ಭಾರತೀಯ ಫೋನ್ ಮಾರುಕಟ್ಟೆಯಲ್ಲಿ ಸದ್ದುಮಾಡಲಿರುವ ಹೋನರ್ 7

Written By:

ಸ್ವಲ್ಪ ಸಮಯದಲ್ಲೇ ಹುವಾವೆ ತನ್ನ ಹೆಸರನ್ನು ಮಾರುಕಟ್ಟೆಯಲ್ಲಿ ಶಾಶ್ವತವಾಗಿ ನೆಲೆಗೊಳಿಸಿದೆ ಅದರಿಂದಾಗಿಯೇ ತನ್ನ ನೆಕ್ಸಸ್ 6ಪಿ ಡಿವೈಸ್ ಅನ್ನು ಕಳೆದ ವಾರವಷ್ಟೇ ಲಾಂಚ್ ಮಾಡಿ ಅತ್ಯುತ್ತಮ ಮಾರುಕಟ್ಟೆಯನ್ನು ಗಳಿಸಿಕೊಳ್ಳುವ ನಿಟ್ಟಿನಲ್ಲಿದೆ. ತನ್ನ ಹೋನರ್ ಶ್ರೇಣಿಯ ಫೋನ್‌ಗಳ ಮೂಲಕ ಹೊಸ ಸಂಚಲನವನ್ನೇ ಹುಟ್ಟು ಹಾಕಿರುವ ಕಂಪೆನಿ ಕಡಿಮೆ ಅವಧಿಯಲ್ಲೇ ಪ್ರಸಿದ್ಧಿಯನ್ನು ಪಡೆದುಕೊಂಡಿದೆ.

ಭಾರತೀಯ ಫೋನ್ ಮಾರುಕಟ್ಟೆಯಲ್ಲಿ ಸದ್ದುಮಾಡಲಿರುವ ಹೋನರ್ 7

ಈಗ ಇನ್ನೊಂದು ಹೋನರ್ ಡಿವೈಸ್ ಅನ್ನು ಭಾರತದಲ್ಲಿ ಲಾಂಚ್ ಮಾಡುವ ಸನ್ನಾಹದಲ್ಲಿ ಕಂಪೆನಿ ಇದೆ. ಅದುವೇ ಹೆಚ್ಚು ನಿರೀಕ್ಷಿತ ಹೋನರ್ 7. ಅಕ್ಟೋಬರ್ ಎರಡನೇ ವಾರದಂದು ಹೋನರ್ 7 ಬಿಡುಗಡೆಯಾಗಲಿದ್ದು ಪೂರ್ಣ ಮೆಟಾಲಿಕ್ ಡಿವೈಸ್ ಇದಾಗಿದೆ. ಏಕೈಕ ಬಳಕೆದಾರರಿಗೆ ಈ ಡಿವೈಸ್ ಅನ್ನು ಸಿದ್ಧಪಡಿಸಲಾಗಿದ್ದು ಸ್ಮಾರ್ಟ್ ಫಂಕ್ಶನ್ ಮತ್ತು ಮಲ್ಟಿಮೀಡಿಯಾ ಸಾಮರ್ಥ್ಯಗಳನ್ನು ಒಳಗೊಂಡಿದೆ. ಇದರಲ್ಲಿ ಸ್ಮಾರ್ಟ್ ಬಟನ್ ಮತ್ತು ಸನ್ನೆ ಸಕ್ರಿಯಗೊಳಿಸುವ ಬೆರಳಚ್ಚು ರೀಡರ್ ಇದೆ.

ಇನ್ನು ಫೋನ್‌ನ ವಿಶೇಷತೆಗಳತ್ತ ನೋಡುವುದಾದರೆ ಇದು 5.2 ಇಂಚಿನ ಪೂರ್ಣ ಎಚ್‌ಡಿ ಡಿಸ್‌ಪ್ಲೇ ಮತ್ತು ರೆಸಲ್ಯೂಶನ್ 1080x1920 ಪಿಕ್ಸೆಲ್ ಇದರಲ್ಲಿದೆ. ಕಂಪೆನಿಯ 64 ಬಿಟ್ ಓಕ್ಟಾ ಕೋರ್ ಕಿರಿನ್ 935 ಪ್ರೊಸೆಸರ್ ಇದರಲ್ಲಿದ್ದು 3ಜಿಬಿ RAM ಅನ್ನು ಫೋನ್ ಒಳಗೊಂಡಿದೆ. ಸ್ಮಾರ್ಟ್‌ಫೋನ್ EMUI 3.1 ಸ್ಕಿನ್ ಅನ್ನು ಫೋನ್ ಮೇಲ್ಭಾಗದಲ್ಲಿ ಹೊಂದಿದೆ.

ಭಾರತೀಯ ಫೋನ್ ಮಾರುಕಟ್ಟೆಯಲ್ಲಿ ಸದ್ದುಮಾಡಲಿರುವ ಹೋನರ್ 7

ಇನ್ನು ಫೋನ್ ರಿಯರ್ ಕ್ಯಾಮೆರಾ 20 ಮೆಗಾಪಿಕ್ಸೆಲ್ ಆಗಿದ್ದು ಫೇಸ್ ಡಿಟೆಕ್ಶನ್ ಆಟೊಫೋಕಸ್ ಅನ್ನು ಫೋನ್ ಒಳಗೊಂಡಿದೆ. ಇನ್ನು ಆಟೊಫೋಕಸ್ ವೇಗ 0.1 ಸೆಕೆಂಡ್‌ಗಳಾಗಿದೆ. ಕ್ಯಾಮೆರಾವು ಸೋನಿ IMX230 ಸೆನ್ಸಾರ್ ಆಗಿದ್ದು, f/2.0 ಅಪಾರ್ಚರ್, 6 - ಲೆನ್ಸ್ ಮಾಡ್ಯೂಲ್ ಮತ್ತು ಮೇಲ್ಭಾಗದಲ್ಲಿ ಸಫಾಯರ್ ಗ್ಲಾಸ್ ಭದ್ರತೆಯನ್ನು ಹೊಂದಿದೆ. ಇನ್ನು ವೈಯಕ್ತೀಕರಿಸಿದ ಫಿಲ್ಟರ್‌ಗಳನ್ನು ಮೊಬೈಲ್ ಒಳಗೊಂಡಿದೆ. ಫೋನ್ ಮುಂಭಾಗದಲ್ಲಿ 8 ಮೆಗಾಪಿಕ್ಸೆಲ್ ಕ್ಯಾಮೆರಾ ಇದ್ದು ರಿಯರ್ ಕ್ಯಾಮೆರಾದ ಬಲಕೆಳಭಾಗದಲ್ಲಿ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಇದೆ ಇದನ್ನು ಬಳಸಿ ಬಳಕೆದಾರರು ಸ್ಮಾರ್ಟ್‌ಫೋನ್ ಅನ್ನು ಅನ್‌ಲಾಕ್ ಮಾಡಬಹುದು.

ಭಾರತದ ಯುವ ಮನಸಿಗೆ ಹಿತಕಾರಿಯಾಗಿರುವ ಶ್ರೇಣಿಯಲ್ಲಿ ಡಿವೈಸ್ ಲಭ್ಯವಾಗಲಿದ್ದು ನಿಜಕ್ಕೂ ಯುವಜನಾಂಗಕ್ಕೆ ಇದು ಸೂಕ್ತ ಆಯ್ಕೆ ಎಂದೆನಿಸಿದೆ. ಭಾರತೀಯ ಮಾರುಕಟ್ಟೆಯಲ್ಲಿ ಎಂತಹ ಮೋಡಿಯನ್ನು ಮಾಡಲಿದೆ ಎಂಬುದನ್ನು ಕಾದು ನೋಡೋಣ.

English summary
Huawei has been making headlines for quite some time now, and that's mainly due to its Nexus 6P device which got launched last week. However the company makes a buzz worldwide much due to the contribution of the Honor series of device.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot