ಹಾನರ್ 8 ಪ್ರೋ ಸ್ಮಾರ್ಟ್ ಫೋನ್ ಬೆಲೆಯಲ್ಲಿ ರೂ. 3000 ಇಳಿಕೆ

Written By: Lekhaka

ಹಾನರ್ 8 ಪ್ರೋ ಸ್ಮಾರ್ಟ್ ಫೋನ್ ಭಾರತೀಯ ಮಾರುಕಟ್ಟೆಗೆ ಜುಲೈ ತಿಂಗಳಿನಲ್ಲಿ ಕಾಲಿಟ್ಟಿತ್ತು. ಲಾಂಚ್ ಸಂದರ್ಭದಲ್ಲಿ ಈ ಸ್ಮಾರ್ಟ್ ಫೋನ್ ಬೆಲೆ ರೂ.29,999 ಆಗಿತ್ತು. ಆದರೆ ಈ ಫೋನಿನ ಬೆಲೆಯಲ್ಲಿ ಸದ್ಯ ಕಡಿತವನ್ನು ಕಾಣಬಹುದಾಗಿದ್ದು, ರೂ. 3000ದಷ್ಟು ಬೆಲೆ ಇಳಿಕೆಯಾಗಿದೆ.

ಹಾನರ್ 8 ಪ್ರೋ ಸ್ಮಾರ್ಟ್ ಫೋನ್ ಬೆಲೆಯಲ್ಲಿ ರೂ. 3000 ಇಳಿಕೆ

ಸದ್ಯ ಮಾರುಕಟ್ಟೆಯಲ್ಲಿ ಹಾನರ್ 8 ಪ್ರೋ ಸ್ಮಾರ್ಟ್ ಫೋನ್ ರೂ. 26,999ಕ್ಕೆ ಮಾರಾಟವಾಗುತ್ತಿದೆ. ಈ ಸ್ಮಾರ್ಟ್ ಪೋನ್ ಸದ್ಯ ಅಮೆಜಾನ್ ನಲ್ಲಿ ಮಾತ್ರವೇ ಲಭ್ಯವಿದೆ ಎನ್ನಲಾಗಿದೆ. ಈ ಆಫರ್ ಮಿಡ್ ನೈಟ್ ಬ್ಲಾಕ್ ಮತ್ತು ನೇವಿ ಬ್ಲೂ ಬಣ್ಣದ ಆವೃತ್ತಿಯ ಮೇಲೆಯೂ ಲಭ್ಯವಿದೆ ಎನ್ನಲಾಗಿದೆ.

ಹಾನರ್ 8 ಪ್ರೋ ಸ್ಮಾರ್ಟ್ ಫೋನ್ ಈ ಹಿಂದೆ ಲಾಂಚ್ ಆಗಿದ್ದ ಹಾನರ್ 8 ಫೋನಿನ ಮುಂದುವರೆದ ಭಾಗವಾಗಿದೆ. ಈ ಸ್ಮಾರ್ಟ್ ಫೋನಿನಲ್ಲಿ 5.7 ಇಂಚಿನ QHD ಡಿಸ್ ಪ್ಲೇಯನ್ನು ಕಾಣಬಹುದಾಗಿದೆ. ಇದು ಕಿರನ್ 960 ಆಕ್ಟಾ ಕೋರ್ ಪ್ರೋಸೆಸರ್ ನೊಂದಿಗೆ ಮಾರುಕಟ್ಟೆಯಲ್ಲಿ ಲಭ್ಯವಿದೆ.

ಹಾನರ್ 8 ಪ್ರೋ ಸ್ಮಾರ್ಟ್ ಫೋನ್ ಬೆಲೆಯಲ್ಲಿ ರೂ. 3000 ಇಳಿಕೆ

ಹಾನರ್ 8 ಪ್ರೋ ಸ್ಮಾರ್ಟ್ ಫೋನ್ ನಲ್ಲಿ 6GB RAM ಕಾಣಬಹುದಾಗಿದ್ದು, ಜೊತೆಗೆ 128GB ಇಂಟರ್ನಲ್ ಮೆಮೊರಿಯನ್ನು ನೀಡಲಾಗಿದೆ. ಅಲ್ಲದೇ ಮೆಮೊರಿ ಕಾರ್ಡ್ ಹಾಕಿಕೊಳ್ಳುವ ಅವಕಾಶವನ್ನು ನೀಡಿದೆ.

ಭರ್ಜರಿ ಪ್ಲಾನ್ ಹಾಕಿ ಅಮೆಜಾನ್ ಗೆ 52 ಲಕ್ಷ ರೂ. ಟೋಪಿ ಹಾಕಿದ ದೆಹಲಿ ಯುವಕ

ಈ ಫೋನಿನ ಹಿಂಭಾಗದಲ್ಲಿ ಡ್ಯುಯಲ್ ಲೈನ್ಸ್ ಕ್ಯಾಮೆರಾವನ್ನು ನೋಡಬಹುದಾಗಿದ್ದು, 12 MP + 12 MP ಕ್ಯಾಮೆರಾಗಳು ಇದಾಗಿದೆ. ಇದರೊಂದಿಗೆ LED ಫ್ಲಾಷ್ ಸಹ ಕಾಣಬಹುದಾಗಿದೆ. ಮುಂಭಾಗದಲ್ಲಿ 8MP ಸೆಲ್ಫಿ ಕ್ಯಾಮೆರಾವನ್ನು ಅಳವಡಿಸಲಾಗಿದೆ.

ಆಂಡ್ರಾಯ್ಡ್ ನ್ಯಾಗದಲ್ಲಿ ಕಾರ್ಯನಿರ್ವಹಿಸುವ ಈ ಫೋನ್ 4000mAh ಬ್ಯಾಟರಿಯನ್ನು ಹೊಂದಿದೆ. 

Read more about:
English summary
Honor 8 Pro offers 6GB of RAM and 128GB of expandable internal storage capacity.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot