ನೀವು ಬಳಸಬಹುದಾದ ಅತ್ಯುತ್ತಮ ಫ್ರೀ ಕ್ಲೌಡ್‌ ಸ್ಟೋರೇಜ್‌ ಅಪ್ಲಿಕೇಶನ್‌ಗಳು!

|

ಇಂದಿನ ಡಿಜಿಟಲ್‌ ಪ್ರಪಂಚದಲ್ಲಿ ಕ್ಲೌಡ್‌ ಸ್ಟೋರೇಜ್‌ ಸೇವೆಗಳು ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿವೆ. ಕ್ಲೌಡ್‌ ಸ್ಟೋರೇಜ್‌ ಅಪ್ಲಿಕೇಶನ್‌ಗಳು ನಿಮ್ಮ ಡಿವೈಸ್‌ಗಳಲ್ಲಿ ಸ್ಟೋರೇಜ್‌ ಸ್ಪೇಸ್‌ ಉಳಿಸಲು ಸಹಾಯಕವಾಗಿವೆ. ನಿಮ್ಮ ಫೈಲ್‌ಗಳನ್ನು ಆನ್‌ಲೈನ್‌ನಲ್ಲಿ ಸುರಕ್ಷಿತವಾಗಿ ಸ್ಟೋರೇಜ್‌ ಮಾಡಲು ಕ್ಲೌಡ್‌ ಸ್ಟೋರೇಜ್‌ ಅಪ್ಲಿಕೇಶನ್‌ಗಳು ಉತ್ತಮವಾಗಿವೆ. ಇನ್ನು ಕ್ಲೌಡ್‌ ಸ್ಟೋರೇಜ್‌ನಲ್ಲಿ ಫೈಲ್‌ಗಳನ್ನು ಸೇವ್‌ ಮಾಡಿದರೆ ನೀವು ಯಾವುದೇ ಡಿವೈಸ್‌ನಿಂದ ಬೇಕಾದರೂ ಪ್ರವೇಶಿಸಬಹುದಾಗಿದೆ. ಇದೇ ಕಾರಣಕ್ಕೆ ಇಂದಿನ ದಿನಗಳಲ್ಲಿ ಕ್ಲೌಡ್‌ ಸ್ಟೋರೇಜ್‌ ಅಪ್ಲಿಕೇಶನ್‌ಗಳು ಹೆಚ್ಚಿನ ಬೇಡಿಕೆ ಪಡೆದುಕೊಂಡಿವೆ.

ಸ್ಟೋರೇಜ್‌

ಹೌದು, ಕ್ಲೌಡ್‌ ಸ್ಟೋರೇಜ್‌ ಅಪ್ಲಿಕೇಶನ್‌ಗಳು ನಿಮ್ಮ ಫೈಲ್‌ಗಳನ್ನು ಸುರಕ್ಷಿತವಾಗಿಡುತ್ತವೆ. ಇದರಿಂದ ಯುಎಸ್‌ಬಿ ಡ್ರೈವ್‌ಗಳನ್ನು ಬಳಸುವ ಅವಶ್ಯಕತೆ ಬರುವುದಿಲ್ಲ. ಸದ್ಯ ಕ್ಲೌಡ್‌ ಸ್ಟೋರೇಜ್‌ ಅಪ್ಲಿಕೇಶನ್‌ಗಳಲ್ಲಿ ಕೆಲವು ಅಪ್ಲಿಕೇಶನ್‌ಗಳು ಉಚಿತ ಸ್ಟೋರೇಜ್‌ ಅನ್ನು ನೀಡುತ್ತವೆ. ಇನ್ನು ಕೆಲವು ಕ್ಲೌಡ್‌ ಸ್ಟೋರೇಜ್‌ ಅಪ್ಲಿಕೇಶನ್‌ಗಳು ಚಂದಾದಾರಿಕೆಯನ್ನು ಹೊಂದಿವೆ. ಹಾಗಾದ್ರೆ ನಿಮ್ಮ ಫೈಲ್‌ಗಳನ್ನು ಆನ್‌ಲೈನ್‌ನಲ್ಲಿ ಸೇವ್‌ ಮಾಡುವುದಕ್ಕೆ ನೀವು ಬಳಸಬಹುದಾದ ಫ್ರೀ ಕ್ಲೌಡ್‌ ಸ್ಟೋರೇಜ್‌ ಅಪ್ಲಿಕೇಶನ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಒನ್‌ಡ್ರೈವ್‌

