ಡಿಜಿಲಾಕರ್ ಅನ್ನು ಸೆಟ್‌ ಮಾಡುವುದು ಮತ್ತು ಬಳಸುವುದು ಹೇಗೆ?

|

ಇಂದಿನ ದಿನಗಳಲ್ಲಿ ಹೆಚ್ಚಿನ ಜನರು ತಮ್ಮ ಪ್ರಮುಖ ದಾಖಲೆಗಳನ್ನು ಡಿಜಿಲಾಕರ್ ಅಪ್ಲಿಕೇಶನ್ ಅಲ್ಲಿ ಸ್ಟೋರೇಜ್‌ ಮಾಡುತ್ತಾರೆ. ಡಿಜಿಲಾಕರ್‌ ಅಪ್ಲಿಕೇಶನ್‌ನಲ್ಲಿ ಡಾಕ್ಯುಮೆಂಟ್‌ಗಳನ್ನು ಸೇವ್‌ ಮಾಡುವುದರಿಂದ ನೀವು ದಾಖಲೆಗಳನ್ನು ಬೇರೆ ಕಡೆಗೆ ಸಾಗಿಸುವ ಅವಶ್ಯಕತೆ ಬರುವುದಿಲ್ಲ. ಡಿಜಿಲಾಕರ್‌ನಲ್ಲಿರುವ ಡಾಕ್ಯುಮೆಂಟ್‌ಗಳನ್ನು ಅಗತ್ಯ ಸಮಯದಲ್ಲಿ ಪ್ರದರ್ಶಿಸಬಹುದಾಗಿದೆ. ಇನ್ನು ಡಿಜಿಲಾಕರ್‌ ಅಪ್ಲಿಕೇಶನ್‌ ನಿಮ್ಮ ಡಾಕ್ಯುಮೆಂಟ್‌ಗಳನ್ನು ಸುರಕ್ಷಿತವಾಗಿರಿಸಬಹುದಾಗಿದೆ.

ಡಿಜಿಲಾಕರ್

ಹೌದು, ಡಿಜಿಲಾಕರ್ ಅಪ್ಲಿಕೇಶನ್‌ನಲ್ಲಿ ನಿಮ್ಮ ಪ್ರಮುಖ ಡಾಕ್ಯುಮೆಂಟ್‌ಗಳನ್ನು ಸ್ಟೋರೇಜ್‌ ಮಾಡಬಹುದಾಗಿದೆ. ಈ ಅಪ್ಲಿಕೇಶನ್‌ನಲ್ಲಿರುವ ಯಾವುದೇ ಮೂಲ ದಾಖಲೆಗಳನ್ನು ತೋರಿಸಲು ನೀವು ಇದನ್ನು ಬಳಸಬಹುದು. ಹಾಗಾದ್ರೆ ಡಿಜಿಲಾಕರ್ ಅಪ್ಲಿಕೇಶನ್ ಅನ್ನು ಬಳಸುವುದು ಹೇಗೆ? ಇದರಲ್ಲಿ ಡಾಕ್ಯುಮೆಂಟ್‌ಗಳನ್ನು ಸ್ಟೋರೇಜ್‌ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಡಿಜಿಲಾಕರ್

ಇನ್ನು ಡಿಜಿಲಾಕರ್ ಅನ್ನು ಅಧಿಕೃತ ವೆಬ್‌ಸೈಟ್ www.digilocker.gov.in ಅಥವಾ ಅಧಿಕೃತ ಅಪ್ಲಿಕೇಶನ್ ಮೂಲಕ ಪ್ರವೇಶಿಸಬಹುದು. ಬಳಕೆದಾರರು ತಮ್ಮ ಡಿಎಲ್ ಮತ್ತು ಆರ್‌ಸಿ ಡಿಜಿಟಲ್ ಪ್ರತಿಗಳನ್ನು ತಮ್ಮ ಡೆಸ್ಕ್‌ಟಾಪ್ ಮತ್ತು ಮೊಬೈಲ್ ಡಿವೈಸ್‌ಗಳಲ್ಲಿ ಸಂಗ್ರಹಿಸಿಟ್ಟಿದ್ದರೆ ಅದನ್ನು ಕೆಲವೇ ಕ್ಲಿಕ್‌ಗಳಲ್ಲಿ ಡಿಜಿಲಾಕರ್‌ನಲ್ಲಿ ಅಪ್ಲೋಡ್‌ ಮಾಡಲು ಇದು ಅನುಮತಿಸುತ್ತದೆ. ನೀವು ಇದರಲ್ಲಿ ಅಕೌಂಟ್‌ ಕ್ರಿಯೆಟ್‌ ಮಾಡುವಾಗ ನಿಮ್ಮ ಪೂರ್ಣ ಹೆಸರು, ಹುಟ್ಟಿದ ದಿನಾಂಕ, ಲಿಂಗ ಮತ್ತು ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಬೇಕಾಗುತ್ತದೆ. ನಂತರ, ಅಪ್ಲಿಕೇಶನ್ ನಿಮ್ಮ ಫೋನ್ ಸಂಖ್ಯೆಗೆ OTP ಅನ್ನು ಕಳುಹಿಸುತ್ತದೆ ಅದನ್ನು ನೀವು ಮೌಲ್ಯೀಕರಿಸಲು ನಮೂದಿಸಬೇಕಾಗುತ್ತದೆ.

