ಹಳೆಯ ಫೋನ್‌ಗಳಿಂದ ಏನೆಲ್ಲಾ ಉಪಯೋಗವಿದೆ ಅಂತಾ ತಿಳಿದ್ರೆ ಅಚ್ಚರಿ ಪಡ್ತೀರಾ?

|

ಹೊಸ ಸ್ಮಾರ್ಟ್‌ಫೋನ್‌ ಖರೀದಿಸುವ ಬಹುತೇಕ ಮಂದಿ ತಮ್ಮ ಹಳೆ ಫೋನ್‌ ಅನ್ನು ಮೂಲೆಗೆಸೆಯುತ್ತಾರೆ. ಆದರೆ ಇದರಿಂದ ಉಪಯೋಗವಾಗುವುದಿಲ್ಲ, ಬದಲಿಗೆ ಇ-ತ್ಯಾಜ್ಯದ ಪ್ರಮಾಣ ಹೆಚ್ಚಾಗಲಿದೆ. ಇದಕ್ಕೆ ಬದಲಾಗಿ ನಿಮ್ಮ ಹಳೆ ಸ್ಮಾರ್ಟ್‌ಫೋನ್‌ಗಳನ್ನು ಹಲವು ಉಪಯುಕ್ತ ಕಾರ್ಯಗಳಿಗೆ ಬಳಸಬಹುದಾಗಿದೆ. ಇದಕ್ಕಾಗಿ ನೀವು ಹಣ ಖರ್ಚು ಮಾಡಬೇಕಾದ ಅಗತ್ಯವಿಲ್ಲ, ನಿಮ್ಮ ಬುದ್ದಿಗೆ ಕೆಲಸಕೊಟ್ಟರೆ ಸಾಕು. ಹಳೆ ಸ್ಮಾರ್ಟ್‌ಫೋನ್‌ಗಳನ್ನು ಉಪಯುಕ್ತ ಗ್ಯಾಜೆಟ್ಸ್‌ಗಳಾಗಿ ಉಪಯೋಗಿಸಬಹುದು.

ಮೂಲೆಗೆಸೆಯುವ

ಹೌದು, ಹಳೆ ಸ್ಮಾರ್ಟ್‌ಫೋನ್‌ಗಳ ಕಾರ್ಯನಿರ್ವಹಣೆ ಚೆನ್ನಾಗಿದ್ದರೆ ಅದನ್ನು ಮೂಲೆಗೆಸೆಯುವ ಬದಲು ಬದಲಿ ಕೆಲಸಕ್ಕೆ ಉಪಯೋಗಿಸಬಹುದಾಗಿದೆ. ಸ್ಮಾರ್ಟ್‌ಫೋನ್‌ ಆಗಿ ಉಪಯೋಗಿಸುವ ಬದಲು ಇನ್ನಿತರ ಗ್ಯಾಜೆಟ್ಸ್‌ಗಳ ರೂಪದಲ್ಲಿ ಬಳಸಬಹುದಾಗಿದೆ. ನಿಮ್ಮ ಮನೆಯ ಸಿಸಿಟಿವಿ ಆಗಿ, ಕಾರ್‌ ಕ್ಯಾಮೆರಾ ರೀತಿಯಲ್ಲಿ, ಅಷ್ಟೇ ಯಾಕೆ ಸ್ಟೋರೇಜ್‌ ಡಿವೈಸ್‌ ಆಗಿ ಕೂಡ ಇದನ್ನು ಬಳಸಬಹುದಾಗಿದೆ. ಹಾಗಾದ್ರೆ ನಿಮ್ಮ ಹಳೆ ಸ್ಮಾರ್ಟ್‌ಫೋನ್‌ಗಳನ್ನು ಹೇಗೆಲ್ಲಾ ಉಪಯೋಗಿಸಬಹುದು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಕಾರ್ ಕ್ಯಾಮೆರಾ