ಒನ್‌ಡ್ರೈವ್‌

ಮೈಕ್ರೋಸಾಫ್ಟ್‌ ಒನ್‌ಡ್ರೈವ್‌ ಕ್ಲೌಡ್‌ಸ್ಟೋರೇಜ್‌ ತನ್ನ ಬೇಸಿಕ ಸ್ಟೋರೇಜ್‌ ಪ್ಲಾನ್‌ ಅನ್ನು ಉಚಿತವಾಗಿ ನೀಡುತ್ತಿದೆ. ಅದರಂತೆ ಹೊಸ ಬಳಕೆದಾರರು 5GB ವರೆಗೆ ಉಚಿತ ಸ್ಟೋರೇಜ್‌ ಸೇವೆಯನ್ನು ಬಳಸಬಹುದಾಗಿದೆ. ಒಂದು ವೇಳೆ ನೀವು ಯಾವುದೇ ಮೈಕ್ರೋಸಾಫ್ಟ್‌ 365 ಪ್ಲಾನ್‌ ಚಂದಾದಾರರಾಗಿದ್ದರೆ 1TB ವರೆಗೆ ಸ್ಟೋರೇಜ್‌ ಅವಕಾಶವನ್ನು ಪಡೆದುಕೊಳ್ಳಬಹುದಾಗಿದೆ. ಇನ್ನು ಒನ್‌ಡ್ರೈವ್‌ ಅಪ್ಲಿಕೇಶನ್‌ ಸಂಪೂರ್ಣವಾಗಿ ಎನ್‌ಕ್ರಿಪ್ಟ್ ಆಗಿದ್ದು, ಮಲ್ಟಿ ಕಂಪ್ಯೂಟರ್‌ಗಳಲ್ಲಿ ಫೈಲ್‌ಗಳನ್ನು ಸಿಂಕ್‌ನಲ್ಲಿ ಇರಿಸಬಹುದಾಗಿದೆ.

ಡ್ರಾಪ್‌ಬಾಕ್ಸ್‌

ಡ್ರಾಪ್‌ಬಾಕ್ಸ್‌

ಡ್ರಾಪ್‌ಬಾಕ್ಸ್ ಅಪ್ಲಿಕೇಶನ್‌ ಜನಪ್ರಿಯ ಕ್ಲೌಡ್‌ ಸ್ಟೋರೇಜ್‌ ಅಪ್ಲಿಕೇಶನ್‌ ಎನಿಸಿಕೊಂಡಿದೆ. ಇದರಲ್ಲಿ ನೀವು ಯಾವುದೇ ಫೈಲ್‌ಗಳನ್ನು ಸುಲಭವಾಗಿ ಶೇರ್‌ ಮಾಡುವುದಕ್ಕೂ ಅವಕಾಶವಿದೆ. ಇನ್ನು ಡ್ರಾಪ್‌ಬಾಕ್ಸ್ ಅಪ್ಲಿಕೇಶನ್‌ ಬೇಸಿಕ್ ಪ್ಲಾನ್‌ ಉಚಿತವಾಗಿ ಲಭ್ಯವಾಗಲಿದೆ. ಇನ್ನು ಬೇಸಿಕ್‌ ಪ್ಲಾನ್‌ನಲ್ಲಿ ನಿಮಗೆ 2GB ಸ್ಟೋರೇಜ್‌ ಸ್ಪೇಸ್‌ ದೊರೆಯಲಿದೆ. ಆದರೂ ನೀವು ಇತರ ಜನರನ್ನು ಉಲ್ಲೇಖಿಸುವ ಮತ್ತು ಮೊಬೈಲ್ ಅಪ್ಲಿಕೇಶನ್ ಬಳಸಿಕೊಂಡು ಫೋಟೋ ಸಿಂಕ್ ಮಾಡುವ ಮೂಲಕ ಹೆಚ್ಚುವರಿ ಫ್ರೀ ಸ್ಪೇಸ್‌ ಅನ್ನು ಪಡೆಯಬಹುದು. ಆದರೆ 2TB ಸ್ಟೋರೇಜ್‌ ಮತ್ತು ಅನಿಯಮಿತ ಡಿವೈಸ್‌ಗಳನ್ನು ಪಡೆಯಲು ನೀವು ಡ್ರಾಪ್‌ಬಾಕ್ಸ್ ಪ್ಲಸ್‌ಗೆ (ತಿಂಗಳಿಗೆ $9.99) ಚಂದಾದಾರರಾಗಬಹುದು.

