ಈ ವರ್ಷ ಹೆಚ್ಚು ಗಮನ ಸೆಳೆದ ಟಾಪ್‌ 5 ಸ್ಮಾರ್ಟ್‌ವಾಚ್‌ಗಳು ಇಲ್ಲಿವೆ!

|

ಟೆಕ್‌ ಮಾರುಕಟ್ಟೆಯಲ್ಲಿ ಸ್ಮಾರ್ಟ್‌ವಾಚ್‌ಗಳ ಮೇಲಿನ ಬೇಡಿಕೆ ಹೆಚ್ಚುತ್ತಲೇ ಇದೆ. ಸ್ಮಾರ್ಟ್‌ವಾಚ್‌ಗಳ ಮೇಲಿನ ಯುವಜನತೆಯ ಕ್ರೇಜ್‌ ಹೆಚ್ಚುತ್ತಿದೆ. ಇದಕ್ಕೆ ತಕ್ಕಂತೆ ಅನೇಕ ಕಂಪೆನಿಗಳು ವಿವಿಧ ಮಾದರಿಯ ಸ್ಮಾರ್ಟ್‌ವಾಚ್‌ಗಳನ್ನು ಪರಿಚಯಿಸುತ್ತಾ ಬಂದಿವೆ. ಇವುಗಳಲ್ಲಿ ಬಿಡುಗಡೆಗೂ ಮುನ್ನ ಸಾಕಷ್ಟು ಸೌಂಡ್‌ ಮಾಡಿ ನಂತರ ತೆರೆಗೆ ಸರಿದಿವೆ. ಆದರೆ ಕೆಲವು ಸ್ಮಾರ್ಟ್‌ವಾಚ್‌ಗಳು ಬಿಡುಗಡೆಯ ನಂತರವೂ ಸಾಕಷ್ಟು ಸದ್ದು ಮಾಡುತ್ತಿವೆ.

 ಸ್ಮಾರ್ಟ್‌ವಾಚ್‌

ಹೌದು, ಈ ವರ್ಷ ಬಿಡುಗಡೆಯಾದ ಸ್ಮಾರ್ಟ್‌ವಾಚ್‌ಗಳಲ್ಲಿ ಕೆಲವು ಪ್ರಮುಖ ವಾಚ್‌ಗಳು ಇಂದಿಗೂ ಬೇಡಿಕೆಯನ್ನು ಉಳಿಸಿಕೊಂಡಿವೆ. ತಮ್ಮ ವಿವಿಧ ಫೀಚರ್ಸ್‌ ಹಾಗೂ ಆಕರ್ಷಕ ಡಿಸೈನ್‌ಗಳ ಮೂಲಕ ಗ್ರಾಹಕರ ಗಮನಸೆಳೆದಿವೆ. ಜೊತೆಗೆ ಅವುಗಳಲ್ಲಿರುವ ಹೆಲ್ತ್‌ ಫೀಚರ್ಸ್‌ ಬಳಕೆದಾರರಿಗೆ ಸಾಕಷ್ಟು ಅನುಕೂಲಕರವಾಗಿವೆ. ಹಾಗಾದ್ರೆ 2022ರಲ್ಲಿ ಬಿಡುಗಡೆಯಾದ ಟಾಪ್‌ ಐದು ಸ್ಮಾರ್ಟ್‌ವಾಚ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಆಪಲ್ ವಾಚ್ ಸರಣಿ 7

