ಟೆಲಿಗ್ರಾಮ್‌ನಿಂದ ಹೊಸ ಬೀಟಾ ವರ್ಷನ್‌ ಬಿಡುಗಡೆ! ಪ್ರೀಮಿಯಂ ಆಯ್ಕೆಯ ವಿಶೇಷ!

|

ಟೆಲಿಗ್ರಾಮ್ ಅಪ್ಲಿಕೇಶನ್‌ ವಾಟ್ಸಾಪ್‌ಗೆ ಪ್ರಬಲ ಪೈಪೋಟಿ ನೀಡುತ್ತಿರುವ ಜನಪ್ರಿಯ ಮೆಸೇಜಿಂಗ್‌ ಅಪ್ಲಿಕೇಶನ್‌ ಎನಿಸಿಕೊಂಡಿದೆ. ವಾಟ್ಸಾಪ್‌ ಅನ್ನು ಹಿಂದಿಕ್ಕುವ ಭರದಲ್ಲಿ ಹಲವು ಆಕರ್ಷಕ ಫೀಚರ್ಸ್‌ಗಳನ್ನು ಪರಿಚಯಿಸುತ್ತಲೇ ಬಂದಿದೆ. ಬಳಕೆದಾರರ ಸುರಕ್ಷತೆ ಮತ್ತು ಉತ್ತಮ ಅನುಭವಕ್ಕಾಗಿ ಹೊಸ ಅಪ್ಡೇಟ್‌ಗಳನ್ನು ನೀಡುತ್ತಾ ಬಂದಿದೆ. ಸದ್ಯ ಇದೀಗ ಐಒಎಸ್‌ ಆವೃತ್ತಿಯಲ್ಲಿ ಹೊಸ 8.7.2 ಬೀಟಾ ಆವೃತ್ತಿಯನ್ನು ಹೊರತಂದಿದೆ. ಹೊಸ ಬೀಟಾ ಆವೃತ್ತಿಯಲ್ಲಿ ಹೊಸ ರಿಯಾಕ್ಷನ್‌ ಎಮೋಜಿಸ್‌ ಮತ್ತು ಸ್ಟಿಕ್ಕರ್‌ಗಳನ್ನು ಕಾಣಬಹುದಾಗಿದೆ.

ಟೆಲಿಗ್ರಾಮ್‌

ಹೌದು, ಟೆಲಿಗ್ರಾಮ್‌ ಹೊಸ ಬೀಟಾ ಆವೃತ್ತಿಯನ್ನು ಪರಿಚಯಿಸಿದೆ. ಈ ಆವೃತ್ತಿಯಲ್ಲಿ ಹೊಸ ಶ್ರೇಣಿಯ ಪ್ರತಿಕ್ರಿಯೆ ಎಮೋಜಿಗಳು ಮತ್ತು ಸ್ಟಿಕ್ಕರ್‌ಗಳನ್ನು ಪಡೆದುಕೊಳ್ಳಬಹುದಾಗಿದೆ. ಇನ್ನು ಈ ಹೊಸ ಸ್ಟಿಕ್ಕರ್‌ಗಳು ಮತ್ತು ಎಮೋಜಿಗಳು ಟೆಲಿಗ್ರಾಮ್ ಪ್ರೀಮಿಯಂ ಬಳಕೆದಾರರಿಗೆ ಮಾತ್ರ ಲಭ್ಯವಾಗಲಿವೆ. ಈ ಪ್ರೀಮಿಯಂ ಫೀಚರ್ಸ್‌ಗಳು ಬಳಕೆದಾರರಿಗೆ ಹೊಸ ಅನುಭವವನ್ನು ನೀಡಲಿವೆ. ಇನ್ನುಳಿದಂತೆ ಈ ಹೊಸ ಬೀಟಾ ಆವೃತ್ತಿಯ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಟೆಲಿಗ್ರಾಮ್‌

ಟೆಲಿಗ್ರಾಮ್‌ ಅಪ್ಲಿಕೇಶನ್‌ ಬೀಟಾ ವರ್ಷನ್‌ ಮೂಲಕ ಹೊಸ ರಿಯಾಕ್ಷನ್‌ ಎಮೋಜಿಸ್‌ ಮತ್ತು ಸ್ಟಿಕ್ಕರ್‌ ಪರಿಚಯಿಸಲಿದೆ. ಈ ಸ್ಟಿಕ್ಕರ್‌ಗಳನ್ನು ಇನ್‌ಸ್ಟೆಂಟ್ ಮೆಸೇಜಿಂಗ್ ಅಪ್ಲಿಕೇಶನ್‌ನಲ್ಲಿ ವೀಕ್ಷಿಸುವಾಗ ಬಳಕೆದಾರರು ಟೆಲಿಗ್ರಾಮ್ ಪ್ರೀಮಿಯಂ ಚಂದಾದಾರಿಕೆ ಯೋಜನೆಗೆ ಸೈನ್ ಅಪ್ ಮಾಡಲು ಬಯಸುತ್ತೀರಾ ಎಂದು ಕೇಳುವ ಪ್ರಾಂಪ್ಟ್ ಅನ್ನು ಸ್ವೀಕರಿಸುತ್ತಾರೆ ಎಂದು ವರದಿಯಾಗಿದೆ. ಇನ್ನು ಈ ವಿಶೇಷ ಸ್ಟಿಕ್ಕರ್‌ಗಳು ಮತ್ತು ರಿಯಾಕ್ಷನ್‌ಗಳನ್ನು ಪ್ರೀಮಿಯಂ ಯೋಜನೆಯಲ್ಲಿ ನೀಡಲಾಗುತ್ತಿದೆ.