ಗೂಗಲ್‌ ಡ್ರೈವ್

ಗೂಗಲ್‌ ಡ್ರೈವ್

ಗೂಗಲ್‌ ಡ್ರೈವ್ ಜನಪ್ರಿಯ ಕ್ಲೌಡ್‌ ಸ್ಟೋರೇಜ್‌ ಆಗಿದೆ. ಈ ಅಪ್ಲಿಕೇಶನ್‌ ಅನ್ನು ಗೂಗಲ್‌ನ ಇತರ ಸೇವೆಗಳಿಗೆ ಸಂಪೂರ್ಣವಾಗಿ ಸಂಯೋಜಿಸಲಾಗಿದೆ. ಆದ್ದರಿಂದ ನೀವು Google ಖಾತೆಯನ್ನು ಹೊಂದಿದ್ದರೆ 15GB ತನಕ ಫ್ರೀ ಸ್ಟೋರೇಜ್‌ ಅನ್ನು ಪಡೆಯಬಹುದಾಗಿದೆ. ಇನ್ನು ನಿಮ್ಮ ಗೂಗಲ್‌ ಡ್ರೈವ್, ಜಿ-ಮೇಲ್‌, ಗೂಗಲ್‌ ಫೋಟೋಸ್‌ ಮತ್ತು ಗೂಗಲ್‌ ಡಾಕ್ಸ್‌ ಸೇರಿದಂತೆ ಗೂಗಲ್‌ನ ಎಲ್ಲಾ ಸೇವೆಗಳನ್ನು ಡೇಟಾವನ್ನು ಸಂಗ್ರಹಿಸಲಿದೆ. ಇದಲ್ಲದೆ ಗೂಗಲ್‌ ಡ್ರೈವ್‌ನಲ್ಲಿ 15GB ಗಿಂತ ಹೆಚ್ಚಿನ ಸ್ಟೋರೇಜ್‌ ಅವಕಾಶ ಬೇಕಿದ್ದರೆ 100GB ಗಾಗಿ ವರ್ಷಕ್ಕೆ $19.99 ಪಾವತಿಸಬೇಕಾಗುತ್ತದೆ.

