ಎಲೆಕ್ಟ್ರಿಕ್ ಸ್ಕೂಟರ್ ಬಳಕೆ ಹೆಚ್ಚಳಕ್ಕೆ ಜಿಯೋ-ಬಿಪಿ ಜೊತೆ ಹೀರೋ ಎಲೆಕ್ಟ್ರಿಕ್‌ ಒಪ್ಪಂದ!

|

ಭಾರತದಲ್ಲಿ ಎಲೆಕ್ಟ್ರಿಕ್ ವಾಹನ ಬಳಕೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮಹತ್ವದ ಬೆಳವಣಿಗೆಯೊಂದರಲ್ಲಿ, ಜಿಯೋ ಬಿಪಿ ಜೊತೆಗೆ ಹೀರೋ ಎಲೆಕ್ಟ್ರಿಕ್‌ ಒಪ್ಪಂದ ಮಾಡಿಕೊಳ್ಳಲಿದೆ. ಈ ಪ್ರಸ್ತಾವಿತ ಒಪ್ಪಂದದ ಅಡಿಯಲ್ಲಿ ಹೀರೋ ಎಲೆಕ್ಟ್ರಿಕ್‌ ಗ್ರಾಹಕರು ಜಿಯೋ-ಬಿಪಿ ಚಾರ್ಜಿಂಗ್‌ ಮತ್ತು ಸ್ವ್ಯಾಪಿಂಗ್‌ ನೆಟ್‌ವರ್ಕ್ ಅನ್ನು ಬಳಸಬಹುದಾಗಿದೆ.

ಕಂಪನಿಗಳು

ಜಿಯೋ-ಬಿಪಿ ಮತ್ತು ಹೀರೋ ಎಲೆಕ್ಟ್ರಿಕ್‌ ಆಪ್‌ಗಳಲ್ಲಿ ಗ್ರಾಹಕರಿಗೆ ಅನುಕೂಲ ಮಾಡಿಕೊಡುವುದರ ಜೊತೆಗೆ, ಎರಡೂ ಕಂಪನಿಗಳು ತಾವು ಎಲೆಕ್ಟ್ರಿಫಿಕೇಶನ್‌ನಲ್ಲಿ ಹೊಂದಿರುವ ಅನುಭವವನ್ನು ಬಳಸಿಕೊಳ್ಳಲಿವೆ ಮತ್ತು ಗ್ರಾಹಕ ಅನುಭವವನ್ನು ಉತ್ತಮಗೊಳಿಸಲು ಇದನ್ನು ಬಳಸಿಕೊಳ್ಳಲಿವೆ.

ನಿರ್ವಹಿಸುತ್ತಿದೆ

ಜಿಯೋ-ಬಿಪಿ ಪಲ್ಸ್‌ ಬ್ರ್ಯಾಂಡ್ ಅಡಿಯಲ್ಲಿ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್‌ ಮತ್ತು ಸ್ವ್ಯಾಪಿಂಗ್‌ ಸ್ಟೇಷನ್‌ಗಳನ್ನು ಜಿಯೋ-ಬಿಪಿ ನಿರ್ವಹಿಸುತ್ತಿದೆ. ಜಿಯೋ-ಬಿಪಿ ಪಲ್ಸ್‌ ಆಪ್‌ ಮೂಲಕ ಗ್ರಾಹಕರು ಸುಲಭವಾಗಿ ಸಮೀಪದ ಸ್ಟೇಷನ್‌ಗಳನ್ನು ಕಂಡುಕೊಳ್ಳಬಹುದು ಮತ್ತು ತಮ್ಮ ಎಲೆಕ್ಟ್ರಿಕ್ ವಾಹನಗಳನ್ನು ಚಾರ್ಜ್‌ ಮಾಡಬಹುದು. ಅಲ್ಲದೆ, ಭಾರತದ ಅತಿದೊಡ್ಡ ಇವಿ ನೆಟ್‌ವರ್ಕ್‌ ಆಗುವ ದೃಷ್ಟಿಕೋನ ಹೊಂದಿರುವ ಜಿಯೋ ಬಿಪಿ, ಎಲೆಕ್ಟ್ರಿಕ್ ವಾಹನ ಮೌಲ್ಯ ಸರಪಣಿಯಲ್ಲಿ ಎಲ್ಲ ಪಾಲುದಾರರಿಗೂ ಅನುಕೂಲವನ್ನು ಕಲ್ಪಿಸುವ ವ್ಯವಸ್ಥೆ ರೂಪಿಸಲಿದೆ.