ಟೆಲಿಗ್ರಾಮ್‌

ಇನ್ನು ಟೆಲಿಗ್ರಾಮ್‌ ಪ್ರೀಮಿಯಂ ಆಯ್ಕೆಯ ಬೆಲೆ ಎಷ್ಟು ಅನ್ನೊದು ಇನ್ನು ಬಹಿರಂಗವಾಗಿಲ್ಲ. ಆದರೆ ಪ್ರೀಮಿಯಂ ಆಯ್ಕೆಯನ್ನು ತೆಗೆದುಕೊಳ್ಳವ ಬಳಕೆದಾರರು ಚಂದಾದಾರಿಕೆಯನ್ನು ಪಾವತಿಸಬೇಕಾಗುತ್ತದೆ. ಚಂದಾದಾರಿಕೆ ಪಡೆದುಕೊಂಡ ಬಳಕೆದಾರರಿಗೆ ಪ್ರೀಮಿಯಂ ಸ್ಟಿಕ್ಕರ್‌ಗಳು ಮತ್ತು ವಿಶೇಷ ಪ್ರತಿಕ್ರಿಯೆ ಎಮೋಜಿಗಳನ್ನು ಅನ್‌ಲಾಕ್ ಮಾಡಲು ಪ್ರವೇಶವನ್ನು ನೀಡುತ್ತದೆ. ಈ ಸೇವೆಯನ್ನು ಸದ್ಯಕ್ಕೆ iOS ಬೀಟಾ ಅಪ್ಲಿಕೇಶನ್‌ನಲ್ಲಿ ಗುರುತಿಸಲಾಗಿದೆ. ಈ ಫೀಚರ್ಸ್‌ ಆಂಡ್ರಾಯ್ಡ್‌ನಲ್ಲಿ ಯಾವಾಗ ಲಭ್ಯವಾಗಲಿದೆ ಎಂಬುದರ ಬಗ್ಗೆ ಟೆಲಿಗ್ರಾಮ್‌ ಇನ್ನು ಅಧಿಕೃತ ಮಾಹಿತಿ ನೀಡಿಲ್ಲ.

ಟೆಲಿಗ್ರಾಮ್‌

ಇದಲ್ಲದೆ ಟೆಲಿಗ್ರಾಮ್‌ ಇತ್ತೀಚಿಗೆ ಹಲವು ಆಯ್ಕೆಯ ಫೀಚರ್ಸ್‌ಗಳನ್ನು ಪರಿಚಯಿಸಿತ್ತು. ಇದರಲ್ಲಿ ಕಸ್ಟಮ್ ನೋಟಿಫಿಕೇಶನ್ ಸೌಂಡ್ಸ್ ಫೀಚರ್ಸ್‌ ಕೂಡ ಸೇರಿದೆ. ಈ ಫೀಚರ್ಸ್‌ ಬಳಕೆದಾರರಿಗೆ ಯಾವುದೇ ಧ್ವನಿಯನ್ನು ನೋಟಿಫಿಕೇಶನ್‌ ಟೋನ್ ಆಗಿ ಪರಿವರ್ತಿಸಲು ಅನುವು ಮಾಡಿಕೊಡುತ್ತದೆ. ಇದನ್ನು ಅಪ್ಲಿಕೇಶನ್‌ನಲ್ಲಿ ಕಸ್ಟಮ್ ಆಲರ್ಟ್‌ಗಳನ್ನು ಕ್ರಿಯೆಟ್‌ ಮಾಡುವುದಕ್ಕೆ ಕೂಡ ಬಳಸಬಹುದಾಗಿದೆ. ಇದಲ್ಲದೆ ಬಳಕೆದಾರರು ತಮ್ಮ ಉದ್ದೇಶಕ್ಕಾಗಿ 300KB ಗಾತ್ರದ ಐದು ಸೆಕೆಂಡ್‌ಗಳ ಅಡಿಯಲ್ಲಿ ಆಡಿಯೊ ಫೈಲ್‌ಗಳು ಮತ್ತು ವಾಯ್ಸ್‌ ಮೆಸೇಜ್‌ಗಳನ್ನು ಬಳಸಬಹುದಾಗಿದೆ. ಹಾಗೆಯೇ ಬಳಕೆದಾರರು ತಮ್ಮ ಎಲ್ಲಾ ಡಿವೈಸ್‌ಗಳಲ್ಲಿ ಸೆಟ್ಟಿಂಗ್ಸ್‌ > ನೋಟಿಫಿಕೇಶನ್‌ ಮತ್ತು ವಾಯ್ಸ್‌ಗಳ ಮೂಲಕ ವಾಯ್ಸ್‌ ಮೆಸೇಜ್‌ ಅನ್ನು ಪ್ರವೇಶಿಸಬಹುದು.