ಕಾರ್ ಕ್ಯಾಮೆರಾ

ನಿಮ್ಮ ಹಳೆಯ ಸ್ಮಾರ್ಟ್‌ಫೋನಿನ ಕ್ಯಾಮೆತರಾ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದರೆ ಅದನ್ನು ಕಾರ್‌ ಕ್ಯಾಮೆರಾ ಆಗಿ ಬಳಸಬಹುದು. ಇದನ್ನು ಡ್ಯಾಶ್ ಕ್ಯಾಮರಾ ಆಗಿ ಪರಿವರ್ತಿಸಬಹುದು. ಇದಕ್ಕಾಗಿ ನೀವು ಪ್ಲೇ ಸ್ಟೋರ್‌ನಲ್ಲಿ ಡ್ಯಾಶ್ ಕ್ಯಾಮರಾ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬೇಕಾಗುತ್ತದೆ. ಇದರಲ್ಲಿ ನಿಮ್ಮ ಹಳೆಯ ಫೋನ್ ಅನ್ನು ಮೌಂಟ್ ಮಾಡಲು ನಿಮ್ಮ ಕಾರಿನಲ್ಲಿ ಫೋನ್ ಹೋಲ್ಡರ್ ಅನ್ನು ಇನ್‌ಸ್ಟಾಲ್‌ ಮಾಡಬೇಕಾಗುತ್ತದೆ. ಇದರಿಂದ ರೋಡ್‌ ಆಕ್ಸಿಡೆಂಟ್‌ ಅಥವಾ ವೀಡಿಯೊ ರೆಕಾರ್ಡಿಂಗ್ ಅಗತ್ಯವಿದ್ದಾಗ ಬಳಸುವುದಕ್ಕೆ ಸೂಕ್ತವಾಗಲಿದೆ.

ನ್ಯಾವಿಗೇಷನ್ ಡಿವೈಸ್‌

ನ್ಯಾವಿಗೇಷನ್ ಡಿವೈಸ್‌

ನಿಮ್ಮ ಹಳೆಯ ಫೋನ್‌ ಅನ್ನು ಮೂಲೆಗೆಸಯುವ ಬದಲು ನ್ಯಾವಿಗೇಷನ್‌ ಡಿವೈಸ್‌ ರೀತಿಯಲ್ಲಿ ಬಳಸಬಹುದು. ಇದನ್ನು ನಿಮ್ಮ ಕಾರ್‌ ಅಥವಾ ಬೈಕ್‌ ಫೋನ್‌ ಹೋಲ್ಡರ್‌ನಲ್ಲಿ ಮೌಂಟ್‌ ಮಾಡುವ ಮೂಲಕ ನ್ಯಾವಿಗೇಷನ್‌ ಡಿವೈಸ್‌ ಆಗಿ ಬಳಸಬಹುದಾಗಿದೆ.

ರಿಸೈಕಲ್‌

ರಿಸೈಕಲ್‌

ಹಳೆಯ ಫೋನ್‌ ಅನ್ನು Cashify.in, Recycledevice.com ಅಥವಾ Namoewaste.com ನಂತಹ ಆನ್‌ಲೈನ್ ವೆಬ್‌ಸೈಟ್‌ಗಳಲ್ಲಿ ಮಾರಿಬಿಡಿ. ಈ ವೆಬ್‌ಸೈಟ್‌ಗಳು ಭಾರತದಲ್ಲಿ ಇ-ತ್ಯಾಜ್ಯವನ್ನು ಸಂಗ್ರಹಿಸುವ ಕೆಲಸ ಮಾಡುತ್ತಿವೆ. ಇಲ್ಲಿ ಸಂಗ್ರಹಿಸಿದ ಸ್ಮಾರ್ಟ್‌ಫೋನ್‌ಗಳಲ್ಲಿರುವ ಟೆಕ್ನಾಲಜಿಯನ್ನು ರಿಸ್ಲೈಕಿಂಗ್‌ಗೆ ಕಳುಹಿಸಲಾಗುತ್ತದೆ. ಮರುಬಳಕೆಗಾಗಿ ನಿಮ್ಮ ಹಳೆಯ ಗ್ಯಾಜೆಟ್‌ಗಳನ್ನು ಕಳುಹಿಸುವುದಕ್ಕೆ ಪ್ರತಿಯಾಗಿ ನೀವು ಹಣ ಮತ್ತು ಬಹುಮಾನಗಳನ್ನು ಗಳಿಸಬಹುದು.

ಸ್ಟೋರೇಜ್‌ ಡಿವೈಸ್‌ ಆಗಿ ಪರಿವರ್ತಿಸಿ

ಸ್ಟೋರೇಜ್‌ ಡಿವೈಸ್‌ ಆಗಿ ಪರಿವರ್ತಿಸಿ

ನಿಮ್ಮ ಹಳೆಯ ಫೋನ್ ಅನ್ನು ನಿಮ್ಮ ಸ್ಟೋರೇಜ್‌ ಡಿವೈಸ್‌ ಆಗಿ ಕೂಡ ಬಳಸಬಹುದಾಗಿದೆ. ಮನೆಯ ಮೂಲೆಗೆ ಎಸೆಯುವ ಬದಲು ನಿಮ್ಮ ಫೋಟೋಸ್‌, ಡಾಕ್ಯುಮೆಂಟ್‌, ಫೈಲ್‌ಗಳನ್ ನುನ ಸ್ಟೋರೇಜ್‌ ಮಾಡುವುದಕ್ಕೆ ಹಳೆ ಫೋನ್‌ ಯೂಸ್‌ ಮಾಡಬಹುದಾಗಿದೆ. ಇದರಿಂದ ನಿಮ್ಮ ಡೇಟಾವನ್ನು ಹಳೆ ಫೋನ್‌ನಲ್ಲಿ ಸೇವ್‌ ಮಾಡಬಹುದು. ಅಂದರೆ ಹಳೆ ಫೋನ್‌ ಅನ್ನು ನಿಮ್ಮ ಪೋರ್ಟಬಲ್ ಡ್ರೈವ್‌ನಂತೆ ಬಳಸಬಹುದಾಗಿದೆ.

ಎಕ್ಸ್‌ಚೇಂಜ್‌ ಆಫರ್‌ನಲ್ಲಿ ಮಾರಿಬಿಡಿ

ಎಕ್ಸ್‌ಚೇಂಜ್‌ ಆಫರ್‌ನಲ್ಲಿ ಮಾರಿಬಿಡಿ

ಅಮೆಜಾನ್‌, ಫ್ಲಿಪ್‌ಕಾರ್ಟ್‌ನಂತಹ ಪ್ಲಾಟ್‌ಫಾರ್ಮ್‌ಗಳಲ್ಲಿ ಎಕ್ಸ್‌ಚೇಂಜ್‌ ಆಫರ್‌ ಕೂಡ ಲಭ್ಯವಿರುತ್ತದೆ. ಇವುಗಳಲ್ಲಿ ನಿಮ್ಮ ಹಳೆ ಫೋನ್‌ ಕಂಡಿಷನ್‌ ಚೆನ್ನಾಗಿದ್ದರೆ ಅದನ್ನು ಎಕ್ಸ್‌ಚೇಂಜ್‌ ಮಾಡಿಬಿಡಿ. ಇದರಿಂದ ನೀವು ಹಣವನ್ನು ಕೂಡ ಪಡೆದುಕೊಳ್ಳಬಹುದು. ಅಲ್ಲದೆ ಹೊಸ ಸ್ಮಾರ್ಟ್‌ಫೋನ್‌ ಕೊಂಡುಕೊಳ್ಳಲು ಎಕ್ಸ್‌ಚೇಂಜ್‌ ಆಫರ್‌ನಿಂದ ಡಿಸ್ಕೌಂಟ್‌ ಕೂಡ ಪಡೆಯಬಹುದು.

ರಿ ಸೇಲ್‌ ಮಾಡಿ

ರಿ ಸೇಲ್‌ ಮಾಡಿ

ಹಳೆಯ ಫೋನ್‌ ಅನ್ನು ನೀವು ಯಾರಿಗೆ ಅಗತ್ಯವಿದೆಯೋ ಅವರಿಗೆ ರೀ ಸೇಲ್‌ ಮಾಡುವುದು ಕೂಡ ಸೂಕ್ತ. ಇದರಿಂದ ಇ- ತ್ಯಾಜ್ಯವನ್ನು ತಪ್ಪಿಸಬಹುದಾಗಿದೆ. ನೀವು ನಿಮ್ಮ ಹಳೆಯ ಫೋನ್ ಅನ್ನು ಆನ್‌ಲೈನ್ ವೆಬ್‌ಸೈಟ್‌ಗಳಲ್ಲಿ ಮಾರಾಟ ಮಾಡಬಹುದು ಮತ್ತು ಹಣವನ್ನು ಗಳಿಸಬಹುದು.

Best Mobiles in India

Read more about:
English summary
Here's is some ways recycle it your old phone

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X