ಸಿಂಕ್

ಸಿಂಕ್

ಸಿಂಕ್ ಅಪ್ಲಿಕೇಶನ್‌ ಅನ್ನು ನೀವು ಸೈನ್ ಅಪ್ ಮಾಡಿದಾಗ ಉಚಿತವಾಗಿ 5GB ಸ್ಟೋರೇಜ್‌ ಪಡೆಯಬಹುದಾಗಿದೆ. ಸಿಂಕ್‌ ಅಪ್ಲಿಕೇಶನ್‌ ಮೂಲಕ ನೀವು ಇತರ ತಂಡದ ಸದಸ್ಯರಿಗೆ ಸ್ಟೋರೇಜ್‌ ಪ್ಲಾನ್‌ಗಳನ್ನು ಸುಲಭವಾಗಿ ಕ್ರಿಯೆಟ್‌ ಮಾಡಬಹುದು. ಅಲ್ಲದೆ ನೀವು ಮೆನ್ಶನ್‌ ಮಾಡಿರುವ ಪ್ರತಿ ಹೆಚ್ಚುವರಿ ಬಳಕೆದಾರರಿಗೆ ಸಿಂಕ್ ಪೂರ್ಣ ಗಿಗಾಬೈಟ್ ಹೆಚ್ಚುವರಿ ಸ್ಟೋರೇಜ್‌ ಅನ್ನು ನೀಡುತ್ತದೆ.

ಪಿಕ್ಲೌಡ್‌

ಪಿಕ್ಲೌಡ್‌

ಪಿಕ್ಲೌಡ್‌ ಅಪ್ಲಿಕೇಶನ್‌ ತನ್ನ ಹೊಸ ಬಳಕೆದಾರರಿಗೆ 10GB ತನಕ ಫ್ರೀ ಸ್ಟೋರೇಜ್‌ ಅನ್ನು ನೀಡುತ್ತದೆ. ಇದಲ್ಲದೆ ನೀವು ಸ್ಟೋರೇಜ್‌ ಅನ್ನು ಅಪ್‌ಗ್ರೇಡ್ ಮಾಡಲು ಬಯಸಿದರೆ ಲೈಫ್‌ಟೈಂ ಚಂದಾದಾರಿಕೆ ಪ್ಲಾನ್‌ ಕೂಡ ಲಭ್ಯವಿದೆ. ನೀವು ಒಂದು ಬಾರಿ $500 ಪಾವತಿ ಮಾಡಿದರೆ 500GB ತನಕ ಸ್ಟೋರೇಜ್‌ ಅವಕಾಶವನ್ನು ಪಡೆದುಕೊಳ್ಳಬಹುದಾಗಿದೆ.

ಅಮೆಜಾನ್ ಡ್ರೈವ್

ಅಮೆಜಾನ್ ಡ್ರೈವ್

ಇನ್ನು ಅಮೆಜಾನ್ ಡ್ರೈವ್ ಗೂಗಲ್‌ ಡ್ರೈವ್‌ ಮಾದರಿಯಲ್ಲಿಯೇ ಕಾರ್ಯನಿರ್ವಹಿಸುತ್ತಿದೆ. ಇನ್ನು ಅಮೆಜಾನ್‌ ಡ್ರೈವ್‌ ಸ್ವಯಂಚಾಲಿತವಾಗಿ ಎಲ್ಲಾ ಗ್ರಾಹಕರಿಗೆ 5GB ಫ್ರೀ ಸ್ಟೋರೇಜ್‌ ಅವಕಾಶನ್ನು ನೀಡಲಿದೆ. ಇದು ಅಮೆಜಾನ್ ಪ್ರೈಮ್ ಮಾತ್ರವಲ್ಲ, ಎಲ್ಲಾ ಅಮೆಜಾನ್ ಗ್ರಾಹಕರಿಗೂ ಲಭ್ಯವಾಗಲಿದೆ. ಅಮೆಜಾನ್‌ ಡ್ರೈವ್‌ನೊಂದಿಗೆ ನಿಮ್ಮ ಡೆಸ್ಕ್‌ಟಾಪ್ ಫೈಲ್‌ಗಳನ್ನು ಸಹ ಸಿಂಕ್ ಮಾಡುವುದಕ್ಕೆ ಅವಕಾಶವನ್ನು ನೀಡಲಾಗಿದೆ.

Most Read Articles
Best Mobiles in India

English summary
Here the best free cloud storage services that you can use to keep your files online.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X