ಟೆಲಿಗ್ರಾಮ್‌

ಇನ್ನು ಟೆಲಿಗ್ರಾಮ್‌ ಕಸ್ಟಮ್‌ ಮ್ಯೂಟ್‌ ಡ್ಯುರೇಷನ್‌ ಫೀಚರ್ಸ್‌ ಅನ್ನು ಪರಿಚಯಿಸುವುದಕ್ಕೆ ಸಿದ್ಧತೆ ನಡೆಸಿದೆ. ಈ ಫೀಚರ್ಸ್‌ ನಿರ್ಧಿಷ್ಟ ಅವಧೀಗೆ ಅಧಿಸೂಚನೆಗಳನ್ನು ವಿರಾಮಗೊಳಿಸುವ ಸಾಮರ್ಥ್ಯವನ್ನು ಸೇರಿಸಿದೆ. ಬಳಕೆದಾರರು ಒಂದು ಗಂಟೆ, 2 ಗಂಟೆಗಳು, ಒಂದು ವಾರ, ಎರಡು ವಾರಗಳು, ಮೂರು ತಿಂಗಳುಗಳು ಸೇರಿದಂತೆ ವಿವಿಧ ಆಯ್ಕೆಗಳಿಂದ ಆಯ್ಕೆ ಮಾಡಬಹುದು. ಪ್ರತಿ ಚಾಟ್ ಆಲರ್ಟ್‌ಗಳನ್ನು ಮಾರ್ಪಡಿಸಲು ಸುವ್ಯವಸ್ಥಿತ ಮೆನುವನ್ನು ಹೊಂದಿದೆ ಎಂದು ಟೆಲಿಗ್ರಾಮ್ ಹೇಳಿಕೊಂಡಿದೆ. ಜೊತೆಗೆ ಬಳಕೆದಾರರು ಸೈಲೆಂಟ್‌ ಆಗಿ ನೋಟಿಫಿಕೇಶನ್‌ ಸ್ವೀಕರಿಸಲು ಧ್ವನಿಯನ್ನು ನಿಷ್ಕ್ರಿಯಗೊಳಿಸಬಹುದಾಗಿದೆ.

ಟೆಲಿಗ್ರಾಮ್‌

ಟೆಲಿಗ್ರಾಮ್‌ ಬಳಕೆದಾರರು ವೈಯಕ್ತಿಕ ಪ್ರೊಫೈಲ್‌ಗಳಲ್ಲಿ ಆಟೋ ಡಿಲೀಟ್‌ ಮೆಸೇಜ್‌ ಆಯ್ಕೆಯನ್ನು ಸಕ್ರಿಯಗೊಳಿಸಲು ಮುಂದಾಗಿದೆ. ಈ ಫೀಚರ್ಸ್‌ ಇದೀಗ ಎರಡು ದಿನಗಳು, ಮೂರು ವಾರಗಳು ಮತ್ತು ನಾಲ್ಕು ತಿಂಗಳುಗಳು ಸೇರಿದಂತೆ ವಿವಿಧ ಆಯ್ಕೆಗಳನ್ನು ಬೆಂಬಲಿಸುತ್ತದೆ. ಆಟೋ-ಡಿಲೀಟ್‌ ಫೀಚರ್ಸ್‌ ಅನ್ನು ಸಕ್ರಿಯಗೊಳಿಸಲು, ಬಳಕೆದಾರರು ಚಾಟ್‌ನ ಇನ್ಫರ್‌ಮೇಶನ್‌ ಪೇಜ್‌ ನಲ್ಲಿರುವ ಮೂರು ಚುಕ್ಕೆಗಳನ್ನು ಟ್ಯಾಪ್ ಮಾಡಬೇಕಾಗುತ್ತದೆ.

Best Mobiles in India

Read more about:
English summary
Telegram recently rolled out its version 8.7.2 beta for iOS, which included a new range of reaction emojis and stickers.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X