ಪ್ರಮುಖ ಹೀರೋ ಎಲೆಕ್ಟ್ರಿಕ್‌ ಬೈಕ್‌ಗಳು

ಪ್ರಮುಖ ಹೀರೋ ಎಲೆಕ್ಟ್ರಿಕ್‌ ಬೈಕ್‌ಗಳು

ಹೀರೋ ಫೋಟಾನ್ (Hero Electric Photon Hx)
ಹೀರೋ ಫೋಟಾನ್ HX 26Ah ಬ್ಯಾಟರಿ ಮತ್ತು ಕಾರ್ಯಕ್ಷಮತೆಗಾಗಿ 1.8kW ಮೋಟಾರ್ ಅನ್ನು ಒಳಗೊಂಡಿರುವ ಸಾಧಾರಣ ಫೀಚರ್ಸ್‌ಗಳನ್ನು ಹೊಂದಿದೆ. ಈ ಎಲೆಕ್ಟ್ರಿಕ್ ಸ್ಕೂಟರ್‌ನ ಗರಿಷ್ಠ ವೇಗವು 45kmph ಆಗಿದೆ ಮತ್ತು ಇದು ಪ್ರತಿ ಚಾರ್ಜ್‌ಗೆ ಗರಿಷ್ಠ 108km ವ್ಯಾಪ್ತಿಯನ್ನು ನೀಡುತ್ತದೆ. ಫೋಟಾನ್ HX ನ ಬ್ಯಾಟರಿಯು 5 ಗಂಟೆಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಆಗುತ್ತದೆ. ಭಾರತೀಯ ರಸ್ತೆಗಳಲ್ಲಿ ಓಡಿಸಲು ಸ್ಕೂಟರ್ ಅನ್ನು ನೋಂದಾಯಿಸುವ ಅಗತ್ಯವಿದೆ. ಇದು ಕಪ್ಪು ಮತ್ತು ಚಿನ್ನದ ಎರಡು ಬಣ್ಣದ ಆಯ್ಕೆಗಳಲ್ಲಿ ಲಭ್ಯ.

ಹೀರೋ ಎಡ್ಡಿ (Hero Eddy)

ಹೀರೋ ಎಡ್ಡಿ (Hero Eddy)

ಹೀರೋ ಎಡ್ಡಿ (Hero Eddy) 250W BLDC ವ್ಯಾಟ್ಸ್ ಬ್ಯಾಟರಿ ಪವರ್‌ ಪಡೆದಿದ್ದು, ಇದು 4 ರಿಂದ 5 ಗಂಟೆಗಳಲ್ಲಿ ಪೂರ್ಣ ಚಾರ್ಜ್‌ ಆಗಲಿದೆ. 85 KM/C ವೇಗದ ರೇಂಜ್‌ ಅನ್ನು ಈ ಬೈಕ್ ಒಳಗೊಂಡಿದ್ದು, ಪ್ರತಿ ಗಂಟೆಗೆ 25 ಕಿಮೀ ಗರಿಷ್ಠ ವೇಗದ ಸಾಮರ್ಥ್ಯವನ್ನು ಪಡೆದಿದೆ. ಇದರಲ್ಲಿ ಲಾಕ್ ಮಾಡಲು ಮತ್ತು ಅನ್‌ಲಾಕ್ ಮಾಡಲು ಬ್ಲೂಟೂತ್ ಮೂಲಕ ನಿಮ್ಮ ವಾಹನವನ್ನು ಸಂಪರ್ಕಿಸಿ ಅಥವಾ ಅದನ್ನು ಬಳಸಲು ನಿಮ್ಮ ಹ್ಯಾಂಡಲ್‌ಬಾರ್ ಸ್ವಿಚ್‌ಗಳನ್ನು ಬಳಸಬಹುದು. ಈ ಸ್ಕೂಟರ್ ಹಳದಿ ಬಣ್ಣದ ಆಯ್ಕೆಯಲ್ಲಿ ಲಭ್ಯ.

ಹೀರೋ ಎಲೆಕ್ಟ್ರಿಕ್ ಆಪ್ಟಿಮಾ ಸಿಎಕ್ಸ್ - ಸಿಂಗಲ್ ಬ್ಯಾಟರಿ

ಹೀರೋ ಎಲೆಕ್ಟ್ರಿಕ್ ಆಪ್ಟಿಮಾ ಸಿಎಕ್ಸ್ - ಸಿಂಗಲ್ ಬ್ಯಾಟರಿ

ಹೀರೋ ಎಲೆಕ್ಟ್ರಿಕ್ ಆಪ್ಟಿಮಾ ಸಿಎಕ್ಸ್ ಸ್ಕೂಟರ್ ಸಿಂಗಲ್ ಬ್ಯಾಟರಿ ರಚನೆಯನ್ನು ಒಳಗೊಂಡಿದೆ. ಈ ಎಲೆಕ್ಟ್ರಿಕ್ ಸ್ಕೂಟರ್‌ನ ಗರಿಷ್ಠ ವೇಗವು ಪ್ರತಿ ಗಂಟೆಗೆ 45kmph ಆಗಿದೆ ಮತ್ತು ಇದು ಸ್ಕೂಟರ್ ಪೂರ್ಣ ಚಾರ್ಜ್‌ಗೆ 82 KM/C ವ್ಯಾಪ್ತಿಯನ್ನು ನೀಡುತ್ತದೆ. ಹೀರೋ ಎಲೆಕ್ಟ್ರಿಕ್ ಆಪ್ಟಿಮಾ ಸಿಎಕ್ಸ್ ಬ್ಯಾಟರಿಯು 4 ರಿಂದ 5 ಗಂಟೆಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಆಗುತ್ತದೆ. ಇನ್ನು ಈ ಸ್ಕೂಟರ್‌ನ ಟೈರ್‌ಗಳು 12 ಇಂಚಿನ ಗಾತ್ರದಲ್ಲಿವೆ. ಭಾರತೀಯ ರಸ್ತೆಗಳಲ್ಲಿ ಓಡಿಸಲು ಸ್ಕೂಟರ್ ಅನ್ನು ನೋಂದಾಯಿಸುವ ಅಗತ್ಯವಿದೆ. ಇದು ವೈಟ್, ಬ್ಲೂ ಮತ್ತು ಗ್ರೇ ಬಣ್ಣದ ಆಯ್ಕೆಗಳಲ್ಲಿ ಲಭ್ಯ.

ಹೀರೋ ಎಲೆಕ್ಟ್ರಿಕ್ ಆಪ್ಟಿಮಾ ಸಿಎಕ್ಸ್ - ಡಬಲ್‌ ಬ್ಯಾಟರಿ

ಹೀರೋ ಎಲೆಕ್ಟ್ರಿಕ್ ಆಪ್ಟಿಮಾ ಸಿಎಕ್ಸ್ - ಡಬಲ್‌ ಬ್ಯಾಟರಿ

ಹೀರೋ ಎಲೆಕ್ಟ್ರಿಕ್ ಆಪ್ಟಿಮಾ ಸಿಎಕ್ಸ್ ಸ್ಕೂಟರ್ ಸಿಂಗಲ್ ಬ್ಯಾಟರಿ ರಚನೆಯನ್ನು ಒಳಗೊಂಡಿದ್ದು, ಮೋಟರ್ ಪವರ್ 550 | 1200 ವ್ಯಾಟ್ಸ್ ಸಾಮರ್ಥ್ಯದಲ್ಲಿದೆ. ಈ ಎಲೆಕ್ಟ್ರಿಕ್ ಸ್ಕೂಟರ್‌ನ ಗರಿಷ್ಠ ವೇಗವು ಪ್ರತಿ ಗಂಟೆಗೆ 45kmph ಆಗಿದೆ ಮತ್ತು ಇದು ಸ್ಕೂಟರ್ ಪೂರ್ಣ ಚಾರ್ಜ್‌ಗೆ 140 KM/C ವ್ಯಾಪ್ತಿಯನ್ನು ನೀಡುತ್ತದೆ. ಹೀರೋ ಎಲೆಕ್ಟ್ರಿಕ್ ಆಪ್ಟಿಮಾ ಸಿಎಕ್ಸ್ ಬ್ಯಾಟರಿಯು 4 ರಿಂದ 5 ಗಂಟೆಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಆಗುತ್ತದೆ. ಇನ್ನು ಈ ಸ್ಕೂಟರ್‌ನ ಟೈರ್‌ಗಳು 12 ಇಂಚಿನ ಗಾತ್ರದಲ್ಲಿವೆ. ಭಾರತೀಯ ರಸ್ತೆಗಳಲ್ಲಿ ಓಡಿಸಲು ಸ್ಕೂಟರ್ ಅನ್ನು ನೋಂದಾಯಿಸುವ ಅಗತ್ಯವಿದೆ. ಇದು ವೈಟ್, ಬ್ಲೂ ಮತ್ತು ಗ್ರೇ ಬಣ್ಣದ ಆಯ್ಕೆಗಳಲ್ಲಿ ಲಭ್ಯ.

Best Mobiles in India

English summary
Hero Electric set to partner with Jio-bp for 2-wheeler EV adoption.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X