ಆಪಲ್ ವಾಚ್ ಸರಣಿ 7

ಪ್ರಸ್ತುತ ಮಾರುಕಟ್ಟೆಯಲ್ಲಿ ಇಂದಿಗೂ ಜನಪ್ರಿಯತೆ ಉಳಿಸಿಕೊಂಡಿರುವ ಪ್ರಮುಖ ಸ್ಮಾರ್ಟ್‌ವಾಚ್‌ಗಳಲ್ಲಿ ಆಪಲ್ ವಾಚ್ ಸರಣಿ 7 ಕೂಡ ಒಂದಾಗಿದೆ. ಭಾರತದಲ್ಲಿ 50,900ರೂ. ಬೆಲೆಯಲ್ಲಿ ಬಿಡುಗಡೆಯಾಗಿದ್ದ ಈ ವಾಚ್‌ ಪ್ರಸ್ತುತ 46,990ರೂ. ಬೆಲೆಯಲ್ಲಿ ಲಭ್ಯವಿದೆ. ಇದನ್ನು ಅತ್ಯಂತ ಬಾಳಿಕೆ ಬರುವ ಆಪಲ್ ವಾಚ್ ಎಂದು ಪರಿಗಣಿಸಲಾಗಿದೆ. ಈ ಸ್ಮಾರ್ಟ್‌ವಾಚ್‌ IP6X ಡಸ್ಟ್‌ ಪ್ರೂಫ್‌ ರೇಟಿಂಗ್ ಮತ್ತು WR50 ವಾಟರ್‌ ಪ್ರೂಫ್‌ ರೇಟಿಂಗ್ ಹೊಂದಿರುವ ಮೊದಲ ಆಪಲ್ ವಾಚ್ ಇದಾಗಿದೆ. ಇದು 18 ಗಂಟೆಗಳ ಬ್ಯಾಟರಿ ಬಾಳಿಕೆಯನ್ನು ಸಹ ನೀಡಲಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ವಾಚ್‌ 5ಪ್ರೊ

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ವಾಚ್‌ 5ಪ್ರೊ

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ವಾಚ್‌ 5ಪ್ರೊ ಭಾರತದಲ್ಲಿ ಈ ವರ್ಷ ಬಿಡುಗಡೆಯಾದ ಪ್ರಮುಖ ಸ್ಮಾರ್ಟ್‌ವಾಚ್‌ಗಳಲ್ಲಿ ಒಂದಾಗಿದೆ. ಈ ಸ್ಮಾರ್ಟ್‌ವಾಚ್‌ 48,999ರೂ. ಬೆಲೆಯಲ್ಲಿ ಬಿಡುಗಡೆಯಾಗಿ, ಇದೀಗ 44,999ರೂ. ಬೆಲೆಯಲ್ಲಿ ದೊರೆಯುತ್ತಿದೆ. ಇನ್ನು ಈ ಸ್ಮಾರ್ಟ್ ವಾಚ್‌ 1.4 ಇಂಚಿನ ಸೂಪರ್ ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ ಗೂಗಲ್‌ನ Wear OS ನಲ್ಲಿ ಕಾರ್ಯನಿರ್ವಹಿಸಲಿದೆ. ಆದರಿಂದ ಇದರಲ್ಲಿ ನೀವು ಗೂಗಲ್‌ ಅಸಿಸ್ಟೆಂಟ್‌, ಗೂಗಲ್‌ ಮ್ಯಾಪ್ಸ್‌ನಂತಹ ಸೇವೆಗಳನ್ನು ಕೂಡ ಪಡೆದುಕೊಳ್ಳಲು ಸಾಧ್ಯವಾಗಲಿದೆ.

ಪ್ಲೇಫಿಟ್ SLIM2C

ಪ್ಲೇಫಿಟ್ SLIM2C

ಪ್ಲೇಫಿಟ್ SLIM2C ಸ್ಮಾರ್ಟ್‌ವಾಚ್‌ ಪ್ರಾರಂಭದಲ್ಲಿ 4,999 ರೂ.ಬೆಲೆಯಲ್ಲಿ ಬಿಡುಗಡೆಯಾಗಿದ್ದು, ಇದೀಗ ಕೇವಲ 3,999ರೂ. ಬೆಲೆಯಲ್ಲಿ ಲಭ್ಯವಾಗ್ತಿದೆ. ಈ ಸ್ಮಾರ್ಟ್‌ವಾಚ್‌ 1.3 ಇಂಚಿನ IPS ಡಿಸ್‌ಪ್ಲೇ ಹೊಂದಿದೆ. ಇದು ಬ್ಲೂಟೂತ್-ಆಧಾರಿತ ಕರೆ ಮಾಡುವ ಸೌಲಭ್ಯವನ್ನು ಕೂಡ ನೀಡಲಿದೆ. ಇನ್ನು ಡಿಸ್‌ಪ್ಲೇ 500 ನಿಟ್ಸ್ ಬ್ರೈಟ್‌ನೆಸ್‌ ಕೂಡ ನೀಡಲಿದೆ. ಜೊತೆಗೆ 5 ದಿನಗಳ ಪ್ಲೇ ಟೈಂ ಕೂಡ ನೀಡಲಿದೆ.

ಬೋಟ್ ಎಕ್ಸ್ಟೆಂಡ್ ಸ್ಮಾರ್ಟ್ ವಾಚ್

ಬೋಟ್ ಎಕ್ಸ್ಟೆಂಡ್ ಸ್ಮಾರ್ಟ್ ವಾಚ್

ಬೋಟ್‌ ಎಕ್ಸ್ಟೆಂಡ್ ಸ್ಮಾರ್ಟ್ ವಾಚ್ ಈ ವರ್ಷ ಬಿಡುಗಡೆಯಾದ ಪ್ರಮುಖ ವಾಚ್‌ಗಳಲ್ಲಿ ಒಂದಾಗಿದೆ. ಇದನ್ನು 7,990 ರೂ.ಗೆ ಬಿಡುಗಡೆ ಮಾಡಲಾಗಿದ್ದು ಪ್ರಸ್ತುತ 2,999ರೂ. ಬೆಲೆಯಲ್ಲಿ ಲಭ್ಯವಿದೆ. ಇದು 1.69 ಇಂಚಿನ ಎಲ್‌ಸಿಡಿ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಸ್ಮಾರ್ಟ್‌ವಾಚ್‌ 50 ಕ್ಕೂ ಹೆಚ್ಚು ವಾಚ್ ಫೇಸ್‌ಗಳನ್ನು ಹೊಂದಿದ್ದು, ಬೋಟ್ ವೇವ್ ಅಪ್ಲಿಕೇಶನ್ ಮೂಲಕ ಪ್ರವೇಶಿಸಬಹುದಾಗಿದೆ. ಇದರಲ್ಲಿ ಹಾರ್ಟ್‌ಬೀಟ್‌ ಸೆನ್ಸಾರ್‌, SPo2 ಟ್ರ್ಯಾಕಿಂಗ್‌ ಸೆನ್ಸಾರ್‌ ಅನ್ನು ಕೂಡ ನೀಡಲಾಗಿದೆ.

ನಾಯ್ಸ್ ಕಲರ್‌ಫಿಟ್ ಪ್ರೊ 4

ನಾಯ್ಸ್ ಕಲರ್‌ಫಿಟ್ ಪ್ರೊ 4

ನಾಯ್ಸ್ ಕಲರ್‌ಫಿಟ್ ಪ್ರೊ 4 ಸ್ಮಾರ್ಟ್‌ವಾಚ್‌ ಪ್ರಸ್ತುತ 3,499ರೂ. ಬೆಲೆಯಲ್ಲಿ ಲಭ್ಯವಿದೆ. ಈ ಸ್ಮಾರ್ಟ್‌ವಾಚ್‌ ನಾಯ್ಸ್ ಹೆಲ್ತ್ ಸೂಟ್ ಮತ್ತು ಪ್ರೊಡಕ್ಟಿವಿಟಿ ಸೂಟ್ ಅನ್ನು ಒಳಗೊಂಡಿದೆ. ಇದು 100 ಸ್ಪೋರ್ಟ್ಸ್ ಮೋಡ್‌ಗಳನ್ನು ಮತ್ತು 150+ ಕ್ಲೌಡ್ ಆಧಾರಿತ ಮತ್ತು ಅನಿಮೇಟೆಡ್ ವಾಚ್ ಫೇಸ್‌ಗಳನ್ನು ಹೊಂದಿದೆ.

Best Mobiles in India

English summary
here we bring a set of smartwatches which got launched in 2022

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X