ಡಿಜಿಲಾಕರ್‌ನಲ್ಲಿ ಡಾಕ್ಯುಮೆಂಟ್‌ ಅಪ್ಲೋಡ್‌ ಮಾಡುವುದು ಹೇಗೆ?

ಡಿಜಿಲಾಕರ್‌ನಲ್ಲಿ ಡಾಕ್ಯುಮೆಂಟ್‌ ಅಪ್ಲೋಡ್‌ ಮಾಡುವುದು ಹೇಗೆ?

ನಿವು ನಿಮ್ಮ ಡಾಕ್ಯುಮೆಂಟ್‌ಗಳನ್ನು ಅಪ್‌ಲೋಡ್ ಮಾಡಲು ನಿಮ್ಮ ಡಿಜಿಲಾಕರ್ ಖಾತೆಯನ್ನು ನೀವು ಸೆಟ್‌ಮಾಡಬೇಕಾಗುತ್ತದೆ. ಡಿಜಿಲಾಕರ್ ಖಾತೆಯನ್ನು ನಿವು ಸೆಟ್‌ ಮಾಡಬೇಕಾದರೆ ಈ ಕೆಳಗಿನ ಹಂತಗಳನ್ನು ಅನುಸರಿಸಬೇಕು.
ಹಂತ:1 ನಿಮ್ಮ Android ಅಥವಾ iOS ಸಾಧನದಲ್ಲಿ ಉಚಿತ ಡಿಜಿಲಾಕರ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ.
ಹಂತ:2 ನಂತರ ನಿವು ಸದಾ ಬಳಸುವ ನಿಮ್ಮ ಮೊಬೈಲ್ ಸಂಖ್ಯೆಗೆ ಬರುವ ಒಟಿಪಿ ನಮೂದಿಸಿ
ಹಂತ:3 ಇದಾದ ನಂತರ ನಿಮ್ಮ ಆಧಾರ್ ಕಾರ್ಡ್ ನಲ್ಲಿರುವ ನಿಮ್ಮ ಎಲ್ಲಾ ವೈಯಕ್ತಿಕ ಮಾಹಿತಿಯನ್ನು ಹೆಸರು, ವಿಳಾಸ ಇತ್ಯಾದಿಗಳನ್ನು ಸ್ವಯಂಚಾಲಿತವಾಗಿ ಭರ್ತಿ ಮಾಡುತ್ತದೆ.
ಹಂತ:4 ಇದೀಗ ನಿಮ್ಮ ದಾಖಲೆಗಳನ್ನು ಸೇವ್‌ ಮಾಡಲು ಡಿಜಿಲಾಕರ್ ಅಪ್ಲಿಕೇಶನ್ ನಿಮಗೆ ಅನುಮತಿಸುತ್ತದೆ.

ಡಿಜಿಲಾಕರ್

ಡಿಜಿಲಾಕರ್ ವ್ಯವಸ್ಥೆಯಲ್ಲಿ ನೀಡಲಾದ ದಾಖಲೆಗಳನ್ನು ಮೂಲ ಭೌತಿಕ ದಾಖಲೆಗಳೊಂದಿಗೆ ಸಮನಾಗಿ ಪರಿಗಣಿಸಲಾಗುತ್ತದೆ. ಇದರಿಂದಾಗಿ ಡಿಜಿಲಾಕರ್‌ ಅಪ್ಲಿಕೇಶನ್‌ನಲ್ಲಿ ಪಾಸ್‌ಪೋರ್ಟ್‌ ಸೇವೆಯನ್ನು ಕೂಡ ಸೇರಿಸಲಾಗಿದೆ. ಬಯೋಮೆಟ್ರಿಕ್ ಪಾಸ್‌ಪೋರ್ಟ್‌ಗಳು ಸ್ವಯಂಚಾಲಿತ ಇ-ಪಾಸ್‌ಪೋರ್ಟ್ ಗೇಟ್‌ಗಳನ್ನು ಹೊಂದಿದ ವಿಮಾನ ನಿಲ್ದಾಣಗಳಲ್ಲಿ ವಲಸೆ ಪ್ರಕ್ರಿಯೆಗಳನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಮುಂಬರುವ ಪಾಸ್‌ಪೋರ್ಟ್ ಸೇವಾ ಕಾರ್ಯಕ್ರಮ ವಿ ​​2.0 ನಲ್ಲಿ, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ), ಮೆಷಿನ್ ಲರ್ನಿಂಗ್, ಚಾಟ್‌ಬಾಟ್, ಅನಾಲಿಟಿಕ್ಸ್, ರೊಬೊಟಿಕ್ ಪ್ರೊಸೆಸ್ ಆಟೊಮೇಷನ್ (ಆರ್‌ಪಿಎ) ನಂತಹ ಉದಯೋನ್ಮುಖ ತಂತ್ರಜ್ಞಾನಗಳ ಬಳಕೆಯು ನಾಗರಿಕರ ಅನುಭವವನ್ನು ಮತ್ತಷ್ಟು ಸರಾಗಗೊಳಿಸುತ್ತದೆ ಮತ್ತು ತ್ವರಿತ ಸೇವಾ ವಿತರಣೆಗೆ ಕಾರಣವಾಗುತ್ತದೆ ಎಂದು ಸರ್ಕಾರ ಹೇಳಿದೆ.

Best Mobiles in India

English summary
Here's how to setup the Digilocker app and fetch important documents

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X