನ್ನಷ್ಟು ಹೆಚ್ಚಿಗೆ ಮಾಡಿಕೊಳ್ಳಬಹುದಾಗಿದೆ.

ವಿಜಯ

ಹೌದು, ಕತ್ತಲೆಯನ್ನು ಹೋಗಾಲಾಡಿಸಿ ವಿಜಯವನ್ನು ಸೂಚಿಸುವ ಹಬ್ಬವೇ ಬೆಳಕಿನ ಹಬ್ಬ ದೀಪಾವಳಿ. ಈ ವೇಳೆ ದೀಪಾವಳಿ ಸಂಬಂಧ ಪಠ್ಯ ಸಂದೇಶಗಳನ್ನು ಹಂಚಿಕೊಳ್ಳಲು ಮೆಟಾ ತನ್ನ ಇನ್‌ಸ್ಟಾಗ್ರಾಮ್‌ ಮೂಲಕ ಅನುವು ಮಾಡಿಕೊಟ್ಟಿದೆ. ಆದರೆ ಮೆಟಾ ಒಡೆತನದ ವಾಟ್ಸಾಪ್‌ನಲ್ಲಿ ಈ ಆಯ್ಕೆ ನೀಡಲಾಗಿಲ್ಲ. ಆದರೂ ನಾವು ಅದಕ್ಕೂ ಒಂದು ಮಾರ್ಗವನ್ನೂ ತೋರಿಸುತ್ತೇವೆ, ಈ ಮೂಲಕ ನಿಮ್ಮ ಪ್ರೀತಿ ಪಾತ್ರರಿಗೆ ಹಬ್ಬದ ಸ್ಟಿಕ್ಕರ್ ಗಳನ್ನು ಕಳುಹಿಸಬಹುದಾಗಿದೆ. ಇನ್ನು ಈ ಸ್ಟಿಕ್ಕರ್ಗಳ ಮೂಲಕ ದೀಪಾವಳಿ ಹಬ್ಬವನ್ನು ಇನ್ನಷ್ಟು ವರ್ಣರಂಜಿತವಾಗಿಕೊಳ್ಳಬಹುದಾಗಿದೆ.

ಇನ್‌ಸ್ಟಾಗ್ರಾಮ್‌

ಇನ್‌ಸ್ಟಾಗ್ರಾಮ್‌ ನಲ್ಲಿ ನಿಮ್ಮ ಸ್ನೇಹಿತರೊಂದಿಗೆ ಕೆಲವು ಥೀಮ್ ಆಧಾರಿತ ಪ್ರಿ ಲೋಡೆಡ್ ಸ್ಟಿಕ್ಕರ್ ಗಳನ್ನು ಹಂಚಿಕೊಳ್ಳಲು ಅನುಮತಿಸಲಾಗಿದೆ. ಕೊರೊನಾ ಹಿನ್ನೆಲೆ ಈ ಹಿಂದಿನ ವರ್ಷದಲ್ಲಿ ಈ ರೀತಿಯ ಫೀಚರ್ಸ್‌ ನೀಡಿರಲಿಲ್ಲ. ಆದರೆ, ಈಗ ಸ್ಟಿಕ್ಕರ್ ಗಳನ್ನು ಕುಟುಂಬ ಸದಸ್ಯರಿಗೆ, ಸ್ನೇಹಿತರಿಗೆ, ಹಾಗೂ ಬಂಧು-ಬಳಗದವರಿಗೆ ಶುಭಾಶಯ ತಿಳಿಸಲು ಬಳಕೆ ಮಾಡಿಕೊಳ್ಳಬಹುದಾಗಿದೆ. ಹಾಗಿದ್ರೆ ಈ ಸ್ಟಿಕ್ಕರ್ ಗಳನ್ನು ನಿಮ್ಮ ಅತ್ಮೀಯರ ಜೊತೆಗೆ ಹೇಗೆ ಹಂಚಿಕೊಳ್ಳುವುದು ಎಂಬ ವಿವರವನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಸ್ಟಿಕ್ಕರ್ ಗಳನ್ನು ಕಳುಹಿಸಲು ಈ ಕ್ರಮ ಅನುಸರಿಸಿ

ಸ್ಟಿಕ್ಕರ್ ಗಳನ್ನು ಕಳುಹಿಸಲು ಈ ಕ್ರಮ ಅನುಸರಿಸಿ


* ಮೊದಲು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿರುವ ಇನ್‌ಸ್ಟಾಗ್ರಾಮ್‌ ಅಪ್ಲಿಕೇಶನ್ ಓಪನ್‌ ಮಾಡಿ.

* ನಂತರ ಫೀಡ್‌ನ ಮೇಲಿನ ಬಲ ಮೂಲೆಯಲ್ಲಿ ಕಾಣಿಸಿಕೊಳ್ಳುವ ಡೈರೆಕ್ಟ್ ಮೆಸೆಜ್ (DM) ಐಕಾನ್ ಮೇಲೆ ಟ್ಯಾಪ್ ಮಾಡಿ.

* ಇದಾದ ಬಳಿಕ ಹಬ್ಬದ ಹಿನ್ನೆಲೆ ನೀಡಲಾಗಿರುವ ಸ್ಟಿಕ್ಕರ್‌ಗಳನ್ನು ಕಳುಹಿಸಲು ಉದ್ದೇಶಿಸಿರುವ ನಿಮ್ಮ ಕುಟುಂಬದ ಸದಸ್ಯರು, ಸ್ನೇಹಿತರು, ಅತ್ಮೀಯರ ಚಾಟ್‌ ಅನ್ನು ಓಪನ್‌ ಮಾಡಿ.

* ಚಾಟ್‌ ಪುಟ ತೆರೆದ ನಂತರ ಕೆಳಭಾಗದಲ್ಲಿ ಕಾಣಿಸುವ ಸ್ಟಿಕ್ಕರ್‌ಗಳ ಬಳಿ ಇರುವ ಸರ್ಚ್‌ ಐಕಾನ್ ಮೇಲೆ ಟ್ಯಾಪ್ ಮಾಡಿ.

* ಬಳಿಕ ಸರ್ಚ್ ಬಾರ್‌ನಲ್ಲಿ 'Diwali' ಎಂದು ಟೈಪ್ ಮಾಡಿ.

* 'Diwali' ಎಂದು ಟೈಪ್‌ ಮಾಡಿದ ನಂತರ ಅಲ್ಲಿ ಹಲವು ರೀತಿಯ ದೀಪಾವಳಿ ಸಂಬಂಧಿತ ವರ್ಣರಂಜಿತ ಸ್ಟಿಕ್ಕರ್‌ಗಳು ಲಭ್ಯವಾಗುತ್ತವೆ. ಅವುಗಳಲ್ಲಿ ನಿಮಗೆ ಇಷ್ಟವಾದುದ್ದನ್ನು ಆಯ್ಕೆ ಮಾಡಿ ಸೆಂಡ್‌ ಬಟನ್ ಮೇಲೆ ಟ್ಯಾಪ್‌ ಮಾಡಿ.

ವಾಟ್ಸಾಪ್‌ನಲ್ಲೂ ಸ್ಟಿಕ್ಕರ್  ಕಳುಹಿಸಿ

ವಾಟ್ಸಾಪ್‌ನಲ್ಲೂ ಸ್ಟಿಕ್ಕರ್ ಕಳುಹಿಸಿ

ಈ ರೀತಿಯ ಶುಭಾಶಯ ತಿಳಿಸುವ ಸ್ಟಿಕ್ಕರ್ ಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ನೀಡಿದಂತೆ ವಾಟ್ಸಾಪ್‌ನಲ್ಲಿ ನೀಡಿಲ್ಲವಾದರೂ ಅದಕ್ಕೂ ಒಂದು ಮಾರ್ಗವನ್ನು ನಾವು ತಿಳಿಸಿಕೊಡಲಿದ್ದೇವೆ. ಈ ಕ್ರಮ ಅನುಸರಿಸುವ ಮೂಲಕ ಸಂದೇಶ ಕಳುಹಿಸಬಹುದು. ವಾಟ್ಸಾಪ್‌ ಸ್ನೇಹಿತರು ಮತ್ತು ಕುಟುಂಬಕ್ಕೆ ದೀಪಾವಳಿ ಶುಭಾಶಯಗಳನ್ನು ಕಳುಹಿಸಲು ನೀವು ಗೂಗಲ್‌ ಪ್ಲೇ ಸ್ಟೋರ್‌ನಿಂದ ಸ್ಟಿಕ್ಕರ್ ಪ್ಯಾಕೇಜ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.

ಸ್ಟಿಕ್ಕರ್ಸ್‌

'ಸ್ಟಿಕ್ಕರ್ಸ್‌' ವಿಭಾಗದಲ್ಲಿ ವೈಯುಕ್ತೀಕರಿಸಬಹುದಾದ GIF ಚಿತ್ರಗಳನ್ನು ಸಹ ನೀವು ವಾಟ್ಸಾಪ್‌ ಮೂಲಕ ಹಂಚಿಕೊಳ್ಳಬಹುದು. ಹಾಗೆಯೇ ಬಳಕೆದಾರರು 6 ಸೆಕೆಂಡ್ ವಿಡಿಯೋಗಳನ್ನು ಸಹ ಕಳುಹಿಸಬಹುದಾಗಿದೆ. ಹಾಗೆಯೇ ನಿಮ್ಮ ಬಳಿ ಇರುವ ಧೀರ್ಘ ವಿಡಿಯೋ ಅಥವಾ ಫೋಟೋಗಳನ್ನು ವೈಯುಕ್ತೀಕರಿಸಿಕೊಂಡು ಅವುಗಳನ್ನೂ ಸಹ ಎಮೋಜಿ ಫೀಚರ್ಸ್‌ಗಳ ಹಾಗೆ ಬಳಕೆ ಮಾಡಿಕೊಳ್ಳಬಹುದಾದ ಆಯ್ಕೆಯನ್ನು ಮೆಟಾ ಒದಗಿಸಿದೆ.

Best Mobiles in India

English summary
Diwali celebration has reached everyone's home. Meanwhile, greetings can also be conveyed through stickers on Instagram.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X