Subscribe to Gizbot

ಹಾನರ್ 7X ಬಳಕೆದಾರರಿಗೆ ಹೊಸ ಆಪ್ಡೇಟ್ ಲಭ್ಯ: ಫೇಸ್ ಲಾಕ್ ಆಯ್ಕೆ,,!

Posted By: Precilla Dias

ಹುವಾವೆ ಒಡೆತನದ ಹಾನರ್ ಭಾರತೀಯ ಮಾರುಕಟ್ಟೆಯಲ್ಲಿ ಲಾಂಚ್ ಮಾಡಿದ್ದ ಹಾನರ್ 7X ಸ್ಮಾರ್ಟ್ ಫೋನ್, ಈಗಾಗಲೇ ಮಾರುಕಟ್ಟೆಯಲ್ಲಿ ಸಾಕಷ್ಟು ಯಶಸ್ಸನ್ನು ಕಂಡಿದೆ, ಹೆಚ್ಚಿನ ಮಂದಿ ಈ ಸ್ಮಾರ್ಟ್ ಫೋನ್ ಅನ್ನು ಇಷ್ಟ ಪಟ್ಟು ಕೊಂಡುಕೊಂಡಿದ್ದಾರೆ. ಸದ್ಯ ಈ ಸ್ಮಾರ್ಟ್ ಫೋನ್ ಹೊಸದೊಂದು ಆಪ್ ಡೇಟ್ ಸ್ವೀಕರಿಸಿದ್ದು, ಹೊಸ ಹೊಸ ಆಯ್ಕೆಗಳನ್ನು ಬಳಕೆದಾರರಿಗೆ ನೀಡಲು ಮುಂದಾಗಿದೆ. ಈ ಹೊಸ ಆಯ್ಕೆಗಳು ಈ ಸ್ಮಾರ್ಟ್ ಫೋನ್ ಬೇಡಿಕೆಯನ್ನು ಮತ್ತಷ್ಟು ಏರಿಕೆ ಮಾಡಲಿದೆ.

ಹಾನರ್ 7X ಬಳಕೆದಾರರಿಗೆ ಹೊಸ ಆಪ್ಡೇಟ್ ಲಭ್ಯ: ಫೇಸ್ ಲಾಕ್ ಆಯ್ಕೆ,,!

ಬಹಳ ದಿನಗಳಿಂದ ಕಾಯುತ್ತಿದ್ದಂತಹ ಫೇಸ್ ಆನ್ ಲಾಕ್ ಆಯ್ಕೆಯೂ ಹಾನರ್ 7X ಬಳಕೆದಾರರಿಗೆ ಸದ್ಯ ಲಭ್ಯವಾಗಿದ್ದು, ಇದರೊಂದಿಗೆ ಇನ್ನು ಅನೇಕ ಆಯ್ಕೆಗಳು ಬಳಕೆದಾರರಿಗೆ ಲಭ್ಯವಾಗಿದೆ. 2018ರ ಸೆಕ್ಯೂರಿಟಿ ಪ್ಯಾಚ್ ನೊಂದಿಗೆ ಇದ್ದಂತಹ ಬಗ್ಗಳನ್ನು ಫಿಕ್ಸ್ ಮಾಡಲಾಗಿದೆ ಎನ್ನಲಾಗಿದೆ. ಈ ಹೊಸ ಆಪ್ ಡೇಟ್ ನಿಂದಾಗಿ ಸ್ಮಾರ್ಟ್ ಪೋನ್ ಮತ್ತಷ್ಟು ಉತ್ತಮವಾಗಿಲಿದೆ.

ಈ ಹೊಸ ಆಪ್ಡೇಟ್ ಸದ್ಯಕ್ಕೆ ಚೀನಾದಲ್ಲಿ ಮಾತ್ರವೇ ಕಾಣಿಸಿಕೊಂಡಿದ್ದು, ಶೀಘ್ರವೇ ಭಾರತೀಯ ಬಳಕೆದಾರರಿಗೆ ಮುಕ್ತವಾಗಲಿದೆ ಎನ್ನಲಾಗಿದೆ. ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲಿಯೂ ಹಾನರ್ 7X ಹೆಚ್ಚಿನ ಖ್ಯಾತಿಯನ್ನು ಪಡೆದುಕೊಂಡಿರುವ ಕಾರಣ ಹಾನರ್ ಶೀಘ್ರವೇ ಈ ಆಪ್ ಡೇಟ್ ಅನ್ನು ಭಾರತದಲ್ಲಿಯೂ ಬಿಡುಗಡೆ ಮಾಡಲಿದೆ.

Honor 9 Lite with four cameras (KANNADA)
ಫೇಸ್ ಆನ್ ಲಾಕ್ ಆಯ್ಕೆಯೂ ಈ ಹೊಸ ಆಪ್ಡೇಟ್ ಹೈಲೆಟ್ ಗಳಲ್ಲಿ ಒಂದಾಗಿದೆ. ಈ ಹೊಸ ಆಯ್ಕೆಗಳಲ್ಲಿ ಬಳಕೆದಾರರು ಕೇವಲ ಸ್ಕ್ರಿನ್ ಅನ್ನು ನೋಡಿದರೆ ಸಾಕು ಲಾಕ್ ಓಪನ್ ಆಗಲಿದೆ. ಇದಲ್ಲದೇ ಸ್ಮಾರ್ಟ್ ನೋಟಿಫಿಕೇಷನ್ ಆಯ್ಕೆಯೂ ಸಹ ಬಾರಿ ಹಾನರ್ 7X ಬಳಕೆದಾರರಿಗೆ ದೊರೆಯುತ್ತಿದೆ. ಇಲ್ಲದೇ AR ಲೈನ್ಸ್ ಫೀಚರ್ ಸಹ ಬಳಕೆದಾರರಿಗೆ ದೊರೆಯುತ್ತಿದೆ.

ವರ್ಷದ ಅಂತ್ಯಕ್ಕೆ ಹೊಸ ಮಾದರಿಯ ಮ್ಯಾಕ್ ಗಳು ಮಾರುಕಟ್ಟೆಗೆ ಲಾಂಚ್..!

ಇದಲ್ಲದೇ ಲೋಕೇಷನ್ ಟ್ರಾಕಿಂಗ್, ವೆದರ್ ಆಪ್ಲಿಕೇಷನ್ ಗಳು ಬದಲಾಗಿದ್ದು, ಈಗಾಗಲೇ ಸ್ಮಾರ್ಟ್ ಫೋನ್ ಬಳಕೆ ಮಾಡುತ್ತಿರುವವರಿಗೆ ಇದು ಇನ್ನು ಹೊಸ ಮಾದರಿಯ ಆಯ್ಕೆಗಳನ್ನು ನೀಡಲಿದೆ ಎನ್ನಲಾಗಿದೆ. ಇದರಿಂದಾಗಿ ಹಾನರ್ 7X ಮತ್ತೊಂಮ್ಮೆ ಹೊಸ ಮೊಬೈಲ್ ಮಾದರಿಯಲ್ಲಿ ಕಾಣಿಸಿಕೊಳ್ಳಲಿದೆ.

English summary
Huawei's sub-brand Honor, as promised, is now rolling out a new software update for Honor 7X smartphone. The update comes with build number B192 and it brings exciting new features to the device.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot